ಕಕ್ಕೇರಿ : ಶನಿವಾರ ಮುಂಬಯಿ -ಬೆಳಗಾವಿ ಕಡೆಯಿಂದ ದಾಂಡೇಲಿಗೆ ಹೈಡ್ರೋಜನ್ ಪೆರಾಕ್ಸೈಡ್ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ N L 01 RD 4579 ಕಕ್ಕೇರಿ ಗ್ರಾಮದಲ್ಲಿನ ಚಿಕ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ವಾಹನದಿಂದ ಗ್ಯಾಸ್ ಸೋರಿಕೆಯಾಗಿ ಪಕ್ಕದ ಗದ್ದೆಗಳಿಗೆ ಹರಿದು ನೆಲ ಕುದಿಯುತ್ತಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೋಲೀಸ್ ಸಿಬ್ಬಂದಿ ಅನಾಹುತ ತಪ್ಪಿಸಲು ಮತ್ತು ರಸ್ತೆ ತೆರವುಗೊಳಿಸುವ ಕಾರ್ಯದಲ್ಲಿ ಹರಸಾಹಸ ಪಟ್ಟಿದ್ದಾರೆ
Read More »ರೈಲು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ.
ಕಲಬುರ್ಗಿ ಜಿಲ್ಲೆ): ಚಿತ್ತಾಪುರ ಬಳಿಯ ಇಟಗಿ ಗ್ರಾಮದ ಹೊರವಲಯದಲ್ಲಿ ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಗ್ರಾಮದ ಕರಿಬಸಪ್ಪ ಪಾಟೀಲ ಕೂಗನೂರ ಅವರು (64) ಶನಿವಾರ ಮಧ್ಯಾಹ್ನ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯ ದೇಹ ಛಿದ್ರ ಛಿದ್ರಗೊಂಡಿದೆ. ದೂರದವರೆಗೂ ದೇಹದ ಅಂಗಗಳು ಬಿದ್ದಿವೆ. ಒಂದು ಕಾಲು ಸುಮಾರು 5 ಕಿ.ಮೀ ದೂರದಲ್ಲಿ ಬಿದ್ದಿದೆ. ಇಟಗಿ ಸಮೀಪದ ರೈಲ್ವೆ ಹಳಿ ಬಳಿಯೇ …
Read More »ಕೃಷಿ ಕಾಯ್ದೆಗೆ ವಿರೋಧ: ಜ.15ರಂದು ಕಾಂಗ್ರೆಸ್‌ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಜ. 15ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ’15ರಂದು ರಾಜಭವನಗಳಿಗೆ ಮುತ್ತಿಗೆ ಹಾಕಲಾಗುವುದು. ಮುಂಬರುವ ಬಜೆಟ್ ಅಧಿವೇಶನದ ವೇಳೆ ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ ತಿಳಿಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಎಲ್ಲಾ ರಾಜ್ಯಗಳ ಉಸ್ತುವಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Read More »KSRTC’ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ವೀಕೆಂಡ್ ಪ್ರಯಾಣ ದರದಲ್ಲಿ ಇಳಿಕೆ
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ವಿಧಿಸುತ್ತಿದ್ದಂತ ಶೇ.10ರಷ್ಟು ಹೆಚ್ಚುವರಿ ಪ್ರಯಾಣದರವನ್ನು ಇಳಿಕೆ ಮಾಡಿದೆ. ಈ ಆದೇಶ ವಾಪಾಸ್ ಪಡೆದಿದ್ದು, ಇದರಿಂದಾಗಿ ವಾರಾಂತ್ಯ ದಿನಗಳಾದಂತ ಶುಕ್ರವಾರ ಹಾಗೂ ಭಾನುವಾರಂದು ತೆಳರುತ್ತಿದ್ದಾಗ ಶೇ.10ರಷ್ಟು ಹೆಚ್ಚುವರಿ ಟಿಕೆಟ್ ದರದ ಹೊರೆ ಕಡಿಮೆ ಆದಂತೆ ಆಗಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ. ಈ …
Read More »ದಿಢೀರ್ ಬೆಳವಣಿಗೆB.S.Y. ದೇಶದ ರಾಜಧಾನಿಗೆ
ದಿಢೀರ್ ಬೆಳವಣಿಗೆ ಹಿನ್ನಲೆ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗ್ಗೆ 8.30ಕ್ಕೆ ಅವರು ದೇಶದ ರಾಜಧಾನಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ವೇಳೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಹೈ ಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಸಚಿವಾಕಾಂಕ್ಷಿಗಳು ಸಂಪುಟ ವಿಸ್ತರಣೆಗೆ ಕಾದಿದ್ದು, ಸಂಕ್ರಾಂತಿಗೂ ಮೊದಲೇ ಅವರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಹಸಿರು …
Read More »KGF 2 ಟೀಸರ್ ರಿಲೀಸ್ ಆದ ಕೂಡಲೆ ಟ್ರೆಂಡ್ ಆಯ್ತು RRR ಸಿನಿಮಾ
ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಕೊನೆಗೂ ರಿಲೀಸ್ ಆಗಿದೆ. ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳು ಕೆಜಿಎಫ್-2 ಟೀಸರ್ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಕೆಜಿಎಫ್-2 ಟೀಸರ್ ನೋಡಿ ಸಂಭ್ರಮಿಸುತ್ತಿದ್ದಾರೆ. ಕನ್ನಡ ಸಿನಿಮಾವೊಂದಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಇಡೀ ಸ್ಯಾಂಡಲ್ ವುಡ್ ದಂಗಾಗಿದೆ. ಇದೀಗ ಎಲ್ಲಾ ಕಡೆ ಕೆಜಿಎಫ್-2 ಟೀಸರ್ ದೆ ಹವಾ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್, …
Read More »ಸತೀಶ್ ಜಾರಕಿಹೊಳಿ ಜೊತೆ ಹೆಲಿಕಾಪ್ಟರ್ ನಲ್ಲಿ ಸುತ್ತಲು ಆಯ್ಕೆಯಾದವರ ಪಟ್ಟಿ
ಗೋಕಾಕ: ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ಭಾನುವಾರ(ಜ.10) ರಂದು ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಸಾವಿತ್ರಿಬಾಯಿ ಫುಲೆ ಜಯಂತಿ’ ಹಾಗೂ ‘ರಾಜ್ಯ ಮಟ್ಟದ ಪ್ರಬಂಧ’ ಹಾಗೂ ‘ಭಾಷಣ’ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರು ಆದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ವಿನಯ ವಕ್ಕುಂದ, ಡಾ. ಯಲ್ಲಪ್ಪ ಹಿಮ್ಮಡಿ ಅವರು ಭಾಗವಹಿಸಲಿದ್ದಾರೆ. …
Read More »ಯಶ್ ಗೆ ವಿಶ್ ಮಾಡಿದ ಹೃತಿಕ್ ರೋಷನ್
ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟಿರುವ ಯಶ್ ಕುಟುಂಬದವರು ಮತ್ತು ಆಪ್ತರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟುಹಬ್ಬದ ಆಚರಣೆ ಸರಳವಾಗಿದ್ದರೂ, ಕೆಜಿಎಫ್-2 ಟೀಸರ್ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. KGF 2 ಟೀಸರ್ ನೋಡಿ ಫಿದಾ ಆದ್ರು ಪರಭಾಷೆಯ ಸ್ಟಾರ್ ಗಳು | Filmibeat Kannada ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ …
Read More »ಜನೇವರಿ 17 ರಂದು ಬೆಳಗಾವಿಗೆ ಅಮೀತ ಶಾ
ಬೆಳಗಾವಿ- ಬಿಜೆಪಿಯ ಚಾಣಕ್ಯರಂದೇ ಪ್ರಸಿದ್ಧಿ ಪಡೆದಿರುವ ಕೇಂದ್ರದ ಗೃಹ ಸಚಿವ ಅಮೀತ ಶಾ ಅವರು ಜನೇವರಿ 17 ರಂದು ಬೆಳಗಾವಿಗೆ ಆಗಮಿಸುತ್ತಿದ್ದು,ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಬಂದಿದೆ ಅಮೀತ ಶಾ ಅವರು ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಂಧರ್ಭದಲ್ಲಿ ಬೆಳಗಾವಿಗೆ ಆಗಮಿಸುತ್ತಿರುವದು ವಿಶೇಷವಾಗಿದ್ದು,ಅಂದು ಅವರು ಬೆಳಗಾವಿಯ ಬಿಜೆಪಿ ಅಭ್ಯರ್ಥಿಯನ್ನು ಫೈನಲ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಮೀತ ಶಾ ಅವರು ಬೆಳಗಾವಿಗೆ ಬಂದು ಹೋದ ಬಳಿಕ …
Read More »ಮೊದಲ ಕೊರೊನಾ ವಾಕ್ಸಿನ್ ಪಡೆದ ಬಾಲಿವುಡ್ ನಟಿ ಶಿಲ್ಪಾ
ನವದೆಹಲಿ, ಜ.8- ದೇಶದೆಲ್ಲೆಡೆ ಕೊರೊನಾ ವ್ಯಾಕ್ಸಿನ್ ಅಭಿಯಾನ ಶುರುವಾಗಿದ್ದು ಬಾಲಿವುಡ್ ಕಲಾವಿದರ ಪೈಕಿ ಮೊದಲ ಲಸಿಕೆಯನ್ನು ನಟಿ ಶಿಲ್ಪಾಶಿರೋಡ್ಕರ್‍ಗೆ ನೀಡಲಾಗಿದೆ. ದುಬೈನಲ್ಲಿ ನೆಲೆಸಿರುವ ಮೃತ್ಯುದಂಡ್ ಚಿತ್ರದ ನಟಿ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತರ ಅದನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದು, ಕೊರೊನಾ ವ್ಯಾಕ್ಸಿನ್‍ನಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ, ಲಸಿಕೆಯ ಲಾಭ ಪಡೆದುಕೊಳ್ಳುವುದರ ಮೂಲಕ ಆರೋಗ್ಯವಂತರಾಗಿ 2021 ವರ್ಷವು ಎಲ್ಲರಿಗೂ ಶುಭ ತರಲೆಂದು ಬರೆದಿದ್ದಾರೆ.ಭ್ರಷ್ಟಾಚಾರ್ ಚಿತ್ರದ ಮೂಲಕ ಬಣ್ಣದ ಲೋಕದ ಲಿಂಕ್ ಸೃಷ್ಟಿಸಿಕೊಂಡ ಶಿಲ್ಪಾ …
Read More »