ಬಾಗಲಕೋಟೆ : ರಾಜ್ಯಾದ್ಯಂತ ಎಲ್ಲಾ ಸೈಟ್ ಗಳಿಗೆ ಎ ಖಾತಾ, ಬಿ ಖಾತಾ ಆರಂಭಿಸಲಾಗುವುದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮಾದರಿ ರಾಜ್ಯವ್ಯಾಪಿ ಎ ಖಾತಾ, ಬಿ ಖಾತಾ ಆರಂಭಿಸಲಾಗುವುದು . ಇದರಿಂದ ಅನಧಿಕೃತ ನಿವೇಶನಗಳಿಗೆ ಶಾಶ್ವತ ಕಡಿವಾಣ ಬೀಳಲಿದೆ ಎಂದು ತಿಳಿಸಿದ್ದಾರೆ. ನಗರ, ಪಟ್ಟಣ ಪ್ರದೇಶಕ್ಕೆ ಹೊಂದಿಕೊಂಡಿರುವ ಭೂ ಪರಿವರ್ತನೆಯಾಗಿ ಮನೆ, ನಿವೇಶನ ಸೇರಿ ಬಡಾವಣೆ ನಿರ್ಮಿಸಿದ್ದರೂ ಸುಪ್ರೀಂಕೋರ್ಟ್ ಆದೇಶದ …
Read More »ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಬಲಾಢ್ಯ ಭಾರತ ನಿರ್ಮಾಣಕ್ಕೆ ಮುಂದಾಗಲು ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ ಮೂಡಲಗಿ- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ ಪುರುಷರ ಆದರ್ಶಗಳನ್ನು ಬೆಳೆಸಿಕೊಂಡು ಬಲಾಢ್ಯ ಭಾರತ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ತಾಲೂಕಿನ ಕಲ್ಲೋಳ್ಳಿ ಪಟ್ಟಣದ …
Read More »ಪೊಲೀಸರ ಮೇಲಿನ ಸಿಟ್ಟಿಗೆ ವಿಧಾನಸೌಧದ ಮುಂದೆಯೇ ಬೈಕ್ ಗೆ ಬೆಂಕಿ ಹಚ್ಚಿದ ಯುವಕ..!
ಬೆಂಗಳೂರು : ವಿಧಾನಸೌಧದ ಮುಂದೆ ಯುವಕನೋರ್ವ ತನ್ನ ಬೈಕ್ ಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ಪ್ರಥ್ವಿರಾಜ್ ಎಂಬಾತ ವಿಧಾನಸೌಧದ ಮುಂದೆ ತನ್ನ ಎಲೆಕ್ಟ್ರಿಕ್ ಗೆ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರ ಮೇಲಿನ ಸಿಟ್ಟಿಗೆ ಈತ ಈ ಕೃತ್ಯ ಎಸಗಿದ್ದು, ತನ್ನ ತಾಯಿಗೆ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಟ್ರಕ್ಕಿಂಗ್ ನಲ್ಲಿ ಯುವಕ ಪ್ರಥ್ವಿರಾಜ್ ಮಿಸ್ …
Read More »ನಾಳೆ ಸ್ವಾತಂತ್ರ್ಯ ದಿನಾಚರಣೆ ವೇಳೆ ‘ಡಾ.ಬಿಆರ್ ಅಂಬೇಡ್ಕರ್ ಪೋಟೋ’ ಇಡುವುದು ಕಡ್ಡಾಯ: ರಾಜ್ಯ ಸರ್ಕಾರ
ಬೆಂಗಳೂರು: ನಾಳೆ ದೇಶ, ರಾಜ್ಯಾಧ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಸ್ವಾತಂತ್ರೋತ್ಸ ವೇಳೆ ಡಾ.ಬಿಆರ್ ಅಂಬೇಡ್ಕರ್ ಪೋಟೋ ಇಡುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸುತ್ತೋಲೆ ಹೊರಡಿಸಿದ್ದು, ಜನವರಿ 26ರ ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್-15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ …
Read More »ಬೆಳಗಾವಿ | ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಉಲ್ಬಣ: 41 ಮಂದಿ ಅಸ್ವಸ್ಥ
ಚಚಡಿ (ಬೆಳಗಾವಿ ಜಿಲ್ಲೆ): ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಆರಂಭವಾದ ವಾಂತಿ- ಭೇದಿ ಸೋಮವಾರ ಉಲ್ಬಣಗೊಂಡಿದೆ. ಒಂದೇ ದಿನ 41 ಮಂದಿಗೆ ವಾಂತಿ- ಭೇದಿ ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥರಾದ ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ, ಮೂವರನ್ನು ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿತ್ರಾಣಗೊಂಡಿರುವ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಇನ್ನಿಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ …
Read More »ಬೆಳಗಾವಿ: ಕ್ರೀಡಾ ಕುಟುಂಬದ ಶೂಟಿಂಗ್ ಕಲಿ ಸ್ವಪ್ನಿಲ್
