ನವದೆಹಲಿ : ಆಮ್ ಆದ್ಮಿ ಸರ್ಕಾರ ದೆಹಲಿ ಜನರಿಗೆ ಕೋವಿಡ್ 19 ಲಸಿಕೆ ಉಚಿತವಾಗಿ ನೀಡಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಉಚಿತ ವ್ಯಾಕ್ಸಿನೇಷನ್ ಮಾಡಬೇಕೆಂದು ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರವು ಏನು ಮಾಡುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಅಗತ್ಯವಿದ್ದರೆ, ಕೇಂದ್ರವು ಲಸಿಕೆಯನ್ನು ಉಚಿತವಾಗಿ ನೀಡದಿದ್ದರೆ, ನಾವು ಲಸಿಕೆಯನ್ನು ದೆಹಲಿ …
Read More »ಮಕ್ಕಳ ಎದುರೇ ಪತ್ನಿ, ಅತ್ತೆಯನ್ನು ಹತ್ಯೆ ಮಾಡಿದ ಭೂಪ
ಗುವಾಹತಿ : ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಯನ್ನು ಕೊಂದಿದ್ದಲ್ಲದೆ ಕೋಳಿ ಮಾಂಸ ಕಟ್ ಮಾಡುವ ಹಾಗೆ ಅವರಿಬ್ಬರನ್ನು ತುಂಡರಿಸಿದ್ದಾನೆ. ತ್ರಿಪುರಾದಧಲೈ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯ ಬಳಿಕ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾವು ಆರೋಪಿಯನ್ನು ಬಂಧಿಸಿದ್ದೇವೆ. ಆತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದೇವೆ. ಆತನ ದೇಹದಲ್ಲಿ ವಿಷಾಂಶ ಪತ್ತೆಯಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ವಿಚಾರಣೆಗೆ ಒಳಪಡಿಸಲು …
Read More »ತೆರಿಗೆದಾರರಿಗೆ ಸಿಹಿ ಸುದ್ದಿ : ಕೇಂದ್ರ ಸರ್ಕಾರದಿಂದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ವಿನಾಯಿತಿ ಮಿತಿ ಹೆಚ್ಚಳ?
ನವದೆಹಲಿ: 2021ರ ಕೇಂದ್ರ ಬಜೆಟ್ ಗೆ ಇನ್ನು ಕೆಲವೇ ದಿನಗಳು ಬಾಕಿ ಯಿದ್ದು, ಮುಂದಿನ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಪ್ರಸ್ತಾವನೆಗಳಿಂದ ಮಧ್ಯಮ ವರ್ಗದವರಿಗೆ ಹಲವು ಗಿಫ್ಟ್ಗಳು ಕಾದಿದೆ ಎನ್ನಲಾಗಿದೆ. 2020-21ರ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ವು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿಯಲ್ಲಿ , ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ ರೂ.ಗಳಿಂದ 5 ಲಕ್ಷ …
Read More »ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ಮತ್ತೆ ವಿವಾದ ಸೃಷ್ಟಿಸಿದ ಸಂಸದೆ ಪ್ರಜ್ಞಾ ಸಿಂಗ್
ಉಜ್ಜಯಿನಿ: ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಈಗ ಮತ್ತೆ ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಕರೆಯುವ ಮೂಲಕ ಮತ್ತೊಮ್ಮೆ ವಿವಾದ ಎಬ್ಬಿಸಿದ್ದಾರೆ. ಪ್ರಜ್ಞಾ ಠಾಕೂರ್ ಮಂಗಳವಾರ ಸಂಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ‘ಆ ಪಕ್ಷದವರು ಯಾವಾಗಲೂ ನಿಜವಾದ ದೇಶಭಕ್ತರನ್ನು ನಿಂದಿಸುತ್ತಾರೆ’ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಗೋಡ್ಸೆಯನ್ನು ‘ಮೊದಲ ಭಯೋತ್ಪಾದಕ’ ಎಂದು …
Read More »ವಾಹನ ಸವಾರರೇ, DL, RC ಅವಧಿ ಮುಗಿದಿದ್ರೆ ನವೀಕರಿಸಿ, ಇಲ್ಲದಿದ್ರೆ ʼ5000 ದಂಡʼ ತೆರಬೇಕಾಗುತ್ತೆ..!
