ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿಗೆ ಗ್ರಾಮಸ್ಥರ ಮನವಿ ಬೆಳಗಾವಿ: ದೇಸೂರು ಇದ್ದಲಹೊಂಡ ಗ್ರಾಮದಿಂದ ಧಾರವಾಡದವರೆಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಾದಿಯನ್ನು ಬದಲಾವಣೆ ಮಾಡಬೇಕೆಂದು ನಂದಿಹಳ್ಳಿ, ಗರ್ಲಗಂಜಿ ಹಾಗೂ ನಾಗೇನಹಳ್ಳಿ ಗ್ರಾಮಸ್ಥರು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ರೈಲ್ವೇ ಇಲಾಖೆಯ ಸರ್ವೇ ಕಾರ್ಯದ ಪ್ರಕಾರ ಧಾರವಾಡಕ್ಕೆ ನಂದಿಹಳ್ಳಿ, ಗರ್ಲಗಂಜಿ ಹಾಗೂ ನಾಗೇನಹಳ್ಳಿ ಮುಖಾಂತರ ರೈಲ್ವೆ ಹಾದಿ ಹಾದು ಹೋಗುತ್ತಿದೆ. ಇದ್ದರಿಂದ ನಮ್ಮ ಫಲವತ್ತಾದ …
Read More »ಸಚಿವ ಸಂಪುಟ ಸರ್ಜರಿ ಅಂತಿಮ ಹಂತಕ್ಕೆ ಇಂದು ದೆಹಲಿಗೆ ತೆರಳಲಿರುವ BSY:ಉಮೇಶ್ ಕತ್ತಿ ಮಂತ್ರಿ ಆಗೋದು ಖಚಿತನಾ…?
ಬೆಂಗಳೂರು: ಸಂಪುಟ ಸರ್ಕಸ್ ಅಂತಿಮ ಹಂತಕ್ಕೆ ತಲುಪಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ಸರ್ಜರಿ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಇಂದು ದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದು ಸಂಜೆ ವೇಳೆ ನಿರ್ಧಾರ ಪ್ರಕಟವಾಗಲಿದೆ. ಈ ನಡುವೆ ಖಾಲಿ ಇರುವ 7 ಸಚಿವ ಸ್ಥಾನಕ್ಕಾಗಿ 10ಕ್ಕೂ ಹೆಚ್ಚು ಶಾಸಕರು ಲಾಬಿ ನಡೆಸಿದ್ದಾರೆ. ದಾವಣಗೆರೆಯ ಎಸ್.ಎ. ರವೀಂದ್ರನಾಥ್, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಚಿತ್ರದುರ್ಗದ ಶಾಸಕ …
Read More »ಬಳ್ಳಾರಿ ಜಿಲ್ಲೆ ವಿಭಜನೆಯಾದ್ರೆ ಜಿಲ್ಲೆ ಬಿಜೆಪಿ ಎರಡು ಹೋಳಾಗುತ್ತದೆ. Bellary ಸಿಎಂ ಮೊಂಡುತನ ಮಾಡಿ ಜಿಲ್ಲೆ ರಚಿಸಿದ್ರೆ ನಾನೇನು ಮಾಡ್ಲಿ
ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲ ಇಲ್ಲ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಖಡಕ್ಕಾಗಿ ತಿಳಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಿಎಂ ತಾತ್ವಿಕ ಒಪ್ಪಿಗೆ ವಿಚಾರದ ಕುರಿತ ಪ್ರಶ್ನಿಸಿದಾಗ ಸೋಮಶೇಖರ ರೆಡ್ಡಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಬಾರದಿತ್ತು. ಈ ಜಿಲ್ಲೆಯ ಜನರು, ವಿಜಯನಗರ ಜಿಲ್ಲೆ …
Read More »ಎರಡು ಟ್ರಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ 10 ಮಂದಿ ಸಾವನ್ನಪ್ಪಿ, 15 ಮಂದಿ ಗಾಯ.
