Breaking News

Uncategorized

ತಮಿಳು ನಟ ಸಿಂಬು ಹೊಸ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

ತಮಿಳು ನಟ ಸಿಂಬು ಅಭಿನಯಿಸಿರುವ ಹೊಸ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ಸ್ ಸಾಥ್ ನೀಡುತ್ತಿದ್ದಾರೆ. ಸಿಂಬು ನಟಿಸಿರುವ ‘ಮಾನಡು’ ಸಿನಿಮಾ ಬಹುಭಾಷೆಯಲ್ಲಿ ತೆರೆಕಾಣಲು ಸಜ್ಜಾಗಿದ್ದು, ಸ್ಟಾರ್ ನಟರು ಹಾಗೂ ಸ್ಟಾರ್ ಮೇಕರ್ಸ್ ಕೈ ಜೋಡಿಸಿದ್ದಾರೆ. ಫೆಬ್ರವರಿ 3 ರಂದು ಸಿಂಬು ಅವರ ಮಾನಡು ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಐದು ಭಾಷೆಯಲ್ಲಿ ಮಾನಡು ಟೀಸರ್ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಕಿಚ್ಚ ಸುದೀಪ್ ರಿಲೀಸ್ ಮಾಡಲಿದ್ದಾರೆ. ಮಧ್ಯಾಹ್ನ 2.34 ಗಂಟೆಗೆ ಮಾನಡು ಕನ್ನಡ …

Read More »

ಸ್ಪ್ಯಾನಿಷ್ ಸಿನಿಮಾ ರೀಮೇಕ್ ನಲ್ಲಿ ಅಮೀರ್ ಖಾನ್?

ತಾವು ನಟಿಸುವ ಸಿನಿಮಾಗಳ ಕತೆಗಳನ್ನು ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ ನಟ ಅಮೀರ್ ಖಾನ್. ಅವರು, ರೀಮೇಕ್ ಸಿನಿಮಾಗಳಲ್ಲಿ ನಟಿಸುವುದು ಬಹಳ ಅಪರೂಪ. ರೀಮೇಕ್ ಸಿನಿಮಾ ಗಜಿನಿಯಲ್ಲಿ ನಟಿಸಿದ್ದ ಅಮೀರ್ ಖಾನ್, ಪ್ರಸ್ತುತ, ಹಾಲಿವುಡ್ ಸಿನಿಮಾ ‘ಫಾರೆಸ್ಟ್ ಗಂಫ್’ ಸಿನಿಮಾದ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಸ್ಪ್ಯಾನಿಷ್ ಸಿನಿಮಾದ ರೀಮೇಕ್ ನಲ್ಲಿ ನಟಿಸುವಂತೆ ಅಮೀರ್ ಖಾನ್ ಅವರನ್ನು ಸಂಪರ್ಕ ಮಾಡಲಾಗಿದೆ. ಅಮೀರ್ ಖಾನ್‌ಗೂ ಕತೆ ಇಷ್ಟವಾಗಿದೆ ಎನ್ನಲಾಗುತ್ತಿದೆ. ಸ್ಪ್ಯಾನಿಷ್ …

Read More »

ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಹಾಲಿವುಡ್ ತಾರೆ

ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಮಾಡುತ್ತಿರುವ ಪ್ರತಿಭಟನೆಗೆ ಕೆಲವು ಬಾಲಿವುಡ್ ತಾರೆಗಳು ಬೆಂಬಲ ಸೂಚಿಸಿದ್ದಾರೆ. ಕೆಲವರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ಪಾಪ್ ಗಾಯಕಿ, ಹಾಲಿವುಡ್ ಸಿನಿಮಾ ನಟಿ ರಿಹಾನಾ ದೆಹಲಿ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ದೆಹಲಿ ರೈತ ಪ್ರತಿಭಟನೆ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ರಿಹಾನಾ, ‘ಇದರ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನೆ ಮಾಡಿದ್ದಾರೆ. ‘ಪ್ರತಿಭನಾಕಾರ ರೈತರು ಪೊಲೀಸರ ನಡುವೆ ತಿಕ್ಕಾಟದ ನಂತರ ಸರ್ಕಾರವು …

Read More »

ನಾಯಕಿಯ ಅರ್ಧ ಫೋಟೋ ಶೇರ್ ಮಾಡಿ ಕುತೂಹಲ ಮೂಡಿಸಿದ ರಕ್ಷಿತ್ ಶೆಟ್ಟಿ & ತಂಡ; ಆ ನಟಿ ಇವರೇ ನೋಡಿ?

