Breaking News
Home / Uncategorized (page 55)

Uncategorized

ಹೊರ ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಕಡ್ಡಾಯ: ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಮೀಸಲಾತಿ ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರದಿಂದ ಈ ಕುರಿತಾಗಿ ಅಧಿಕೃತ ಆದೇಶ ಹೊರಡಿಸಲಾಗಿದೆ. ವಾಹನ ಚಾಲಕರು, ಡೇಟಾ ಎಂಟ್ರಿ ಆಪರೇಟರ್, ಸ್ವಚ್ಛತಾ ಸಿಬ್ಬಂದಿ, ಗ್ರೂಪ್ ಡಿ ಹುದ್ದೆಗಳ ಹೊರಗುತ್ತಿಗೆ ನೇಮಕದಲ್ಲಿ ಮೀಸಲಾತಿ ಕಡ್ಡಾಯಗೊಳಿಸಲಾಗಿದೆ. ಇದರ ಅನ್ವಯ ಶೇಕಡ 33 ರಷ್ಟು ಮಹಿಳೆಯರನ್ನು ನೇಮಕ ಮಾಡಿಕೊಳ್ಳಬೇಕಿದೆ. ಈ ಮೂಲಕ ಹೊರಗುತ್ತಿಗೆಯಲ್ಲೂ ಮೀಸಲಾತಿ ಕಡ್ಡಾಯಗೊಳಿಸಿ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಕಚೇರಿಗಳಲ್ಲಿನ ವಾಹನ ಚಾಲಕರು, ಡೇಟಾ ಎಂಟ್ರಿ ಆಪರೇಟರ್ …

Read More »

ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ ಬಲಿ

ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ (Baby Death) ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಲತಾಯಿಯೇ 3 ವರ್ಷದ ಮಗುವನ್ನು ಕೊಂದಿದ್ದಾಳೆ (Murder case) ಎನ್ನಲಾಗಿದೆ. ಸಮೃದ್ಧಿ(3) ಮೃತ ದುರ್ದೈವಿ. ಮಲತಾಯಿ ಸಪ್ನಾ ರಾಯಣ್ಣ ನಾವಿ ಎಂಬಾಕೆ ಕೊಲೆ ಆರೋಪ ಎದುರಿಸುತ್ತಿರುವ ಮಲತಾಯಿ ಆಗಿದ್ದಾಳೆ. ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಗುವಿನ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ್ದಾಗಿ ಸಮೃದ್ಧಿಯ ಅಜ್ಜಿ ಹಾಗೂ ಚಿಕ್ಕಪ್ಪ …

Read More »

ಟ್ಯಾಂಕ್ ಮೇಲೆ ಯುವತಿ ಕೂರಿಸಿಕೊಂಡು ಬೈಕ್ ಚಾಲನೆ ಮಾಡಿದ್ದ ಪ್ರೇಮಿ ಅರೆಸ್ಟ್‌!

ಬೆಂಗಳೂರು: ಇಂಧನ ಟ್ಯಾಂಕ್ ಮೇಲೆ ಕುಳಿತಿದ್ದ ಮಹಿಳೆಯೊಂದಿಗೆ ಬೈಕ್ ಸವಾರಿ ಮಾಡುತ್ತಿರುವ ಯುವಕನನ್ನು ಹೆಬ್ಬಾಳ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಅವರ ಚಾಲನಾ ಪರವಾನಗಿಯನ್ನು ರದ್ದುಪಡಿಸುವಂತೆ ಪೊಲೀಸರು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್ ಟಿಒ) ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಕಾವಲ್ ಬೈರಸಂದ್ರ ನಿವಾಸಿ ಸಿಲಂಬರಸನ್ ಎಂಬವರು ಯಲಹಂಕದಿಂದ ಹೆಬ್ಬಾಳದ ಕಡೆಗೆ ಕೊಡಿಗೆಹಳ್ಳಿಯ ಬಳ್ಳಾರಿ ರಸ್ತೆ ಫ್ಲೈಓವರ್ ನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ತಮ್ಮ ತೊಡೆ ಮೇಲೆ ಯುವತಿಯನ್ನು ಕೂರಿಸಿಕೊಂಡು …

Read More »

ಕಾಂಗ್ರೆಸ್‌ ಸರ್ಕಾರಕ್ಕೆ ಒಂದು ವರ್ಷ: ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಧನ್ಯವಾದ ತಿಳಿಸಿದ ಸಿದ್ದರಾಮಯ್ಯ

ಕಾಂಗ್ರೆಸ್‌ ಸರ್ಕಾರಕ್ಕೆ ಒಂದು ವರ್ಷ: ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಧನ್ಯವಾದ ತಿಳಿಸಿದ ಸಿದ್ದರಾಮಯ್ಯ ಬೆಂಗಳೂರು, ಮೇ 20: ನಮ್ಮ ಸರ್ಕಾರವನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಅಭದ್ರತೆಯ ಆತಂಕ ಇರಲೇಬಾರದೆಂದು ಸ್ಪಷ್ಟವಾದ ಬಹುಮತವನ್ನು ಕೊಟ್ಟು ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ರಾಜ್ಯದ ಮತದಾರರ ಪ್ರಜ್ಞಾವಂತಿಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು …

Read More »

ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

ರಾಣೆಬೆನ್ನೂರು: ತಾಲ್ಲೂಕಿನ ಹನುಮನಹಳ್ಳಿ ಹಾಗೂ ತೆರದಹಳ್ಳಿ ಬಳಿಯಿರುವ ಗೋಲ್ಡನ್ ಹ್ಯಾಚರೀಸ್‌ನ ಗ್ರೀನ್ ಎನರ್ಜಿ ಬಯೋ ರಿಫೈನ್‌ರೈಜ್ ಕಂಪನಿಯ ಪೆಟ್ರೋಲಿಯಂ ಉತ್ಪನ್ನಗಳು ಹೊರಸೂಸುವ ರಾಸಾಯನಿಕ ಕಲ್ಮಶಯುಕ್ತ ನೀರು ಸಮೀಪದ ಹಳ್ಳದಿಂದ ಕುಮಧ್ವತಿ ನದಿಗೆ ಹರಿದು ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗುತ್ತಿದೆ. ಶುಕ್ರವಾರ ಹನುಮನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಸಮಸ್ಯೆ ಪರಿಶೀಲಿಸಿದರು. ನಂತರ ರೈತರ ಜೊತೆಗೆ ಕೆಲಕಾಲ ಚರ್ಚಿಸಿ ರೈತರಿಗೆ ಆಗುವ ತೊಂದರೆಗಳನ್ನು ಆಲಿಸಿದರು. ನಂತರ ಹಾವೇರಿ …

Read More »

ರಕ್ತದಾನ ಮಾಡಲು ಯುವಕರಿಗೆ ಸಲಹೆ

ಸವಣೂರು: ‘ತನ್ನ ರಕ್ತವನ್ನು ಇನ್ನೊಬ್ಬರ ಜೀವ ಉಳಿಸಲು ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ನೀಡುವುದೇ ರಕ್ತದಾನ’ ಎಂದು ಹಾವೇರಿ ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ತಿಳಿಸಿದರು. ಹೊನ್ನಿಕೊಪ್ಪ ಜೀವದಾನಿಗಳ ಬಳಗ, ಶ್ರೀ ಮಹರ್ಷಿ ವಾಲ್ಮೀಕಿ ವೈದ್ಯ ಬಳಗ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ತಾಲ್ಲೂಕಿನ ಹೊನ್ನಿಕೊಪ್ಪ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ‘ಭೇದ ತೊರದೇ ರಕ್ತದಾನ ಮಾಡಿ ಜೀವ ಉಳಿಸುವ …

Read More »

ಹಾನಗಲ್: ಉತ್ಕೃಷ್ಟ ರುಚಿಯ ಆಪೂಸ್‌ ವಿದೇಶಕ್ಕೆ ರಪ್ತು

ಹಾನಗಲ್: ಹಾನಗಲ್ ತಾಲ್ಲೂಕಿನ ಮಾವಿನ ತೋಟಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಉತ್ಕೃಷ್ಟ ರುಚಿಯ ಆಪೂಸ್‌ ಮಾವು ಇಳುವರಿ ಹವಾಮಾನ ವೈಪರಿತ್ಯ ಕಾರಣದಿಂದ ಕಡಿಮೆಯಾಗುತ್ತಿದೆ. ಎರಡು ವರ್ಷ ಅಧಿಕ ಮಳೆ, ಇಬ್ಬನಿ ಕಾಟ, ಈ ವರ್ಷ ಉಷ್ಣಾಂಶ ಹೆಚ್ಚಳದ ಪರಿಣಾಮ ಮಾವು ಇಳುವರಿಯಲ್ಲಿ ಇಳಿಮುಖವಾಗಿದೆ. ತಾಲ್ಲೂಕಿನಲ್ಲಿ 3500 ಹೆಕ್ಟರ್‌ ಮಾವು ಬೆಳೆಯಲಾಗುತ್ತದೆ. ಮಳೆ ಅಭಾವ ಹೊರತುಪಡಿಸಿದರೆ, ಈಗಲೂ ಹಾನಗಲ್ ಹವಾಗುಣ ಮಾವು ಬೆಳೆಗೆ ಉತ್ತಮವಾಗಿದೆ ಎಂಬ ವರದಿ ತೋಟಗಾರಿಕೆ ಇಲಾಖೆ ಹೊಂದಿದೆ. ಆದರೆ ಮಾವು …

Read More »

