ಮನ್ನಿಕೇರಿ ಪೆಟ್ರೋಲಿಯಂದಲ್ಲಿ ಗ್ರಾಹಕರಿಗೆ ಬಂಪರ್ ಬಹುಮಾನ! ಮೂಡಲಗಿ : ನಾಗನೂರ ಪಟ್ಟಣದಲ್ಲಿ ಮನ್ನಿಕೇರಿ ಪೆಟ್ರೋಲಿಯಂದಲ್ಲಿ ಗ್ರಾಹಕರಿಗೆ ಬಂಪರ್ ಬಹುಮಾನ ಸಿಕ್ಕಿದೆ ಇಲ್ಲಿ ಪೆಟ್ರೋಲ್ ಹಾಕಿಸಿದ ಏಳು ಗ್ರಾಹಕರಿಗೆ ಬಹುಮಾನ ಪಡೆದ್ದು ಕಾರ್ಯಕ್ರಮವನ್ನು ಯುವ ನಾಯಕಿ ಪ್ರೀಯಾಂಕ ಜಾರಕಿಹೊಳಿ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಉದ್ಘಾಟಿಸಿದರು. ಗ್ರಾಹಕರಿಗೆ ಒಂದು ಕಾರು, ಬೈಕ್, ಸೈಕಲ್, ಫ್ರೀಜ್ ಮಿಕ್ಸರ್ ಸೇರಿದಂತೆ ಇನ್ನೂ ಅನೇಕ ಆಕರ್ಷಕ ಬಹುಮಾನಗಳನ್ನು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ …
Read More »ನಾಳೆ ದ್ರೌಪದಿ ಮುರ್ಮು ಪ್ರಮಾಣ ವಚನ; 21 ಗನ್ ಸೆಲ್ಯೂಟ್
ನವದೆಹಲಿ: ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ನಾಳೆ (ಜುಲೈ 25 )ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಬೆಳಗ್ಗೆ 10.15ಕ್ಕೆ ಸಮಾರಂಭ ನಡೆಯಲಿದ್ದು, ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರಿಗೆ ರಾಷ್ಟ್ರಪತಿಗಳ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. 21 ಗನ್ ಸೆಲ್ಯೂಟ್ ನಂತರ ಪ್ರಮಾಣ ವಚನ ಸ್ವೀಕರಿಸಿ, ರಾಷ್ಟ್ರಪತಿ ಭಾಷಣ ಮಾಡಲಿದ್ದಾರೆ. ಸಮಾರಂಭದ ಮೊದಲು, …
Read More »ಒಂದೇ ರಾತ್ರಿಯಲ್ಲಿ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ.
ಒಂದೇ ರಾತ್ರಿಯಲ್ಲಿ ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಸಶಸ್ತ್ರ ಮೀಸಲು ಉಪನಿರೀಕ್ಷಕ ಸುರೇಶ ಆರ್. ತಹಶೀಲ್ದಾರ್ ಜಠರದ ತೊಂದರೆಯಿಂದ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದು ಸಶಸ್ತ್ರ ಮುಖ್ಯ ಪೇದೆ ದುಂಡಪ್ಪ ಕೆ. ಮಗ್ದೂಮ್ ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಬ್ಬರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
Read More »ಬೆಳಗಾವಿ ಮೂಲದ ಯುವತಿ ಪುತ್ತೂರಿನ ಪೊಲೀಸರಿಗೆ ಅತಿತಿ