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ‘777 ಚಾರ್ಲಿ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ಚಿತ್ರದ ಪ್ಯಾಚ್ ವರ್ಕ್ ಕೆಲಸದಲ್ಲಿ ನಿರತರಾಗಿದ್ದಾರೆ. ಇತ್ತೀಚಿಗಷ್ಟೆ ಕಾಶ್ಮೀರದಲ್ಲಿ ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದ ಸಿನಿಮಾತಂಡ ತುಂಬಾ ಕಷ್ಟದ ಭಾಗದ ಚಿತ್ರೀಕರಣವನ್ನು ಸಂಪೂರ್ಣ ಮಾಡುವ ಮೂಲಕ ಚಾರ್ಲಿ ಶೂಟಿಂಗ್ ಮುಕ್ತಾಯವಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಚಾರ್ಲಿ ಮುಗಿಯುತ್ತಿದ್ದಂತೆ ರಕ್ಷಿತ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ಪ್ರಿ ಪ್ರೊಡಕ್ಷನ್ …

Read More »

ಪೌರತ್ವ ತಿದ್ದುಪಡಿ ನಿಯಮಗಳು ಜುಲೈ ಒಳಗೆ ಸಿದ್ಧವಾಗಲಿವೆ: ಕೇಂದ್ರ ಸರ್ಕಾರ

ನವದೆಹಲಿ,ಫೆಬ್ರವರಿ 02: ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿನ ನಿಯಮಗಳು ಜುಲೈ ಒಳಗೆ ಸಿದ್ಧವಾಗಲಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ಬಾಂಗ್ಲಾದೇಶ,ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪ ಸಂಖ್ಯಾತರಿಗೆ ಹಿಂದೂ, ಸಿಖ್,ಜೈನ,ಬೌದ್ಧ,ಪಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲು ಅನುಕೂಲವಾಗುವ ಸಿಎಎಯನ್ನು 2019ರಡಿಸೆಂಬರ್‌ನಲ್ಲಿ ಸಂಸತ್ ಅಂಗೀಕರಿಸಿತ್ತು. 2019ರ ನಾಗರಿಕ ಕಾಯ್ದೆಯನ್ನು 2019ರ ಡಿಸೆಂಬರ್ ರಂದು ಅಧಿಸೂಚಿಸಲಾಗಿದೆ. 2020ರ ಜನವರಿ 10ರಿಂದ ಕಾಯ್ದೆ ಜಾರಿಗೆ ಬಂದಿದೆ.ನಿಯಮಗಳನ್ನು ರೂಪಿಸಲು ಲೋಕಸಭೆ ಮತ್ತು …

Read More »

ರೈತ ಹೋರಾಟ: ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ

ನವದೆಹಲಿ, ಫೆಬ್ರವರಿ.03: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನವದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ಹರಿಯಾಣ ಸರ್ಕಾರವು ಏಳು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆಗಳ ಮೇಲೆ ವಿಧಿಸಿದ ನಿರ್ಬಂಧವನ್ನು ಫೆಬ್ರವರಿ.3ರ ಸಂಜೆ 5 ಗಂಟೆವರೆಗೂ ವಿಸ್ತರಿಸಿದೆ. ಹರಿಯಾಣದ ಕೈಥಲ್, ಪಾಣಿಪತ್, ಜಿಂದ್, ರೋಹ್ಟಕ್, ಚರ್ಖಿ ದಾದ್ರಿ, ಸೋನಿಪತ್ ಮತ್ತು ಝಜ್ಜರ್ ಜಿಲ್ಲೆಗಳಲ್ಲಿ ದೂರವಾಣಿ ಕರೆಯನ್ನು ಹೊರತುಪಡಿಸಿದಂತೆ ಇಂಟರ್ ನೆಟ್, ಎಸ್‌ಎಂಎಸ್ ಮತ್ತು ಡೋಂಗಲ್ ಸೇವೆಯನ್ನು ನಿರ್ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ …

Read More »