ಕುಡಿಯುವ ನೀರಿಗಾಗಿ ಗ್ರಾ.ಪಂ.ಗೆ ಮುತ್ತಿಗೆ

ಔರಾದ್: ಕುಡಿಯುವ ನೀರು ಪೂರೈಸಲು ಆಗ್ರಹಿಸಿ ತಾಲ್ಲೂಕಿನ ಕೌಠಾ ಗ್ರಾಮಸ್ಥರು ಶನಿವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದ ವಾರ್ಡ್ -1ರ ಮಹಿಳೆಯರು ಸೇರಿದಂತೆ ಅನೇಕರು ಸಮಸ್ಯೆ ಹೇಳಿಕೊಳ್ಳಲು ಪಂಚಾಯಿತಿ ಕಚೇರಿಗೆ ಹೋದರು. ಆದರೆ ಸಮಸ್ಯೆಗೆ ಸ್ಪಂದನ ಸಿಗದ ಕಾರಣ ಸ್ಥಳದಲ್ಲೇ ಕೆಲ ಹೊತ್ತು ಧರಣಿ ಕುಳಿತು ಸಂಬಂಧಿತ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ‘ವಾರ್ಡ್-1ರ ಮೂಲಕ ಹಾದು ಹೋದ ಪೈಪ್ ಒಡೆದು ಹೋಗಿದೆ. ಹೀಗಾಗಿ ಟ್ಯಾಂಕಿಗೆ …

Read More »

ಹುಬ್ಬಳ್ಳಿ | ಐಟಿ ಪಾರ್ಕ್‌: ಸೌಕರ್ಯ ಕೊರತೆ, ಪಾಳು ಬಿದ್ದ ಮಳಿಗೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಸಾಫ್ಟ್‌ವೇರ್‌ ಕಂಪನಿಗಳನ್ನು ಉತ್ತೇಜಿಸಲು ಮತ್ತು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಆರಂಭವಾದ ನಗರದ ಮಾಹಿತಿ ತಂತ್ರಜ್ಞಾನ ಪಾರ್ಕ್‌ (ಐಟಿ ಪಾರ್ಕ್‌) ಮೂಲಸೌಲಭ್ಯ ಕೊರತೆ ಮತ್ತು ನಿರ್ವಹಣೆಯ ಸಮಸ್ಯೆ ಎದುರಿಸುತ್ತಿದೆ. ಹುಬ್ಬಳ್ಳಿ ನಗರದಲ್ಲಿ ಐಟಿ ಪಾರ್ಕ್‌ ಆರಂಭಿಸುವ ಮೂಲಕ ಸಾಫ್ಟ್‌ವೇರ್‌ ಕಂಪನಿಗಳು, ಬಿಪಿಒ, ಕಾಲ್‌ ಸೆಂಟರ್‌ಗಳಿಗೆ ಅವಕಾಶ ನೀಡಿದರೆ, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಐಟಿ ಕಂಪನಿಗಳ ಉದ್ಯೋಗದಾತರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ …

Read More »

ಚನ್ನಮ್ಮನ ಕಿತ್ತೂರು: ಬರಿದಾದ ಕಲಭಾಂವಿ ಹೊಸಕೆರೆಯ ಒಡಲು

ಚನ್ನಮ್ಮನ ಕಿತ್ತೂರು: ಕೆಲವು ವರ್ಷಗಳ ಹಿಂದೆ ತನ್ನೊಡಲು ತುಂಬಿಕೊಂಡು ಊರ ಪ್ರವೇಶ ದ್ವಾರದಲ್ಲೇ ಕೈಬೀಸಿ ಆಮಂತ್ರಣ ನೀಡುತ್ತ ನಿಂತಿದೆಯೆನೋ ಎಂಬಂತಿದ್ದ ತಾಲ್ಲೂಕಿನ ಕಲಭಾಂವಿ ಗ್ರಾಮದ ‘ಹೊಸಕೆರೆ’ ಈ ಬಾರಿ ಮಳೆರಾಯನ ಅವಕೃಪೆಯಿಂದ ಅಲ್ಲಲ್ಲಿ ಪಾದ ಮುಳುಗುವ ನೀರನ್ನು ಬಿಟ್ಟರೆ ಭಣಗುಟ್ಟುತ್ತ ನಿಂತಿದೆ.   ‘ನರೇಗಾ ಯೋಜನೆಯಡಿ ಮಾಡಿದ ಕಾಮಗಾರಿಯ ಗುಂಡಿಗಳಿರುವ ಪ್ರದೇಶದಲ್ಲಿ ಮೊನ್ನೆ ಸುರಿದ ಅಲ್ಪಮಳೆಯಿಂದ ನೀರು ತುಂಬಿದೆ. ನೀವು ಹೋದವಾರ ಇಲ್ಲಿಗೆ ಬಂದಿದ್ದರೆ ಕೆರೆ ಭಣಭಣ ಎನ್ನುತ್ತಿತ್ತು’ ಎಂದು ಕೆರೆ …

Read More »