Breaking News

Uncategorized

ಸತೀಶ ಜಾರಕಿಹೊಳಿ ಕಾಂಗ್ರೆಸ್ ಆಹ್ವಾನದ ಬಗ್ಗೆ ಅಶೋಕ್ ಪೂಜಾರಿ ಹೇಳಿದ್ದೇನು..?

ನನ್ನ ರಾಜಕೀಯ ಗಾಡಫಾದರ್ ಎಚ್.ಡಿ.ದೇವೇಗೌಡರು, ಅದೇ ರೀತಿ ಎಚ್‍ಡಿ ಕುಮಾರಸ್ವಾಮಿ ಅವರು ಕೂಡ ನನ್ನ ನಾಯಕರು. ಅವರ ಮೇಲೆ ನನಗೆ ವಿಶೇಷ ಗೌರವ, ಅಭಿಮಾನವಿದೆ. ಇಲ್ಲಿ ಏನೇ ಬೆಳವಣಿಗೆ ಆದ್ರೂ ಕೂಡ ಅವರ ಗಮನಕ್ಕೆ ತಂದು ಅವರ ಜೊತೆ ಮಾತನಾಡಿ, ಹಿರಿಯ ಮುಖಂಡರು, ಕಾರ್ಯಕರ್ತರ ಸಲಹೆ ಸೂಚನೆ ಮೇರೆಗೆ ನನ್ನ ಮುಂದಿನ ರಾಜಕೀಯ ನಡೆಯಾಗಿರುತ್ತದೆ ಎಂದು ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು …

Read More »

SSLC ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಸಿಹಿ ಸುದ್ದಿ

ಬೀದರ: ಫೆ.17 ರಂದು ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ ರಾಜ್ಯದ 10 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ. ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಫೇಲ್, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐ.ಟಿ.ಐ ಹಾಗೂ ಸ್ನಾತಕೋತ್ತರ ಪದವಿಧರರು ಅಭ್ಯರ್ಥಿಗಳು ಈ ಉದ್ಯೋಗಮೇಳದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ. ಈ ಉದ್ಯೋಗ ಮೇಳದಲ್ಲಿ ಹಾಜರಾದ ಅಭ್ಯರ್ಥಿಗಳಿಗೆ …

Read More »

ಗ್ಯಾಸ್ ಸಿಲಿಂಡರ್ ಗೆ ಸಿಕ್ತಿದೆಯಾ ಸಬ್ಸಿಡಿ…? ಹೀಗೆ ಚೆಕ್ ಮಾಡಿ

ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಅನಿಲವಿದೆ. ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ನೀಡಲು ಗ್ಯಾಸ್ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ವಿವಿಧ ರಾಜ್ಯಗಳಲ್ಲಿ ಸಬ್ಸಿಡಿ ಬೇರೆ ಬೇರೆಯಿದೆ. ವಾರ್ಷಿಕ ಆದಾಯ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿರುವ ಜನರಿಗೆ ಈ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ. ಅನೇಕರ ಖಾತೆಗೆ ಸಬ್ಸಿಡಿ ಬರುತ್ತದೆ. ಆದ್ರೆ ಜನರಿಗೆ ಖಾತೆಗೆ ಹಣ ಬಂದಿರುವುದು ಗೊತ್ತಾಗುವುದಿಲ್ಲ. ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯಾ …

Read More »

ವಿಟಮಿನ್ ಎಫ್ ಕೊರತೆ ನಿಮ್ಮನ್ನು ಕಾಡುತ್ತಿದೆಯಾ.?

ದೇಹದ ಅಂಗಾಂಶಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಎಫ್ ತುಂಬಾ ಅಗತ್ಯ. ಒಂದು ವೇಳೆ ಇದು ಕಡಿಮೆಯಾದರೆ ಒಣಚರ್ಮ, ಕೂದಲುದುರುವ ಸಮಸ್ಯೆ, ಮೆದುಳು, ಕಣ್ಣಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ವಿಟಮಿನ್ ಎಫ್ ಸಮೃದ್ಧವಾಗಿರುವಂತಹ ಈ ಆಹಾರಗಳನ್ನು ಸರಿಯಾಗಿ ಸೇವಿಸಿ. *ವೆಜಿಟಬಲ್ ಆಯಿಲ್ : ಇದನ್ನು ಸಸ್ಯ ಬೀಜದಿಂದ ಅಥವಾ ಹಣ್ಣುಗಳ ಬೀಜದಿಂದ ಹೊರತೆಗೆಯಲಾಗುತ್ತದೆ. ಕಡಲೆಕಾಯಿ, ಆಲಿವ್, ಸೋಯಾಬೀನ್, ಸೂರ್ಯ ಕಾಂತಿ ಎಣ್ಣೆಯಲ್ಲಿ ವಿಟಮಿನ್ ಎಫ್ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ …

Read More »

ಸದೃಢ ಆರೋಗ್ಯ ಇದ್ದರಷ್ಟೇ ಬಡ್ತಿ: ಎಡಿಜಿಪಿ ಅಲೋಕ್‌ ಕುಮಾರ್

ಕಲಬುರ್ಗಿ: ‘ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಪಡೆಯ ಸಿಬ್ಬಂದಿಯಲ್ಲಿ ಈಗ ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಬಡ್ತಿ, ವರ್ಗಾವಣೆ, ನಿಯೋಜನೆ, ಪದಕ ಪ್ರದಾನ… ಹೀಗೆ ಎಲ್ಲ ಹಂತದಲ್ಲೂ ಸಿಬ್ಬಂದಿ ದೈಹಿಕ ಕಾರ್ಯಕ್ಷಮತೆ ದೃಢಪಡಿಸುವುದು ಅನಿವಾರ್ಯ’ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್ ತಿಳಿಸಿದರು. ‌ನಗರದಲ್ಲಿ ಮಂಗಳವಾರ ‘ಪ‍್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಪೊಲೀಸ್‌ ಸಿಬ್ಬಂದಿಗೆ ಇಲಾಖೆಯು ಈಗ ಸಾಕಷ್ಟು ಸೌಕರ್ಯ, ಸಂಬಳ ನೀಡುತ್ತಿದೆ. ಇನ್ನು ಮುಂದೆ ಸೌಕರ್ಯಕ್ಕೆ …

Read More »

ಪೊಲೀಸ್ ಠಾಣೆಯ ಎದುರು ಅಸ್ಥಿಪಂಜರ ಪತ್ತೆ; ತನಿಖೆ ನಡೆಸಲು ಮುಂದಾದ ಪೊಲೀಸ್ ಸಿಬ್ಬಂದಿ

ಬೆಂಗಳೂರು : ಚರಂಡಿ ದುರಸ್ತಿ ವೇಳೆ ಮನುಷ್ಯನ ಅಸ್ಥಿಪಂಜರವೊಂದು ಪತ್ತೆಯಾದ ಘಟನೆ ನಗರದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಎದುರಿನಲ್ಲಿ ನಡೆದಿದೆ. ಸುಮಾರು ನಾಲ್ಕು ವರ್ಷ ಹಿಂದೆ ಸಂಭವಿಸಿದ ಘಟನೆ ಇದಾಗಿರಬಹುದು ಎಂದು ಶಂಕಿಸಲಾಗಿದೆ . ಈ ಅಸ್ತಿಪಂಜರದ ಕುರಿತಾದ ತನಿಖೆ ನಡೆಸಲಾಗುತ್ತಿದೆ ಎಂದು ವಿಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ . ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಮುಂದಿರುವ ಮುಚ್ಚಿದ ಮೋರಿಯಲ್ಲಿ ಕಸಗಳು ತುಂಬಿ ಚರಂಡಿ ನೀರು ಮುಂದೆ ಸಾಗುತ್ತಿಲ್ಲ ಎಂಬ …

Read More »

ಹಳ್ಳಿಗೆ ಹೋದವರಿಗೆ ಕೆಲಸ ಕೊಡುವಲ್ಲಿ ಯಶಸ್ವಿ

ಮಾರ್ಚ್‌ ಮೊದಲ ವಾರದಲ್ಲಿ ರಾಜ್ಯ ಬಜೆಟ್‌ ಮಂಡನೆಯಾಗಲಿದೆ. ಒಂದು ರೀತಿಯಲ್ಲಿ ಇದು ಮರುನಿರ್ಮಾಣದ ಬಜೆಟ್‌. ಜನಪ್ರಿಯ ಯೋಜನೆಗಳಿಗಿಂತ ಕೃಷಿ, ಆರೋಗ್ಯ, ಉದ್ಯೋಗ ಸೃಷ್ಟಿ, ಸಂಚಾರ- ಸಾರಿಗೆ ಸುಧಾರಣೆ, ಕೈಗಾರಿಕೆಗಳಿಗೆ ಪ್ರೋತ್ಸಾಹ, ವ್ಯಾಪಾರ- ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಮತ್ತು ಅನಗತ್ಯ ವೆಚ್ಚ, ಸಂಪನ್ಮೂಲ ಸೋರಿಕೆ ತಡೆಯುವುದು ಬಜೆಟ್‌ನ ಆದ್ಯತೆಗಳಾಗಬೇಕಾಗಿದೆ. ಇದು ಉದಯವಾಣಿ ಆಶಯವೂ ಹೌದು. ಗ್ರಾಮಾಭಿವೃದ್ಧಿ ಇಲಾಖೆಯ ಒಟ್ಟಾರೆ ವರದಿ ಇಲ್ಲಿದೆ. ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಸಕ್ತ …

