Breaking News

Uncategorized

ಮೂಡಲಗಿ-ಧರ್ಮಟ್ಟಿ-ಮಸಗುಪ್ಪಿ ರಸ್ತೆ ಸುಧಾರಣೆಗೆ 7.86 ಕೋಟಿ ರೂ, ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಸುಗಮ ಸಂಚಾರಕ್ಕಾಗಿ ಮೂಡಲಗಿಯಿಂದ ಧರ್ಮಟ್ಟಿ ಮಾರ್ಗವಾಗಿ ಮಸಗುಪ್ಪಿ ರಸ್ತೆ ಸುಧಾರಣೆಗೆ ಪಿ.ಎಂ.ಜಿ.ಎಸ್.ವಾಯ್ ಯೋಜನೆಯಡಿ 7.86 ಕೋಟಿ ರೂಪಾಯಿ ಮೊತ್ತ ಬಿಡುಗಡೆಯಾಗಿದ್ದು, ಎರಡು ತಿಂಗಳೊಳಗೆ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಕೈಗೊಳ್ಳುವಂತೆ ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರದಂದು ತಾಲೂಕಿನ ಮಸಗುಪ್ಪಿ ಕ್ರಾಸ್ ಬಳಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 7.86 ಕೋಟಿ …

Read More »

ಸೋಂಕಿತರ ಸಂಖ್ಯೆ ಇಳಿಕೆ: ಸಾವಿರ ಬೆಡ್​ಗಳ ಜಿಂದಾಲ್ ಕೋವಿಡ್ ಆಸ್ಪತ್ರೆ ಸೇವೆ ಸ್ಥಗಿತ

ಬಳ್ಳಾರಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಮೈದಾನದಲ್ಲಿ ಆರಂಭಿಸಲಾಗಿದ್ದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಸೇವೆ ಸ್ಥಗಿತಗೊಳಿಸಲಾಗಿದೆ. ಕೊರೊನಾ ಎರಡನೇ ಅಲೆ ವ್ಯಾಪಕವಾಗಿದ್ದ ಹಿನ್ನೆಲೆ ಸಾವಿರ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಯುಳ್ಳ ಈ ತಾತ್ಕಾಲಿಕ ಕೋವಿಡ್​​ ಕೇರ್​ ಸೆಂಟರ್​ ಸ್ಥಾಪನೆ ಮಾಡಲಾಗಿತ್ತು. ಈಗ ರೋಗಿಗಳು ಇಲ್ಲದೆ ಬೆಡ್ ಖಾಲಿಯಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲಾಡಾಳಿತ ಆಸ್ಪತ್ರೆ ಸೇವೆಯನ್ನ ಸ್ಥಗಿತಗೊಳಿಸಿದೆ. ಈ ಕುರಿತು ನ್ಯೂಸ್​ಫಸ್ಟ್‌ಗೆ ಆರೋಗ್ಯ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. …

Read More »

ತಾವೊಬ್ಬ ದುರ್ಬಲ ನಾಯಕರೆಂದು ಮೋದಿ ಸಾಬೀತುಪಡಿಸಿದ್ದಾರೆ : ಸಿದ್ದು ವ್ಯಂಗ್ಯ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಲ್ಲಿಗೆ ಬಂದು ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲವೆಂದು ಸ್ಪಷ್ಟಪಡಿಸಿದರೂ ಕೂಡ ರಾಜ್ಯ ಬಿಜೆಪಿಯ ಸ್ಥಿತಿ ಬೂದಿಯೊಳಗಿನ ಕೆಂಡದಂತಾಗಿದೆ. ನಾಯಕತ್ವ ಬದಲಾವಣೆಯ ವಿಚಾರವಾಗಿ ಶಾಸಕರ ಹಾಗೂ ಸಚಿವರುಗಳ ಭಿನ್ನಾಭಿಪ್ರಾಯದ ಹೇಳಿಕೆಗಳು ಇಂದು ಕೂಡ ಮುಂದುವರಿದಿದ್ದು, ರಾಜ್ಯ ಬಿಜೆಪಿಯ ಆಡಳಿತ ಚುಕ್ಕಾಣಿಯ ಭವಿಷ್ಯ ಹೇಗೆ ಎನ್ನುವ ಪ್ರಶ್ನೆ ಎದ್ದಿದೆ.   ಪರಸ್ಪರ ಕಚ್ಚಾಡುತ್ತಿರುವ @BJP4Karnataka …

Read More »

ಜೈಲಿನಲ್ಲಿರುವ ವಂಚಕ ಯುವರಾಜ ಸ್ವಾಮಿಯಿಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಗೆ ದೂರವಾಣಿ ಕರೆ?

