Breaking News

Uncategorized

ಲೋಹದ ಹಕ್ಕಿಗಳ ಕಲರವಕ್ಕೆ ಕ್ಷಣಗಣನೆ

ಬೆಂಗಳೂರು,ಫೆ.3- ಕೋವಿಡ್ ಭೀತಿಯಲ್ಲೇ ಆರಂಭಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಯಲಹಂಕ ವಾಯುನೆಲೆಯಲ್ಲಿ ಈಗಾಗಲೇ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಏರೋ ಇಂಡಿಯಾಗೆ ಅಧಿಕೃತ ಚಾಲನೆ ನೀಡಲಿದ್ದು, ಈ ಬಾರಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸುಮಾರು 600ಕ್ಕೂ ಹೆಚ್ಚು ಪ್ರದರ್ಶಕರಿದ್ದು, ಇದರಲ್ಲಿ 78 ವಿದೇಶಿ ಕಂಪನಿಗಳಿವೆ. ದೇಶದ ರಕ್ಷಣಾ ಸಂಸ್ಥೆಗಳಾದ ಡಿಆರ್‍ಡಿಒ, ಎಲ್‍ಆರ್‍ಡಿಇ ಇಸ್ರೋ, ಎನ್‍ಎಎಲ್, ಎಚ್‍ಎಎಲ್, ಬಿಎಚ್‍ಇಎಲ್, ಬಿಇಎಲ್ ಸೇರಿದಂತೆ …

Read More »

ಒಂದು ರಾತ್ರಿ ಜೊತೆ ಮಲಗು, ಬಿಡುತ್ತೇನೆ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವತಿಗೆ ಟಾರ್ಚರ್

ಬೆಂಗಳೂರು(ಫೆ. 02): ಫೇಸ್​ಬುಕ್​ನಲ್ಲಿ ಯುವತಿಯ ಪರಿಚಯ ಮಾಡಿಕೊಂಡು ಸಾವಿನ ನಾಟಕವಾಡಿ ಮೊಬೈಲ್ ನಂಬರ್ ಪಡೆದು ಇನ್ನಿಲ್ಲದಂತೆ ಪೀಡಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಯುವತಿ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಶ್ರವಣ್ ಕುಮಾರ್ ಎಂಬ ಆರೋಪಿಯನ್ನ ಬಂಧಿಸಿದ್ದಾರೆ. ತನ್ನ ಮೇಲೆ ಈತನಿಂದ ಲೈಂಗಿಕ ಹಲ್ಲೆ, ಮಾನಸಿಕ ಕಾಟ ಆಗಿದೆ ಎಂದು ಯುವತಿ ಜನವರಿ 29ರಂದು ನೀಡಿದ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಘಟನೆ ಏನು? ಯುವತಿ ನೀಡಿರುವ ದೂರಿನ …

Read More »

ಎಟಿಎಂ ನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣಅಪರಾಧಿಗೆ 12 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್

ಬೆಂಗಳೂರು: ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಅಪರಾಧಿ ಮಧುಕರ್ ರೆಡ್ಡಿಗೆ ಬೆಂಗಳೂರಿನ 65ನೇ ಸಿಸಿಹೆಚ್ ನ್ಯಾಯಾಲಯ 12 ವರ್ಷಗಳ ಜೈಲು ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. 2013ರ ನವೆಂಬರ್ 19ರಂದು ಬೆಳಿಗ್ಗೆ 7:10ಕ್ಕೆ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಜ್ಯೋತಿ ಉದಯ್, ಹಣ ಡ್ರಾ ಮಾಡಲೆಂದು ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ನಲ್ಲಿರುವ ಎಟಿಎಂಗೆ ಹೋಗಿದ್ದರು. ಈ ವೇಳೆ ಎಟಿಎಂ ನೊಳಗೆ ನುಗ್ಗಿದ್ದ ಮಧುಕರ್ ರೆಡ್ದಿ …

Read More »

