ನವದೆಹಲಿ : ಏಪ್ರಿಲ್ 6, ಮಂಗಳವಾರ, ಪ್ರಸ್ತುತ ಚುನಾವಣಾ ಕ್ಯಾಲೆಂಡರ್ ನಲ್ಲಿ ಅತ್ಯಂತ ನಿರ್ಣಾಯಕ ಚುನಾವಣಾ ದಿನವಾಗಿದೆ. ತಮಿಳುನಾಡು ವಿಧಾನಸಭೆಯ 234 ಸ್ಥಾನಗಳು, ಕೇರಳ ವಿಧಾನಸಭೆಯ 140 ಸ್ಥಾನಗಳು, ಅಸ್ಸಾಂನ 40 ಕ್ಷೇತ್ರಗಳು, ಪಶ್ಚಿಮ ಬಂಗಾಳ ವಿಧಾನಸಭೆಯ 31 ಸ್ಥಾನಗಳು ಮತ್ತು ಪುದುಚೇರಿ ವಿಧಾನಸಭೆಯ ಎಲ್ಲಾ 30 ಸ್ಥಾನಗಳಿಗೆ ಇಂದು ಸ್ಪರ್ಧೆ ನಡೆಯಲಿದೆ. ವಿಧಾನಸಭಾ ಚುನಾವಣೆಗಳನ್ನು ಹೊರತುಪಡಿಸಿ, ಮಲಪ್ಪುರಂ ಮತ್ತು ಕನ್ಯಾಕುಮಾರಿ ಎಂಬ ಎರಡು ಲೋಕಸಭಾ ಸ್ಥಾನಗಳು ಸಹ ಒಂದೇ …
Read More »ಏ.7 ರಿಂದ ಸಾರಿಗೆ ಮುಷ್ಕರ; ಖಾಸಗಿ ವಾಹನ ಸಂಚಾರಕ್ಕೆ ಅವಕಾಶ
ಧಾರವಾಡ, ಏಪ್ರಿಲ್ 4; ” ಕರ್ನಾಟಕ ಸರ್ಕಾರ ಎಸ್ಮಾ ಜಾರಿಗೊಳಿಸಿದರೂ ನಾವು ಭಯ ಪಡುವುದಿಲ್ಲ. ಏಪ್ರಿಲ್ 7ರಿಂದ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತವಾಗುವುದು ಖಂಡಿತ” ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ಸರ್ಕಾರಿ ಬಸ್‌ಗಳ …
Read More »ಗಂಡ ಹೆಂಡತಿ ಜೊತೆಗೆ ಹೋಗಬಹುದಂತೆ, ಥಿಯೇಟರ್ ನಲ್ಲಿ ಬೇರೆ ಬೇರೆ ಕೂತ್ಕೋಬೇಕಂತೆ
ಬೆಂಗಳೂರು, ಏಪ್ರಿಲ್ 4: ಕೊರೊನಾ ಪಾಸಿಟೀವ್ ಕೇಸುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ನಗರದಲ್ಲಿ ಮಾತನಾಡುತ್ತಿದ್ದ ಡಿಕೆಶಿ, “ಸರಕಾರದ ಹೊಸ ಮಾರ್ಗಸೂಚಿ ಅಟ್ಟರ್ ಫ್ಲಾಪ್ ಆಗಲಿದೆ. ಪ್ರಾಕ್ಟಿಕಲ್ ಬುದ್ದಿ ಅನ್ನೋದು ಸರಕಾರಕ್ಕೆ ಇಲ್ಲ. ಯಾರನ್ನು ನಿಯಂತ್ರಣ ಮಾಡಬೇಕೋ ಅಲ್ಲಿ ಮಾಡಬೇಕು”ಎಂದು ಅಭಿಪ್ರಾಯ ಪಟ್ಟರು. “ಪ್ರಯಾಣಿಕರು ನಿಂತುಕೊಂಡು ಹೋಗಬಾರದು ಎನ್ನುವ ಕಾನೂನು ತಂದಿದ್ದಾರೆ. ಅಕ್ಕಪಕ್ಕ ಕೂತರೆ ಕೊರೊನಾ …
Read More »ಮಕ್ಕಳ ಶೌಚಾಲಯ ಹೆಸರಿನಲ್ಲಿ ದುಡ್ಡು ತಿನ್ನುವ ಕೆಲಸ, ಕಾಮಗಾರಿಗೆ ಮುನ್ನವೇ ಹಣ ಬಿಡುಗಡೆ ಇದು ಬಿಕೆ ಕಂಗ್ರಾಳಿ ಗ್ರಾಮ ಪಂಚಾಯತಿ ಕಥೆ,
