Breaking News

Uncategorized

ಕ್ಲೈಮ್ಯಾಕ್ಸ್​ ಹಂತದತ್ತ ಮಹಾರಾಷ್ಟ್ರ ರಾಜಕೀಯ

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇದೀಗ ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿದ್ದು, ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್​​ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಮಹಾರಾಷ್ಟ್ರ ಸರ್ಕಾರಕ್ಕೆ ಬಹುಮತ ಸಾಬೀತು ಮಾಡಲು ಸೂಚನೆ ನೀಡುವಂತೆ ಮನವಿ ಮಾಡಿದ್ದಾಗಿ ವರದಿಯಾಗಿದೆ. ಮಹಾವಿಕಾಸ್ ಆಘಾಡಿ ಮೈತ್ರಿ ಸರ್ಕಾರದಲ್ಲಿ ಬಿರುಕು ಉಂಟಾಗಿರುವ ಬೆನ್ನಲ್ಲೇ ಇಂದು ಬೆಳಗ್ಗೆ ದೆಹಲಿ ಪ್ರವಾಸ ಕೈಗೊಂಡಿದ್ದ ಫಡ್ನವೀಸ್​​, ಗೃಹ ಸಚಿವ ಅಮಿತ್ ಶಾ ಹಾಗೂ …

Read More »

ಪ್ರಿಯಕರನ ಜೊತೆ ಲವ್ವಿಡವ್ವಿ: ಬೆಡ್ ರೂಮಿನಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಕ್ಕೆ ಪತಿಯ ಕೊಲೆ

  ಪ್ರಿಯತಮನ ಜೊತೆ ಲವ್ವಿಡವ್ವಿ ಮಾಡುವಾಗ ಮಹಿಳೆಯೊಬ್ಬಳು ತನ್ನ ಪತಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಬೆಡ್‍ರೂಮಿನಲ್ಲಿ ಸಿಕ್ಕಿಬಿದ್ದ ಘಟನೆ ತುಮಕೂರಿನ ನಗರದ ಶಿರಾಗೇಟ್‍ನ ಹೊಂಬಯ್ಯನ ಪಾಳ್ಯದಲ್ಲಿ ನಡೆದಿದೆ.ವಿದ್ಯಾ ಪತಿಯನ್ನೇ ಕೊಲೆ ಮಾಡಿದ ಪತ್ನಿ. ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾಗೆ ಪಡ್ಡೆ ಹುಡುಗರ ಹುಚ್ಚು ಜೋರಾಗಿತ್ತು ಎನ್ನಲಾಗಿದೆ. ಪತಿ ಇಲ್ಲದ ಸಮಯ ನೋಡಿ ವಿದ್ಯಾ ಯುವಕ ಸತೀಶ್ ಅಲಿಯಾಸ್ ಜಾಕಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಪತಿ ಕೆಲಸಕ್ಕೆಂದು ಮುಂಬೈಗೆ ಹೋದಾಗ …

Read More »

ಸ್ನಾತಕೋತ್ತರ ಮತ್ತು ಕಾನೂನು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

2021-22ನೇ ಸಾಲಿನ ಸ್ನಾತಕೋತ್ತರ  ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್​ವರೆಗೂ ವಿಸ್ತರಣೆಯಾದ ಹಿನ್ನಲೆ ಕೆಎಸ್ಆರ್​ಟಿಸಿ (KSRTC) ನಿಗಮವು ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿದೆ.ಬೆಂಗಳೂರು: 2021-22ನೇ ಸಾಲಿನ ಸ್ನಾತಕೋತ್ತರ ( Post Graduate ) ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್​ವರೆಗೂ ವಿಸ್ತರಣೆಯಾದ ಹಿನ್ನಲೆ ಕೆಎಸ್ಆರ್​ಟಿಸಿ ( KSRTC ) ನಿಗಮವು ವಿದ್ಯಾರ್ಥಿಗಳ ಉಚಿತ ( Free ) ಬಸ್ ಪಾಸ್ ( Bus Pass ) ಅವಧಿಯನ್ನು ವಿಸ್ತರಿಸಿದೆ. ಕಾನೂನು (LAW) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ತರಗತಿ ನವೆಂಬರ್​ವರೆಗೂ ನಡೆಯಲಿದೆ. ಆದರೆ ವಿದ್ಯಾರ್ಥಿಗಳ …

