ಶಿವಮೊಗ್ಗ: ಮೊದಲು ಶ್ರೀರಾಮಸೇನೆ, ಭಜರಂಗದಳ, ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು. ಅವರಿಗೆ ಹೊಡೆದರೆ ಎಲ್ಲವೂ ಸರಿಯಾಗುತ್ತದೆ, ಸಮಾಜವು ಸರಿಯಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಇರುವುದು ಯಾರದ್ದು? ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯ್ತು, 144 ಸೆಕ್ಷನ್ ಹಾಕಿದ್ದು ಯಾರು? ಈಶ್ವರಪ್ಪ ಯಾವ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಉಲ್ಲಂಘನೆ ಮಾಡಿದ್ದು ಯಾರು.? ಶವಯಾತ್ರೆ ಮಾಡಿದ್ದು ಯಾರು? ಹರ್ಷನ ಕುಟುಂಬಕ್ಕೆ 25 ಲಕ್ಷ …
Read More »ಕೆಲಸಕ್ಕೆ ಸೇರೋ ಮುನ್ನವೇ ಯೂನಿಫಾರ್ಮ್ ಹಾಕ್ಕೊಂಡು ಬಿಲ್ಡಪ್ ಕೊಟ್ಟ ಪೋಲಿಸ್ ಪೇದೆ
ಹಾವೇರಿ: ಪಿಎಸ್‌ಐ ಅಕ್ರಮ ನೇಮಕಾತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಈ ನಡುವೆ ಪಿಎಸ್‍ಐ ನೇಮಕಾತಿ ಆದೇಶದ ಪತ್ರ ಕೈ ಸೇರುವ ಮುನ್ನವೇ, ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದಲ್ಲಿ ಮವಸ್ತ್ರ ಹಾಕಿಕೊಂಡು ಪೇದೆಯೊಬ್ಬ ಬಿಲ್ಡಪ್ ಕೊಟ್ಟಿರುವ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸನಗೌಡ ಕರೇಗೌಡ ಪಿಎಸ್‍ಐ ಸೆಲೆಕ್ಷನ್ ಆಗಿದ್ದಕ್ಕೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್‍ಐ ಡ್ರೆಸ್ ಹಾಕ್ಕೊಂಡು ಬಸನಗೌಡ …
Read More »ಕಟ್ಟಡ ಕಾರ್ಮಿಕರಿಗೆ ಮತ್ತೊಂದು ‘ಗುಡ್ ನ್ಯೂಸ್’
ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ರಾಜ್ಯ ಸರ್ಕಾರ, ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದ್ದು ಇದರ ಜೊತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಪ್ರಸ್ತುತ ಬಿಎಂಟಿಸಿ ಬಸ್ ಗಳಲ್ಲಿ ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ಬಸ್ ಪಾಸ್ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದನ್ನು ಈಗ ರಾಜ್ಯದಾದ್ಯಂತ ಇದನ್ನು ವಿಸ್ತರಿಸಲು ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ರಾಜ್ಯ …
