ಬೆಂಗಳೂರು: ಕೊನೆಗೂ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನ ನಡೆಸಲು ಮನಸು ತೋರಿದ್ದು ಇದೇ ಡಿಸೆಂಬರ್ನಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಬಗ್ಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿ, ಡಿಸೆಂಬರ್ ತಿಂಗಳಿನಲ್ಲಿ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಅಭಿಪ್ರಾಯ ವ್ಯಕ್ತವಾಗಿದೆ ಸರ್ಕಾರದಿಂದಲೂ ಕೂಡ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ ಇದೆ ಎಂದರು. ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಭಾವನೆಗಳನ್ನು ಸದನದಲ್ಲಿ ಶಾಸಕರು ವ್ಯಕ್ತಪಡಿಸಬೇಕೆಂದು ಚುನಾಯಿಸಿ ಕಳುಹಿಸಿದ್ದಾರೆ. …
Read More »ಗೋಕಾಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಾನ್ ಶಾಪ್ ಕಳ್ಳತನ ಪ್ರಕರಣ
ಗೋಕಾಕ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಸವರಾಜ ಪೂಜೇರಿ ಮಾಲೀಕತ್ವದ ಪಾನ್ ಶಾಪ್ ಅಂಗಡಿ ಇಂದು ಬೆಳಿಗ್ಗೆ ಸುಮಾರು 4 ಘಂಟೆಗೆ ಕೀಲಿ ಲಾಕ್ ಮುರಿದು ಕಳ್ಳತನ ನಡೆದಿದ್ದು.ಬೆಳಿಗ್ಗೆ 5 ಘಂಟೆಗೆ ಅಂಗಡಿ ತೆಗೆಯಲು ಬಂದ್ ಮಾಲೀಕ ಬಸು ಪೂಜೇರಿ ಅಂಗಡಿ ಕಳ್ಳತನ ಆಗಿರುವುದುನ್ನು ಕಂಡು 112 ಸಹಾಯವಾಣಿಗೆ ಕರೆ ಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಪಿಎಸ್ಐ ವಾಲೀಕರ ಹಾಗೂ ಪೊಲೀಸ 112 ಸಿಬ್ಬಂದಿಗಳು ತನಿಖೆ ನಡೆಸಿ ಸ್ಥಳೀಯರಿಂದ …
Read More ».ಮದ್ಯ ಸೇವಿಸಿ ಅತಿವೇಗವಾಗಿ ಕಾರು ಚಾಲನೆ,ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದು ಅರ್ಧ ಕಿ.ಮೀಗೂ ಹೆಚ್ಚು ದೂರ ಮೃತದೇಹವನ್ನ ಕಾರ್ ಎಳೆದೊಯ್ದಿದೆ..!
ಮಂಡ್ಯ: ಮಂಡ್ಯದ ನಾಗಮಂಗಲದಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಾಗಮಂಗಲ ತಾಲೂಕಿನ ಕಸಲಗೆರೆ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು ಗ್ರಾಮದ ಚಂದ್ರಣ್ಣ(50) ಮೃತ ದುರ್ದೈವಿ. ಅದೇ ಗ್ರಾಮದ ಬಸವರಾಜು ಅಪಘಾತವೆಸಗಿದ ಪಾನಮತ್ತ ಚಾಲಕ. ಕೆಲಸ ನಿಮಿತ್ತ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದ ಬಸವರಾಜು.. ಬೇರೊಬ್ಬರ ರೇಂಜ್ ರೋವರ್ ಕಾರು ತಂದಿದ್ದ ಎನ್ನಲಾಗಿದೆ. ವಾಪಾಸ್ ಬೆಂಗಳೂರಿಗೆ ತೆರಳುವ ವೇಳೆ ಅಪಘಾತ ನಡೆದಿದೆ …
Read More »ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಸೇರಿದ ಕಾರ್ ಡಿಕ್ಕಿ.. ಮಹಿಳೆ ಸ್ಥಳದಲ್ಲೇ ಸಾವು
