Breaking News

Uncategorized

ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆಸಿಎಂ ಕುರಿತು ಶೆಟ್ಟರ್‌ ಮಾತು

ಹುಬ್ಬಳ್ಳಿ: ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು.‌ ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಸಿಎಂ ದಸರಾ ಉದ್ಘಾಟನೆ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎನ್ನುವ, ನೈತಿಕತೆ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯನವರು ಇನ್ನು ಮೇಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.   ಯಡಿಯೂರಪ್ಪನವರ ಮೇಲೆ ಎಫ್‌ಐಆರ್ ಆದಾಗ ಏನು ಮಾತನಾಡಿದ್ದರು. ಪ್ರಕರಣದ …

Read More »

500 ರೂ.ನೋಟಿನಲ್ಲಿ ಗಾಂಧೀಜಿ ಬದಲು ‘ಅನುಪಮ್ ಖೇರ್’ ಫೋಟೋ ; 1.60 ಕೋಟಿ ಮೌಲ್ಯದ ನಕಲಿ ನೋಟು ಜಪ್ತಿ..!

500 ರೂ.ಗಳ ಹೊಸ ಕರೆನ್ಸಿ ನೋಟುಗಳು ಅಸ್ತಿತ್ವಕ್ಕೆ ಬಂದು ಸುಮಾರು ಎಂಟು ವರ್ಷಗಳಾಗಿವೆ. ಹೊಸ ಕರೆನ್ಸಿ ನೋಟುಗಳನ್ನು ಪರಿಚಯಿಸಿದಾಗ, ನಕಲಿ ಕರೆನ್ಸಿ ನೋಟುಗಳನ್ನು ವ್ಯವಸ್ಥೆಯಿಂದ ತೆಗೆದುಹಾಕಲಾಯಿತು. ಈಗ, ನಕಲಿ ಕರೆನ್ಸಿ ನೋಟುಗಳು ಮತ್ತೆ ಭಾರತದ ಮೂಲೆ ಮೂಲೆಗಳಿಗೆ ತಲುಪುತ್ತಿವೆ. ಗುಜರಾತ್ ನಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 1.60 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ನೋಟುಗಳಲ್ಲಿ ಮಹಾತ್ಮ ಗಾಂಧಿ ಬದಲಿಗೆ ನಟ ಅನುಪಮ್ ಖೇರ್ ಅವರ ಮುಖವಿತ್ತು. ಪೊಲೀಸ್ …

Read More »

ಬಿಗ್ ಮನೆಗೆ ಸೀರಿಯಲ್ ಸುಂದರಿಯರಎಂಟ್ರಿ

ಬೆಂಗಳೂರು: ಬಿಗ್ ಬಾಸ್ ಕನ್ನಡ (Big Boss Kannada-11) ಆರಂಭವಾಗಿದೆ. ಕಿಚ್ಚ ಸುದೀಪ್ (Kiccha Sudeep) ಸ್ಟೈಲಿಸ್ಟ್ ಆಗಿ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಬಿಗ್ ಬಾಸ್ ಮನೆಯೊಳಗೆ ಹೋಗುವ ನಾಲ್ವರು ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿತ್ತು. ಇಂದು ಬಿಗ್ ಬಾಸ್ ಗೆ ಹೋಗುವ ಮೊದಲ ಸ್ಪರ್ಧಿ ತಮ್ಮದೇ ಸ್ಟೈಲ್ ನಲ್ಲಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿರುವ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. …

Read More »

