Breaking News

Uncategorized

ಬಿಎಸ್‍ವೈ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಬಿಜೆಪಿ ಸೋಲು : ಯತ್ನಾಳ

ವಿಜಯಪುರ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆತೃತ್ವದಲ್ಲಿ ಚುನಾವಣೆ ಎದರುಸಿದಲ್ಲಿ ಬಿಜೆಪಿ ಪಕ್ಷಕ್ಕೆ ಸೋಲು ಖಚಿತ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕಾಗಿ ಸಿ.ಎಂ. ಬದಲಾವಣೆ ಅನಿವಾರ್ಯ ಎಂದು ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು. ಶನಿವಾರ ನಗರದಲ್ಲಿ ರಾತ್ರಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ತಡೊಗಿರುವ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲೇಬೇಕು. ಬಿಜೆಪಿ ಉಳಿಬೇಕಿದ್ದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲೇಬೇಕು. ಸಿ.ಎಂ. ಬಚಲಾವಣೆ ನೂರಕ್ಕೆ ನೂರರಷ್ಟು ಖಚಿತ. ಭ್ರಷ್ಟಾಚಾರ …

Read More »

ರಥೋತ್ಸವದಲ್ಲಿ ಬಾಳೆ ಹಣ್ಣಿನ ಮೇಲೆ `NEXT CM ಸಿದ್ದರಾಮಯ್ಯ’ ಎಂದು ಬರೆದು ಹರಕೆ ತೀರಿಸಿದ ಅಭಿಮಾನಿ!

ಬಳ್ಳಾರಿ : ಬಳ್ಳಾರಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ನಡೆದ ಗಾಧಿಲಿಂಗೆಶ್ವರ ರಥೋತ್ಸವದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಅಭಿಮಾನಿಯೊಬ್ಬರು ರಥೋತ್ಸವದ ವೇಳೆ ಬಾಳೆ ಹಣ್ಣು ಎಸೆದು ಹರಕೆ ತೀರಿಸಿದ್ದಾರೆ. ಹೌದು, ಶನಿವಾರ ಗೋನಾಳ್ ಗ್ರಾಮದಲ್ಲಿ ಜರುಗಿದ ಗಾದಿಲಿಂಗೇಶ್ವರ ರಥೋತ್ಸವದ ವೇಳೆ ಸಿದ್ದರಾಮಯ್ಯ ಅಭಿಮಾನಿ ವಿರೇಶ್ ಎಂಬುವರು Next CM ಸಿದ್ದರಾಮಯ್ಯ ಎಂದು ಬರೆದು ಗಾಧಿಲಿಂಗೇಶ್ವರ ರಥೋತ್ವದಲ್ಲಿ ಬಾಳೆ ಹಣ್ಣನ್ನು ಎಸೆದಿದ್ದಾರೆ. ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷವಿದ್ದು, …

Read More »

‘ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅದು ಸುಳ್ಳು ಎಂದು ನಾನು ಸಹ ಹೇಳುವುದಿಲ್ಲ: B.S.Y.

ತುಮಕೂರು: ‘ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅದು ಸುಳ್ಳು ಎಂದು ನಾನು ಸಹ ಹೇಳುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ತಿಪಟೂರಿನಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಏಪ್ರಿಲ್‌ನಿಂದ ಜಿಲ್ಲಾ ಪ್ರವಾಸ: ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಇತರೆ ಕಚೇರಿಗಳಲ್ಲಿ 15-20 ದಿನಗಳವರೆಗೆ ಕಡತಗಳನ್ನು ಇಟ್ಟುಕೊಳ್ಳಲಾಗುತ್ತಿದೆ. ಸಕಾಲಕ್ಕೆ ಕಡತಗಳು ವಿಲೇವಾರಿಯಾಗುತ್ತಿಲ್ಲ. ಈ ಬಗ್ಗೆ ಬಿಗಿ ಕ್ರಮ ಕೈಗೊಳ್ಳಬೇಕಾಗಿದೆ. ಅನಗತ್ಯವಾಗಿ ಕಡತ …

Read More »

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಪಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ: B.S.Y.

ರಾಯಚೂರು: ಉಪಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಶಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಈ ನಡುವೆ ರಮೇಶ್ ಜಾರಕಿಹೊಳಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಶೀಘ್ರದಲ್ಲಿ ಅಭ್ಯರ್ಥಿ ಘೋಷಿಸಲಾಗುತ್ತದೆ. ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಖಚಿತ ಎಂದರು. ಸರ್ಕಾರದ ಯೋಜನೆಗಳೇ ಬಿಜೆಪಿ ಗೆಲುವಿನ ಅಸ್ತ್ರವಾಗಲಿದೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ …

Read More »

ದೆಹಲಿ-ಲಖನೌ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ

ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ನ ಲಗ್ಗೇಜ್ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶತಾಬ್ದಿ ಎಕ್ಸ್‌ಪ್ರೆಸ್‌ ಶನಿವಾರ ಬೆಳಗ್ಗೆ 6.41ರ ಹೊತ್ತಿಗೆ ಗಾಜಿಯಾಬಾದ್ ನಿಲ್ದಾಣಕ್ಕೆ ತಲುಪಿತ್ತು. ಬೆಂಕಿ ಅವಘಡದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ನವದೆಹಲಿ – ಲಖನೌ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಅಕಸ್ಮಿಕ ಅವಘಡ ಸಂಭವಿಸಿದ್ದು, …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಬದಲಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಚಿಂತನೆ?

