ಹಾಸನ: ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ದಂಪತಿಗಳು ಮೊಬೈಲ್ ಟವರ್ ಏರಿ ಕುಳಿತ ಘಟನೆ ಜಿಲ್ಲೆಯ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ. ಮೋಹನ್ ರಾಜ್ ಮತ್ತು ಚಂದನ ಮೊಬೈಲ್ ಟವರ್ ಏರಿ ಕುಳಿತ ದಂಪತಿ. ಬಂಟೇನಹಳ್ಳಿ ಗ್ರಾಮ ಪಂಚಾತಿಯಲ್ಲಿ ಆಶ್ರಯ ಮನೆ ನೀಡುವುದಾಗಿ ದಂಪತಿಯಿಂದ ಒಂದು ಸಾವಿರ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಆದರೆ ಕೊನೆಗೆ ದಂಪತಿಗೆ ಆಶ್ರಯ ಮನೆ ನೀಡದೆ ವಂಚನೆ ಮಾಡಿರುವುದಾಗಿ ಆರೋಪ …
Read More »ಚಲಿಸುತ್ತಿರುವ ಜನಶತಾಬ್ದಿ ರೈಲಿನಿಂದ ಯುವತಿ ತುಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಯುವತಿ
ಶಿವಮೊಗ್ಗ : ಚಲಿಸುತ್ತಿರುವ ಜನಶತಾಬ್ದಿ ರೈಲಿನಿಂದ ಯುವತಿ ತುಂಗಾ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಯುವತಿ ಸಹನಾ (24) ತನ್ನ ಪೋಷಕರೊಂದಿಗೆ ಪ್ರಯಾಣಿಸುತ್ತಿದ್ದಳು. ರೈಲು ಶಿವಮೊಗ್ಗದ ತುಂಗಾ ಸೇತುವೆ ಮೇಲೆ ಬರುತ್ತಿದ್ದ ವೇಳೆ ಯುವತಿ ನದಿಗೆ ಹಾರಿದ್ದಾಳೆ ಎನ್ನಲಾಗುತ್ತಿದೆ. ಕೆಲವರು ಕಾಲು ಜಾರಿ ಬಿದ್ದಿದ್ದಾಳೆ ಎಂದು ಸಹ ಹೇಳಲಾಗುತ್ತಿದೆ. ತಕ್ಷಣ ಯುವತಿಯ ತಂದೆ- ತಾಯಿ ರೈಲ್ವೆ ಪೊಲೀಸರಿಗೆ ಮಾಹಿತಿ …
Read More »ಉಮೇಶ ಕತ್ತಿಯವರನ್ನ ಮಂತ್ರಿ ಮಾಡಲು ಮೊದಲಿನಿಂದಲೂ ಒತ್ತಾಯ ಇದೆ.: ರಮೇಶ್ ಜಾರಕಿಹೊಳಿ
ಬೆಳಗಾವಿ : ಉಮೇಶ ಕತ್ತಿಯವರನ್ನ ಮಂತ್ರಿ ಮಾಡಲು ಮೊದಲಿನಿಂದಲೂ ಒತ್ತಾಯ ಇದೆ. ರಾಜಕೀಯದಲ್ಲಿ ಹಿರಿಯರು ಇದ್ದಾರೆ. ಅವರಿಗೆ ಮಂತ್ರಿ ಸ್ಥಾನ ಸಿಕ್ಕರೆ ಒಳ್ಳೆಯದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಇದ್ದಿದ್ದಕ್ಕೆ ಕೆಲವು ಶಾಸಕರು ಇಲಾಖೆ ಕಾಮಗಾರಿ ಕುರಿತು ಭೇಟಿಗೆ ಬಂದಿದ್ದರು.ಬೇರೆ ಯಾವುದೇ ವಿಚಾರವಾಗಿ ಭೇಟಿಯಾಗಿಲ್ಲ ಎಂದರು. ದೊಡ್ಡ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದು, ಮಂತ್ರಿ ಸ್ಥಾನ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ನನ್ನ …
Read More »ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ,ಐವರಿಗೆ ಜೀವಾವಧಿ ಶಿಕ್ಷೆ
