ಬೆಂಗಳೂರು : ನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ. “ನೈತಿಕತೆಗೆ ಧಕ್ಕೆಯಾದಾಗ ಆಕ್ಷನ್, ರಿಯಾಕ್ಷನ್ ಆಗುತ್ತದೆ,” ಅಂತಾ ಬಸವರಾಜ ಬೊಮ್ಮಾಯಿ ಹೇಳಿದ್ದರು. ಇದಕ್ಕೆ ಆಕ್ರೋಶ ಹೊರಹಾಕಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ರಾಜ್ಯದಲ್ಲಿ ‘ಅನೈತಿಕ ಪೊಲೀಸ್ಗಿರಿ’ ಹೆಸರಲ್ಲಿ ನಡೆಯುತ್ತಿರುವ ಭಯೋತ್ಪಾದಕ …
Read More »ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ‘ಸಲಗ’ ಇಂದು ರಾಜ್ಯಾದ್ಯಂತ ಬಿಡುಗಡೆ
ಎಷ್ಟು ಟೆನ್ಶನ್ ಇದೆ ಗೊತ್ತಾ? ರಾತ್ರಿಯಲ್ಲಾ ನಿದ್ದೆ ಇಲ್ಲ. ಮೂರು ಗಂಟೆಗೆ ಎದ್ದು ಕೆಲಸ ಮಾಡುತ್ತಿದ್ದೇವೆ. ಆ ಅನುಭವವನ್ನು ಬಾಯ್ಮಾತಿನಲ್ಲಿ ಹೇಳುವುದು ಕಷ್ಟ. ಅದು ಅನುಭವಿಸಿದವರಿಗೇ ಗೊತ್ತು. ಇನ್ನೊಬ್ಬರಿಗೆ ಶಾಪವಾಗಿಯೂ ಕೊಡುವುದಕ್ಕೆ ಸಾಧ್ಯವಿಲ್ಲ …’ ಎಂದು ನಕ್ಕರು ‘ದುನಿಯಾ’ ವಿಜಯ್. ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ‘ಸಲಗ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ವಿಜಯ್ಗೆ ಸಹಜವಾಗಿಯೇ ಟೆನ್ಶನ್ ಇದೆ. ಏಕೆಂದರೆ, ಈ ಚಿತ್ರಕ್ಕೆ ಅವರು ನಾಯಕರಷ್ಟೇ ಅಲ್ಲ, …
Read More »ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ: ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ- ಇಬ್ಬರು ಕಾಂಗ್ರೆಸ್ ನಾಯಕರ ಸ್ಫೊಟಕ ಮಾತು ವೈರಲ್.
ಬೆಂಗಳೂರು, ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಬಗ್ಗೆ ಇಬ್ಬರು ಕಾಂಗ್ರೆಸ್ ನಾಯಕರ ಸ್ಪೋಟಕ ಮಾತು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ರದ್ದು ದೊಡ್ಡ ಸ್ಕ್ಯಾಮ್, ಕಲೆಕ್ಷನ್,ಗಿರಾಕಿ, ಡಿಕೆಶಿ ಹುಡುಗರ ಬಳಿ 50ರಿಂದ 100 ಕೋಟಿ ರೂಪಾಯಿ ಇದೆ. ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ ಎಂದು ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ವೇದಿಕೆಯಲ್ಲಿ ಮಾತನಾಡಿಕೊಂಡಿರುವ ಆಡಿಯೋ ವೈರಲ್ ಆಗಿದೆ. ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ …
Read More »ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ
ಬಾಗಲಕೋಟೆ: ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಿಎಸ್ಎಪ್ ಯೋಧ ಮೃತಪಟ್ಟಿದ್ದಾರೆ. ಹುನಗುಂದ ತಾಲೂಕಿನ ಕೂಡಲಸಂಗಮದ ಮಹಾಂತೇಶ್ ಚೌಧರಿ ಮೃತ ಯೋಧ. ಮಹಾಂತೇಶ್ ಚೌಧರಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇಂದು (ಅ.13) ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸಿದೆ. ಸದ್ಯ ಯೋಧ ಮಹಾಂತೇಶ್ ಚೌಧರಿ ರಾಜಸ್ಥಾನದ ಚಾರ್ಲಿ ಬಟಾಲಿಯನ್ 161ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ …
Read More »ಇಂಜಿನಿಯರಿಂಗ್ ಪದವಿಯಲ್ಲಿ ಕನ್ನಡ ಅಳವಡಿಕೆ 4 ಕಾಲೇಜುಗಳಿಗೆ ಅನುಮತಿ : ಸಿಎಂ
ಬೆಂಗಳೂರು: ಇಂಜಿಯರಿಂಗ್ ಕಾಲೇಜುಗಳಲ್ಲಿ 4 ವರ್ಷದ ಬಿಎಸ್ಸಿ ಆನರ್ಸ್ ಆರಂಭಿಸಲು ಅನುಮತಿ ಪತ್ರ ನೀಡಲಾಗಿದೆ. ನೂತನ ಶಿಕ್ಷಣ ಪದ್ಧತಿ (NEP) ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಮಾಡಲಾಗುವುದು ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಸಂಬಂಧ ನಾಲ್ಕು ಕಾಲೇಜುಗಳಿಗೆ ಅನುಮತಿ ಪತ್ರವನ್ನು ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಸಿಲಬಸ್ ಬಿಡುಗಡೆ ಮಾಡಿರುವುದು ಹೊಸ …
Read More »100 ಲಕ್ಷ ಕೋಟಿ ರೂ. ಮೊತ್ತದ ‘ಪಿಎಂ ಗತಿ ಶಕ್ತಿ ಯೋಜನೆ’ಗೆ ಇಂದು ಚಾಲನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗತಿ ಶಕ್ತಿ ಯೋಜನೆಯನ್ನು (PM Gati Shakti Yojana) ಜಾರಿಗೆ ತರಲು ಮುಂದಾಗಿದ್ದು, ಇಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆ ಬರೋಬ್ಬರಿ ₹100 ಲಕ್ಷ ಕೋಟಿ ಮೊತ್ತದ್ದಾಗಿದೆ. ಇನ್ನು ಈ ಯೋಜನೆಯಿಂದ ದೇಶದಲ್ಲಿ ಉದ್ಯೋಗಾವಕಾಶ ಸುಧಾರಿಸಲಿವೆ. ಗತಿ ಶಕ್ತಿ ಯೋಜನೆಯು ದೇಶದ ಮಾಸ್ಟರ್ ಪ್ಲಾನ್ ಮತ್ತು ಮೂಲಸೌಕರ್ಯಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 100 ಲಕ್ಷ ಕೋಟಿ ರೂಪಾಯಿ ಮೊತ್ತದ ಈ …
Read More »BIG ENCOUNTER ಕಣಿವೆ ನಾಡಿನಲ್ಲಿ 5 ಭಯೋತ್ಪಾದಕರು ಉಡೀಸ್
ನವದೆಹಲಿ: ಲಷ್ಕರ್-ಎ-ತೊಯ್ಬಾ -ರೆಸಿಸ್ಟೆನ್ಸ್ ಫ್ರಂಟ್ ನೊಂದಿಗೆ ಸಂಪರ್ಕ ಹೊಂದಿದ ಒಟ್ಟು ಐದು ಭಯೋತ್ಪಾದಕರು ನಿನ್ನೆ ಜಮ್ಮು & ಕಾಶ್ಮೀರದ ಶೋಪಿಯಾನ್ನಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಹತ್ಯೆಗೀಡಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ತಲ್ರಾನ್ ಗ್ರಾಮದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೆ ಉಗ್ರರ ಎನ್ಕೌಂಟರ್ ನಡೆದಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಮತ್ತು ಸೇನೆಯ ಜಂಟಿ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು …
Read More »ಉತ್ತರ ಕನ್ನಡ: ಗ್ಯಾಸ್ ಟ್ಯಾಂಕರ್ ಸ್ಫೋಟ; ಸುತ್ತಮುತ್ತ 300-400 ಮೀಟರ್ ವ್ಯಾಪಿಸಿರುವ ಬೆಂಕಿ
ಉತ್ತರ ಕನ್ನಡ: ಇಂದು (ಅಕ್ಟೋಬರ್ 13) ಬೆಳಿಗ್ಗೆ 5.30ರ ಸುಮಾರಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ. ಸ್ಪೋಟದಿಂದಾಗಿ ಸುತ್ತಮುತ್ತ 300 ರಿಂದ 400 ಮೀಟರ್ ಬೆಂಕಿ ವ್ಯಾಪಿಸಿದೆ. ಸಾಕಷ್ಟು ದೂರ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಸದ್ಯ 300 ರಿಂದ 400 ಮೀಟರ್ ದೂರಗಳಷ್ಟು ಸ್ಪೋಟದಿಂದ ಏನಾಗಿದೆ ಎನ್ನುವ ಮಾಹಿತಿ ದೊರೆಯದೆ ಅಧಿಕಾರಿಗಳು ಕಂಗಾಲಾಗಿದ್ದಾರೆ.
