ಈ ಪ್ರಶ್ನೆಗೆ ‘ಅಲ್ಲ’ ಎಂದವರನ್ನು ‘ಅವಿವೇಕಿಗಳು’ ‘ಹುಚ್ಚರು’ ಎಂದು ಕರೆಯುವ ಕಾಲಘಟ್ಟದಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂಬುದು ಸುಳ್ಳಲ್ಲ. ಆದರೆ ಬಹಳಷ್ಟು ಜನ ‘ಅವಿವೇಕ’ ‘ಹುಚ್ಚು’ ಎಂದ ಮಾತ್ರಕ್ಕೆ ಒಂದು ಸಂಗತಿ ಅವಿವೇಕದ್ದಾಗುವುದಿಲ್ಲ ಮತ್ತು ಅದನ್ನು ಪ್ರತಿಪಾದಿಸುವವನು ಅವಿವೇಕಿ ಆಗುವುದಿಲ್ಲ ಎಂಬುದೂ ಸುಳ್ಳಲ್ಲ. ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಸಂಭ್ರಮಿಸುವ ಘಟನೆಯ ವಿಶ್ಲೇಷಣೆಗೆ ತೊಡಗುವ ಮುನ್ನ ಇಂಥದ್ದೊಂದು ತಿಳಿವಳಿಕೆ ನಮಗಿರಬೇಕೆಂಬ ಕಾರಣದಿಂದ ಈ ಪ್ರಸ್ತಾಪಮಾಡಿದೆನಷ್ಟೆ. ಪ್ರತಿವರ್ಷದಂತೆ ಇವತ್ತು ಜನವರಿ ಹದಿನಾಲ್ಕು. ಮಕರ …
Read More »ಯತ್ನಾಳ್ ಸೇರಿದಂತೆ ಹಲವರ ಬಳಿ ಸಿಡಿ ಇದೆ : ಸಂಕ್ರಾಂತಿಯ ಬಳಿಕ ಒಬ್ಬೊಬ್ಬರಾಗಿ ಸಿಡಿ ಬಿಡುಗಡೆ – ಹೆಚ್ ವಿಶ್ವನಾಥ್ ಹೊಸ ಬಾಂಬ್
ರಾಯಚೂರು : ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರ ಬಳಿ ಸಿಡಿ ಇದೆ. ಸಂಕ್ರಾಂತಿ ಬಳಿಕ ಒಬ್ಬೊಬ್ಬರಾಗಿ ಸಿಡಿ ಬಿಡುಗಡೆ ಮಾಡ್ತಾರೆ ಎಂಬುದಾಗಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಎಂ.ಎಲ್.ಸಿ ಹೆಚ್.ವಿಶ್ವನಾಥ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಸಿಡಿ ಇದೆ. ಸಂಕ್ರಾಂತಿ ಬಳಿಕ ಸಿಡಿ ಬಿಡುಗಡೆ ಆಗುತ್ತೆ. ಯತ್ನಾಳ್ ಸೇರಿ ಹಲವರ ಬಳಿ ಸಿಡಿ ಇದೆ. ಒಬ್ಬೊಬ್ಬರಾಗಿ …
Read More »ಐವರಿಗೆ ಜೀವದಾನ ಮಾಡಿ ‘ಸಾವಿನ ಬಳಿಕ ಮರು ಜನ್ಮ ಪಡೆದ ’20 ತಿಂಗಳ ಕಂದಮ್ಮ’.! ಭಾರತದ ಅತ್ಯಂತ ಕಿರಿಯ ಅಂಗಾಗ ದಾನಿ ಈ ಮಗು
ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದ 20 ತಿಂಗಳ ಮಗು ಧನಿಷ್ಠಾ ಎಂಬ ಹೆಸರಿನ ಈ ಮಗು ಈಗ ಹೆಚ್ಚು ಸುದ್ದಿಯಲ್ಲಿದೆ . ಆಕೆ ಅತ್ಯಂತ ಕಿರಿಯ ಅಂಗಾಗ ದಾನಿಯಾಗಿ ಈಗ ಗುರುತಿಸಿಕೊಂಡಿದ್ದಾರೆ. ಧನಿಷ್ಠಾ ತನ್ನ ಸಾವಿನ ತರುವಾಯ ಬಹು ಅಂಗಾಂಗಗಳನ್ನು ದಾನ ವಾಗಿ ನೀಡಿ ಸಾವಿನ ಬಳಿಕ ಕೂಡ ಇತರರಲ್ಲಿ ಮರು ಜನ್ಮ ಪಡೆದುಕೊಂಡಿದೆ. ಧನಿಷ್ಠಾ ಐದು ರೋಗಿಗಳಿಗೆ ಹೊಸ ಜೀವದಾನ ವನ್ನು ನೀಡಿದ್ದಾರೆ. ಆಕೆಯ ಹೃದಯ, ಯಕೃತ್ತು, ಮೂತ್ರಪಿಂಡಗಳು …
Read More »ತಮಿಳುನಾಡಿನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್ ಗಾಂಧಿ
