ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಪರಿಶಿಷ್ಟರನ್ನು ಸಮಾಜದ ಮುನ್ನೆಲೆಗೆ ತರುವ ಕಾರ್ಯವಾಗಬೇಕು : ಪಿ.ಎಂ.ನರೇಂದ್ರಸ್ವಾಮಿ ಬೆಳಗಾವಿ: ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು, ದುರ್ಬಲ ವರ್ಗಕ್ಕೆ ಉತ್ತಮವಾದಂತಹ ಯೋಜನೆ ನಿರ್ಮಿಸುವುದರ ಮೂಲಕ ಪರಿಶಿಷ್ಟರನ್ನು ಸಮಾಜದ ಮುನ್ನೆಲೆಗೆ ತರಬಹುದಾಗಿದೆ. ಅಧಿಕಾರಿಗಳು ಇದನ್ನು ಅರಿತುಕೊಂಡು ಶ್ರಮಿಸಬೇಕು ಎಂದು ಕರ್ನಾಟಕ ವಿಧಾನ ಮಂಡಳ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು …
Read More »ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
ಬೆಂಗಳೂರು: ರಾಜ್ಯದಲ್ಲಿರುವ ಕೆಲವು ಬಿಪಿಎಲ್ ಕಾರ್ಡ್ದಾರರಿಗೆ ಈಗ ಸದ್ದಿಲ್ಲದೆ ಸರಕಾರ “ಎಪಿಎಲ್ ಆಘಾತ’ ನೀಡುತ್ತಿದೆ! ಆದಾಯ ತೆರಿಗೆ ಪಾವತಿ ಸಹಿತ ಹಲವು ಮಾನದಂಡಗಳಡಿ ಕಾರ್ಯಾಚರಣೆ ನಡೆಸಿದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಈ ಹಿಂದೆಯೇ ಸುಮಾರು 12 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಿದೆ. ಆ ಪೈಕಿ ಕೆಲವರನ್ನು ಎಪಿಎಲ್ ಕಾರ್ಡ್ದಾರರಾಗಿ ಪರಿವರ್ತಿಸುವ ಕೆಲಸ ನಡೆದಿದೆ. ಅವರೆಲ್ಲ ಎಂದಿನಂತೆ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಮೇಲೆ ಬೆರಳಿಟ್ಟಾಗ …
Read More »ಬೀಡಾಡಿ ದನಗಳ ಹಾವಳಿ: ತಡೆಗೆ ಮುಂದಾದ ಪುರಸಭೆ
ಬೀಡಾಡಿ ದನಗಳ ಹಾವಳಿ: ತಡೆಗೆ ಮುಂದಾದ ಪುರಸಭೆ ಚಿಕ್ಕೋಡಿ: ಪಟ್ಟಣದ ರಸ್ತೆಗಳ ಮೇಲೆ ಬೇಕಾಬಿಟ್ಟಿಯಾಗಿ ಜಾನುವಾರುಗಳನ್ನು ಬಿಟ್ಟಿದ್ದಾರೋ, ಅವರೆಲ್ಲರೂ ತಮ್ಮ ಜಾನುವಾರುಗಳನ್ನು ತೆಗೆದುಕೊಂಡು ಹೋಗಬೇಕು. ಇಲ್ಲದೇ ಹೋದಲ್ಲಿ ಗೋಶಾಲೆಗಳಿಗೆ ಜಾನುವಾರುಗಳನ್ನು ರವಾನೆ ಮಾಡುವುದಾಗಿ ಪುರಸಭೆ ಎಚ್ಚರಿಕೆ ನೀಡಿದೆ. ಬೀಡಾಡಿ ದನಗಳು ರಸ್ತೆ ಮೇಲೆ ತಿರುಗಾಡುವುದು, ಮಲಗುವುದು ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಮಕ್ಕಳು, ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ಬೀಡಾಡಿ ದನಗಳ ಮಾಲೀಕರು ತಮ್ಮ ತಮ್ಮ ಜಾನುವಾರುಗಳನ್ನು ಗುರುತಿಸಿ ತೆಗೆದುಕೊಂಡು …
Read More »16 ಲಕ್ಷ ರೂ.ಗಾಗಿ ಪ್ರೇಯಸಿಯ ದೇಹ 16 ತುಂಡು ಮಾಡಿದ ಪ್ರಿಯಕರ!
