ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿಯಿಂದ ಬಂಧನಕ್ಕೀಡಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಮಂಪರು ಪರೀಕ್ಷೆ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪಿಎಸ್‌ಐ ಅಕ್ರಮದಲ್ಲಿ ನೇಮಕಾತಿ ವಿಭಾಗದ ಎ.ಡಿ.ಜಿ.ಪಿ ಯಾಗಿದ್ದ ಅಮೃತ್ ಪೌಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಬಂಧನವಾಗಿದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಬಗ್ಗೆ ಬಯಲಾಗಲಿದೆ. ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗುತ್ತದೆ. “ಉಪ್ಪು …
Read More »ಸುಟ್ಟ ಸ್ಥಿತಿಯಲ್ಲಿ ಕಾರಿನಲ್ಲಿ ಮೃತದೇಹ ಪತ್ತೆ; ಸತ್ತ ಮಹಿಳೆ ಬದುಕಿರುವುದಾದರೂ ಹೇಗೆ?
ಉಡುಪಿ: ಬೈಂದೂರು ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತಪಟ್ಟಿದ್ದಾರೆ ಎನ್ನಲಾಗಿದ್ದ ಮಹಿಳೆ ಬದುಕುಳಿದಿರುವುದು ಗೊತ್ತಾಗಿದ್ದು, ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಯಾರದು ಎಂಬುದು ಯಕ್ಷಪ್ರಶ್ನೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಬಳಿ ಒತ್ತಿಣೆಯ ಹೆನ್ ಬೇರು ಎಂಬಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಹಾಗೂ ಕಾರಿನೊಳಗೆ ಮೃತದೇಹ ಪತ್ತೆಯಾಗಿತ್ತು. ಕಾರಿನ ಹಿಂಬದಿ ಸೀಟಿನಲ್ಲಿ …
Read More »2000 ರೂ ಲಂಚ: ಎಸಿಬಿ ಬಲೆಗೆ ಬಿದ್ದ ಎಫ್ ಡಿಸಿ
ಬೆಳಗಾವಿ – ಹೆಚ್ಚುವರಿ ವೇತನ ಬಡ್ತಿ ಆದೇಶಕ್ಕಾಗಿ 2 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕನೋರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ. ದಿನಾಂಕ: 14.07.2022 ರಂದು ಫಿಲ್ಯಾದಿ ಸಂತೊಷ ಚೌದರಿ (ಸಾಃ ಮನೆ ನಂ.830, ಗುನ್ಯಾಳಕರ ಕಲ್ಯಾಣ ಮಂಟಪ ರೊಡ್, ರಹೀಮ್ ನಗರ, ವಿಜಯಪೂರ) ಇವರು ಎಸಿಬಿ ಪೊಲೀಸ್ ಠಾಣೆ ಬೆಳಗಾವಿಗೆ ಹಾಜರಾಗಿ ತಮ್ಮ ಪಿರ್ಯ್ಯಾದಿ ನೀಡಿದ್ದರಲ್ಲಿ, ಫಿರಾದಿಯ ತಾಯಿ ಕೆ.ಎಸ್.ಕುಳಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, …
Read More »ಅಂಗಡಿಗಳಲ್ಲಿ ಕಳ್ಳತನ ನಡೆಸುತ್ತಿದ್ದ ಅಂತಾರಾಜ್ಯ ಇರಾನಿ ಗ್ಯಾಂಗ್ ನ ಇಬ್ಬರ ಬಂಧನ
ಬೆಳಗಾವಿ: ನಾನಾ ರಾಜ್ಯಗಳಲ್ಲಿ ಕಿರಾಣಿ ಹಾಗೂ ಆಭರಣ ಅಂಗಡಿಗಳಲ್ಲಿ ಕಳುವು ನಡೆಸುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್ ನ ಇಬ್ಬರನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9,58,000 ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳು ಹುಕ್ಕೇರಿ ಪಟ್ಟಣದ ವಿದ್ಯಾ ಜ್ಯುವೆಲರಿ ಶಾಪ್‌ನಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಅಂಗಡಿ ಮಾಲೀಕರು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. …
Read More »ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ; ಅಂಗಾಂಗ ದಾನ ಮಾಡಿ ಮೂವರ ಬಾಳಿಗೆ ಬೆಳಕಾದ ಕಮಲವ್ವ
ಬೆಳಗಾವಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಎತ್ತಿನಗುಡ್ಡ ಗ್ರಾಮದ 48 ವರ್ಷದ ಕಮಲವ್ವ ಕೆಲಗೇರಿ ಅವರು ತಮ್ಮ ಅಂಗಾಂಗಳನ್ನು ದಾನ ಮಾಡಿ ಮೂವರ ಜೀವ ಉಳಿಸಿ ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ. ಕಮಲವ್ವ ಅವರ ಒಂದು ಕಿಡ್ನಿಯನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. …
Read More »ಸಮೀಕ್ಷಾ ವರದಿಗೆ ಬೆಚ್ಚಿದ ಬಿಜೆಪಿ: ಎರಡು ದಿನಗಳ ಕಾಲ ರೆಸಾರ್ಟ್ ನಲ್ಲಿ ಎಲೆಕ್ಷನ್ ಮೀಟಿಂಗ್
ಬೆಂಗಳೂರು : ಬಿಜೆಪಿ ಶತಾಯ ಗತಾಯ 2023ಕ್ಕೆ ರಾಜ್ಯದ ಗದ್ದುಗೆ ಮೇಲೆ ಮತ್ತೊಮ್ಮೆ ಕೇಸರಿ ಧ್ವಜ ಹಾರಿಸುವ ಕನಸಿನಲ್ಲಿದೆ. ಇದಕ್ಕಾಗಿ ಶತಾಯ ಗತಾಯ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಏರುವ ಪ್ರಯತ್ನವನ್ನು ನಡೆಸಿದೆ. ಈ ಮಧ್ಯೆ ಚುನಾವಣೆಗೆ ಇನ್ನೂ 11 ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಎಲೆಕ್ಷನ್ ಮಾಸ್ಟರ್ ಪ್ಲ್ಯಾನ್ (Bjp Resort Meeting ) ಸಿದ್ಧಪಡಿಸಲು ಮುಂದಾಗಿದ್ದು, ಇದಕ್ಕಾಗಿ ರಾಜ್ಯ ಚುನಾವಣಾ ಉಸ್ತುವಾರಿ ಅರುಣ ಸಿಂಗ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲು …
Read More »ಒಂದೇ ದಿನ 2 ಬಾರಿ ತಾಯಿ ಮೇಲೆ ಅತ್ಯಾಚಾರ ಎಸಗಿದ ಪಾಪಿ ಮಗ!
