Breaking News

Uncategorized

ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ : ಮಿಶ್ರತಳಿ ಹಸು, ಎಮ್ಮೆ ಖರೀದಿಗೆ 20 ಸಾವಿರ ರೂ. ಸಬ್ಸಿಡಿ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಹೈನುಗಾರಿಕೆ ಮಾಡುವ ರೈತರ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಮಿಶ್ರತಳಿ ಹಸು, ಎಮ್ಮೆ ಖರೀದಿಗೆ 20 ಸಾವಿರ ರೂ. ಸಬ್ಸಿಡಿ ನೀಡಲಿದೆ. ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 20665 ರೂಪಾಯಿ ಸಹಾಯಧನ, ಸಾಮಾನ್ಯ ವರ್ಗದ ರೈತರಿಗೆ 15,500 ರೂಪಾಯಿ ಸಹಾಯಧನ ನೀಡಲಾಗುತ್ತದೆ. ಸಹಾಯಧನದ ಜೊತೆಗೆ ಸಾಲಸೌಲಭ್ಯ ನೀಡಲಿದೆ. ಪರಿಶಿಷ್ಟ …

Read More »

ದೇಶದಲ್ಲಿ ಕೊರೊನಾ 4 ನೇ ಅಲೆ ಭೀತಿ : ಇಂದು ಸಿಎಂಗಳ ಜೊತೆಗೆ ಪ್ರಧಾನಿ ಮೋದಿ `ಕೋವಿಡ್ ಕಂಟ್ರೋಲ್ ಮೀಟಿಂಗ್’

ನವದೆಹಲಿ: ಕೋವಿಡ್ ಪ್ರಕರಣಗಳು ( Covid-19 cases ) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ಮಹತ್ವದ ಕೊರೋನಾ ನಿಯಂತ್ರಣ ಸಭೆಯನ್ನು ನಡೆಸಲಿದ್ದಾರೆ.   ಈ ಬಗ್ಗೆ ಪ್ರಧಾನಿ ಕಚೇರಿ ಮೂಲಗಳಿಂದ ಖಚಿತ ಮಾಹಿತಿ ನೀಡಿದ್ದು, ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ …

Read More »

ಪಿಎಸ್​ಐ ನೇಮಕಾತಿ ಹಗರಣ: ಅಕ್ರಮಕ್ಕೆ ಬಳಸ್ತಿದ್ದ ಬ್ಲೂಟೂತ್​ ಡಿವೈಸ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗ

ಕಲಬುರಗಿ: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟೂ ಆಳ ಎಂಬಂತಾಗಿದೆ. ಈ ಪ್ರಕರಣದ ಹಲವರ ಕೈವಾಡವಿದ್ದು, ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಇದೇ ಪ್ರಕರಣದಕ್ಕೆ ಸಂಬಂಧಿಸಿದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ, ಪರೀಕ್ಷೆಯಲ್ಲಿ ಅಕ್ರಮ ಎಸಗಲು ಅಭ್ಯರ್ಥಿಗಳು ಬಳಸುತ್ತಿದ್ದ ಬ್ಲೂಟೂತ್ ಅನ್ನು ಒಡಿಶಾದಲ್ಲಿ ಖರೀದಿಸಲಾಗಿದೆ ಎಂಬ ಸಂಗತಿ ಬಯಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದವರೆಲ್ಲ ಬ್ಲೂಟೂತ್ ಬಳಸಿ ಪರೀಕ್ಷೆ ಎದುರಿಸಿರುವುದು ತನಿಖೆಯಿಂದ ಬಯಲಾಗುತ್ತಿದೆ. ಅಭ್ಯರ್ಥಿಗಳು ಬಳಸಿದ ಬ್ಲೂಟೂತ್​ಗಳನ್ನು ಓಡಿಶಾದಲ್ಲಿ ಖರೀದಿ ಮಾಡಲಾಗಿದೆ. …

Read More »

ಇಫ್ತಾರ್‌ ಕೂಟ ಟೋಪಿ ಹಾಕಲು ನಿರಾಕರಿಸಿದ ಸಂಸದ ಪ್ರಜ್ವಲ್‌ ರೇವಣ್ಣ

ಹುಣಸೂರು: ಹುಣಸೂರಿನಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದ ಸಂಸದ ಪ್ರಜ್ವಲ್‌ ರೇವಣ್ಣ ಟೋಪಿ ಹಾಕಿಸಿಕೊಳ್ಳಲು ಹಿಂದೇಟು ಹಾಕಿದರು. ಕೆಲ ಮುಸ್ಲಿಂ ಯುವಕರು ಟೋಪಿ ಹಾಕಲು ಮುಂದಾದಾಗ ನಯವಾಗಿಯೇ ಕೈಯಲ್ಲಿ ಹಿಡಿದುಕೊಂಡು ಮುಂದೆ ನಡೆದರು.   ಈ ವೇಳೆ ಸಾಮೂಹಿಕ ಉಪಾಹಾರ ಸೇವಿಸುವಂತೆ ಮಾಡಿದ ಮನವಿಗೆ ಎಲ್ಲರ ಜತೆಯಲ್ಲಿ ಊಟಕ್ಕೆ ಕುಳಿತ ಪ್ರಜ್ವಲ್‌ ರೇವಣ್ಣ, ಅನಂತರ ಸಿಹಿ ತಿಂದು ಊಟ ನಿರಾಕರಿಸಿದರು.