Read More »ಬೆಂಗಳೂರಿನಲ್ಲಿ ಮಳೆ ಅಬ್ಬರ: ಮನೆಗೆ ತೆರಳಲಾಗದೆ ಜನರ ಪರದಾಟ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದಲೂ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಹಲವೆಡೆ ಈಗಲೂ ಮಳೆ ಸುರಿಯುತ್ತಿದ್ದು , ಬೆಂಗಳೂರು ಏರ್ಪೋರ್ಟ್ ಮುಖ್ಯರಸ್ತೆಗಳು ಜಲಾವೃತಗೊಂಡಿವೆ. ಏರ್ಪೋರ್ಟ್ ತಲುಪಲು ಪ್ರಯಾಣಿಕರು ಒದ್ದಾಡಿದ್ದು, ಎಷ್ಟೋ ಮಂದಿ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ. ಏರ್ಪೋರ್ಟ್ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಂ ಉಂಟಾಗಿದ್ದು, ಜನ ತೊಂದರೆ ಅನುಭವಿಸಬೇಕಾಯ್ತು. ಬೆಂಗಳೂರಿನ ಬಹುತೇಕ ರಸ್ತೆಗಳು, ಅಂಡರ್ಪಾಸ್ಗಳಲ್ಲಿ ನೀರು ತುಂಬಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. …
Read More »ಮನೆಗೆ ಕರೆದುಕೊಂಡು ಹೋದ ಯುವತಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದಿದ್ದಾಳೆ
ಬೆಂಗಳೂರು: ತರಕಾರಿ ಖರೀದಿಗೆ ಬಂದ ಟೆಕ್ಕಿಯನ್ನು ಪರಿಚಯ ಮಾಡಿಕೊಂಡು ಡೇಟಿಂಗ್ಗೆಂದು ಮನೆಗೆ ಕರೆದುಕೊಂಡು ಹೋದ ಯುವತಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದಿದ್ದಾಳೆ. ಎನ್ಎಸ್ ಪಾಳ್ಯದ ನೇಹಾ ಫಾತೀಮಾ(24) ಮತ್ತು ಈಕೆಯ ಇಬ್ಬರು ಸಹಚರರು ಬಂಧಿತರು. ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಆಗ್ನೇಯಾ ವಿಭಾಗ ಡಿಸಿಪಿ ಶ್ರೀನಾಥ್ ಜ್ಯೋಷಿ ತಿಳಿಸಿದ್ದಾರೆ. ಮುನೇಶ್ವರನಗರದ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ 34 ವರ್ಷದ ಟೆಕ್ಕಿ, ಸೆ.29ರಂದು ತರಕಾರಿ ಖರೀದಿಗಾಗಿ ನೇಹಾಳ ಅಂಗಡಿಗೆ ಹೋಗಿದ್ದಾರೆ. ಜೋರು ಮಳೆ ಬಂದ …
Read More »