ಬೆಂಗಳೂರು: ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಅರವಿಂದ ಬೆಲ್ಲದ ಅವರದ್ದು. ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ ಬೆಲ್ಲದ ಅವರನ್ನು ಕೆಲವರು ಮುಂದಿನ ಮುಖ್ಯಮಂತ್ರಿ ಎಂದೂ ಬಿಂಬಿಸುತ್ತಿದ್ದಾರೆ. ದೆಹಲಿ ಭೇಟಿ- ಆರ್ ಎಸ್‌ಎಸ್ ನಾಯಕ ಭೇಟಿ ಎಂದು ಸದ್ಯ ಕೆಲವು ದಿನಗಳಿಂದ ಪ್ರಚಾರದಲ್ಲಿರುವ ಬೆಲ್ಲದ ಅವರಿಗೆ ವಂಚಕ ಜೈಲಿನಲ್ಲಿರುವ ವಂಚಕ ಯುವರಾಜ್ ಸ್ವಾಮಿಯಿಂದ ಕರೆಗಳು ಬರುತ್ತಿದೆಯಂತೆ! ಈ ಬಗ್ಗೆ ಸ್ವತಃ ಶಾಸಕ …

Read More »

ಹಾವೇರಿ ಜಿಲ್ಲೆಯಲ್ಲಿ ತುಂತುರು ಮಳೆ – ಮನೆಯ ಗೋಡೆಗಳಿಗೆ ಹಾನಿ

ಹಾವೇರಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದೆ. ಮೋಡಕವಿದ ವಾತಾವರಣದೊಂದಿಗೆ ಆಗಾಗ ತುಂತುರು ಮಳೆ ಆಗುತ್ತಿದೆ. ತುಂತುರು ಮಳೆಗೆ ಮನೆಯ ಹಳೆಯ ಗೋಡೆಗಳು ನೆನೆದು ಬಿದ್ದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದೆ. ನೆರಗಲ್ ಗ್ರಾಮದ ತಿರಕಪ್ಪ ಗೋದಿ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಅರಳೇಶ್ವರ ಗ್ರಾಮದ ಗಂಗಯ್ಯ ಹಿರೇಮಠ ಹಾಗೂ ಹಾನಗಲ್ ತಾಲೂಕಿನ ಅಕ್ಕಿವಳ್ಳಿ ಗ್ರಾಮದ ರಾಜು ಪಗಡೆ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಮೂರು ಮನೆಯ ಗೋಡೆಗಳು …

Read More »

ಸಿಎಂ ಬಿಎಸ್ ವೈ ಭೇಟಿಯಾಗಿ ‘ಬೆಲ್ಲದ’ ವಿಚಾರ ತಿಳಿಸಿದ ಬೊಮ್ಮಾಯಿ: ಕಾವೇರಿಗೆ ಶಾಸಕರ ದೌಡು

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಭಾರೀ ಚಟುವಟಿಕೆಗಳು ನಡೆಯುತ್ತಿದೆ. ಸಿಎಂ ನಿವಾಸ ಕಾವೇರಿಗೆ ಶಾಸಕರು ದೌಡಾಯಿಸುತ್ತಿದ್ದು, ಕಾವೇರಿ ನಿವಾಸದಲ್ಲಿ ಚರ್ಚೆ ಕಾವೇರಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಶಾಸಕ ಅರವಿಂದ್ ಬೆಲ್ಲದ ವಿಚಾರವಾಗಿ ಮಾಹಿತಿ ನೀಡಿದ್ದಾರೆ. ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ಅರವಿಂದ್ ಬೆಲ್ಲದ್ ಕರೆಸಿಕೊಂಡು, ದೆಹಲಿಯ …

Read More »

