Breaking News

Uncategorized

ಗದಗದಲ್ಲಿ ರಾಜ್ಯದ ಮೊದಲ ಇವಿಎಂ ಗೋದಾಮು ಉದ್ಘಾಟನೆ

ಗದಗ: ರಾಜ್ಯದ ಮೊದಲ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಗೋದಾಮನ್ನು ರೈಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಗದಗದಲ್ಲಿ ಉದ್ಘಾಟಿಸಿದರು. ಸುಮಾರು 2.65 ಕೋಟಿ ರು ವೆಚ್ಚದಲ್ಲಿ ಈ ಕಟ್ಟಡ ಜಿಲ್ಲಾಧಿಕಾರಿ ಕಚೇರಿ ಹಿಂದೆ ನಿರ್ಮಾಣವಾಗಿದೆ, ಹೆಚ್ಚು ಸುರಕ್ಷಿತವಾದ ಕಟ್ಟಡವು ಪ್ರವೇಶದ್ವಾರದ ಬಳಿ ಮೊದಲ ಹಂತದ ಚೆಕ್‌ರೂಮ್ ಮತ್ತು ಜಿಲ್ಲೆಯ ನಾಲ್ಕು ಅಸೆಂಬ್ಲಿ ವಿಭಾಗಗಳಿಗೆ ಮೀಸಲಾಗಿರುವ ನಾಲ್ಕು ಇಂಟರ್ ಕನೆಕ್ಟೆಡ್ ಸಭಾಂಗಣಗಳನ್ನು ಹೊಂದಿದೆ. ಎಲ್ಲಾ ಸಭಾಂಗಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, …

Read More »

ಪಕ್ಷ ಬಯಸಿದ್ರೆ ಗೋಕಾಕ್​ನಿಂದ ನಾನೇ ಸ್ಪರ್ಧೆ ಮಾಡುತ್ತೇನೆ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಪಕ್ಷ ಬಯಸಿದ್ರೆ ಗೋಕಾಕ್​ನಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಟಾಂಗ್​ ಕೊಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಮೇಶ ಜಾರಕಿಹೊಳಿ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ ಎಂದಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಿಗೆ …

Read More »

‘ಮಿಠಾಯಿ ಕಂಡ ಮಗುವಿನಂತಾಗಿರುವ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್’

ಮೈಸೂರು: ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ. ಟ್ರಂಪಾಯಣದಂತೆ ಸಿದ್ದರಾಮಾಯಣ ನಡೆಯುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿದಾಗ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಅದನ್ನು ಪಡೆಯಬೇಕೆಂದು ಚಡಪಡಿಸುತ್ತಾರೆ. ಹೀಗಾಗಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಸೋಲನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಸಿದ್ಧರಿಲ್ಲ, ಅವರದು ಕಾಂಗ್ರೆಸ್ ಸಂಸ್ಕಾರ, ಸಂಸ್ಕೃತಿ …

Read More »

ಸಿದ್ದರಾಮಯ್ಯರ ಅಹಿಂದ ಲೆಕ್ಕಾಚಾರಕ್ಕೆ ಸತೀಶ ಜಾರಕಿಹೊಳಿ ಹೇಳಿದ್ದೇನು..?

ಕಾಂಗ್ರೆಸ್ ಪಕ್ಷ ಇರೋದೆ ಅಹಿಂದ್ ಬೇಸ್ ಮೇಲೆ, ಹೀಗಾಗಿ ಮತ್ತೆ ಅಹಿಂದ ಸಮಾವೇಶ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸುತ್ತಾರೆ ಎಂಬ ಚರ್ಚೆ ಕೇಳಿ ಬರುತ್ತಿರುವ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ ಈ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ, ಅಹಿಂದ ಚಳುವಳಿ ಎಲ್ಲಿಯೂ ಇಲ್ಲವೇ ಇಲ್ಲ, ಯಾಕೆಂದರೆ ಕಾಂಗ್ರೆಸ್ ಪಕ್ಷ ಇರೋದೇ …

Read More »

A.B.V.P.ಅಧ್ಯಕ್ಷರಾಗಿದ್ದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು..?