ಬೆಳಗಾವಿ: ಇವತ್ತು ಒಂದು ಅದ್ಭುತವಾದ ಕಥೆಯನ್ನ ನಾವು ಹೇಳ್ತೀವಿ ಇದೊಂದು ಗ್ರಾಮ ಪಂಚಾಯತಿ ಕಥೆ ಇದು ಬೆಳಗಾವಿಯ ಬಿಕೆ ಕಂಗ್ರಾಳಿ ಗ್ರಾಮ ಪಂಚಾಯತಿ ಕಥೆ, ನಮ್ಮ ರಾಜ್ಯದಲ್ಲಿ ಜಿಲ್ಲೆಯಲ್ಲಿ ಬ್ರಷ್ಟಾಚಾರದ ಕಥೆ ಗಳನ್ನಾ ಸುಮಾರು ಕೆಳಿದ್ದಿವಿ, ಹಾಗೂ ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಯಾಕೆ ಬರಲ್ಲ ಅನ್ನೋದು ಕೂಡ ನಮ್ಮ ಈ ಸ್ಟೋರಿಗೆ ನಾವು ಹೇಳುವ ಕಥೆಗೂ ಲಿಂಕ್ ಇದೆ. ಜನ ಇವಾಗ ಕೆಲಸ ಮಾಡಿದ ಮೇಲೆ ದುಡ್ಡು …
Read More »ಪೆಟ್ರೋಲ್, ಡೀಸೆಲ್ ಬೆಲೆ ಇನ್ನಷ್ಟು ತಗ್ಗುತ್ತದೆ; ಪೆಟ್ರೋಲಿಯಂ ಸಚಿವ
ಕೋಲ್ಕತ್ತಾ, ಏಪ್ರಿಲ್ 5: ದೇಶದ ತೈಲ ಬೆಲೆಯಲ್ಲಿ ಈಚೆಗಷ್ಟೆ ಸ್ವಲ್ಪ ಇಳಿಕೆಯಾಗಿದ್ದು, ಮುಂದೆ ಪೆಟ್ರೋಲ್, ಡೀಸೆಲ್ ಬೆಲೆ ಇನ್ನಷ್ಟು ಇಳಿಕೆಯಾಗಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಭಾನುವಾರ ಭೇಟಿ ನೀಡಿದ್ದ ಧರ್ಮೇಂದ್ರ ಪ್ರಧಾನ್, ಬೆಲೆ ಇಳಿಕೆಯಾಗುವ ಭರವಸೆ ನೀಡಿದ್ದಾರೆ. ಚುನಾವಣಾ ಆಯೋಗ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ಘೋಷಣೆ ಮಾಡಿದ ನಂತರ …
Read More »ಹಿಂದುಳಿದ ಸಮಾಜಗಳ ಅಭಿವೃದ್ದಿಗೆ ಬಿಜೆಪಿ ಬದ್ಧ : B.S.Y.
ದಾವಣಗೆರೆ : ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ಹಿಂದುಳಿದ ಸಮಾಜಗಳ ಅಭಿವೃದ್ದಿಗೆ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಹರಿಹರ ತಾಲೂಕಿನ ಬೆಳ್ಳೂಡಿ ಸಮೀಪದ ಕಾಗಿನಲೆ ಕನಕ ಗುರು ಶಾಖಾ ಮಠದ 5ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಪೀಠದ ಆವರಣದಲ್ಲಿ ನೂತನ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳ ಅಭಿವೃದ್ದಿಗೆ ಸರ್ಕಾರ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ಶೇ.50ರ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಸರ್ವೋಚ್ಛ ನ್ಯಾಯಾಲಯಕ್ಕೆ …
Read More »ರಾಜ್ಯ ಸಾರಿಗೆ ನೌಕರರಿಗೆ ಗರಿಷ್ಠ ವೇತನ ಪರಿಷ್ಕರಣೆ ಕೊಡುಗೆ?