Read More »

ಸಿದ್ದರಾಮಯ್ಯ ಹೈಕಮಾಂಡ್‌ ಭೇಟಿ : ಅಹಿಂದ ಸಮಾವೇಶಕ್ಕೆ ರಾಹುಲ್‌ ಒಪ್ಪಿಗೆ?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮುದಾಯವಾರು ಸಮಾವೇಶಗಳನ್ನು ಆಯೋಜಿಸುವ ಸಿದ್ದರಾಮಯ್ಯ ಪ್ರಸ್ತಾವಕ್ಕೆ ರಾಹುಲ್‌ ಗಾಂಧಿ ಹಸುರು ನಿಶಾನೆ ತೋರಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರ ಸಹಿತ ರಾಜ್ಯದ ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಮಾವೇಶಗಳು ಪಕ್ಷಕ್ಕೆ ಪರ್ಯಾಯ ಎಂಬ ಸಂದೇಶ ರವಾನೆಯಾಗಬಾರದು ಎಂದು ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮುದಾಯಗಳ ನೋವಿಗೆ, ಸಮಸ್ಯೆಗಳಿಗೆ ಧ್ವನಿಯಾಗಿ ಸಮಾವೇಶ ಆಯೋಜಿಸಲು ಅಥವಾ ಆಯೋಜನೆಯಾಗುವ ಸಮಾವೇಶಗಳಲ್ಲಿ …

Read More »

ಕನಸಿನಲ್ಲೂ ಬಿಜೆಪಿ ಹೆಸರು ಕೇಳಿದರೆ ಜನರು ಬೆವರುವಂತಾಗಿದೆ: ಚನ್ನರಾಜ ಹಟ್ಟಿಹೊಳಿ

ಬೆಳಗಾವಿ – ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೇಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ಎಲ್ಲಿದೆ ಬಿಜೆಪಿಯ ಅಚ್ಛೇ ದಿನ್ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕೊರೋನಾದಿಂದ ತತ್ತರಿಸಿದ್ದ ಜನರಿಗೆ ಈಗ ಬೆಲೆ ಏರಿಕೆಯ ಬರೆ ಬಿದ್ದಿದೆ. ಜನಸಾಮಾನ್ಯರ ಗೋಳನ್ನು ಕೇಳುವವರಿಲ್ಲ ಎಂದು ಕಿಡಿಕಾರಿದ್ದಾರೆ. ಜನರು ಕೊರೋನಾದಿಂದಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಆದಾಯವಿಲ್ಲದೆ ಹೊತ್ತಿನ ಕೂಳಿಗೆ ಪರದಾಡುತ್ತಿದ್ದಾರೆ. …

Read More »

ಆರ್ ಎಂಪಿ ವೈದ್ಯರೊಬ್ಬರು ಮನಸೋಯಿಚ್ಛೆ ಬ್ಲೇಡ್ ನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ

ಗದಗ: ಆರ್ ಎಂಪಿ ವೈದ್ಯರೊಬ್ಬರು ಮನಸೋಯಿಚ್ಛೆ ಬ್ಲೇಡ್ ನಿಂದ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ. ಗುರುರಾಜ್ ಜಾಗಿರದಾರ ಆತ್ಮಹತ್ಯೆ ಯತ್ನಿಸಿದ ವೈದ್ಯ. ನಗರದ ನಂದೀಶ್ವರ ಮಠದ ಹಿಂಭಾಗದಲ್ಲಿರುವ ತಮ್ಮ ಮನೆಯಲ್ಲಿ ಬ್ಲೇಡ್ ನಿಂದ ತಮ್ಮ ಎರಡೂ ಕಾಲುಗಳಿಗೆ ಗಾಯಪಡಿಸಿಕೊಂಡು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು.   ಗುರುರಾಜ್ ಅವರು ನರಳಾಟವನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು …

Read More »