ಬೆಳಗಾವಿ: ಕ್ರೀಡಾ ಕುಟುಂಬದ ಶೂಟಿಂಗ್ ಕಲಿ ಸ್ವಪ್ನಿಲ್ ಬೆಳಗಾವಿ: ‘ನನ್ನ ಪುತ್ರನ ಒಂದೂವರೆ ದಶಕದ ಪ್ರಯತ್ನ ಒಂದಿಷ್ಟು ಫಲ ಕೊಟ್ಟಿದೆ. ಈಗ ಕಂಚು ಗೆದ್ದಿರುವ ಆತ ಮುಂದಿನ ಒಲಿಂಪಿಕ್ಸ್‌ನಲ್ಲಿ ಖಂಡಿತ ಚಿನ್ನದ ಪದಕ ಗಳಿಸುವನು ಎಂಬ ವಿಶ್ವಾಸವಿದೆ’ ಹೀಗೆಂದು ‘ಸಂತಸ ಹಂಚಿಕೊಂಡವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲ್ಲೂಕಿನ ಕಂಬಳವಾಡಿಯ ಸುರೇಶ ಕುಸಾಳೆ. ಅವರ ಪುತ್ರ ಸ್ಪಪ್ನಿಲ್ ಪ್ಯಾರಿಸ್‌ನಲ್ಲಿ ನಡೆದಿರುವ ಒಲಿಂಪಿಕ್ಸ್‌ನ ಶೂಟಿಂಗ್ ಸ್ಪರ್ಧೆಯ 50 ಮೀಟರ್ ರೈಫಲ್ ತ್ರಿ ಪೊಸಿಷನ್ …
Read More »ಬೆಚ್ಚಿ ಬೀಳಿಸುತ್ತೆ ಬಿಎಂಟಿಸಿ ವೋಲ್ವೋ ಬಸ್ ಆಕ್ಸಿಡೆಂಟ್ ವಿಡಿಯೋ
ಬೆಂಗಳೂರು ಆಗಸ್ಟ್ 13: ಬೆಂಗಳೂರು ಅಂದರೆ ಟ್ರಾಫಿಕ್ ಜಾಮ್. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಬೇಕಾದರೆ ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯಬೇಕಾದ ಸ್ಥಿತಿ ಇದೆ. ಈ ನಡುವೆ ಅಪಘಾತಗಳು ಸಂಭವಿಸಿದರೆ ಮುಗಿತು ಜನ ತಾವಂದುಕೊಂಡ ಸ್ಥಳಕ್ಕೆ ಹೋಗುವುದು ಗಂಟೆಗಳವರೆಗೆ ತಡವಾಯಿತು ಅಂತಲೇ ಅರ್ಥ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಅಪಘಾತವೊಂದು ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್‌ನಿಂದ ಸರಣಿ …
Read More »ದೇವನಹಳ್ಳಿ: ಸೇವಾ ಜೇಷ್ಠತೆ ಆಧಾರದಲ್ಲಿ ಶಿಕ್ಷಕರಿಗೆ ಬಡ್ತಿ ನೀಡಿ
ದೇವನಹಳ್ಳಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಸಮಯದಲ್ಲಿ 2017ರಲ್ಲಿ ರೂಪಿಸಿರುವ ನಿಯಮವನ್ನು 2016ಕ್ಕೂ ಮುನ್ನ ನೇಮಕಗೊಂಡ ಶಿಕ್ಷಕರಿಗೆ ಅನ್ವಯಿಸಬಾರದು ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಆದರ್ಶ್ ಒತ್ತಾಯಿಸಿದರು. ಸೋಮವಾರ ಪಟ್ಟಣದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಪ್ರೌಢಶಾಲೆಗಳಿಗೆ ಬಡ್ತಿ ನೀಡುವಾಗ ವಿದ್ಯಾರ್ಹತೆಯನ್ನೇ ಪರಿಗಣಿಸಬೇಕು ಎಂದು ಆಗ್ರಹಿಸಿದರು. 2017ರಲ್ಲಿ ರೂಪಿಸಿರುವ ನಿಯಮದಿಂದ 2016ಕ್ಕೂ ಮುನ್ನವೇ ನೇಮಕ ಆಗಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತದೆ. …
Read More »ಮುಧೋಳ ಬಂದ್ ಸಂಪೂರ್ಣ ಯಶಸ್ವಿ
ಮುಧೋಳ: ಘಟಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ನಡೆದ ಪ್ರತಿಭಟನೆ ಹಾಗೂ ಮುಧೋಳ ಬಂದ್ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ರಾಣಾ ಪ್ರತಾಪಸಿಂಹ ವೃತ್ತಕ್ಕೆ ಆಗಮಿಸಿ ವಿಜಯಪುರ- ಬೆಳಗಾವಿ ರಾಜ್ಯ ಹೆದ್ದಾರಿ ಸಂಪರ್ಕ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಜನಪ್ರತಿನಿಧಿಗಳಾದವರು ಜನರ …
Read More »ಅ.3ರಂದು ದಸರಾಕ್ಕೆ ಚಾಲನೆ, ಅದ್ಧೂರಿ ಆಚರಣೆಗೆ ಸರ್ಕಾರ ತೀರ್ಮಾನ
ಬೆಂಗಳೂರು: ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಅಕ್ಟೋಬರ್ 3ರಂದು ಉದ್ಘಾಟನೆಗೊಳ್ಳಲಿದ್ದು, ಅ. 12ರಂದು ಜಂಬೂಸವಾರಿ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದಸರಾ ಮಹೋತ್ಸವ ಸಂಬಂಧ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಆದರೆ ಈ ಬಾರಿ ದಸರಾ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಕೊರೊನಾ ಬಂದಿದ್ದರಿಂದ ಕಳೆದ ಬಾರಿ ವಿಜೃಂಭಣೆಯಿಂದ ಆಚರಿಸಲಾಗಲಿಲ್ಲ, …
Read More »