ಮಧುರೈ: ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಅವನಿಯಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ವೀಕ್ಷಿಸಿದರು. ಪೊಂಗಲ್ ಹಬ್ಬದಲ್ಲಿ ಪಾಲ್ಗೊಳ್ಳಲೆಂದು ತಮಿಳುನಾಡಿಗೆ ಆಗಮಿಸಿದ ರಾಹುಲ್ ಗಾಂಧಿ ಜಲ್ಲಿಕಟ್ಟು ವೀಕ್ಷಿಸಿದರು. ಈ ವೇಳೆ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ತಮಿಳು ಭಾಷೆ, ಸಂಸ್ಕೃತಿಯನ್ನು ಬದಿಗಿರಿಸಿ, ತಮಿಳುನಾಡು ಜನರ ಮೇಲೆ …
Read More »ನಮ್ಮೆಲ್ಲರಂತೆ ಮಂಗಳಮುಖಿಯರು ಸಮಾಜದಲ್ಲಿ ಬದುಕಲು ಅರ್ಹರು: ಸಚಿವೆ ಶಶಿಕಲಾ ಜೊಲ್ಲೆ
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಕಲ್ಲಹಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ ಮಂಗಳಮುಖಿ ಸುಧಾ ಜೋಗತಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಭಿನಂದಿಸಿ, ಅವರ ಯಶಸ್ಸು, ಪರಿಶ್ರಮವನ್ನು ಶ್ಲಾಘಿಸಿದರು. ಹೊಸಪೇಟೆಯ ಖಾಸಗಿ ಹೋಟೆಲ್‍ನ ಕಾರ್ಯಕ್ರಮದಲ್ಲಿ ತಮ್ಮನ್ನು ಭೇಟಿ ಮಾಡಿದ ಕಲ್ಲಹಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ ಮಂಗಳಮುಖಿ ಸುಧಾ ಜೋಗತಿ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ …
Read More »ಯಡಿಯೂರಪ್ಪ ಒಬ್ಬ ದುರ್ಬಲ ಸಿಎಂ : ಸಿದ್ದರಾಮಯ್ಯ
ಮೈಸೂರು,ಜ.14- ಸಿಡಿಯನ್ನು ಮುಂದಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ದುರ್ಬಲರಾಗಿರುತ್ತಾರೋ ಅವರನ್ನೇ ಬ್ಲಾಕ್‍ಮೇಲ್ ಮಾಡಲು ಸಾಧ್ಯ. ಯಡಿಯೂರಪ್ಪನವರು ದುರ್ಬಲರಾಗಿದ್ದಾರೆ. ಹಾಗಾಗಿ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ. ಬ್ಲಾಕ್‍ಮೇಲ್ ಮಾಡುವವರ ವಿರುದ್ಧ ದೂರು ನೀಡಬೇಕು. ಕ್ರಿಮಿನಲ್ ಕೇಸು ಹಾಕಿಸಬೇಕು. ಜತೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಸಿಡಿ ಮುಂದಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿರುವವರು ಬಿಜೆಪಿಯ …
Read More »ದೆಹಲಿಯ ಜನತೆಗೆ ನಾವು ಕೋವಿಡ್ 19 ಲಸಿಕೆ ಉಚಿತವಾಗಿ ನೀಡುತ್ತೇವೆ: ಕೇಜ್ರಿವಾಲ್
ನವದೆಹಲಿ : ಆಮ್ ಆದ್ಮಿ ಸರ್ಕಾರ ದೆಹಲಿ ಜನರಿಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಉಚಿತ ವ್ಯಾಕ್ಸಿನೇಷನ್ ಮಾಡಬೇಕೆಂದು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರವು ಏನು ಮಾಡುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಅಗತ್ಯವಿದ್ದರೆ, ಕೇಂದ್ರವು ಲಸಿಕೆಯನ್ನು ಉಚಿತವಾಗಿ ನೀಡದಿದ್ದರೆ, ನಾವು ಲಸಿಕೆಯನ್ನು ದೆಹಲಿ …