Read More »

ಕನಕದಾಸರ ಚರಿತ್ರೆ ಹಿಂದೆ ಇದ್ದಂತೆಯೇ ಪ್ರಕಟಿಸಬೇಕು: C.M. ಬೊಮ್ಮಾಯಿ

ಬೆಂಗಳೂರು: ‘ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಖಿತ ಸೂಚನೆ ನೀಡಿದ್ದಾರೆ. ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಕನಕದಾಸರ ಜೀವನ ಚರಿತ್ರೆ ಮತ್ತು ವಿವರಗಳನ್ನು ಕಡೆಗಣಿಸಿದೆ ಎಂದು ಸ್ವಾಮೀಜಿ ಹೇಳಿದರು. ಒಂಬತ್ತನೇ ತರಗತಿ ಸಮಾಜ ವಿಜ್ಞಾನದಲ್ಲಿ ಒಂದು ಪುಟದಷ್ಟಿದ್ದ ಕನಕದಾಸರ …

Read More »

ಬಡವರ ಕಲ್ಯಾಣ ಕೇಂದ್ರ ಸರ್ಕಾರದ ಆಶಯ: ಸಚಿವ ಸೋಮ ಪ್ರಕಾಶ

ಬೆಳಗಾವಿ: ಕೇಂದ್ರ ಸರ್ಕಾರವು ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಬಡವರು ಹಾಗೂ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದರಿಂದ ದೇಶವು ಆರ್ಥಿಕ ಪ್ರಾಬಲ್ಯದತ್ತ ದಾಪುಗಾಲು ಹಾಕುತ್ತಿದೆ ಎಂದು ಕೇಂದ್ರ‌ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ರಾಜ್ಯ ಸಚಿವ ಸೋಮ‌ ಪ್ರಕಾಶ ಹೇಳಿದರು.   ಸರ್ಕಾರ ಎಂಟು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಆಯೋಜಿಸಿದ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ …

Read More »

ಇನ್ಮುಂದೆ ಸುಖಾಸುಮ್ಮನೆ ವಾಹನ ನಿಲ್ಲಿಸಿ ದಾಖಲೆ ಪರಿಶೀಲಿಸುವಂತಿಲ್ಲ

ರಸ್ತೆಯಲ್ಲಿ ಹೋಗುವ ವೇಳೆ ಟ್ರಾಫಿಕ್‌ ಪೊಲೀಸರು ಏಕಾಏಕಿ ಕೈ ಅಡ್ಡ ಹಾಕಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿತ್ತಲ್ಲದೇ ಸವಾರರೂ ಸಹ ಕಿರಿಕಿರಿ ಅನುಭವಿಸುವಂತಾಗಿತ್ತು. ತುರ್ತಾಗಿ ಎಲ್ಲದರೂ ಹೋಗಬೇಕಿದ್ದವರು ತಮ್ಮ ವಾಹನ ಅಡ್ಡಗಟ್ಟಿದ ವೇಳೆ ದಾಖಲೆಗಳು ಸರಿಯಾಗಿದ್ದರೂ ಸಹ ತಮ್ಮ ಸರದಿ ಬರುವವರೆಗೂ ಕಾಯಬೇಕಾಗಿತ್ತು.     ಇದರಿಂದ ರೋಸತ್ತು ಹೋಗಿದ್ದ ಸಾರ್ವಜನಿಕರು, ಉನ್ನತಾಧಿಕಾರಿಗಳಿಗೆ ಪದೇ ಪದೇ ದೂರು ಸಲ್ಲಿಸುತ್ತಿದ್ದರು. ಇದೀಗ ಈ ಸಮಸ್ಯೆಗೆ ಅಂತ್ಯ ಹಾಡಲು ಡಿಜಿ …

Read More »