ಸರ್ಕಾರಿ ಭೂಮಿ ದುರ್ಬಳಕೆ: ಕುರಿಗಾಯಿಗಳ ಆಕ್ರೋಶ

ಲಿಂಗಸುಗೂರು: ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದ ಸರ್ವೆ ನಂಬರ್ 62 ಸೇರಿ ಕಂದಾಯ ಮತ್ತು ಅರಣ್ಯ ಇಲಾಖೆಗಳಿಗೆ ಸೇ ರಿದ ಭೂಮಿಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ದುರ್ಬಳಕೆ ಮಾಡಿಕೊಂಡ ಕಾರಣ ಜಾನುವಾರು ಮೇಯಿಸಲು ಭೂಮಿ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಕುರಿಗಾಯಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಆರ್.ಬಿ.ಶುಗರ್ಸ್‍ ಕಂಪನಿಯು ಸಕ್ಕರೆ ಕಾರ್ಖಾನೆ ಸ್ಥಾಪನೆ ಹೆಸರಲ್ಲಿ ಖರೀದಿ ಮಾಡಿಕೊಂಡ ಜಮೀನಲ್ಲದೆ ಹೆಚ್ಚುವರಿ ಜಮೀನಿನಲ್ಲಿ ಕಲ್ಲು ಗುಡ್ಡ, ಗಿಡ-ಮರ ಕಿತ್ತು ಸಮತಟ್ಟುಗೊಳಿಸುತ್ತಿದೆ. ತನ್ನ …

Read More »

ಸೈಬರ್‌ ವಂಚನೆ: ₹8.64 ಕೋಟಿ ಕಳೆದುಕೊಂಡ ಜನ

ಬೆಳಗಾವಿ: ‘ನೀವು ಗಂಭೀರವಾದ ಅಪರಾಧ ಮಾಡಿದ್ದೀರಿ. ಆನ್‌ಲೈನ್‌ನಲ್ಲಿ ನಿಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯ ಕಂಡುಬಂದಿವೆ. ವಿಡಿಯೊ ಕರೆ ಮೂಲಕವೇ ನಾವು ನಡೆಸುವ ವಿಚಾರಣೆಗೆ ಹಾಜರಾಗಿ. ನಮ್ಮ ಕ್ಯಾಮೆರಾ ಕಣ್ಗಾವಲಿನಲ್ಲೇ ಇರಿ…’ ಇಂಥ ಕರೆಗಳು ನಿಮಗೂ ಬಂದರೆ ಎಚ್ಚರ. ಇಂಟರ್‌ನೆಟ್‌ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಹೀಗೆ ಕರೆ ಮಾಡುತ್ತಿರುವ ವಂಚಕರು ಹಣಕ್ಕೆ ಪೀಡಿಸುತ್ತಿದ್ದಾರೆ. ಅವರಿಗೆ ಹೆದರಿ ಮಾಹಿತಿ ಹಂಚಿಕೊಂಡು ಸಂಕಷ್ಟಕ್ಕೆ ಸಿಲುಕಿದವರು, ನ್ಯಾಯ ಕೋರಿ ಬೆಳಗಾವಿ ನಗರ …

Read More »

ನಕಲಿ ಗೋಲ್ಡ್ ಪ್ಲ್ಯಾಕ್ ಸಿಗರೇಟ್ ಹಾಗೂ ಲೈಟ್ಸ್ ಪ್ಯಾಕ್ ಸಿಗರೇಟ್‌ ವಶ: ಇಬ್ಬರ ಬಂಧನ

ನವಲಗುಂದ: ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಶೆಟ್ಟರ ಕೆರೆ ಹತ್ತಿರ ಅಂದಾಜು ₹5.40 ಲಕ್ಷ ಮೌಲ್ಯದ ನಕಲಿ ಗೋಲ್ಡ್ ಪ್ಲ್ಯಾಕ್ ಸಿಗರೇಟ್ ಹಾಗೂ ಲೈಟ್ಸ್ ಪ್ಯಾಕ್ ಸಿಗರೇಟ್‌ ಪ್ಯಾಕೇಟ್‌ಗಳನ್ನು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ವಾಹನ ಸಮೇತ ಪೊಲೀಸರು ಬಂಧಿಸಿದ್ಧಾರೆ.   ಉಡುಪಿ ಸಂತೆಕಟ್ಟೆ ಮೂಲದ ಮಹ್ಮದ ನೌಶಾದ, ಬೆಂಗಳೂರು ಮೂಲದ ಮಹ್ಮದ ನಾಸಿರ್ ಬಂಧಿತ ಆರೋಪಿಗಳು. ಆರೋಪಿಗಳು 160 ಬಂಡಲ್‌ಗಳಲ್ಲಿ 3200 ನಕಲಿ ಸಿಗರೇಟ್ ಪಾಕೀಟ್‌ಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದರು. ಈ ಕುರಿತು ಬೆಂಗಳೂರು …