Read More »ಮೂರಡಿಯ ದೇಹದ ನೂರಡಿ ಸಾಧನೆ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಗಾದೆಯನ್ನು ನಿಜ ಮಾಡಿ ತೋರಿಸಿದವರು ಆರತಿ ಡೋಗ್ರಾ. ದೇಹದ ಎತ್ತರ ಹೆಚ್ಚದಿದ್ದರೂ, ಮಾಡುವ ಕಾರ್ಯದ ಮೂಲಕ ಅತ್ಯಂತ ಎತ್ತರದ ಸ್ಥಾನಕ್ಕೇರಿ ಇಂದು ಸ್ಫೂರ್ತಿಯಾಗಿ ನಿಂತಿರುವ ಐಎಎಸ್ ಅಧಿಕಾರಿಯ ಜೀವನಗಾಥೆಯಿದು. ಅದು ಉತ್ತರಾಖಂಡದ ಮಧ್ಯಮ ವರ್ಗದ ಕುಟುಂಬ. ತಂದೆ ರಾಜೇಂದ್ರ ಡೋಗ್ರಾ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದರೆ, ತಾಯಿ ಕುಂಕುಮ ಡೋಗ್ರಾ ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿದ್ದರು. ಆ ಮನೆಯ ಏಕೈಕ ಮಗಳಾಗಿ …
Read More »ಬಾ ದೋಸ್ತಾ ಸೈಕಲ್ ತುಳಿ:ಇಬ್ಬರು ಸವಾರರಿಗೆ ಒಂದೇ ಸೈಕಲ್ – ಆನಂದ್ ಮಹೀಂದ್ರಾ ಮೆಚ್ಚುಗೆ
ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್‌ನಲ್ಲಿ ನಿಯಮಿತವಾಗಿ ಜನರಿಗೆ ಸ್ಪೂರ್ತಿದಾಯಕ ಪೋಸ್ಟ್‌ಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳಲೇ ಇರುತ್ತಾರೆ. ಹೀಗಾಗಿ ಏನೋ ಅವರ ಟ್ವಿಟರ್ ಖಾತೆ 9 ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಇತ್ತೀಚೆಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಇಬ್ಬರು ದೇಸಿ ಹುಡುಗರು ಒಟ್ಟಿಗೆ ಬೈಸಿಕಲ್ ಸವಾರಿ ಮಾಡುವ ವಿಡಿಯೊವನ್ನು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. Even Harvard Business School would not have a better video to communicate …
Read More »ಗೋಕಾಕ ಸಿಪಿಐ, ಪಿಎಸ್ಐ ಕಿರುಕುಳಕ್ಕೆ ಬೇಸತ್ತ ಬಬಲಿ ಕುಟುಂಬ…!
ಬೆಳಗಾವಿ :ಗೋಕಾಕ ಸಿಪಿಐ ಗೋಪಾಲ್ ರಾಥೋಡ್ ಮತ್ತು ಪಿಎಸ್ ಐ ಪೊಲೀಸ್ ಅಧಿಕಾರಿಗಳಿಂದ ಆಗಿರುವ ಅನ್ಯಾಯಕ್ಕೆ ನಮಗೆ ನ್ಯಾಯ ದೊರಕಿಸಿಕೊಡುವಂತೆ ಬಬಲಿ ಕುಟುಂಬಸ್ಥರು ಶನಿವಾರ ಜಿಲ್ಲಾಧಿಕಾರಿ ಆವರಣದಲ್ಲಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು. ಕಳೆದ ಜೂನ್ 2021 ರಂದು ಗೋಕಾಕ ತಾಲೂಕಿನ ಮಹಾಂತೇಶ ನಗರ ಬಡಾವಣೆಯ ಮಾಲದಿನ್ನಿ ಕ್ರಾಸ್ ಬಳಿ ಸಂಜೆ 7ಕ್ಕೆ ಮಂಜು ಶಂಕರ ಮುರುಕಿಬಾವಿ ಎಂಬ ವ್ಯಕ್ತಿಯ ಅನುಮಾನಸ್ಪಾದವಾಗಿ ಕೊಲೆಯಾಗಿದ್ದಾನೆ. ಈತನಿಗೂ ನಮ್ಮ ಮಕ್ಕಳಿಗೆ ಯಾವುದೇ …
Read More »ಭೂ ನಕ್ಷೆಗೆ ‘ಸ್ವಾವಲಂಬಿ ಆಯಪ್’; ಕಂದಾಯ ಇಲಾಖೆಯಿಂದ ಹೊಸ ಸೇವೆ: ಉದ್ದೇಶವಿದು.