ತೆಲಂಗಾಣ: ದೆಹಲಿಯಲ್ಲಿ ಶ್ರದ್ಧಾ ವಾಕರ್ ಎಂಬ ಯುವತಿಯನ್ನು 35 ತುಂಡಗಳನ್ನಾಗಿ ಕತ್ತರಿಸಿದ್ದ ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲಾ, ಪ್ರೇಯಸಿ ದೇಹದ ಭಾಗಗಳನ್ನು ಹಲವು ಪ್ರದೇಶಗಳಲ್ಲಿ ಎಸೆದಿದ್ದ ಘಟನೆ ಅಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದೇ ಮಾದರಿಯಲ್ಲಿ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಎಂಬ ಯುವತಿಯ ದೇಹವನ್ನು 50 ತುಂಡು ಮಾಡಿ, ಫ್ರಿಡ್ಜ್ನಲ್ಲಿಟ್ಟು, ತಾನು ಆತ್ಮಹತ್ಯೆಗೆ ಶರಣಾದ ಪ್ರೇಮಿ ಕಥೆ ಕರುನಾಡ ಜನರನ್ನು ಆತಂಕಕ್ಕೆ ದೂಡಿತ್ತು. ಸದ್ಯ ಇಲ್ಲೊಂದು ಘಟನೆ ಕೂಡ ಇದನ್ನೇ …
Read More »₹37 ಲಕ್ಷ ಮೌಲ್ಯದ ಸ್ವತ್ತು ಜಪ್ತಿ: 7 ಜನ ಆರೋಪಿಗಳ ಬಂಧನ
ಚಿಕ್ಕೋಡಿ: ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನವಾಗಿದ್ದ ಲಾರಿ, ಬೈಕ್, ಡಿಸ್ಕ್ ಸಮೇತ 8 ಟೈರ್ ಸೇರಿದಂತೆ ₹ 37.40 ಲಕ್ಷ ಮೌಲ್ಯದ ಸ್ವತ್ತುಗಳನ್ನು ಚಿಕ್ಕೋಡಿ ಪೊಲೀಸರು ವಶಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ಒಂದು ತಿಂಗಳೊಳಗೆ ಆರೋಪಿಗಳನ್ನು ಬಂಧಿಸಿ, ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಚಿಕ್ಕೋಡಿ ಠಾಣೆ ಪಿಎಸ್ಐ ಬಸಗೌಡ ನೇರ್ಲಿ ಹಾಗೂ ಸಿಬ್ಬಂದಿಗೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿ ರಾಮಗೊಂಡ …
Read More »ರಾಜ್ಯದ 3 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ : 3 ಗಂಟೆ ವೇಳೆಗೆ ಶೇ.62ರಷ್ಟು ವೋಟಿಂಗ್
ಬೆಂಗಳೂರು,ನ.13- ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಇಂದು ಬಿರುಸಿನಿಂದ ನಡೆದಿದ್ದು, ಎಲ್ಲೆಡೆ ಉತ್ಸಾಹದಿಂದ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2 ಗಂಟೆ ವೇಳೆಗೆ ಮೂರು ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.55ಕ್ಕೂ ಹೆಚ್ಚು ಮತದಾನವಾಗಿದ್ದು, ಮತದಾನ ಮುಕ್ತಾಯವಾಗುವ ವೇಳೆಗೆ ಶೇ.70ಕ್ಕೂ ಹೆಚ್ಚು ದಾಖಲೆ ಪ್ರಮಾಣದ ಮತದಾನವಾಗುವ ಸಾಧ್ಯತೆ ಇದೆ. …
Read More »ರಿಕ್ಷಾ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳ ದಾಳಿ
ಬೆಳಗಾವಿ: ಆಟೋ ರಿಕ್ಷಾ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿ ಕತ್ತು ಸೀಳಿ ಹಲ್ಲೆ ಮಾಡಿದ ಘಟನೆ ನಗರದ ಎಸ್.ಸಿ.ಮೋಟರ್ಸ್ ಬಳಿ ನ.11ರ ಸೋಮವಾರ ತಡರಾತ್ರಿ ನಡೆದಿದೆ. ತಾಲೂಕಿನ ಉಚಗಾಂವ ಗ್ರಾಮದ ರಿಯಾಜ್ ತಹಶೀಲ್ದಾರ (55) ಎಂಬ ರಿಕ್ಷಾ ಚಾಲಕನ ಮೇಲೆ ಅಜ್ಞಾತರ ಗುಂಪು ದಾಳಿ ನಡೆಸಿದ್ದು, ಕತ್ತು ಸೀಳಿ ಹಲ್ಲೆ ಮಾಡಿದೆ. ಗಾಯಗೊಂಡ ಆಟೋ ಚಾಲಕ ರಿಯಾಜ್ ಕೂಡಲೇ ಮಾರ್ಕೆಟ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ವಿಷಯ …