ಬಡ ಮಹಿಳೆಯಿಂದ 15 ಸಾವಿರ ರೂ ಡಿಸೇಲ್ ಹಾಕಿಸಿಕೊಂಡ ಯುಪಿ ಪೊಲೀಸರು

ಉತ್ತರಪ್ರದೇಶ : ಮಗಳನ್ನ ಹುಡುಕಿಕೊಡಿ ಎಂದು ಠಾಣೆಗೆ ಬಂದ ಮಹಿಳೆಯಿಂದ ಪೊಲೀಸರು 15 ಸಾವಿರ ರೂಪಾಯಿ ಮೌಲ್ಯದಷ್ಟು ಡಿಸೇಲ್ ತುಂಬಿಸಿಕೊಂಡಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ಈ ಕುರಿತು ನೊಂದ ಮಹಿಳೆ ಎಸ್ ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ. ಏನಿದು ಘಟನೆ..? ತಿಂಗಳ ಹಿಂದೆ ಅಂಗವಿಕಲೆ ಗುಡಿಯಾ ಎಂಬುವರ ಮಗಳು ನಾಪತ್ತೆಯಾಗಿದ್ದರು. ಈ ಕುರಿತು ಗುಡಿಯಾ, ತನ್ನ ಅಪ್ರಾಪ್ತ ಮಗಳನ್ನ ಠಾಕೂರ್ ಎಂಬಾತ ಅಪಹರಿಸಿದ್ದಾನೆ ಎಂದು ಠಾಣೆಯಲ್ಲಿ ದೂರು …

Read More »

ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಸಿಬಿಐ ʼಆರೋಪ ಪಟ್ಟಿʼ ನ್ಯಾಯಾಲಯಕ್ಕೆ ಸಲ್ಲಿಕೆ..!

ನವದೆಹಲಿ: ಧಾರವಾಡದಲ್ಲಿರುವ ವಿಶೇಷ ಕೋರ್ಟ್ʼನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತು ಇತರ ಇಬ್ಬರ ವಿರುದ್ಧ ಆರೋಪ ಪಟ್ಟಿಯನ್ನ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ವಿನಯ ಕುಲಕರ್ಣಿ ಚಂದ್ರಶೇಖರ ಇಂಡಿ ಮತ್ತು ಶಿವಾನಂದ ಬಿರಾದಾರ್ ವಿರುದ್ಧ ಆರೋಪಪ‌ಟ್ಟಿ ದಾಖಲಿಸಲಾಗಿದೆ. 2016ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಆರೋಪಿಗಳು ಮೃತನ ಜೊತೆಗೆ ರಾಜಕೀಯ ಮತ್ತು …

Read More »

ಗ್ರಾಹಕರಿಗೆ ಬಿಗ್‌ ಶಾಕ್:‌ ವಾಣಿಜ್ಯ ‌ʼLPG ಸಿಲೆಂಡರ್ʼ ಬೆಲೆ ಏರಿಕೆ, ಹೊಸ ದರದ ಮಾಹಿತಿ ಇಲ್ಲಿದೆ..!

ತೈಲ ಮಾರುಕಟ್ಟೆ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಫೆಬ್ರವರಿ ತಿಂಗಳ ಬೆಲೆಯನ್ನ ಬಿಡುಗಡೆ ಮಾಡಿದ್ದು, ವಾಣಿಜ್ಯ ಎಲ್ ಪಿಜಿ ಸಿಲಿಂಡರ್ (19ಕೆಜಿ) ಬೆಲೆ 190 ರೂ ಹೆಚ್ಚಳವಾಗಿದೆ. ಆದರೆ, ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ (14.2ಕೆ.ಜಿ) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹೊಸ ದರಗಳು ಫೆಬ್ರವರಿ 1ರಿಂದ ಜಾರಿಗೆ ಬಂದಿವೆ. ಡಿಸೆಂಬರ್ ತಿಂಗಳಲ್ಲಿ ಐಒಸಿ ದೇಶೀಯ ಎಲ್ ಪಿಜಿ ದರವನ್ನ ಎರಡು ಬಾರಿ ಏರಿಸಿತ್ತು. ಈ ಹಿಂದೆ ಡಿಸೆಂಬರ್ …

Read More »

ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳು ಮತ್ತು ರೈತರ ಹೋರಾಟ ಸಂಸತ್ ನಲ್ಲಿ ಪ್ರತಿಧ್ವನಿಸಿದ್ದು, ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.   ಕೃಷಿ ಕಾನೂನು ಮತ್ತು ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಗದ್ದಲ, ಕೋಲಾಹಲ ಎಬ್ಬಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.   ಬಜೆಟ್ ಮಂಡನೆಯ ಮರುದಿನವಾದ ಇಂದು …

Read More »

ಸುಶಾಂತ್ ಸಿಂಗ್ ಸಂಬಂಧಿಯ ಮೇಲೆ ಗುಂಡಿನ ದಾಳಿ

ಕಳೆದ ವರ್ಷ ನಿಧನವಾದ ನಟ ಸುಶಾಂತ್ ಸಿಂಗ್ ಸಂಬಂಧಿ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾನೆ. ಸುಶಾಂತ್ ಸಿಂಗ್ ತಾಯಿಯ ಸಹೋದರನಾಗಿರುವ ರಾಜಕುಮಾರ್ ಸಿಂಗ್ ಮೇಲೆ ಮೂವರು ಅಗಂತುಕರು ನಿನ್ನೆ (ಜನವರಿ 30) ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ರಾಜಕುಮಾರ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಹಾರದ ಸಹರ್ಸಾ ನಲ್ಲಿ ವಾಸವಾಗಿರುವ ರಾಜಕುಮಾರ್ ಸಿಂಗ್ ಗೆ ಮೂರು ವಾಹನ ಶೋ ರೂಂ ಇದ್ದು. ಮೂರೂ …

Read More »

ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: ಮಂಗಳೂರು ಸೇರಿದಂತೆ ರಾಜ್ಯದ 7 ಕಡೆಗಳಲ್ಲಿ ದಾಳಿ

ಮಂಗಳೂರು: ಮಹಾನಗರ ಪಾಲಿಕೆ ಟೌನ್ ಪ್ಲಾನಿಂಗ್ ನ ಜಂಟಿ ನಿರ್ದೇಶಕ ಜಯರಾಜ್ ಅವರ ಮನೆ ಹಾಗೂ ಪತ್ನಿ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ದಾಳಿಯಾಗಿದ್ದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬಿಜೈನ ಕಾಪಿಕಾಡ್ ನಲ್ಲಿರುವ ಜಯರಾಜ್ ಅವರ ಫ್ಲ್ಯಾಟ್, ಮಹಾನಗರ ಪಾಲಿಕೆ ಕಚೇರಿ, ಪಡೀಲ್ ನಲ್ಲಿರುವ ಅವರ ತಂದೆ ಮನೆ ಹಾಗೂ ಪಾಂಡಿಚೇರಿಯಲ್ಲಿರುವ ಅವರ ಪತ್ನಿ ಮನೆಗೂ ದಾಳಿ ನಡೆದಿದ್ದು ವಿಚಾರಣೆ ತಪಾಸಣೆ ಮುಂದುವರಿದಿದೆ. ಇಂದು ಮುಂಜಾನೆಯಿಂದಲೇ ದಾಖಲಾತಿಗಳ ಪರಿಶೀಲನೆ …

Read More »

ವಿದ್ಯುತ್, ಇಂಟರ್ನೆಟ್ ಸ್ಥಗಿತ: ಫೆ.6ರಂದು ದೇಶಾದ್ಯಂತ ರಸ್ತೆ, ತಡೆ: ರೈತ ಸಂಘಟನೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆ ವಿರುದ್ಧ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಶನಿವಾರ(ಫೆಬ್ರುವರಿ 06) ದೇಶಾದ್ಯಂತ “ಚಕ್ಕಾ ಜಾಮ್” (ರಸ್ತೆ ಬಂದ್) ನಡೆಸುವುದಾಗಿ ಘೋಷಿಸಿವೆ. ಮಧ್ಯಾಹ್ನ 1ಗಂಟೆಯಿಂದ 3ಗಂಟೆವರೆಗೆ ಪ್ರತಿಭಟನೆ ನಡೆಯಲಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದೆ. ಸೋಮವಾರ(ಫೆ.1) ಸಂಜೆ ಸಂಸತ್ ಚಲೋ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಸಿದ್ಧತೆ …

Read More »