ಬೆಂಗಳೂರು: ರಾಜ್ಯದ ಶಿಕ್ಷಕ ಸಮೂಹದ ಬಹುದಿನಗಳ ನಿರೀಕ್ಷೆಯಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಬುಧವಾರ ಅಧಿಸೂಚನೆ ಹೊರಡಿಸಲಾಗಿದ್ದು, ಶಿಕ್ಷಕರು ಕೌನ್ಸೆಲಿಂಗ್ ಮೂಲಕ ತಮಗೆ ಅನುಕೂಲವಾದ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. 2019-20ನೇ ಸಾಲಿನ ಸಾಮಾನ್ಯ ವರ್ಗಾವಣೆಗಳಲ್ಲಿನ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರು ಹಂಚಿಕೆಯ ಮೇರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ತಾಲೂಕಿನ ಹೊರಗೆ …
Read More »ಬೆಳಗಾವಿ ದಕ್ಷಿಣ ಮತಕ್ಷೇತ್ರದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಹಾಕಿಸುವ ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ,
ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಹಾಕಿಸುವ ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ, ಕ್ಷೇತ್ರದಲ್ಲಿ ಲಸಿಕಾ ಕ್ರಾಂತಿಗೆ ಮುಂದಾಗಿದ್ದಾರೆ. ನೂರಕ್ಕೂ ಹೆಚ್ಚು ಕಾರ್ಯಕರ್ತರ ಪಡೆಯನ್ನು ಲಸಿಕಾ ಕಾರ್ಯದ ನೆರವಿಗೆ ನಿಯೋಜಿಸಿರುವ ಶಾಸಕ ಅಭಯ ಪಾಟೀಲ ಈಗಾಗಲೇ ಕ್ಷೇತ್ರದ ಸಾವಿರಾರು ಜನರಿಗೆ ವ್ಯಾಕ್ಸೀನ್ ದೊರಕಿಸಿಕೊಟ್ಟಿದ್ದು, ಶೀಘ್ರದಲ್ಲೇ ಕ್ಷೇತ್ರದಲ್ಲಿ ಬಹು ದೊಡ್ಡ ಲಸಿಕಾ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ. ಜನಸಂಘದ ಸಂಸ್ಥಾಪಕ ಡಾ. ಶಾಮಪ್ರಸಾದ ಮುಖರ್ಜಿ …
Read More »SSLC ವಾರ್ಷಿಕ ಪರೀಕ್ಷೆ’ಯ ಪರಿಷ್ಕೃತ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟ : ಹೀಗಿದೆ ‘ವಿಷಯವಾರು ವೇಳಾಪಟ್ಟಿ’
ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ರಾಜ್ಯ ಸರ್ಕಾರದಿಂದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಬಹುಆಯ್ಕೆ ಉತ್ತರದ ಮಾದರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇಂತಹ ಪರೀಕ್ಷೆಯನ್ನು ಜುಲೈ.19 ಹಾಗೂ ಜುಲೈ.22ರಂದು ನಡೆಸಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಲಾಗಿದೆ. ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇದೀಗ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಈ ಕುರಿತಂತೆ ಪ್ರಕಟಣೆಯನ್ನು ಕರ್ನಾಟ ಪ್ರೌಢ ಶಿಕ್ಷಣ …
Read More »ನಾನು 8 ಬಾರಿ ಶಾಸಕನಾಗಿದ್ದೇನೆ. ನನಗೂ ಸಹ ಸಿಎಂ ಆಗುವ ಅರ್ಹತೆ ಇದೆ. ಆದರೆ.? ಉಮೇಶ ಕತ್ತಿ