ನವದೆಹಲಿ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾರಿಗೆ ನಿಯಮಗಳಲ್ಲಿ ಸಡಿಲಿಕೆ ನೀಡಿದ್ದು, ಅವಧಿ ಮೀರಿದ ಡಿ.ಎಲ್ ಮತ್ತು ಆರ್.ಸಿಯನ್ನ 2021 ಡಿಸೆಂಬರ್ 31ರವರೆಗೆ ಬಳಸಬಹುದು ಎಂದಿದೆ. ಅದ್ರಂತೆ, 2020ರ ಮಾರ್ಚ್ ನಿಂದ ಅಮಾನ್ಯವಾದ ಚಾಲನಾ ಪರವಾನಗಿಗಳು, ಆರ್ ಸಿಗಳು ಮತ್ತು ಫಿಟ್ ನೆಸ್ ಪ್ರಮಾಣ ಪತ್ರಗಳನ್ನು ಹೊಂದಿರುವ ವಾಹನಗಳ ಮೇಲೆ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಡಿಸೆಂಬರ್ 31ರಿಂದ ಅಕ್ರಮ ಪರವಾನಗಿ ಹೊಂದಿರುವವರ ವಿರುದ್ಧ ಕ್ರಮ …
Read More »ಸಂಪುಟ ವಿಸ್ತರಣೆಯ ಅಸಮಾಧಾನದಿಂದ ಸರ್ಕಾರಕ್ಕೆ ಮತ್ತಷ್ಟು ಅಧೋಗತಿ; ಸಿದ್ದರಾಮಯ್ಯ
ಮೈಸೂರು (ಜ. 13): ಬಿಜೆಪಿ ಸರ್ಕಾರ ಈಗಾಗಲೇ ಅಧೋಗತಿಗೆ ಇಳಿದಿದೆ. ಇದೀಗ ಸಂಪುಟ ವಿಸ್ತರಣೆಯ ಅಸಮಾಧಾನದಿಂದ ಮತ್ತಷ್ಟು ಅಧೋಗತಿಗೆ ಹೋಗಲಿದೆ. ಸಂಪುಟ ಪೂರ್ತಿಯಾದ ಮಾತ್ರಕ್ಕೆ ಈ ಸರ್ಕಾರ ಪರಿಪೂರ್ಣ ಆಗುವುದಿಲ್ಲ. ಆದರೆ, ಮಂತ್ರಿ ಮಂಡಲ ವಿಸ್ತರಣೆಯಿಂದಾಗಿ ಯಡಿಯೂರಪ್ಪ ಇನ್ನೂ ಸ್ವಲ್ಪ ದಿನ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಅನಿಸುತ್ತಿದೆ ಎನ್ನುವ ಮೂಲಕ ಸಿಎಂ ಬದಲಾಗುತ್ತಾರೆ ಎಂಬ ತಮ್ಮ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ. ಈ ಹಿಂದೆ ಸದ್ಯದಲ್ಲೇ ಸಿಎಂ ಸ್ಥಾನದಿಂದ …
Read More »ಬ್ಲ್ಯಾಕ್ಮೇಲ್ ಮಾಡುವ ಮೂವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನವನ್ನು ನೀಡಿದ್ದಾರೆ: ಯತ್ನಾಳ್ ವಾಗ್ದಾಳಿ
ವಿಜಯಪುರ (ಜ. 13): ಬ್ಲ್ಯಾಕ್ಮೇಲ್ ಮಾಡುವ ಮೂವರಿಗೆ ಮುಖ್ಯಮಂತ್ರಿಗಳು ಸಚಿವ ಸ್ಥಾನವನ್ನು ನೀಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಕೂಡ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಸಿಎಂ ವಿರುದ್ಧ ಹರಿಹಾಯ್ದ ಅವರು, ಕೆಲವರು ಸಿಡಿ ತೋರಿಸಿ ಹೆದರಿಸಿ, ಸಚಿವ ಸ್ಥಾನ ಪಡೆದಿದ್ದಾರೆ. ಇನ್ನು ಕೆಲವರು ಅಪಾರ ಪ್ರಮಾಣದ ಹಣ ನೀಡಿ ಸಚಿವರಾಗಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಸವಾಲ್ ಹಾಕಿದರು. ಪ್ರಧಾನಿ ನರೇಂದ್ರ …