Read More »

“ನಾನು ಏನು ಆಗಲ್ಲ ಅಂದ್ಮೇಲೆ ತಕರಾರು ಯಾಕೆ” : ಸಿಎಂ ಎದುರು ಶಾಸಕ ಯತ್ನಾಳ್‌ ಅಸಮಾಧಾನ

ವಿಜಯಪುರ : ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದೆಯೇ ವೇದಿಕೆಯಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿದ ಘಟನೆ ನಡೆದಿದೆ. ಸಧ್ಯ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕ ಯತ್ನಾಳ್‌, ‘ಮುಂದಿನ ಬಾರಿಯೂ ಬೊಮ್ಮಾಯಿಯವರೇ ಸಿಎಂ ಆಗ್ತಾರೆ. ಬೊಮ್ಮಾಯಿ ಮತ್ತೆ ಸಿಎಂ ಆದ್ರೆ ನಮಗೇನು ತಕರಾರು ಇಲ್ಲ’ ಎಂದರು. ಆಗ ಯತ್ನಾಳ್‌ ಮಾತಿಗೆ ಸಿಎಂ ಬೊಮ್ಮಾಯಿ ಕೂಡ ಕೈಮುಗಿದ ನಸು ನಕ್ಕರು. ಮಾತು ಮುಂದುವರೆಸಿದ ಶಾಸಕ, ನಮ್ಮದೇನಾದರೂ ತಕರಾರು …

Read More »

ಶೌಚಾಲಯದಲ್ಲಿ ಸಮೋಸಾ ಹಾಗೂ ಇತರ ಖಾದ್ಯ ತಯಾರಿಕೆ – 30 ವರ್ಷಗಳ ಬಳಿಕ ರೆಸ್ಟೊರೆಂಟ್ ಬಂದ್

ಬರೋಬ್ಬರಿ 30 ವರ್ಷಗಳಿಂದ ಶೌಚಾಲಯದಲ್ಲಿ ಸಮೋಸಾ ಹಾಗೂ ಇತರ ಖಾದ್ಯಗಳನ್ನು ತಯಾರಿಸುತ್ತಿದ್ದ ಉಪಹಾರ ಗೃಹವನ್ನು ಪತ್ತೆ ಹಚ್ಚಿ, ಮುಚ್ಚಿಸಿರುವ ಘಟನೆ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆದಿದೆ. ಕೇಳಿದಂತೆಯೇ ವಾಕರಿಕೆ ಬರುವಂತಹ ವಿಚಿತ್ರ ಆಹಾರ ಸಂಸ್ಕೃತಿಯನ್ನು ಅನುಸರಿಸಿಕೊಂಡಿದ್ದ ಸೌದಿ ಅರೇಬಿಯಾದ ಉಪಹಾರ ಗೃಹದ ಬಗ್ಗೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಇದೀಗ ಬರೋಬ್ಬರಿ 3 ದಶಕಗಳ ಬಳಿಕ ಅದನ್ನು ಮುಚ್ಚಿಸಲಾಗಿದೆ. ಉಪಹಾರ ಗೃಹದ ಟಾಯ್ಲೆಟ್‌ನಲ್ಲಿ ತಿಂಡಿ ಹಾಗೂ ಊಟವನ್ನು …

Read More »

ಪಿಎಸ್‌ಐ ಕೇಸ್ – ಮತ್ತೊಬ್ಬ ಆರೋಪಿ ಅರೆಸ್ಟ್, 40 ಲಕ್ಷ ಡೀಲಿಂಗ್?

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿರುವ ಬಗ್ಗೆ ದಿನೇ ದಿನೇ ರೋಚಕ ಸಂಗತಿ ಹೊರಬರುತ್ತಿದೆ. ಮಂಗಳವಾರ ಸಿಐಡಿ ತಂಡ ಪಿಎಸ್‌ಐ ಅಕ್ರಮಕ್ಕೆ ಸಂಬಂಧಪಟ್ಟ ಆರೋಪಿ ಎನ್ ಸುನೀಲ್ ಕುಮಾರ್‌ನನ್ನು ಬಂಧಿಸಿದ್ದಾರೆ. ಒಟ್ಟಾರೆಯಾಗಿ ಪಿಎಸ್‌ಐ ನೇಮಕಾತಿ ಅಕ್ರಮದ ಜಾಡನ್ನು ಬೆನ್ನು ಹಿಡಿದ ಸಿಬಿಐ ತಂಡ ಇಲ್ಲಿಯವರೆಗೆ 16 ಆರೋಪಿಗಳನ್ನು ಬಂಧಿಸಿದ್ದಾರೆ. ಕಲಬುರಗಿ ನಿವಾಸಿಯಾಗಿರುವ ಸುನೀಲ್ ಕುಮಾರ್ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಕೇಂದ್ರ ಸ್ಥಾನವಾದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ …

Read More »

‘6 ವರ್ಷ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಪಿಎಸ್​ಐಗಳು ಆಯ್ಕೆಯಾಗಿದ್ದಾರೆ

ಬೆಂಗಳೂರು: ಪೊಲೀಸ್​ ಸಬ್​ ಇನ್ಸ್​ ಪೆಕ್ಟರ್​ (ಪಿಎಸ್​ಐ -PSI) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಿರುವ ಆರೋಪ ಹೊತ್ತು ಸದ್ಯಕ್ಕೆ ಪರಾರಿಯಾಗಿರುವ ದಿವ್ಯಾ ಹಾಗರಗಿ ಭಾನಗಡಿಗಳಿಗೆ ಕೊನೆ ಮೊದಲು ಇಲ್ಲವೆಂಬಂತಾಗಿದೆ. ಬೇಸಿಗೆಯ ಕಾವಿನಲ್ಲಿ ಒಂದೊಂದಾಗಿ ಹುತ್ತದಿಂದ ಹೊರಬರುವ ಹಾವುಗಳಂತೆ ‘ದಿವ್ಯಾ’ ಕೊಡುಗೆಗಳು ಹೊರಬೀಳುತ್ತಿವೆ. ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಯಾದಗಿರಿಯ ಶ್ರೀನಿವಾಸ ಕಟ್ಟಿ ಎಂಬುವವರು ಇದು ಮತ್ತೊಂದು ‘ದಿವ್ಯ’ ಕೊಡುಗೆ! ಆರು ವರ್ಷದ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 …

Read More »

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಸಿಎಂ ಬೊಮ್ಮಾಯಿ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇಂದು ಜಿಲ್ಲಾ ಪ್ರವಾಸದಲ್ಲಿ, ತಾಳಿಕೋಟೆ ತಾಲೂಕಿನ ಬಂಟನೂರು ಗ್ರಾಮಕ್ಕೆ ಭೇಟಿ ನೀಡಿದರು. ಸಿಎಂ ಕಂಡಂತ ರೈತರು ಆತ್ಮೀಯವಾಗಿ ಬರಮಾಡಿಕೊಂಡದು. ಅಲ್ಲದೇ ರೈತರೊಬ್ಬರು ಜೋಡೆತ್ತುಗಳನ್ನು ಸಿಎಂ ಬೊಮ್ಮಾಯಿಗೆ ಗಿಫ್ಟ್ ಆಗಿ ನೀಡಿದ್ರು. ಹೀಗೆ ನೀಡಿದಂತ ಎತ್ತುಗಳಿಗೆ ಪೂಜಿಸೋ ವೇಳೆಯಲ್ಲಿ ಬೆದರಿದಾಗ ನಡೆದಂತ ಘಟನೆಯಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬೊಮ್ಮಾಯಿ ಪಾರಾಗುವಂತೆ ಆಯ್ತು ಇದೇ ಸಂದರ್ಭದಲ್ಲಿ ಹೊರಗೆ ಗದ್ದಲ ಹೆಚ್ಚಾಗುತ್ತಿದ್ದಂತೆ ಬೆದರಿದಂತ ಎತ್ತೊಂದು, ಮುನ್ನುಗ್ಗಿ, ಸಿಎಂ ಬೊಮ್ಮಾಯಿಗೆ ತಿವಿಯೋದಕ್ಕೆ …

Read More »

ದಿವ್ಯಾ ಹಾಗರಗಿ ಭೇಟಿಯಾಗಿದ್ದು ನಿಜ, ನನಗೂ ನೋಟಿಸ್ ಕೊಡಲಿ: ಡಿ.ಕೆ ಶಿವಕುಮಾರ್

ಬೆಂಗಳೂರು: ಆರೋಪಿ ದಿವ್ಯಾ ಹಾಗರಗಿ ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತಿರುವ ಫೋಟೋ ವೈರಲ್ ಆಗುವುದ್ದಕ್ಕೆ ನನಗೂ ನೋಟಿಸ್ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.   ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ನನಗೂ ನೋಟೀಸ್ ಕೊಡಲಿ, ನನ್ನನ್ನು ವಿಚಾರಣೆಗೆ ಕರೆಯಲಿ ನನಗೂ ಈಗ ಆ ಫೋಟೋ ಬಗ್ಗೆ ಹೇಳಿದ್ರು. ನೂರಾರು ಜನ ಬಂದು ನನ್ನ ಭೇಟಿ ಮಾಡ್ತಾರೆ. ನಾನು ಮಂತ್ರಿಯಾಗಿದ್ದವನು. ಮಂತ್ರಿ ಆಗಿದ್ದಾಗ ದಿವ್ಯಾ ಹಾಗರಗಿ ಯಾವುದೋ ಡೆಲಿಗೇಶನ್ ಕರೆ …

Read More »