ಬೆಂಗಳೂರು: ಗರಿಷ್ಠ ಪ್ರಮಾಣದ ವೇತನ ಪರಿಷ್ಕರಣೆ ಪ್ರಸ್ತಾವವನ್ನು ಮುಷ್ಕರ ನಿರತ ಸಾರಿಗೆ ನೌಕರರ ಮುಂದಿರಿಸಿ ಮನವೊಲಿಸಲು ಸರಕಾರ ಚಿಂತನೆ ನಡೆಸಿದೆ. ಶೇ. 15ರಿಂದ ಶೇ. 18ರ ವರೆಗೂ ವೇತನ ಹೆಚ್ಚಳದ ಬಗ್ಗೆ ಲೆಕ್ಕಾಚಾರ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ಆರ್ಥಿಕ ಹೊರೆ ಆಗಲಿದ್ದು, ಪರ್ಯಾಯವಾಗಿ ಈ ಕ್ರಮ ಅನುಸರಿಸುವ ಚಿಂತನೆ ಇದೆ. ಪ್ರಸ್ತುತ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. 2020ರ …
Read More »ಕವಟಗಿಮಠ ಅವರಿಗೆ ಕೊರೋನಾ ಪಾಸಿಟಿವ್ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ
ಬೆಳಗಾವಿ– ವಿಧಾನಪರಿಷತ್ ಸರಕಾರದ ಸಚೇತಕ ಮಹಾಂತೇಶ ಕವಟಗಿಮಠ ಅವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈ ಕುರಿತು ಅವರು ಫೋಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಇಂದು ಬೆಳಗ್ಗೆ ಟೆಸ್ಟ್ ಮಾಡಿದಾಗಿ ಕೊರೋನಾ ದೃಢಪಟ್ಟಿದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅವರು ಕೋರಿದ್ದಾರೆ. ಕೊರೋನಾದಿಂದಾಗಿ ಅವರು ಲೋಕಸಭಾ ಚುನಾವಣೆ ಪ್ರಚಾರದಿಂದ ದೂರ ಉಳಿಯುವಂತಾಗಿದೆ.
Read More »ಸಾಂಬ್ರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿಸಭೆಯನ್ನು ಏರ್ಪಡಿಸಿ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರವಾಗಿ ಮತ ಯಾಚಿಸಲಾಯಿತು.
ಸಾಂಬ್ರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಿ ಶ್ರೀ ಸತೀಶಣ್ಣಾ ಜಾರಕಿಹೊಳಿಯವರ ಪರವಾಗಿ ಮತ ಯಾಚಿಸಲಾಯಿತು. ಸತೀಶಣ್ಣನವರನ್ನು ಬೆಂಬಲಿಸುವ ಮೂಲಕ ಬೆಳಗಾವಿಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಜೊಡಿಸೋಣ, ನಾವೆಲ್ಲರೂ ಒಗ್ಗಟ್ಟಿನ ಮಂತ್ರದೊಂದಿಗೆ ಸತೀಶಣ್ಣನವರನ್ನು ಲೋಕಸಭೆಗೆ ಆಯ್ಕೆ ಮಾಡೋಣ. ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಮುಖಂಡರು, ಶ್ರೀ ಎಮ್. ಬಿ. ಪಾಟೀಲ ಅಣ್ಣ, ಗಣೇಶ ಹುಕ್ಕೇರಿ, ರಾಜು ಸೇಠ್, ಸಿ ಸಿ ಪಾಟೀಲ …
Read More »ಬಿಜೆಪಿ ಸರ್ಕಾರ ಬಂದ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದು ಪೈಸೆ ಕೊಡ್ತಿಲ್ಲ.: ಯತೀಂದ್ರ ಸಿದ್ದರಾಮಯ್ಯ
ಮೈಸೂರು:ಬಿಜೆಪಿ ಸರ್ಕಾರ ಬಂದ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದು ಪೈಸೆ ಕೊಡ್ತಿಲ್ಲ. ಎಷ್ಟೇ ಪತ್ರ ಬರೆದರೂ ಹಣ ಕೊಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕ್ಷೇತ್ರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ, ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಗಳನ್ನ ಈಡೇರಿಸಲು ಆಗ್ತಿಲ್ಲ. ರಸ್ತೆ, ಚರಂಡಿ ಕಾಮಗಾರಿಗೇ ಇವರು ಹಣ ಕೊಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ರಸ್ತೆಗಳು ನಡೆಯುತ್ತವೆ. ಹೀಗಾಗಿ ನಾನು …
Read More »