ಬೆಳಗಾವಿ: ತಾಲ್ಲೂಕಿನ ಮುತ್ಯಾನಟ್ಟಿ ಗುಡ್ಡದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಐವರ ವಿರುದ್ಧದ ಆರೋಪ ಸಾಬೀತಾಗಿದ್ದು, ಆರೋಪಿಗಳಿಗೆ ಬೆಳಗಾವಿಯ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ಪೋಕ್ಸೋ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.ಅಷ್ಟೇ ಅಲ್ಲ ಪ್ರತಿ ಆರೋಪಿಗಳಿ ತಲಾ 5ಲಕ್ಷ ರೂ. ದಂಡ ವಿಧಿಸಿದೆ. ಮುತ್ಯಾನಟ್ಟಿಯ ಸಂಜು ದಡ್ಡಿ (24), ಸುರೇಶ ಭರಮಪ್ಪ ಬೆಳಗಾವಿ (24), ಸುನೀಲ ಲಗಮಪ್ಪ ಡುಮ್ಮಗೋಳ (21), …
Read More »ಬೊಲೆರೋ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಮೂವರ ಸಾವು
ಚಾಮರಾಜನಗರ: ಬೊಲೆರೋ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಧನಗೆರೆ-ಸತ್ತೇಗಾಲ ಮುಖ್ಯರಸ್ತೆಯಲ್ಲಿ ಬೀಕರ ಅಪಘಾತ ಸಂಭವಿಸಿದೆ. ಸಾವನ್ನಪ್ಪಿದ ಮೂವರು ಬೈಕ್ ಸವಾರರಾಗಿದ್ದಾರೆ. ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಪಳನಿಮೇಡು ಗ್ರಾಮದ ಡೇವಿಡ್, ಶೇಷುರಾಜು ಹಾಗೂ ಶೆಟು ಸಾವನ್ನಪ್ಪಿದ್ದ ದುರ್ದೈವಿಗಳು. ಸತ್ತೇಗಾಲ ಹಾಗೂ ಧನಗೆರೆ ಮುಖ್ಯರಸ್ತೆಯಲ್ಲಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬೈಕ್ ನಲ್ಲಿ ಮೂವರು ತೆರಳುತ್ತಿದ್ದರು. ಬೈಕ್ ಗೆ ಕೊಳ್ಳೇಗಾಲದಿಂದ ಸತ್ತೇಗಾಲದ ಕಡೆಗೆ ಹೋಗುತ್ತಿದ್ದ …
Read More »ವಿದ್ಯಾರ್ಥಿಗಳೂ ಟ್ಯಾಬ್ ಉಪಯುಕ್ತತೆಯ ಕುರಿತಂತೆ ಹೆಮ್ಮೆಪಟ್ಟಿದ್ದು ಖುಷಿ ತಂದಿತು – ಸುರೇಶ್‍ಕುಮಾರ್
ಬೆಂಗಳೂರು: ಇಂದು ಬೆಂಗಳೂರು ಹೊರವಯಲದ ದೇವನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪಬ್ಲಿಕ್ ಟಿವಿ ಜ್ಞಾನ ದೀವಿಗೆಯ ಟ್ಯಾಬ್ ವಿತರಿಸಿದರು. ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಸಹಾಯವಾಗಲಿ ಎಂದು ಟ್ಯಾಬ್ ನೀಡಲಾಗುತ್ತಿದೆ. ಕೊರೊನಾ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ. ಇದಕ್ಕೆ ಶಿಕ್ಷಣ ಸಚಿವರು ಸಂಪೂರ್ಣ ಸಾಥ್ …
Read More »” ಹಾಯ್” ರವಿ ಬೆಳೆಗೆರೆ ಹೋಗಿ ಬಿಟ್ಟ” ರವಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ. : ಅಶೋಕ ಚಂದರಗಿ
ಹಾಯ್ ರವಿ” ಬೈ! ” ಹಾಯ್” ರವಿ ಬೆಳೆಗೆರೆ ಹೋಗಿ ಬಿಟ್ಟ” ಎಂದು ಇಂದು ಬೆಳಿಗ್ಯೆ 6 ಗಂಟೆಗೆ ಇನ್ನೂ ಹಾಸಿಗೆಯಲ್ಲಿದ್ದಾಗಲೇ ಫೋನ್ ಮಾಡಿ ತಿಳಿಸಿದವರು ಖ್ಯಾತ ಛಾಯಾಗ್ರಾಹಕ ಎಮ್.ಬಿ.ಗೌಡರು.ಸಹಜವಾಗಿ ರವಿಯ ಪ್ಲಸ್ , ಮೈನಸ್ ವಿನಿಮಯವಾಯಿತು. ಎಮ್.ಬಿ.ಗೌಡರು ರವಿಯ ಕ್ಲಾಸ್ ಮೇಟ್, ರೂಮ್ ನೇಟ್.ಧಾರವಾಡದ ಕರ್ನಾಟಕ ವಿವಿ ಯಲ್ಲಿ ಕಲಿತವರು.ಒಂದೇ ರೂಮಿನಲ್ಲಿದ್ದವರು. ರವಿ ಮತ್ತು ನಾನು ಮೊದಲು ಭೆಟ್ಟಿಯಾಗಿದ್ದು 1985 ರಲ್ಲಿ.ರಾಜಾಜಿನಗರದ ” ಅಭಿಮಾನ” ದಿನಪತ್ರಿಕೆಯಲ್ಲಿ ಕೆಲಕಾಲ ಕೆಲಸ …