೪೦ ವರ್ಷದ ಎಬಿವಿಪಿಗೂ, ಜನಸಂಘಕ್ಕೂ ಈಗಿನ ಆರ್‌ಎಸ್‌ಎಸ್, ಬಿಜೆಪಿಗೂ ಸಾಕಷ್ಟು ವ್ಯತ್ಯಾಸವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಸತೀಶ ಜಾರಕಿಹೊಳಿ ಎಬಿವಿಪಿ ಅಧ್ಯಕ್ಷರಾಗಿದ್ದರು ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ೪೦ ವರ್ಷದ ಎಬಿವಿಪಿ, ಆರ್‌ಎಸ್‌ಎಸ್, ಜನಸಂಘಕ್ಕೂ ಬಿಜೆಪಿಗೂ ಯಾವುದೇ ರೀತಿ ಸಂಬAಧ ಇಲ್ಲ. ಮೊದಲು ಜನಸಂಘದ ಕಾರ್ಯಕ್ರಮ ನೋಡಲು ಇಡೀ ಊರಿಗೆ ಊರೇ ಹೋಗುತ್ತಿತ್ತು. ಹೀಗಾಗಿ ಬಹಳಷ್ಟು ವ್ಯತ್ಯಾಸವಾಗಿದೆ, ಹೋರಾಟ, …

Read More »

ರಾಮ ಮಂದಿರದ ಹೆಸರಲ್ಲಿ ವಂಚಿಸುತ್ತಿದ್ದ ದುಷ್ಕರ್ಮಿಗಳ ಬಂಧನ

ಕಾನಪುರ: ಒಳ್ಳೆಯ ಕೆಲಸದ ಹೆಸರಲ್ಲಿ ಜನರನ್ನು ವಂಚಿಸಲು ದುಷ್ಕರ್ಮಿಗಳು ಸದಾ ಸಿದ್ಧವಿರುತ್ತಾರೆ. ಇದೀಗ ಅಯೋಧ್ಯೆಯಲ್ಲಿ ಕಟ್ಟಲು ಯೋಜಿಸಲಾಗಿರುವ ಭವ್ಯ ರಾಮ ಮಂದಿರದ ಹೆಸರಲ್ಲಿ ಕೂಡ ವಂಚನೆಗೆ ತೊಡಗಿರುವುದು ಬೆಳಕಿಗೆ ಬಂದಿದೆ. ಈ ರೀತಿಯ ಎರಡು ಪ್ರಯತ್ನಗಳನ್ನು ಉತ್ತರ ಪ್ರದೇಶ ಪೊಲೀಸರು ಪತ್ತೆ ಹಚ್ಚಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಉತ್ತರಪ್ರದೇಶದ ಕಾನಪುರದಲ್ಲಿ ಚಂದ್ರಪ್ರಕಾಶ್ ತ್ರಿಪಾಠಿ ಮತ್ತು ಅಶೋಕ್ ರಾಜಪೂತ್ ಎಂಬುವರು ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿರುವುದಾಗಿ ಜನರಿಂದ ಹಣ ಪಡೆಯುತ್ತಿದ್ದರು. …

Read More »

ತುಳು ಚಿತ್ರ ನಿರ್ದೇಶಕನಿಗೆ ಕನ್ನಡ ನಟಿಯಿಂದ ಮೋಸ

ಮಂಗಳೂರು : ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಇವರಿಗೆ ನೀಡಿದ 40 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪದ್ಮಜಾ ರಾವ್‌ಗೆ ಮಂಗಳೂರಿನ ಜೆಎಂಎಫ್‌ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ನೀಡಿದೆ. ವೀರೇಂದ್ರ ಶೆಟ್ಟಿ ಕಾವೂರು ಕನ್ನಡದ ಚಿತ್ರರಂಗದ ನಟಿ ಪದ್ಮಾಜಾ ರಾವ್ ವಿರುದ್ಧ ಮಂಗಳೂರಿನ ಕೋರ್ಟ್‌ನಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್, …