Read More »

ಸೆಪ್ಟೆಂಬರ್ 28-29: ದಸರಾ ಕ್ರೀಡಾಕೂಟ

ಉಡುಪಿ: ಜಿಲ್ಲಾಡಳಿತ, ಜಿ.ಪಂ. ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸೆ.28 ಮತ್ತು 29ರಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸೆ. 28ರಂದು ಬೆಳಗ್ಗೆ 9ಕ್ಕೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾ ಕುಮಾರಿ ಉದ್ಘಾಟಿಸಲಿದ್ದಾರೆ. ಸೆ. 28ರಂದು ಬೆಳಗ್ಗೆ 9ಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆತ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಕುಸ್ತಿ, ತ್ರೋಬಾಲ್‌, ಬಾಲ್‌ ಬ್ಯಾಡ್ಮಿಂಟನ್‌ ಹಾಗೂ ಟೇಕ್ವಾಂಡೋ ಕ್ರೀಡಾಕೂಟ, …

Read More »

ಕರೆಂಟ್ ಶಾಕ್ ಹೊಡೆದು ಅಣ್ಣ-ತಮ್ಮ ಇಬ್ಬರೂ ಸಾವು

ವಿಜಯಪುರ: ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ತಿಕೋಟಾದ ಬಾಬಾನಗರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಅಣ್ಣ ರಾಜಕುಮಾರ ವಿಜಾಪುರ ಹಾಗೂ ತಮ್ಮ ಶ್ರೀಕಾಂತ್ ವಿಜಾಪುರ ಮೃತ ಸಹೋದರರು.   ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಬ್ಬಿಣದ ಆಂಗಲ್ ಗೆ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

Read More »

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ: ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಿ- ಕಡಾಡಿ

ಬೆಳಗಾವಿ: ‘ಇಂದಿನ ಮಕ್ಕಳು ಮತ್ತು ಯುವಜನರು ವಿದ್ಯಾರ್ಥಿ ಹಂತದಿಂದಲೇ ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನ ನಡೆಯಲಿರುವ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.   ‘ನರೇಂದ್ರ ಮೋದಿ ಪ್ರಧಾನಿಯಾದ ನಂತರ, ದೇಶದಲ್ಲಿ ಕ್ರೀಡಾ ರಂಗಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶ ಕಲ್ಪಿಸಲಾಗುತ್ತಿದೆ. …

Read More »

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ ಪಶು ಚಿಕಿತ್ಸಾಲಯ ಮೊರಬ ಇವರ ವ್ಯಾಪ್ತಿಯಲ್ಲಿ ಬರುವ ಬೆಕ್ಕೇರಿಯಲ್ಲಿ 185 ಸಾಕು ನಾಯಿಗಳಿಗೆ ಲಸಿಕೆಯನ್ನು ಹಾಕಿ ಲಸಿಕಾ ಅಭಿಯಾನ ಯಶಸ್ವಿಗೊಳಿಸಲಾಯಿತು. ಬಳಿಕ ಮುಖ್ಯ ಪಶುವೈದ್ಯಾಧಿಕಾರಿಗಳು ಡಾ.ಎಂ.ಬಿ. ಪಾಟೀಲ ಮಾತನಾಡಿ, ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸುಲಭವಾಗಿ ಹರಡುವ ಸೋಂಕುಗಳನ್ನು ಝೂನೋಟಿಕ್ ಕಾಯಿಲೆಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ರೇಬೀಸ್ (ನಾಯಿಗಳಿಂದ), ಆಂಥ್ರಾಕ್ಸ್ (ಕುರಿ ಮತ್ತು …

Read More »