ಬೆಂಗಳೂರು: ಜಮೀನು ಸರ್ವೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿಸಲು ಕಂದಾಯ ಇಲಾಖೆ ‘ಸ್ವಾವಲಂಬಿ ಆಯಪ್’ ಪರಿಚಯಿಸಿದೆ. ಈ ಮೂಲಕ ಭೂ ಮಾಲೀಕ ತನ್ನ ಭೂಮಿಯನ್ನು ಸ್ವಯಂ ಸರ್ವೆ ಸಿದ್ಧಪಡಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಿದೆ. ನಾಗರಿಕರು ಪಹಣಿ ಹೊಂದಿರುವ ಜಮೀನಿನಲ್ಲಿ 11ಇ, ಪೋಡಿ, ಭೂ ಪರಿವರ್ತನೆ ಪೂರ್ವ ಮತ್ತು ವಿಭಾಗ ಮಾಡಿಕೊಳ್ಳಲು ಸ್ವಾವಲಂಬಿ ಆಯಪ್ ಬಳಸಿಕೊಳ್ಳಬಹುದು. ಏಕ ಮಾಲೀಕತ್ವದ ಪಹಣಿ (ಆರ್‌ಟಿಸಿ) ಹೊಂದಿರುವರು ಇತರರ ಜಮೀನಿನ ಹಕ್ಕುಗಳಲ್ಲಿ ಮತ್ತು ನಕ್ಷೆಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. …
Read More »ಜನ ಹಾಗೂ ಜಾನುವಾರಿಗಳಿಗೆ ಕುಡಿಯುವ ನೀರಿಗಾಗಿ 10 ದಿನಗಳವರೆಗೆ ನೀರು ಬಿಡಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ
ಹಿಡಕಲ್ ಜಲಾಶಯದಿಂದ ಜಿಆರ್‌ಬಿಸಿ, ಜಿಎಲ್‌ಬಿಸಿ, ಸಿಬಿಸಿ ಕಾಲುವೆಗಳಿಗೆ ನೀರು ಬಿಡಲು ಕೆಎಮ್‌ಎಫ್ ಅಧ್ಯಕ್ಷ ಬಾಲಚ ಮೂಡಲಗಿ: ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ತಕ್ಷಣವೇ ಘಟಪ್ರಭಾ ಎಡದಂಡೆ, ಘಟಪ್ರಭಾ ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗುರುವಾರ ಸಂಜೆ ಪ್ರತಿಕಾ ಹೇಳಿಕೆಯನ್ನು ನೀಡಿರುವ ಅವರು, …
Read More »ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : 2021ರಲ್ಲಿ ಬೆಳಗಾವಿ ಜಿ.ಪಂ ಅಧ್ಯಕ್ಷೆ ಬರೆದ ಪತ್ರ ಔಟ್
ಬೆಳಗಾವಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬರೆದಿದ್ದ ಪೊಲೀಸರಿಗೆ ಲಭ್ಯವಾಗಿದೆ. 2021 ರ ಫೆಬ್ರವರಿ 15 ರಂದು ಆಗಿನ ಬೆಳಗಾವಿ ಜಿ.ಪಂ ಅಧ್ಯಕ್ಷೆ ಆಶಾ ಐಹೋಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ …
Read More »ನಿರ್ಮಾಣದ ಹಂತದ ಸೇತುವೆಯಿಂದ ಜಾರಿದ ಬೈಕ್- ಮೂವರು ಯುವಕರು ಸ್ಥಳದಲ್ಲೇ ಸಾವು
ಬಳ್ಳಾರಿ: ನಿರ್ಮಾಣ ಹಂತದ ಸೇತುವೆ ಮೇಲೆ ಬೈಕ್ ಸ್ಕಿಡ್ ಆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಂಧ್ರದ ಗಡಿಭಾಗ ಚಿಂತಗುಂಟ ಬಳಿ ನಡೆದಿದೆ. ಗಾದಿಲಿಂಗ, ಕಾಡಸಿದ್ದ ಹಾಗೂ ಸಿರಿಗೇರಿ ಕ್ರಾಸ್‌ನ ಚಂದ್ರಶೇಖರ ಎಂಬುವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದ್ದು ಈ ವೇಳೆ ದೇವರ ಕಾರ್ಯಕ್ಕೆಂದು ಆಂಧ್ರ ಪ್ರದೇಶದಕ್ಕೆ ತೆರಳುತ್ತಿದ್ದ ಮೂವರು ಸೇತುವೆ ಮೇಲಿಂದ ಕೆಳಕ್ಕೆ ಉರುಳಿಬಿದ್ದು ಸಾವನ್ನಪ್ಪಿದ್ದಾರೆ. ಆಂಧ್ರ ಪ್ರದೇಶದ ಹಾಲಹರವಿ …
Read More »
Laxmi News 24×7