ವಿಜಯಪುರ: ‘ನಾನು 8 ಬಾರಿ ಶಾಸಕನಾಗಿದ್ದೇನೆ. ನನಗೂ ಸಹ ಸಿಎಂ ಆಗುವ ಅರ್ಹತೆ ಇದೆ. ಆದರೆ ಸಿಎಂ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಸದ್ಯ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರ ಕುರ್ಚಿ ಖಾಲಿಯಾದ ಮೇಲೆ ನೋಡೋಣ’ ಎಂದಿದ್ದಾರೆ ಆಹಾರ ಸಚಿವ ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮಗೂ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದ ಮಹದಿಚ್ಛೆ ಇರುವುದನ್ನು ಅವರು ತೆರೆದಿಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ …
Read More »ಯಾವುದೇ ಕಾರಣಕ್ಕೂ ಎಸ್ಎಸ್ಎಲ್ ಸಿ ಪರೀಕ್ಷೆ ಮಾಡಬಾರದು: ವಾಟಾಳ್ ನಾಗರಾಜ್
ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಜುಲೈ ಎರಡನೇ ವಾರ ಎಸ್ಎಸ್ಎಲ್ ಸಿ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಇದನ್ನು ನಾನು ಸ್ಪಷ್ಟವಾಗಿ ವಿರೋಧ ಮಾಡುವೆ, ಯಾವುದೇ ಕಾರಣಕ್ಕೂ ಎಸ್ಎಸ್ಎಲ್ ಸಿ ಪರೀಕ್ಷೆ ಮಾಡಬಾರದು. ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 10 ಲಕ್ಷ ವಿದ್ಯಾರ್ಥಿಗಳು ,ಪೋಷಕರು, ಸಿಬ್ಬಂದಿ ಸೇರಿ 25 ಲಕ್ಷ ಪರೀಕ್ಷೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಕೋವಿಡ್ …
Read More »ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ, ರಾಜ್ಯದ ರಾಜೀವ್ ಚಂದ್ರಶೇಖರ್ ಸೇರಿ 27 ಮಂದಿಗೆ ಸಚಿವ ಸ್ಥಾನ ಸಾಧ್ಯತೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನರ್ರಚನೆಯ ಕುರಿತು ಯಾವುದೇ ಅಧಿಕೃತ ಮಾತುಗಳು ಇಲ್ಲದಿದ್ದರೂ ಸಂಪುಟ ವಿಸ್ತರಣೆಯಂತೂ ಖಚಿತವೆಂದು ಹೇಳಲಾಗುತ್ತಿದೆ. ಪ್ರಮುಖ ನಾಯಕರಾದ ಜ್ಯೋತಿರಾಧಿತ್ಯ ಸಿಂಧ್ಯ, ಸುಶೀಲ್ ಮೋದಿ, ಸರ್ಬಾನಂದ ಸೋನೋವಾಲ್, ನಾರಾಯಣ ರಾಣೆ ಮತ್ತು ಭೂಪೆಂದ್ರ ಯದವ್ ಸೇರಿದಂತೆ 27 ಮಂದಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. ನರೇಂದ್ರ ಮೋದಿ ಸಂಪುಟಕ್ಕೆ ಸೇರುವ ಹೊಸ ಮಂತ್ರಿಗಳೆಂದರೆ, ಮಧ್ಯಪ್ರದೇಶದ ಕಾಂಗ್ರೆಸ್ ಮಾಜಿ …
Read More »ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ
ವಿಜಯಪುರ: ವ್ಯಾಕ್ಸಿನ್ ಹಾಕಿಸಿಕೊಳ್ಳದ ಆಟೋ ಚಾಲಕರು ಆಟೋಗಳನ್ನ ರಸ್ತೆಗೆ ಇಳಿಸುವ ಹಾಗಿಲ್ಲ. ಇನ್ನು ಈವರೆಗೂ ವ್ಯಾಕ್ಸಿನ್ ಪಡೆಯದ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವ ಹಾಗಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್ಕುಮಾರ್ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಕೇಳುತ್ತಿಲ್ಲ. ನಾವು ಆರೋಗ್ಯವಾಗಿದ್ದೀವಿ ವ್ಯಾಕ್ಸಿನ್ ಯಾಕೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಗರಂ ಆಗಿರುವ ಡಿಸಿ ಸುನೀಲ್ಕುಮಾರ್, …