ಸಿ.ಪಿ ಯೋಗೇಶ್ವರ್ ಮೇಲೆ ಕಿಡಿಕಾರಿದ ಸಚಿವ ಬಿ.ಸಿ ಪಾಟೀಲ್

ಮೈಸೂರು: ‘ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಲು ಇದು ಸೂಕ್ತ ಸಮಯ ಅಲ್ಲ. ಇಡೀ ಜಗತ್ತು ಕೊರೋನಾ ಸೋಂಕಿನಿಂದ ತತ್ತರಿಸುವ ಕಾರಣ ಕೋವಿಡ್‌ ನಿರ್ವಹಣೆಗೆ ಆದ್ಯತೆ ಕಲ್ಪಿಸಬೇಕು. ರಾಜಕೀಯ ಆ ಬಳಿಕ ಮಾಡೋಣ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಮೈಸೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ‘ನಮ್ಮ ಪಕ್ಷದಲ್ಲಿ ಹೊರಗಿನಿಂದ ಬಂದವರು, ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ. ಮನೆಗೆ ಒಂದು ಸಾರಿ‌ ಸೊಸೆ ಬಂದ ಬಳಿಕ ಆಕೆ ಮನೆ …

Read More »

ರಾಹುಲ್ ಜಾರಕಿಹೊಳಿ ಅವರು KEB ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸ್ಯಾನಿಟ್ಜರ,ಮಾಸ್ಕ ವಿತರಣೆ

ಗೋಕಾಕ: ಕೆಪಿಸಿಸಿ ಕಾರ್ಯಾಧಕ್ಷ ,ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಘಟಪ್ರಭಾ ವಿಭಾಗದ ಎಲ್ಲ KEB ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ 200 ಕ್ಕೂ ಹೆಚ್ಚು ಸ್ಯಾನಿಟ್ಜರ ಹಾಗೂ ಮಾಸ್ಕಗಳನ್ನು ವಿತರಿಸಿದರು.     ಈ ಸಮಯದಲ್ಲಿ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು ಕೋವಿಡ ಈಗ ತಾನೆ ಇಳಿಮುಖ ಕಾಣುತ್ತಿದೆ, ಜನರು ಧೈರ್ಯದಿಂದ ಇರಬೇಕು ಮಾಸ್ಕ ಧರಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಲ್ಲರೂ …

Read More »

K.L.E. ಎಂಜಿನಿಯರಿಂಗ್ ಕಾಲೇಜಿಗೆ ₹ 1.10 ಕೋಟಿ ಅನುದಾನ

ಬೆಳಗಾವಿ: ಐಡಿಯಾ ಅಭಿವೃದ್ಧಿ, ಮೌಲ್ಯಮಾಪನ ಮತ್ತು ಪ್ರಯೋಗಾಲಯ ಸ್ಥಾಪಿಸಲು ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿಗೆ ₹ 1.10 ಕೋಟಿ ಅನುದಾನವನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮಂಜೂರು ಮಾಡಿದೆ. ‘ರಾಷ್ಟ್ರ ಮಟ್ಟದ ಅತ್ಯಂತ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ 210 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 49 ಕಾಲೇಜುಗಳಿಗೆ ಮಾತ್ರ ಇಷ್ಟು ದೊಡ್ಡ ಪ್ರಮಾಣದ ಅನುದಾನ ಲಭಿಸಿದೆ. ಇದು ನಮ್ಮ ಕಾಲೇಜು ನಿರ್ವಹಿಸುವ ಗುಣಮಟ್ಟದ ಮಾನದಂಡಗಳನ್ನು ಸಾಬೀತುಪಡಿಸಿದೆ’ …

Read More »

ಅಬಕಾರಿ ಪೊಲೀಸರ ದಾಳಿ 15 ಲಕ್ಷ ಮೌಲ್ಯದ ಗೋವಾ ಮದ್ಯ , ನಾಲ್ವರ ಬಂಧನ..!

ಸಹಾಯಕ ಅಬಕಾರಿ ಕಮಿಷನರ್ ಬೆಳಗಾವಿ ಇವರ ಮಾರ್ಗದರ್ಶನ ಅದರ ಅನ್ವಯ ಗೋಕಾಕ್ ವಲಯದ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಬಳಿ ಅಬಕಾರಿ ದಾಳಿ ಮಾಡಲಾಗಿದೆ.   ಈ ದಾಳಿಯಲ್ಲಿ 9ಬಾಕ್ಸ್ 76.62 ಲೀ. ಸುಮಾರು ಹದಿನೈದು ಲಕ್ಷ ರೂ ಮೊತ್ತದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಾಟಾ ಹೆಕ್ಸಾ ಕಾರ್ ಅನ್ನು ಕೂಡ ಸೀಜ್ ಮಾಡಲಾಗಿದೆ.   ವಶಪಡಿಸಿಕೊಂಡ ಒಟ್ಟು ಮೌಲ್ಯ ರೂ .15,35,000..ಈ ಪ್ರಕರಣವನ್ನು ಶಂಕರ್ ಗೌಡ …

Read More »