ಹಾಸನ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರಿಗೆ ಸೇರಿದ ಕಾರ್ ಬೈಕ್ಗೆ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹನುಮಂತನಗರದ ಬಳಿ ನಡೆದಿದೆ. ಶಾಸಕರ ಕಾರ್ ಚಾಲಕ ಕಾರ್ನಲ್ಲಿ ಬೇಲೂರಿನತ್ತ ಬರುತ್ತಿದ್ದ.. ಈ ವೇಳೆ ಮುಂದೆ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿಯಾಗಿದೆ. ಚಾಲಕ ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆ ಹೂವಮ್ಮ (55) ಸಾವನ್ನಪ್ಪಿದ್ದು, ಪುತ್ರನಿಗೆ ಗಂಭೀರ ಗಾಯವಾಗಿದೆ. …
Read More »ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಮಯೋಪಿಯ ಸಮಸ್ಯೆ
ಹೆಚ್ಚಾಗಿ 8- 16 ವರ್ಷದೊಳಗಿನ ಮಕ್ಕಳು ಈ ಕಣ್ಣಿನ ಸಮಸ್ಯೆಗೆ ತುತ್ತಾಗುತ್ತಿರುವುದಾಗಿ ಸಂಶೋಧನೆಯಿಂದ ತಿಳಿದುಬಂದಿದೆ. ಈ ಹಿಂದೆ 10- 15 ಪ್ರತಿಶತ ಮಕ್ಕಳು ಕಣ್ಣಿನ ಸಮಸ್ಯೆ ಹೇಳಿಕೊಂಡು ವೈದ್ಯರ ಬಳಿಗೆ ಬರುತ್ತಿದ್ದರು. ಈಗ ಆ ಸಂಖ್ಯೆ ಶೇ. 30- 40 ಪ್ರತಿಶತಕ್ಕೆ ಏರಿಕೆಯಾಗಿದೆ. ದೀರ್ಘ ಕಾಲ ಡಿಜಿಟಲ್ ಪರದೆಯನ್ನು ದಿಟ್ಟಿಸುವುದರಿಂದ ಕಣ್ನಲ್ಲಿನ ನೀರಿನಂಶ ಬೇಗನೆ ಒಣಗಿ ಹೋಗುತ್ತದೆ. ಇದರಿಂದ ತುರಿಕೆ ಕಂಡುಬರುತ್ತದೆ. ಆಗ ಮಕ್ಕಳು ಕಣ್ಣನ್ನು ಪದೇ ಪದೇ ಉಜ್ಜಿಕೊಳ್ಳುತ್ತಾರೆ. …
Read More »ಶಾರುಖ್ ಖಾನ್ ಪುತ್ರನ ಮಾದಕ ನಂಟು: ಎನ್ ಸಿಬಿ ಬಲೆಗೆ ಬಿದ್ದ ಆರ್ಯನ್ ಖಾನ್
ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಿಂದ ದೂರದ ಸಮುದ್ರ ಮಧ್ಯದಲ್ಲಿ ವಿಲಾಸಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆದಿದೆ. ಈ ಬಗ್ಗೆ ಸುಳಿವು ಸಿಕ್ಕ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್ಸಿಬಿ) ಅಧಿಕಾರಿಗಳು ಹತ್ತು ಮಂದಿಯನ್ನು ಶನಿವಾರ ರಾತ್ರಿ ಬಂಧಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪುತ್ರ ಕೂಡಾ ಈ ರೇವ್ ಪಾರ್ಟಿಯಲ್ಲಿದ್ದ ಎನ್ನಲಾಗಿದೆ. ಆರ್ಯನ್ ಖಾನ್ ಸೇರಿ 10 ಮಂದಿಯನ್ನು ಎನ್ ಸಿಬಿ ಅಧಿಕಾರಿಗಳು …
Read More »ಪತಿ, ಪುತ್ರಿಯೊಂದಿಗೆ ಪ್ಯಾರಿಸ್ಗೆ ಹಾರಿದ ನಟಿ ಐಶ್ವರ್ಯ ರೈ ಬಚ್ಚನ್
ಹೊಸದಿಲ್ಲಿ: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಎರಡು ವರ್ಷಗಳ ನಂತರ ಪತಿ ಅಭಿಶೇಕ್ ಬಚ್ಚನ್ ಹಾಗೂ ಪುತ್ರಿ ಆರಾಧ್ಯರೊಂದಿಗೆ ಪ್ಯಾರಿಸ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ರಾತ್ರಿ ಐಶ್ವರ್ಯ ರೈ ತನ್ನ ಪತಿ ಹಾಗೂ ಪುತ್ರಿಯೊಂದಿಗೆ ಮುಂಬೈ ಏರ್ಪೋರ್ಟ್ನಿಂದ ವಿದೇಶಕ್ಕೆ ಹಾರಿದರು. ಐಶ್ವರ್ಯ ಅವರಿಗೆ ಎರಡು ವರ್ಷಗಳ ನಂತರ ಮೊದಲ ವಿದೇಶ ಪ್ರವಾಸವಾಗಿದೆ. ʻಐಶ್ವರ್ಯ ಅವರು ಲಿ ಡೆಫಿಲಿ ಓರೆಲ್ ನಾಲ್ಕನೇ ಆವೃತ್ತಿಯ ಫ್ಯಾಷನ್ ಶೋಗಾಗಿ ಪ್ಯಾರಿಸ್ …