Read More »‘ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ’: ರಮೇಶ ಜಾರಕಿಹೊಳಿ
ಬೆಳಗಾವಿ: ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಜ’ ಎಂದಿರುವ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ‘ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ’ ಎಂದು ಗುಡುಗಿದರು. ಮೈಸೂರಿನಲ್ಲಿ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಮರಳಿದ ಅವರು ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಮಾತನಾಡಿದರು. ‘ಮುಂಬೈಗೆ ಹೋಗಿದ್ದರಲ್ಲಿ ರಾಜಕಾರಣವಿದೆ. ಅದರಲ್ಲಿ ಮುಚ್ಚು ಮರೆ ಏನಿಲ್ಲ. ಆದರೆ, ಸುತ್ತೂರು ಮಠಕ್ಕೆ ಹೋಗಿದ್ದರಲ್ಲಿ ರಾಜಕಾರಣವಿಲ್ಲ. ಪೂರ್ವಾಶ್ರಮದ ತಾಯಿ ನಿಧನರಾದ್ದರಿಂದ ಶ್ರೀಗಳನ್ನು …
Read More »ನಾಳೆ ದಿ: 26 ಹಾಗೂ 27 ಜೂನ್ 2021 ರಂದು ಸರ್ಕಾರದ ನಿರ್ದೇಶನದಂತೆ ಭಾಗಶಃ ಲಾಕ್ ಡೌನ್ ಜಾರಿಯಾಗಲಿದ್ದು ,
ಮಹಾನಿಯರೆ, ನಾಳೆ ದಿ: 26 ಹಾಗೂ 27 ಜೂನ್ 2021 ರಂದು ಸರ್ಕಾರದ ನಿರ್ದೇಶನದಂತೆ ಭಾಗಶಃ ಲಾಕ್ ಡೌನ್ ಜಾರಿಯಾಗಲಿದ್ದು , ಆದ್ದರಿಂದ ಗೋಕಾಕ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ • ಬೆಳಿಗ್ಗೆ 6.00 ರಿಂದ ಮದ್ಯಾಹ್ನ 2.00 ಗಂಟೆವರೆಗೂ ಕಿರಾಣಿ, ದಿನಸಿ, ಬೇಕರಿ, ಹಾಲು ಮಾರಾಟ, ತರಕಾರಿ, ಮೀನು ಮತ್ತು ಮಾಂಸ ಮಾರಾಟ, ರೇಷನ್ ಅಂಗಡಿ ಗಳಿಗೆ ಮಾತ್ರ ಅನುಮತಿ ಇರುತ್ತದೆ ಅಲ್ಲದೇ ಲಿಕರ್ ಶಾಪ್ ಗಳಲ್ಲಿ ಪಾರ್ಸೆಲ್ …
Read More »ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವ ರಮೇಶ್ ಜಾರಕಿಹೊಳಿ ಅವರೊಂದಿಗೆ ಸಹೋದರ ಲಖನ್ ಹಾಗೂ ಅಳಿಯ ಅಂಬಿರಾವ್ ಪಾಟೀಲ್ ಇರಲಿದ್ದಾರೆ ಎನ್ನಲಾಗಿದೆ
ಗೋಕಾಕ್: ನಾಲ್ಕು ದಿನಗಳ ಕಾಲ ಮುಂಬಯಿ ಪ್ರವಾಸದಿಂದ ಗೋಕಾಕ್ಗೆ ಮರಳಿರುವ ರಮೇಶ್ ಜಾರಕಿಹೊಳಿ ಶುಕ್ರವಾರ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳಿ ಸುತ್ತೂರು ಶ್ರೀಗಳನ್ನು ಭೇಟಿ ಮಾಡಲಿದ್ದು, ಅಲ್ಲಿಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮೂಲಕ ಸಂಪುಟಕ್ಕೆ ಮರು ಸೇರ್ಪಡೆ ಕುರಿತು ಹೈಕಮಾಂಡ್ಗೆ ಸಂದೇಶ ರವಾನಿಸಿದ್ದ ಇವರು ಈಗ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲ …
Read More »