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಸಿಡಿ ಪ್ರಕರಣದ ಬಳಿಕ ರಾಜ್ಯ ಸರ್ಕಾರಕ್ಕೆ ಹೊಸ ಚೈತನ್ಯ ತುಂಬಲು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ‘ ಬೆಳಗಾವಿ ಲೋಕಸಭೆ, ಮಸ್ಕಿ, ವಿಧಾನಸಭಾ ಸ್ಥಾನಗಳಿಗೆ ಈಗಾಗಲೇ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಅದಕ್ಕೂ ಮೊದಲೇ ಸಿಎಂ ಬಿ.ಎಸ್. ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.   ಸಿಡಿ ಪ್ರಕರಣದ …

Read More »

ಕಮಲ್‍ಹಾಸನ್ ಪಕ್ಷದ ಖಜಾಂಚಿ ಮನೆಯಲ್ಲಿ 80 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ..!

ಚೆನ್ನೈ, ಮಾ.19- ನಟ ಕಮಲ್‍ಹಾಸನ್ ಸ್ಥಾಪಿಸಿರುವ ಮಕ್ಕಳ ನಿಧಿ ಮಹಿಮ್ ಪಕ್ಷದ ಖಜಾಂಚಿ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 11.50 ಕೋಟಿ ನಗದು ಸೇರಿದಂತೆ 80 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.  ಬುಧವಾರ ಮತ್ತು ಗುರುವಾರ ತಮಿಳುನಾಡಿನ ತ್ರಿಪುರಾ, ಧರ್ಮಾಪುರಂ, ಚೆನ್ನೈ ಸೇರಿದಂತೆ ಐದು ಜಾಗಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ತ್ರಿಪುರಾದ ಪ್ರಮುಖ ಉದ್ಯಮಿಯೂ ಆಗಿರುವ ಪಕ್ಷದ ಖಜಾಂಚಿ ಚಂದ್ರಶೇಖರ್ …

Read More »

‘ವಾಟ್ಸಾಪ್’ ಚಾಟ್ ಯುವತಿ ಸಾವಿಗೆ ಕಾರಣವಾಯ್ತು

ಸಾಮಾಜಿಕ ತಾಣಗಳು ಎಷ್ಟು ಅನುಕೂಲವೋ ಅಷ್ಟೇ ಮಾರಕವೆಂಬುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದ್ದು, ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ವಾಟ್ಸಾಪ್ ಮೂಲಕ ಪರಿಚಿತನಾಗಿದ್ದ ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಯುವತಿಗೆ ಗಂಟು ಬಿದ್ದ ಹಿನ್ನೆಲೆಯಲ್ಲಿ ಬೇಸತ್ತ ಆಕೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೆಂಚನಾಲ ಕಲ್ಯಾಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಿಪ್ಪನ್ ಪೇಟೆ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ 19 ವರ್ಷದ …

Read More »

ಕೋವಿಡ್; ಚಿತ್ರಮಂದಿರ, ಕಚೇರಿಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ;

ಮುಂಬೈ:ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಎಲ್ಲಾ ಚಿತ್ರಮಂದಿರಗಳು, ಆಡಿಟೋರಿಯಂ ಹಾಗೂ ಕಚೇರಿಗಳಲ್ಲಿ ಶೇ.50ರಷ್ಟು ಮಾತ್ರ ಜನಸಂಖ್ಯೆಗೆ ಸೀಮಿತಗೊಳಿಸಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ(ಮಾರ್ಚ್ 31) ಆದೇಶ ಹೊರಡಿಸಿದೆ. ಕಳೆದ 24ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ 25,833 ಕೋವಿಡ್ 19 ಸೋಂಕು ಪ್ರಕರಣ ವರದಿಯಾಗಿದೆ. ಇದು ಕಳೆದ ವರ್ಷ ಕೋವಿಡ್ ಸೋಂಕು ಆರಂಭವಾದ ನಂತರ ಗರಿಷ್ಠ ಪ್ರಮಾಣದಲ್ಲಿ ಪತ್ತೆಯಾದ ಪ್ರಕರಣವಾಗಿದೆ. ಒಂದು ವೇಳೆ ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದರೆ ಜನರು …

Read More »

ವರ್ಕ್ ಫ್ರಮ್ ಹೋಂ ಓಕೆ ..! ಸಂಬಳ ಕಡಿತ ಯಾಕೆ..? : ವರದಿ

ನವ ದೆಹಲಿ : ಕೋವಿಡ್ 19 ಭಾರತದ ಮೇಲೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಆರ್ಥಿಕ ಸ್ಥಿತಿ, ಉದ್ಯಮ ಕ್ಷೇತ್ರಗಳ ಮೇಲಂತೂ ಬಾರಿ ಪ್ರಹಾರ ಮಾಡಿರುವುದು ಸುಳ್ಳಲ್ಲ. ಪರಿಸ್ಥಿತಿ ಚೇತರಿಕೆಯಾಗುವತ್ತ ಮುಖ ಮಾಡುತ್ತಿದೆ ಎನ್ನುವಷ್ಟರಲ್ಲೆ ರೂಪಾಂತರಿ ಕೋವಿಡ್ ಮತ್ತೆ ಅಲೆ ಎಬ್ಬಿಸಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡುವ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದರೂ ಕೂಡ ಜನರಲ್ಲಿ ಮತ್ತೆ ಲಾಕ್ ಡೌನ್ ಆಗಬಹುದು ಎಂಬ ಭೀತಿ ಆರಂಭವಾಗಿದೆ. ಕೋವಿಡ್ …

Read More »