ಗುಜರಾತ್: ಎರಡು ಟ್ರಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ 10 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಗುಜರಾತ್‍ನ ವಡೋದರಾದಲ್ಲಿ ನಡೆದಿದೆ. ಇಂದು ಮುಂಜಾನೆ ವಡೋದರಾದ ವಘೋಡಿಯಾ ಕ್ರಾಸಿಂಗ್ ಹೆದ್ದಾರಿಯಲ್ಲಿ ಪಾವಘಡದಿಂದ ಸೂರತ್‍ಗೆ ಹೋಗುವ ಟ್ರಕ್ ಮತ್ತು ಇನ್ನೊಂದು ಟ್ರಕ್ ಒಂದಕ್ಕೊಂದು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ವಡೋದರಾದ ಎಸ್‍ಎಸ್‍ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಐವರು ಮಹಿಳೆಯರು ಸೇರಿದಂತೆ ಕನಿಷ್ಠ 10 …
Read More »ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ:ಆನಂದ್ ಸಿಂಗ್
ಬೆಂಗಳೂರು: ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಬಹುದಿನದ ಬೇಡಿಕೆ ಈಡೇರಿದೆ. ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳ ಬೇಡಿಕೆ ಈಡೇರಿದೆ ಎಂದು ಹೇಳಿದರು.ಈ ಬೇಡಿಕೆ ನನ್ನ ಒಬ್ಬನದ್ದಲ್ಲ. ಬೇಡಿಕೆ ಇಟ್ಟವರ ಧ್ವನಿಯಾಗಿ ಇಂದು …
Read More »ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಬೆಳಗಾವಿಯಲ್ಲಿ ಅಧಿವೇಶನ ಇಲ್ಲಾ….
ಬೆಂಗಳೂರು : ಡಿಸೆಂಬರ್ 7 ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ದಿನಾಂಕ ನಿಗದಿಯಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೇವಲ ಹತ್ತೇ ನಿಮಿಷದಲ್ಲಿ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಈ ಬಾರಿ ಅಧಿವೇಶನವನ್ನು ಬೆಳಗಾವಿಯ ಬದಲಾಗಿ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
Read More »ರಾಜ್ಯದಲ್ಲಿ ಕೊರೊನಾ ಪ್ರಕರಣಳ ಸಂಖ್ಯೆ ಇಳಿಮುಖ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಳ ಸಂಖ್ಯೆ ಇಳಿಮುಖವಾಗಿದ್ದು, ಇಂದು 23 ಜಿಲ್ಲೆಗಳಲ್ಲಿ ಶೂನ್ಯ ಮರಣ ದಾಖಲಾಗಿದೆ. ಇಂದು 1,336 ಹೊಸ ಪ್ರಕರಣಗಳು ವರದಿಯಾಗಿದ್ದು, 2,100 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ ರಾಜ್ಯದಲ್ಲಿ 8,27,241 ಜನ ಗುಣಮುಖರಾಗಿದ್ದು, ಚೇತರಿಕೆ ದರ ಶೇ.95.72ರಷ್ಟಿದೆ. ಇನ್ನು ಕೋವಿಡ್ ಮರಣ ಪ್ರಮಾಣ ಶೇ.1.39 ಮತ್ತು ಖಚಿತ ಪ್ರಕರಣಗಳ ಪ್ರಮಾಣ ಶೇ.1.77ರಷ್ಟಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,64,140ಕ್ಕೆ ಏರಿಕೆಯಾಗಿದ್ದು, 25,323 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ …
Read More »ನಿಗಮ ಸ್ಥಾಪನೆಗೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಸರ್ಕಾರ ಮಾಡಿದರೆ ಒಳ್ಳೆಯದು:ಶ್ರೀ ಸಿದ್ದಲಿಂಗ ಸ್ವಾಮೀಜಿ
ತುಮಕೂರು: ಎಲ್ಲ ಜಾತಿಯಲ್ಲೂ ಹಿಂದುಳಿದವರಿದ್ದಾರೆ. ಎಲ್ಲ ಸಮಾಜದಲ್ಲಿಯೂ ಕಡುಬವರು ಇದ್ದಾರೆ. ನಿಗಮ ಸ್ಥಾಪನೆಗೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಸರ್ಕಾರ ಮಾಡಿದರೆ ಒಳ್ಳೆಯದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ. ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ರಚನೆ ಮಾಡ್ತಿರೋ ವಿಚಾರ ಕೇಳಿ ನನಗೆ ಆಶ್ಚರ್ಯ ಎನಿಸುತ್ತದೆ. ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ ಸರ್ಕಾರ ಇರೋದು ಸಮಗ್ರ …
Read More »ಸಗಣಿ ರಾಶಿ ಹಾಕಿ ಅದರಲ್ಲಿ ಗ್ರಾಮಸ್ಥರು ಹೊರಳಾಡಿ, ಹೊಡೆದಾಡುವುದೇ ಹಬ್ಬ
ಚಾಮರಾಜನಗರ: ಜಿಲ್ಲೆಯ ಗಡಿಯಂಚಿನಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯಿತು. ಸಗಣಿ ರಾಶಿ ಹಾಕಿ ಅದರಲ್ಲಿ ಗ್ರಾಮಸ್ಥರು ಹೊರಳಾಡಿ, ಹೊಡೆದಾಡುವುದೇ ಹಬ್ಬದ ವಿಶೇಷ. ಕೋವಿಡ್ ಗೆ ಡೋಂಟ್ ಕೇರ್ ಎಂದು ಗ್ರಾಮಸ್ಥರು ಗುಂಪು ಸೇರಿ ಕಣಿದು ಕುಪ್ಪಳಿಸಿದರು. ಬಲಿಪಾಢ್ಯಮಿಯ ಮಾರನೇ ದಿನ ಈ ಗೊರೆ ಹಬ್ಬವನ್ನು ಆಚರಿಸಲಾಗತ್ತದೆ. ಅಚ್ಚ ಕನ್ನಡಿಗರೆ ಇರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಈ ವರ್ಷವೂ ಸಹ …
Read More »ರಾಜ್ಯಾದ್ಯಂತ ಇಂದಿನಿಂದ ಕಾಲೇಜುಗಳು ಆರಂಭಕೋವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಆಸ್ಪತ್ರೆಗಳಿಗೆ ಅಲೆದಾಡುವ ಸ್ಥಿತಿ
ಬೆಳಗಾವಿ: ರಾಜ್ಯಾದ್ಯಂತ ಇಂದಿನಿಂದ ಕಾಲೇಜುಗಳು ಆರಂಭವಾಗಿದ್ದು, ಪದವಿ, ಸ್ನಾತಕೋತ್ತರ, ಡಿಪ್ಲೋಮಾ, ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿವೆ. ಆದರೆ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಆಸ್ಪತ್ರೆಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ನೆಗೆಟಿವ್ ಇದ್ದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜಿಗೆ ಬರಲು ಅವಕಾಶ ನೀಡಿರುವುದರಿಂದ ವಿದ್ಯಾರ್ಥಿಗಳು ಕೋವಿಡ್ ಟೆಸ್ಟಗಾಗಿ ಅಲೆದಾಡುತ್ತಿದ್ದಾರೆ. ಟೆಸ್ಟ್ ಮಾಡಿಸಲು ಸೂಕ್ತ ಸ್ಥಳದ ಮಾಹಿತಿ ದೊರಕದೆ ಇಡಿ ಜಿಲ್ಲಾಸ್ಪತ್ರೆ ಸುತ್ತುತ್ತಿದ್ದಾರೆ. ಹೀಗೆ ಬಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನನ …
Read More »