ಬೆಂಗಳೂರು :-ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತವಾಗುತ್ತಿದ್ದಂತೆ ಆಕಾಂಕ್ಷಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿ ತಮ್ಮನ್ನು ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ. ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿದ್ದ ಶಾಸಕರ ನಿಯೋಗ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಂಪುಟಕ್ಕೆ ನಮ್ಮನ್ನು ಪರಿಗಣಿಸಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಶಂಕರ್ ಪಟೇಲ್ ಮುನೇನಕೊಪ್ಪ, ಲಿಂಗಣ್ಣ ಸೇರಿದಂತೆ ಮತ್ತಿತರರ ನಿಯೋಗ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಅವರನ್ನು …
Read More »ಮೂಢನಂಬಿಕೆಗೆ ಜೋತು ಬಿದ್ರಾ ಬಿಎಸ್‍ವೈ?
ಚಾಮರಾಜನಗರ: ಸಿಎಂ ಯಡಿಯೂರಪ್ಪ ಮೂಢನಂಬಿಕೆಗೆ ಕಟ್ಟುಬಿದ್ದಿದ್ದಾರಾ? ಹೌದು ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾರಣ ಅಧಿಕಾರ ವಹಿಸಿಕೊಂಡು 16 ತಿಂಗಳು ಕಳೆದರು ಸಿಎಂ ಚಾಮರಾಜನಗರದತ್ತ ತಲೆ ಹಾಕಿಲ್ಲ. ಆದರೆ ಇದೇ ತಿಂಗಳು 25ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡುತ್ತಿಲ್ಲ ಎಂಬುದು ಚರ್ಚೆಗೆ ಗ್ರಾಸವಾಗಿದೆ. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸುಮಾರು ಮೂರು ವರ್ಷ …
Read More »ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ನಟ ಶಿವರಾಜ್ ಕುಮಾರ್ ಭೇಟಿ
ಮೈಸೂರು: ಶುಕ್ರವಾರ ರಾತ್ರಿ ಚಾಮುಂಡಿ ಬೆಟ್ಟಕ್ಕೆ ನಟ ಶಿವರಾಜ್ ಕುಮಾರ್ ಭೇಟಿ ನೀಡಿ ನಾಡದೇವಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತ ಬೆಟ್ಟಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡಿದ್ದಾರೆ.ದೀಪಾವಳಿ ಮಗಿದ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಸಹ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
Read More »ಆರೋಗ್ಯ ಇಲಾಖೆ ಎಡವಟ್ಟಿನಿಂದ ಕಾಲೇಜು ತರಗತಿಗಳು ಮಾತ್ರ ಇನ್ನೂ ಆರಂಭವಾಗಿಲ್ಲ. ರಿಪೋರ್ಟ್ ಸಿಗದೆ ಪರದಾಟ
ಯಾದಗಿರಿ: ಕೊರೊನಾ ಮಹಾಮಾರಿ ಆತಂಕ ನಡುವೆಯೆ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪದವಿ ಕಾಲೇಜುಗಳನ್ನು ಆರಂಭ ಮಾಡಿದೆ. ಆದರೆ ಆರೋಗ್ಯ ಇಲಾಖೆ ಎಡವಟ್ಟಿನಿಂದ ತರಗತಿಗಳು ಮಾತ್ರ ಇನ್ನೂ ಆರಂಭವಾಗಿಲ್ಲ. ಹೌದು. ಯಾದಗಿರಿ ಜಿಲ್ಲೆಯ ಪದವಿ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳನ್ನು ಮರದ ಕೆಳಗೆ, ಕಾಲೇಜು ಮುಂದಿನ ಕಟ್ಟೆಯ ಮೇಲೆ, ಕಾಲೇಜು ಗೇಟ್ ಬಳಿ ಸಿಬ್ಬಂದಿ ಸ್ಟಾಪ್ ಮಾಡುತ್ತಿದ್ದಾರೆ. ಈ ಹಿಂದೆ ಜನರ ಕೊರೊನಾ ಟೆಸ್ಟ್ ವರದಿ ನೀಡುವಲ್ಲಿ ನಿಧಾನಗತಿ ಅನುಸರಿಸಿ ಜನರ …
Read More »ಐಎಎಸ್ ಟಾಪರ್ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ……
ಜೈಪುರ: 2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರೇಮಿಗಳಾಗಿದ್ದ ಇಬ್ಬರು 2018ರಲ್ಲಿ ಮದುವೆಯಾಗಿದ್ದರು. ಈಗ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದೆ ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ʼಖಾನ್ʼ ಸರ್ ನೇಮ್ ತೆಗೆದು ಹಾಕಿದ್ದರು. ಅಥರ್ ಖಾನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ …
Read More »ಕೆಎಸ್ ಆರ್ ಟಿಸಿ ಬಸ್ ಹಾಗೂ ಲಾರಿ ಡಿಕ್ಕಿಪ್ರಯಾಣಿಕರೊಬ್ಬರು ಮೃತ
ಧಾರವಾಡ: ಕೆಎಸ್ ಆರ್ ಟಿಸಿ ಬಸ್ ಹಾಗೂ ಲಾರಿ ಡಿಕ್ಕಿಯಾದ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಅಣ್ಣಿಗೇರಿ ತಾಲ್ಲೂಕಿನ ಬದ್ರಾಪುರ ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಓಂಕಾರ ಗೊಂದಕರ(25) ಮೃತ ದುರ್ದೈವಿ. ಬಳ್ಳಾರಿಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅಣ್ಣಿಗೇರಿ ಬಳಿಯ ಬದ್ರಾಪುರದ ಬಳಿ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಮರಾಠರು ಈ ನೆಲದ ಮಕ್ಕಳು. ಮರಾಠಾ ಸಮುದಾಯವನ್ನು ಪ್ರೀತಿಸೋಣ:ಲಕ್ಷ್ಮಣ ಸವದಿ
ಕಲಬುರಗಿ : ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಭಾಷೆ ಗಳ ನಡುವೆ ಗೊಂದಲ ಸೃಷ್ಟಿಸಲು ಅಲ್ಲ. ಸಮುದಾಯಕ್ಕೆ ಆರ್ಥಿಕ ಬಲ ತುಂಬುವ ಉದ್ದೇಶವಾಗಿದೆ. ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ಬೇಡವೆಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ. ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಉದ್ದಟತನದ ಮಾತು ಯಾರಿಗೂ ಹಿತವನ್ನು ತರುವುದಿಲ್ಲ. ಅವರು ಇತಿಹಾಸವನ್ನು …
Read More »ಡಿ.5ರಂದು ಕರ್ನಾಟಕ ಬಂದ್ ಹೆಸರಲ್ಲಿ ವಿಜಯಪುರ ಬಂದ್ ಹೇಗೆ ಮಾಡುತ್ತಾರೆ ನೋಡೋಣ
ವಿಜಯಪುರ: ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಯಡಿಯೂರಪ್ಪನವರು ಭಯ ಪಡಬೇಕಿಲ್ಲ. ಡಿ.5ರಂದು ಕರ್ನಾಟಕ ಬಂದ್ ಮಾಡುವುದಾಗಿ ಬೆದರಿಕೆ ಹಾಕಿರುವ ರೋಲ್ ಕಾಲ್ ಹೋರಾಟಗಾರರಿಗೂ ಅಂಜಬೇಕಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತ ಸಂಭವಿಸುತ್ತೆ. ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಬೆಳಗಾವಿ ವಿಚಾರ, ಮರಾಠಿ …
Read More »ಮರಾಠಿ ಭಾಷೆಯ ಬ್ಯಾನರ್ ಗೆ ಕಪ್ಪು ಮಸಿ ಬಳಿಯುತ್ತಿರುವ ವೀಡಿಯೋ ವೈರಲ್
ಮರಾಠಿ ಭಾಷೆಯ ಬ್ಯಾನರ್ ಗೆ ಕಪ್ಪು ಮಸಿ: ವೀಡಿಯೋ ವೈರಲ್ VIDEO CREDITS TO UDAYANADU ಬೆಳಗಾವಿ: ರಾಜ್ಯ ಸರಕಾರ ಮರಾಠ ಪ್ರಾಧಿಕಾರ ರಚನೆಗೆ ಆದೇಶ ನೀಡಿದ್ದ ಹಿನ್ನೆಲ್ಲೆಯಲ್ಲಿ ಮರಾಠ ಪ್ರಾಧಿಕಾರ ರಚನೆಗೆ ಸಂಬಂಧಿಸಿ ನಗರದಲ್ಲಿ ಹಾಕಲಾಗಿದ್ದ ಮರಾಠಿ ಭಾಷೆಯ ಬ್ಯಾನರ್ ಗೆ ಕಪ್ಪು ಮಸಿ ಬಳಿಯುತ್ತಿರುವ ವೀಡಿಯೋ ವೈರಲ್ ಆಗಿದೆ. ಮರಾಠ ಪ್ರಾಧಿಕಾರ ರಚನೆಯ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡ ಪರ ಸಂಘಟನೆಗಳು ಹಾಗೂ …
Read More »ಬಿಜೆಪಿ ಸರ್ಕಾರ ಬಂದಾಗಲೆಲ್ಲ ಅಶಕ್ತರೇ ಮಂತ್ರಿಯಾಗಿದ್ದಾರೆ: ಅಪ್ಪಚ್ಚು ರಂಜನ್
ಮಡಿಕೇರಿ: ನಮ್ಮ ಸರ್ಕಾರ ರಚನೆಯಾದಗಲೆಲ್ಲ ಅವರೇ ಮಂತ್ರಿಗಳಾಗಿದ್ದಾರೆ. ಜೊತೆಗೆ ಕೆಲಸ ಮಾಡದ ಅಶಕ್ತ ಸಚಿವರು ಇದ್ದಾರೆ. ಅಂತಹವರನ್ನು ಕೈಬಿಟ್ಟು ನಮಗೆ ಸಚಿವ ಸ್ಥಾನ ಕೊಡಲಿ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ನಾಲ್ಕೈದು ಬಾರಿ ಸಚಿವರಾದವರೇ ಮತ್ತೆ ಸಚಿವರಾಗಿದ್ದಾರೆ. ಈಗಿರುವ ಕ್ಯಾಬಿನೆಟ್ ನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಸಚಿವರೂ ಇದ್ದಾರೆ. ಅಂತಹವರನ್ನು ಕೈಬಿಡಲಿ. ಉಮೇಶ್ ಕತ್ತಿ ಸೇರಿದಂತೆ ನಾನೂ ಐದು ಬಾರಿ ಶಾಸಕನಾಗಿದ್ದೇನೆ. …
Read More »