Read More »ಸರ್ಕಾರಿ ಕೆಲಸದ ಆಮಿಷ, 2 ಕೋಟಿ ವಂಚನೆ
ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 50ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಿಗೆ ಮೋಸ ಮಾಡಿ 2 ಕೋಟಿಗೂ ಅಧಿಕ ಹಣ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ಬೆಂಗಳೂರಿನ ನಾಗರಬಾವಿ ಸಮೀಪದ ಬೈರವೇಶ್ವರ ನಿವಾಸಿ ಪ್ರಭಾಕರ್ ಚಿಕ್ಕಮಗಳೂರು ಪ್ರವಾಸಕ್ಕೆ ಬರುತ್ತಿದ್ದನು. ನಗರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದುಕೊಳ್ಳುತ್ತಿದ್ದ ಪ್ರಭಾಕರ್ ಅಲ್ಲಿಯ ಸರ್ವರ್ ಗೆ ಕೆಲಸದ ಆಮಿಷ ಒಡ್ಡಿದ್ದನು. ಸರ್ವರ್ ಉಮೇಶ್ ನಿಂದ 7 ಲಕ್ಷ ಪಡೆದು ಎಸ್.ಎಸ್.ಎಲ್.ಸಿ ಬೋರ್ಡ್ ನಲ್ಲಿಯ …
Read More »ತಾತನ ಹೆಸರೇಳಿ ಎಂಪಿ ಆದವರಿಗೆ ಬೇರೆ ಕ್ಷೇತ್ರದಲ್ಲಿ ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ: ಪ್ರೀತಂಗೌಡ
ಹಾಸನ: ತಾತನ ಹೆಸರು ಹೇಳಿ ಸಂಸದರಾದಗಿದ್ದಾರೆ. ಬೇರೆ ಕ್ಷೇತ್ರದಲ್ಲಿ ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ ಎಂದು ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿನ ಬಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಪ್ರೀತಂಗೌಡ, ಇವರಿಗೆ ವೋಟ್ ಹಾಕಿ ಬೇಸರವಾಗಿ ಜನ ನಂಬಿಕಸ್ಥರನ್ನ ಹುಡುಕುತ್ತಿದ್ದರು. ಬಿಜೆಪಿ ಮೇಲೆ ನಂಬಿಕೆ ಬಂದು ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಶಿರಾ ಹೋರಾಟ ವಿಜಯೇಂದ್ರ ನೇತೃತ್ವ ಸೇರಿದಂತೆ ಹಲವರ ಒಗ್ಗಟ್ಟಿನ ಫಲ ಎಂದು ಹೇಳಿದರು. ಹಾಸನ ನಾಯಕರೆಲ್ಲ ಬಂದು …
Read More »ಆದಷ್ಟು ಬೇಗ ಕೊರೊನಾ ಇಲ್ಲದಂತಾಗಲಿ: ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ
ಹಾಸನ: ಆದಷ್ಟು ಬೇಗ ಕೊರೊನಾ ಇಲ್ಲದಂತಾಗಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ತಿಳಿಸಿದರು. ಗುರುವಾರ ಸಂಜೆ ನಗರದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಷ್ಟು ಬೇಗ ಕೊರೊನಾ ಜಗತ್ತಿನಿಂದ ಇಲ್ಲದಂತಾಗಲಿ ಎಂದು ಪ್ರಾರ್ಥಿಸಲಾಗಿದೆ. ಪ್ರತಿ ವರ್ಷ ಸಾರ್ವಜನಿಕರು ಹಾಸನಾಂಬೆ ದೇವಿ ದರ್ಶನ ಪೆಡಯುತ್ತಿದ್ದರು. ಆದರೆ ಈ ವರ್ಷ ಕೊರೊನಾ …
Read More »