Read More »ಮೋದಿಯನ್ನು ಹೀಗೆ ಬಿಟ್ರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತೆ: ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
ಬೆಂಗಳೂರು: ಗಾಂಧೀಜಿಯಿಂದ ವಿಶ್ವದ ಅನೇಕ ದಿಗ್ಗಜರು ಸ್ಫೂರ್ತಿ ಪಡೆದಿದ್ದಾರೆ. ಆದರೆ ಬಿಜೆಪಿಯವರು ಗಾಂಧಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧೀಜಿ ಹಾಗೂ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಬಿಜೆಪಿಯವರು ಅಸತ್ಯ ಹಾಗೂ ಹಿಂಸೆಯಲ್ಲಿ ನಂಬಿಕೆಯಿಟ್ಟವರು. ಮೋದಿ ವಿರುದ್ಧ ಮಾತಾಡಿದರೆ ದೇಶ ವಿರೋಧಿ ಹಣೆಪಟ್ಟಿ ಕಟ್ಟುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ …
Read More »ಯಮಕನಮರಡಿ ಕ್ಷೇತ್ರದ ಜನತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇವೆ: ರಾಹುಲ್ ಜಾರಕಿಹೊಳಿ
ಬೆಳಗಾವಿ: ಯಮಕನಮರಡಿ ಮತ ಕ್ಷೇತ್ರ ಹುದಲಿ ಜಿಪಂ. ವ್ಯಾಪ್ತಿಯ ಬುಡ್ರ್ಯಾನೂರು ಗ್ರಾಮದಲ್ಲಿ ಲಕ್ಷ್ಮೀ ದೇವಿ ಮೂರ್ತಿ ಪ್ರತಿಷ್ಠಾನ ಮತ್ತು ಸಮುದಾಯಭವನವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಶುಕ್ರವಾರ ಉದ್ಘಾಟಿಸಿದರು. ಸತೀಶ ಜಾರಕಿಹೊಳಿ ಅವರ, ಶಾಸಕರ ವಿಶೇಷ ಅನುದಾನದಡಿಯಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಅಭಿವೃದ್ಧಿ ಕಾಮಗಾರಿ ಮತ್ತು ಹಳ್ಳೂರು, ಕರವಿನಕುಪ್ಪಿ ಇವೆರಡು ಗ್ರಾಮಕ್ಕೆ 6 ಲಕ್ಷ ರೂ. ಅನುದಾನದಲ್ಲಿ ಬಸ್ ನಿಲ್ದಾಣ …
Read More »ಬಿಜೆಪಿಯನ್ನು ‘ತುಕ್ಡೆ-ತುಕ್ಡೆ’ ಮಾಡುತ್ತೇನೆ.: ಕನ್ಹಯ್ಯಾ ಕುಮಾರ್
ನವದೆಹಲಿ: ಸಿಪಿಎಂ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯಾ ಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ “ನಾನು ಬಿಜೆಪಿಯನ್ನು ‘ತುಕ್ಡೆ-ತುಕ್ಡೆ’ ಮಾಡುತ್ತೇನೆ” ಎಂದು ಹೇಳಿದ್ದಾರೆ. ‘ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂದು ದೃಢವಾಗಿ ನಂಬಿದ್ದೇನೆ. ಆ ಪಕ್ಷದ ಸೋಲನ್ನು ನಾನು ನೋಡುತ್ತೇನೆ. ಬಿಜೆಪಿ ನನ್ನನ್ನು ‘ತುಕ್ಡೆ-ತುಕ್ಡೆ ಗ್ಯಾಂಗ್’ ಎಂದು ಕರೆಯುತ್ತದೆ. ನಾನು ಬಿಜೆಪಿ ಪಾಲಿಗೆ ‘ತುಕ್ಡೆ-ತುಕ್ಡೆ’, ಹಾಗೂ …
Read More »