Read More »ಮಕ್ಕಳ ಎದುರೇ ಪತ್ನಿ, ಅತ್ತೆಯನ್ನು ಹತ್ಯೆ ಮಾಡಿದ ಭೂಪ
ಗುವಾಹತಿ : ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದಿದ್ದಲ್ಲದೆ ಕೋಳಿ ಮಾಂಸ ಕಟ್ ಮಾಡುವ ಹಾಗೆ ಅವರಿಬ್ಬರನ್ನು ತುಂಡರಿಸಿದ್ದಾನೆ. ತ್ರಿಪುರಾದಧಲೈ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯ ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದೇವೆ. ಆತನ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲು …
Read More »ತೆರಿಗೆದಾರರಿಗೆ ಸಿಹಿ ಸುದ್ದಿ : ಕೇಂದ್ರ ಸರ್ಕಾರದಿಂದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ವಿನಾಯಿತಿ ಮಿತಿ ಹೆಚ್ಚಳ?
ನವದೆಹಲಿ: 2021ರ ಕೇಂದ್ರ ಬಜೆಟ್ ಗೆ ಇನ್ನು ಕೆಲವೇ ದಿನಗಳು ಬಾಕಿ ಯಿದ್ದು, ಮುಂದಿನ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಪ್ರಸ್ತಾವನೆಗಳಿಂದ ಮಧ್ಯಮ ವರ್ಗದವರಿಗೆ ಹಲವು ಗಿಫ್ಟ್‌ಗಳು ಕಾದಿದೆ ಎನ್ನಲಾಗಿದೆ. 2020-21ರ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ವು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ , ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ ರೂ.ಗಳಿಂದ 5 ಲಕ್ಷ …
Read More »ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ಮತ್ತೆ ವಿವಾದ ಸೃಷ್ಟಿಸಿದ ಸಂಸದೆ ಪ್ರಜ್ಞಾ ಸಿಂಗ್
ಉಜ್ಜಯಿನಿ: ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಈಗ ಮತ್ತೆ ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಕರೆಯುವ ಮೂಲಕ ಮತ್ತೊಮ್ಮೆ ವಿವಾದ ಎಬ್ಬಿಸಿದ್ದಾರೆ. ಪ್ರಜ್ಞಾ ಠಾಕೂರ್ ಮಂಗಳವಾರ ಸಂಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ‘ಆ ಪಕ್ಷದವರು ಯಾವಾಗಲೂ ನಿಜವಾದ ದೇಶಭಕ್ತರನ್ನು ನಿಂದಿಸುತ್ತಾರೆ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಗೋಡ್ಸೆಯನ್ನು ‘ಮೊದಲ ಭಯೋತ್ಪಾದಕ’ ಎಂದು …
Read More »
Laxmi News 24×7