Read More »

ದರ್ಶನ್ ಹುಟ್ಟುಹಬ್ಬದ ದಿನ ರಾಬರ್ಟ್ ಟ್ರೈಲರ್ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ರೋಬೋಟ್ ಚಿತ್ರದ ಎಂದು ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹೊರಡಿಸಿದೆ. ಫೆಬ್ರವರಿ 16 ದರ್ಶನ್ ಅವರ ಹುಟ್ಟಿದ ದಿನವಾಗಿದ್ದು ಅಂದೇ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಟ್ರೈಲರ್ ನನ್ನ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಮಾರ್ಚ್ 11ರಂದು ಈ ಸಿನಿಮಾ ರಿಲೀಸ್ ಆಗುತ್ತಿದ್ದು ಈ ಚಿತ್ರದ ಟ್ರೈಲರ್ ಗಾಗಿ ದರ್ಶನ್ …

Read More »

ಈ ಬಾರಿಯ ಬಜೆಟ್‍ನಲ್ಲಿ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನವನ್ನು ಶೇ.10ರಿಂದ 15ರಷ್ಟು ಕಡಿತಗೊಳಿಸಲು ತೀರ್ಮಾನ:B.S.Y.

ಬೆಂಗಳೂರು, ಫೆ.12- ರಾಜ್ಯದಲ್ಲಿ ಈ ಬಾರಿ ಕೋವಿಡ್-19 ಬಂದ ಹಿನ್ನೆಲೆ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡು ಬೊಕ್ಕಸಕ್ಕೆ ಆದಾಯ ಕುಸಿತಗೊಂಡಿರುವ ಕಾರಣ ಈ ಬಾರಿಯ ಬಜೆಟ್ ಗಾತ್ರ ಹಾಗೂ ಇಲಾಖೆಗಳಿಗೆ ನೀಡುತ್ತಿದ್ದ ಅನುದಾನ ಕಡಿತವಾಗಲಿದೆ. ಮಾರ್ಚ್ 5ರಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದು, ಆದಾಯ ಸಂಪನ್ಮೂಲ ಕ್ರೂಢೀಕರಣವೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಲಾಕ್‍ಡೌನ್ ತೆರವುಗೊಳಿಸಿದ ನಂತರ ಸರ್ಕಾರದ ಬೊಕ್ಕಸಕ್ಕೆ ಆದಾಯ …

Read More »

ಬಾಲಕಿಯ ಮನೆಯ ಮುಂದೆ ಚುಡಾಯಿಸಿದ ಪ್ರಕರಣಕ್ಕೆ ತಂದೆ ಮಗ ಸೇರಿ ಮೂವರಿಗೆ ಜೈಲು ಶಿಕ್ಷೆ

ಚಾಮರಾಜನಗರ: ಅಪ್ರಾಪ್ತ ಶಾಲಾ ಬಾಲಕಿಯನ್ನು ಹಿಂಬಾಲಿಸಿ ಬಾಲಕಿಯ ಮನೆಯ ಮುಂದೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಮಗ ಸೇರಿ ಮೂವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್‌ಸ್ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಜಿಲ್ಲೆಯ ರಾಮಾಪುರ ಠಾಣಾ ವ್ಯಾಪ್ತಿಯ ಗ್ರಾಮದ ಆನಂದ ಮತ್ತು ನಾಗೇಂದ್ರ ಅವರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ಆನಂದನ ತಂದೆ ಮಾದಪ್ಪ ಅವರಿಗೆ 1 ವರ್ಷದ ಜೈಲು ಶಿಕ್ಷೆ …

Read More »