Read More »ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
ರಾಯಚೂರು: ಹುಲಿಯಂತಿದ್ದ ಸಿಎಂ ಸಿದ್ದರಾಮಯ್ಯ ಈಗ ಕಾಂಗ್ರೆಸ್ ನಲ್ಲಿ ಇಲಿಯಂತಾಗಿದ್ದಾರೆ. ಅವರ ಸ್ಥಿತಿ ಕಂಡರೆ ಅಯ್ಯೊ ಎನಿಸುತ್ತಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ (Ramesh Jarakiholi) ಲೇವಡಿ ಮಾಡಿದರು. ನಗರದಲ್ಲಿ ಮಾಜಿ ಸಂಸದ ಬಿ.ವಿ.ನಾಯಕರ ಗೃಹಕಚೇರಿಯಲ್ಲಿ ಸೋಮವಾರ (ನ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಸಮುದಾಯಗಳ ಪರ ಕಾಳಜಿ ಹೊಂದಿದ್ದ ಸಿದ್ದರಾಮಯ್ಯನವರು ಈಗ ಒಂದು ಸಮುದಾಯದ ಪರ ನಿಂತಿರುವುದು ವಿಪರ್ಯಾಸ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ …
Read More »ಚೋದನಕಾರಿ ಭಾಷಣ: ಮಾಶ್ಯಾಳ ಶ್ರೀ ಗಳ ವಿರುದ್ಧ ಎಫ್ಐಆರ್
ಕಲಬುರಗಿ: ಸಮಾಜದಲ್ಲಿಂದು ಅನ್ಯಾಯ, ಶೋಷಣೆ ಹೆಚ್ಚಳವಾಗುತ್ತಿದೆ. ಹೀಗಾಗಿ ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು ತಲ್ವಾರ್ ಕೊಡಿ ಎಂಬುದಾಗಿ ಪ್ರಚೋದನಾಕಾರಿ ಭಾಷಣ ಮಾಡಿರುವ ಆರೋಪದ ಮೇರೆಗೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಸ್ವಾಮೀಜಿ ವಿರುದ್ದ ಎಫ್ಐಆರ್ ದಾಖಲಾಗಿದೆ. ಮಾಶ್ಯಾಳದ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ವಿರುದ್ದ ಎಫ್ಐಆರ್ ದಾಖಲಾಗಿದ್ದು, ಪ್ರಚೋದನಕಾರಿ ಭಾಷಣ ಹಿನ್ನೆಲೆ ಅಫಜಲಪುರ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಪ್ರಚೋದನಕಾರಿ ಮಾತು, ಕಾನೂನು ಸುವ್ಯವಸ್ಥೆಗೆ ಭಂಗ ತರುವ …
Read More »ಮೂಡಲಗಿ: ರೇಷ್ಮೆ ತಂತ್ರಜ್ಞಾನಿ ಸೋನವಾಲಕರ
ಮೂಡಲಗಿ: ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಅನುಕೂಲವಿಲ್ಲದೆ ಎಮ್ಮೆ ಕಾಯುತ್ತಿದ್ದ ಬಾಲಕ, ಇಂದು ರೇಷ್ಮೆ ತಂತ್ರಜ್ಞಾನ ರಂಗ ದಲ್ಲಿ ಮಿಂಚಿದ್ದಾರೆ. ರೇಷ್ಮೆ ತಂತ್ರಜ್ಞಾನ ಮತ್ತು ಉದ್ದಿಮೆ ಬೆಳವಣಿಗೆಗೆ ಅವರು ಕೈಗೊಂಡ ವಿವಿಧ ಸಂಶೋಧನೆಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿವೆ. ಇದು ಇಲ್ಲಿನ ತಮ್ಮಣ್ಣ ಸೋನವಾಲಕರ (ಟಿ.ಎನ್.ಸೋನವಾಲಕರ) ಅವರ ಯಶೋಗಾಥೆ. ವಯಸ್ಸು 91. ಆದರೆ, ರೇಷ್ಮೆ ತಂತ್ರಜ್ಞಾನ ರಂಗದ ಬೆಳವಣಿಗೆಗೆ ಅವರ ಮನಸ್ಸು ಇಂದಿಗೂ ತುಡಿಯುತ್ತದೆ. ಭಾರತದಲ್ಲಿ ಗುಣಮಟ್ಟದ ರೇಷ್ಮೆ …
Read More »