Read More »ನೈತಿಕತೆ ಇದ್ದರೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲ
ವಿಜಯಪುರ (ಜನವರಿ. 13); ಸಿಎಂ ವೀರಶೈವ ಲಿಂಗಾಯಿತರ ಹೆಸರಿನಲ್ಲಿ ಕೇಂದ್ರ ನಾಯಕರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಮನಸ್ಲಿಲ್ಲದಿದ್ದರೂ ಸಚಿವ ಸಂಪುಟಕ್ಕೆ ಮೂರು ಜನರನ್ನು ಸೇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್ನೆ ಬ್ಲ್ಯಾಕ್ಮೇಲ್ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ …
Read More »ಮೈಸೂರು: ಜ. 14ರಂದು ‘ಸೀತಾ ಸ್ವಯಂವರ’ ನಾಟಕ ಪ್ರದರ್ಶನ
ಮೈಸೂರು: ಸುಬ್ಬಯ್ಯನಾಯ್ಡು ಅಭಿನಯ ರಂಗ ತರಬೇತಿ ಶಿಬಿರದ ಕಲಾವಿದರು ನಟಿಸಿರುವ ‘ಸೀತಾ ಸ್ವಯಂವರ’ ನಾಟಕ ಪ್ರದರ್ಶನವು ಜ. 14ರಂದು ಸಂಜೆ 6.30ಕ್ಕೆ ರಂಗಾಯಣದ ‘ವನರಂಗ’ದಲ್ಲಿ ನಡೆಯಲಿದೆ. ಇದು ಕೊರೊನಾ ಲಾಕ್ಡೌನ್ ನಂತರ ರಂಗಾಯಣದ ಮೊದಲ ಹೊಸ ನಾಟಕ ಎನಿಸಿದೆ. ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ನ ಅಧ್ಯಕ್ಷ ಎನ್.ವಿ.ಫಣೀಶ್ ನಾಟಕದ ಕರಪತ್ರ ಬಿಡುಗಡೆ ಮಾಡಲಿದ್ದಾರೆ. ಎಂ.ಎಲ್.ಶ್ರೀಕಂಠೇಗೌಡ ಅವರ ಈ ನಾಟಕದ ರಂಗ ವಿನ್ಯಾಸವನ್ನು ಎಚ್.ಕೆ.ದ್ವಾರಕನಾಥ್ ನಿರ್ವಹಿಸಿದ್ದು, ಜೀವನ್ಕುಮಾರ್ ಬಿ ಹೆಗ್ಗೂಡು …
Read More »ನಾನು ಮಾಡಿದ ತಪ್ಪೇನು: ಸಿಎಂಗೆ ಎಚ್. ನಾಗೇಶ್ ಪ್ರಶ್ನೆ? ರಾಜಿನಾಮೆ ನೀಡಲು ಒಪ್ಪಿಗೆ
ಬೆಂಗಳೂರು: ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ. ವಿಧಾನ ಸೌಧದಲ್ಲಿ ಮಾತನಾಡಿದ ಅವರು, ರಾಜಿನಾಮೆಗೆ ಕಾರಣ ಹೇಳಿಲ್ಲ, ಆದರೆ ಸಚಿವ ಸ್ಥಾನಕ್ಕೆ ಸಮಾನಾಂತರವಾದ ಹುದ್ದೆ ನೀಡುತ್ತಾರಂತೆ, ಸಿಎಂ ಮಾತಿಗೆ ಬೆಲೆಕೊಟ್ಟು ನಾನು ರಾಜಿನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ರಾಜಿನಾಮೆ ಕೊಡುವಂತ ತಪ್ಪು ನಾನೇನು ಮಾಡಿಲ್ಲ, ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ, ಹೀಗಿದ್ದರೂ ಜನರಲ್ ಆಗಿ ರಾಜಿನಾಮೆ ಕೊಡಲು …
Read More »