ಮದ್ಯವ್ಯಸನಿ ಯುವಕನೊಬ್ಬ ಜನ್ಮಕೊಟ್ಟ ತಾಯಿ ಮೇಲೆ ಒಂದೇ ದಿನ ಎರಡು ಬಾರಿ ಅತ್ಯಾಚಾರ ಎಸಗಿದ ಹೇಯ ಘಟನೆ ಪಟ್ಟಣದಲ್ಲಿ ಸಂಭವಿಸಿದೆ. ಶನಿವಾರ (ಜು.9) ಎಂದಿನಂತೆ ರಾತ್ರಿಯೂ ಮದ್ಯ ಸೇವಿಸಿ ಮನೆಗೆ ರೋಕಿ ಜಾನ್ ಪುಡ್ತೋಳ ಬಂದಿದ್ದ. ಅಂದು ತಡರಾತ್ರಿ ನಿದ್ರೆ ಮಂಪರಿನಲ್ಲಿದ್ದ ತಾಯಿಯನ್ನು ಎಬ್ಬಿಸಿದ ಮಗ, ಏನೋ ಮಾತಾಡಬೇಕು ಎಂದು ಸೋಫಾ ಬಳಿ ಕರೆದು ಬಲಾತ್ಕಾರ ಮಾಡಿದ್ದಾನೆ. ಈ ಘಟನೆಯಿಂದ ಆಘಾತಕ್ಕೀಡಾದ ತಾಯಿ, ಕಣ್ಣೀರು ಹಾಕುತ್ತಲೇ ಕತ್ತಲಲ್ಲಿ ಮನೆಯ ಹೊರಗೆ …
Read More »ಬೈಲಹೊಂಗಲ ಪಟ್ಟಣದಲ್ಲಿ ದುಷ್ಕರ್ಮಿಗಳಿಂದ ಚಿತ್ರನಟ ಶಿವರಂಜನ್ ಮೇಲೆ ಫೈರಿಂಗ್
ಬೆಳಗಾವಿ : ಬೈಲಹೊಂಗಲ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಚಿತ್ರ ನಟ ಶಿವರಂಜನ್ ಬೋಳಣ್ಣವರ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ್ದು, ಅದೃಷ್ಟವಶಾತ್ ಯಾವುದೇ ಗುಂಡು ತಗುಲಿಲ್ಲ. ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಶಿವರಂಜನ್ ಅವರಿಗೆ ಯಾವುದೇ ಗುಂಡು ತಗುಲಿಲ್ಲ. ಶಿವರಂಜನ್ ಅವರ ಸಹೋದರ ಸಂಬಂಧಿ ಗುಂಡು ಹಾರಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇನ್ನುವರೆಗೆ ಯಾವುದೇ ನಿಖರ ಮಾಹಿತಿ ತಿಳಿದು ಬಂದಿಲ್ಲ. ಗುಂಡು ಹಾರಿಸಿದವರ ಬಗ್ಗೆ …
Read More »ಗೋಕಾಕದಲ್ಲಿಂದು ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ
*ಗೋಕಾಕ*: ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, …
Read More »ಸಂಪಾದಿಸಲು ಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು: ಸಂಪಾದಿಸಲು ಸಶಕ್ತನಾದ ಪತಿಗೆ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಹೇಳಿದೆ. ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ, ಜೆ.ಎಂ. ಖಾಜಿ ಅವರಿದ್ದ ಪೀಠ ಈ ಕುರಿತಾಗಿ ಆದೇಶ ನೀಡಿದೆ. ಪತ್ನಿಯಿಂದ ಶಾಶ್ವತ ಜೀವನಾಂಶ ನೀಡಬೇಕೆಂದು ಪತಿ ಕೋರಿದ್ದರು. 1994 ರಿಂದಲೂ ಪತಿ, ಪತ್ನಿ ಬೇರೆಯಾಗಿ ವಾಸಿಸುತ್ತಿದ್ದರು. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಜೀವನಾಂಶ ಕೋರಿದ್ದರು. ಕೆಲಸ ಬಿಟ್ಟಿರುವುದಾಗಿ …
Read More »