ಬಿಡಿಎನಲ್ಲಿ ಊಹಿಸಲಾಗದಷ್ಟು ಹಗರಣ, ಮೂರ್ನಾಲ್ಕು ತಿಂಗಳಲ್ಲಿ ಎಲವೂ ಬಹಿರಂಗ: B.S.Y.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಊಹೆ ಮಾಡಲಾಗದಷ್ಟು ದೊಡ್ಡ ಹಗರಣ ನಡೆದಿದೆ. ಇನ್ನು ಮೂರುನಾಲ್ಕು ತಿಂಗಳಲ್ಲಿ ಅದೆಲ್ಲವನ್ನೂ ಹೊರಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ವಿಧಾನಸಭೆಗೆ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣೆ ಚೆರ್ಚೆಯ ವೇಳೆ ಬಿಡಿಎ ವಿಚಾರ ಪ್ರಸ್ತಾಪವಾದಾಗ ಸಿಎಂ ಯಡಿಯೂರಪ್ಪ ಅವರು ಈ ಭರವಸೆ ನೀಡಿದ್ದಾರೆ. ನಾನೇ ಖುದ್ದಾಗಿ ಹೋಗಿ ಬಿಡಿಎ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು, ಎರಡು …

Read More »

ಗ್ರಾ.ಪಂ: ಸಾಮಾನ್ಯ ಸ್ಥಾನದವರಿಗೂ ಮೀಸಲಾತಿ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ!

ಪುತ್ತೂರು: ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಕೂಡ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅವರ ವರ್ಗಕ್ಕೆ ಮೀಸಲಿಟ್ಟ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಹೊಂದಿದ್ದಾರೆ! ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯಡಿ ಸ್ಪರ್ಧಿಸಬಹುದಾದ ಅರ್ಹತೆಗಳ ಬಗ್ಗೆ ಮೂಡಿರುವ ಗೊಂದಲದ ಬಗ್ಗೆ ರಾಜ್ಯ ಚುನಾವಣ ಆಯೋಗ ಸುತ್ತೋಲೆ ಹೊರಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷತೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿರುವ ಹಿಂದುಳಿದ ವರ್ಗ ಎ, ಬಿ, ಎಸ್‌ಸಿ, ಎಸ್‌ಟಿ ಪುರುಷ ಅಥವಾ …

Read More »

ಅಪೌಷ್ಟಿಕತೆ ಮುಕ್ತ ಬೆಳಗಾವಿ ಪೋಷಣ ಅಭಿಯಾನ ಯೋಜನೆಯ ಪ್ರಗತಿ ಪರಿಶೀಲನೆ

ಬೆಳಗಾವಿ  : ರಾಜ್ಯದಲ್ಲಿ ೨೦೨೦ ಪೋಷಣಾ ಅಭಿಯಾನ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಅಪೌಷ್ಟಿಕತೆ ಮುಕ್ತ ಬೆಳಗಾವಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮಾಡಿದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಫೆ.೨) ನಡೆದ ಎಲ್ಲಾ ಶಕ್ತಿ ಕೇಂದ್ರ ಯೋಜನೆ ಟ್ರಾನ್ಸ್ಜೆಂಡರ್ ರವರ ಸಮನ್ವಯ ಮತ್ತು ಉಸ್ತುವಾರಿ ಸಮಿತಿ, ಪ್ರಧಾನ ಮಂತ್ರಿ ಯೋಜನೆ ಹಾಗೂ ಪೋಷಣ ಅಭಿಯಾನ ಯೋಜನೆಯ …

Read More »

ಬೆಂಗಳೂರು ತಲುಪಿದ ಕುರುಬರ ಪಾದಯಾತ್ರೆ; ಎಲ್ಲೆಲ್ಲಿ ಟ್ರಾಫಿಕ್ ಜಾಮ್?

ಬೆಂಗಳೂರು(ಫೆ. 03): ಕುರುಬರಿಗೆ ಎಸ್​ಟಿ ಮೀಸಲಾತಿ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಕುರುಬ ಸಮುದಾಯದವರು ಜನವರಿ 15ರಂದು ಆರಂಭಿಸಿರುವ ಬೃಹತ್ ಪಾದಯಾತ್ರೆ ಇಂದು ಬೆಂಗಳೂರು ನಗರವನ್ನ ಪ್ರವೇಶಿಸಿದೆ. ‘ಎಸ್​ಟಿ ನಮ್ಮ ಹಕ್ಕು’ ಹೆಸರಿನಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ಬೆಳಗ್ಗೆ 6ಗಂಟೆ ಬಳಿಕ ನಗರಕ್ಕೆ ಅಡಿ ಇಟ್ಟಿತು. ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ಅವರು ನಿರಂಜನಾನಂದಪುರಿ ಸ್ವಾಮಿಗಳಿಗೆ ಹೂ, ಹಾರ ಶಾಲು ಹಾಕಿ ಸ್ವಾಗತಿಸಿ ಆಶೀರ್ವಾದ ಪಡೆದರು. ನೆಲಮಂಗಲ …

Read More »