ಮೋದಿ@ 20 ಕೃತಿಯನ್ನು ಲೋಕಾರ್ಪಣೆ ಮಾಡಿದ C.M. ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಮೋದಿ@ 20 ಕೃತಿಯನ್ನು ಲೋಕಾರ್ಪಣೆ ಮಾಡಿದರು.   ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಲೋಗನಾಥನ್ ಮುರುಗನ್, ಸಚಿವರಾದ ಸೋಮಣ್ಣ, ಬಿ ಸಿ ಪಾಟೀಲ್, ಅಶ್ವಥನಾರಾಯಣ, ಸುನಿಲ್ ಕುಮಾರ್ , ಶಾಸಕ ಉದಯ್ ಗರುಡಾಚಾರ್, ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಡಾ. ಸಿ. ಸೋಮಶೇಖರ, …

Read More »

ನಾನು ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಬೇಕು: ಸಚಿವ ಉಮೇಶ ಕತ್ತಿ

ನಾನು ಹಿರಿಯ ಶಾಸಕ.ತಾಲ್ಲೂಕಿನ ಪೋಲಕಪಳ್ಳಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2024ರ ನಂತರ ದೇಶದಲ್ಲಿ ರಾಜ್ಯಗಳ ಸಂಖ್ಯೆ ಹೆಚ್ಚಾಗಲಿವೆ. ಉತ್ತರ ಪ್ರದೇಶ 4, ಮಹಾರಾಷ್ಟ್ರ 3, ಕರ್ನಾಟಕ 2 ರಾಜ್ಯಗಳಾಗಲಿವೆ. ಉತ್ತರ ಕರ್ನಾಟಕ ರಾಜ್ಯದ ಹೇಳಿಕೆಗೆ ನಾನು ಬದ್ಧ. ಆದರೆ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವೆ’ ಎಂದು ಬಯಕೆ ವ್ಯಕ್ತಪಡಿಸಿದರು.   ‘ಕುಂಚಾವರಂ ವನ್ಯಜೀವಿ ಧಾಮದಲ್ಲಿರುವ ಶೇರಿಭಿಕನಳ್ಳಿ ಗ್ರಾಮವನ್ನು ಮುಂದಿನ 6 …

Read More »

ತಕ್ಷಣವೇ ಮೇಯರ್-ಉಪಮೇಯರ್ ಚುನಾವಣೆ ನಡೆಸುವಂತೆ 15ಕ್ಕೂ ಹೆಚ್ಚು ನಗರಸೇವಕರ ಆಗ್ರಹ

ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 8 ತಿಂಗಳು ಕಳೆಯುತ್ತಾ ಬಂದ್ರೂ ಕೂಡ ಇನ್ನು ಮೇಯರ್-ಉಪಮೇಯರ್ ಆಯ್ಕೆಯಾಗಿಲ್ಲ. ಇದರಿಂದ ವಾರ್ಡಗಳಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ತಕ್ಷಣವೇ ಮೇಯರ್-ಉಪಮೇಯರ್ ಚುನಾವಣೆ ನಡೆಸುವಂತೆ 15ಕ್ಕೂ ಹೆಚ್ಚು ನಗರಸೇವಕರು ಆಗ್ರಹಿಸಿದ್ದಾರೆ. ಹೌದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರಸೇವಕರಾಗಿ ಆಯ್ಕೆಯಾಗಿ 8 ತಿಂಗಳು ಆಗುತ್ತಾ ಬಂದಿದೆ. ಆದರೂ ಕೂಡ ಮೇಯರ್-ಉಪಮೇಯರ್ ಚುನಾವಣೆ ನಡೆದಿಲ್ಲ. ನಗರಸೇವಕರಾಗಿ ಆಯ್ಕೆಯಾದರೂ ಇವರಿಗೆ ಯಾವುದೇ ರೀತಿ ಕಾನೂನು ಬದ್ಧ ಅಧಿಕಾರ …

Read More »

ಡಿಸಿ ಕಚೇರಿ ಮುಂಭಾಗ ಎಂಇಎಸ್​ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳಗಾವಿ: ಸರ್ಕಾರಿ ದಾಖಲಾತಿ ಪತ್ರವನ್ನು ಮರಾಠಿ ಭಾಷೆಯಲ್ಲಿ ನೀಡಬೇಕೆಂದು ಒತ್ತಾಯಿಸಿ ಎಂಇಎಸ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ನಗರದ ಸರ್ದಾರ್ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಪ್ರದರ್ಶಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಎಂಇಎಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಈ ವೇಳೆ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ …

Read More »