ಪುತ್ತೂರು : ಬೆಳಗಾವಿ ಮೂಲದ ಯುವತಿ ಪುತ್ತೂರಿನ ಸಂಸ್ಥೆಯೊಂದಕ್ಕೆ ಕೆಲಸ ಅರಸಿಕೊಂಡು ಬಂದ ವೇಳೆ ಅನ್ಯ ಧರ್ಮದ ವ್ಯಕ್ತಿಯ ಜತೆಗಿರುವುದನ್ನು ಗಮನಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಜು.21 ರಂದು ಮಂಜಲ್ಪಡ್ಪು ಬಳಿ ಸಂಭವಿಸಿದೆ. ಬೆಳಗಾವಿಯ ಗಾನಪುರ ಮೂಲದ ಹಿಂದೂ ಯುವತಿ ಮಂಗಳೂರು ಫಿಶ್ ಕಂಪೆನಿಯಲ್ಲಿ ಕೆಲಸಕ್ಕಿದ್ದು ಅಲ್ಲಿಂದ ಪುತ್ತೂರು ಮಂಜಲ್ಪಡ್ಪುವಿನಲ್ಲಿರುವ ಸಂಸ್ಥೆಯಲ್ಲಿ ಕೆಲಸಕ್ಕೆಂದು ಬಂದಿದ್ದರು. ಈ ವೇಳೆ ಮುಕ್ವೆಯ ಅನ್ಯ ಧರ್ಮದ ವ್ಯಕ್ತಿ ಆಕೆಗೆ …
Read More »ಸ್ನಾನ ಮಾಡುವ ವಿಡಿಯೋ ತೆಗೆದು ಯುವಕನ ಬ್ಲ್ಯಾಕ ಮೇಲ್
ಮೈಸೂರು: ತಾನು ಸ್ನಾನ ಮಾಡುವ ವಿಡಿಯೋ ತೆಗೆದು ಯುವಕನೋರ್ವ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಈ ಯುವಕನನ್ನು ಬಂಧಿಸುವಂತೆ ನೊಂದ ಮಹಿಳೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ನಗರದ ನಿವಾಸಿಯಾದ ಈ ಮಹಿಳೆಯು MEDIA ಜೊತೆ ಮಾತನಾಡಿ, ನಾನು ಸ್ನಾನ ಮಾಡುವ ವಿಡಿಯೋವನ್ನು ಪ್ರಮೋದ್ ಎಂಬ ಯುವಕ ತೆಗೆದಿದ್ದಾನೆ. ಕಳೆದ ಒಂದೂವರೆ ವರ್ಷದಿಂದ ನನ್ನನ್ನು ಎಲ್ಲ ರೀತಿಯಲ್ಲೂ ಬ್ಲ್ಯಾಕ್ಮೇಲ್ ಮಾಡಿದ್ದ. ಈ ವಿಚಾರ ನನ್ನ ಗಂಡನಿಗೆ …
Read More »ಆಂಬುಲೆನ್ಸ್ ಚಾಲಕನ ವೇಗ, ಟೋಲ್ ಸಿಬ್ಬಂದಿಯ ಅಜಾಗರುಕತೆಗೆ ಬಿತ್ತು ಒಂದೇ ಕುಟುಂಬದ 4 ಹೆಣ
ಉಡುಪಿ, ಜುಲೈ 20: ಜಿಲ್ಲೆಗೆ ಬುಧವಾರ ಕರಾಳ ಬುಧವಾರವಾಗಿ ಮಾರ್ಪಾಟಾಗಿದೆ. ಬೆಳಗ್ಗಿನ ವೇಳೆಗೆ ಚಾಕಲೇಟ್ ನಿಂದ ಉಸಿರುಗಟ್ಟಿ ಮಗು ಸಾವನ್ನಪ್ಪಿದರೆ ಸಂಜೆಯ ವೇಳೆಗೆ ಆಂಬುಲೆನ್ಸ್ ಒಂದು ಭೀಕರವಾಗಿ ಅಫಘಾತವಾಗಿ ಒಂದೇ ಕುಟುಂಬದ ನಾಲ್ವರು ಮೃತರಾಗಿದ್ದಾರೆ. ಅಂಬುಲೆನ್ಸ್ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಎಂತವರ ಹೃದಯವೂ ನಡುಗಿಸುವಂತಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ವೇಗವಾಗಿ ಬಂದ ಅಂಬುಲೆನ್ಸ್ ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದು ಭೀಕರ …
Read More »110 ವರ್ಷದ ಸಾವಳಗಿಯ ಬಾಳವ್ವ ಅಜ್ಜಿ ವಿಧಿವಶ:
110 ವರ್ಷ ಸಾರ್ಥಕ ಜೀವನ ನಡೆಸಿ ಇಹಲೋಕ ತ್ಯಜಿಸಿದ ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದ ಅಜ್ಜಿಯ ಅಂತ್ಯಕ್ರಿಯೆಯನ್ನು ಸುತ್ತ ನಾಲ್ಕೂರಿನ ಜನರು, ಬಂಧು-ಬಾಂಧವರು ಸೇರಿಕೊಂಡು ಅದ್ಧೂರಿಯಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಹೌದು 110 ವರ್ಷದ ಬಾಳವ್ವಾ ಅಜ್ಜಿ ಬುಧವಾರ ಸಾವಳಗಿ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಸಾವಳಗಿ ಸುತ್ತಲಿನ ನಾಲ್ಕೂರಿನ ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಕೂಡ ಭಾಗವಹಿಸಿ ಅಜ್ಜಿಯ ಅಂತಿಮ ದರ್ಶನ ಪಡೆದುಕೊಂಡರು. ಸ್ವಗ್ರಾಮದಲ್ಲಿ ಅಜ್ಜಿಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. …
Read More »“ಭೀಮಾತೀರ” ಕಳಂಕ ಅಳಿಸಲು ಕ್ರಮ: ಎಡಿಜಿಪಿ ಅಲೋಕ್ ಕುಮಾರ್
ವಿಜಯಪುರ : ವಿಜಯಪುರ ಜಿಲ್ಲೆಗೆ ಎರಡು ಕುಟುಂಬಗಳ ವೈಯಕ್ತಿಕ ದ್ವೇಷದಿಂದ ಭೀಮಾತೀರ ಎಂಬ ಕಳಂಕ ಅಂಟಿಕೊಂಡಿದೆ. ಈ ಭಾಗದ ಜನರಿಗೆ ಶಾಂತಿಯ ಅಗತ್ಯವಿದೆ. ಹೀಗಾಗಿ ಈ ನೆಲಕ್ಕೆ ಅಂಟಿರುವ ರಕ್ತಪಾತದ ಕಳಂಕ ತೊಡೆದು ಹಾಕಲು ಅಗತ್ಯ ಇರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಪೊಲೀಸ್ ಕಾನೂನು ಹಾಗೂ ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ ಹೇಳಿದರು. ಬುಧವಾರ ನಗರದಲ್ಲಿ ಪೊಲೀಸ್ ಚಿಂತನ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಮುನ್ನ ಪತ್ರಕರ್ತರೊಂದಿಗೆ …
Read More »ಬೆಳಗಾವಿ: ಹೆರಿಗೆ ವೇಳೆ ಮಗು ಸಾವು; ಬಿಮ್ಸ್ ಆಸ್ಪತ್ರೆಯಲ್ಲಿ ಸಂಬಂಧಿಗಳ ಪ್ರತಿಭಟನೆ
ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಗು ಮೃತಪಟ್ಟಿರುವುದಾಗಿ ಆರೋಪಿಸಿ ಕುಟುಂಬದವರು ಬಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಹೊನ್ನಿಹಾಳ ಗ್ರಾಮದ ಸುನೀತಾ ಎಂಬ ಗರ್ಭಿಣಿಯನ್ನು ವಾರದ ಹಿಂದೆ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಲ್ಲಿನ ವೈದ್ಯರು ಅವಳತ್ತ ಲಕ್ಷ್ಯವನ್ನೇ ನೀಡಿಲ್ಲ. ಸಿಜೇರಿಯನ್ ಮಾಡಿ ಎಂದು ಅಂಗಲಾಚಿದರೂ ವೈದ್ಯರು ಕೇಳಿಲ್ಲ ಎಂಬುದು ಕುಟುಂಬದವರ ಆರೋಪ. “ಸ್ಕ್ಯಾನಿಂಗ್ ಕೂಡ ಹೊರಗಿನಿಂದ ಮಾಡಿಸಿಕೊಂಡು ಬರಲು …
Read More »ನೇಸರಗಿ: ಅಕ್ರಮ ಸಾಗಾಟವಾಗುತ್ತಿದ್ದ ಪಡಿತರ ಅಕ್ಕಿ ವಶ
ಬೈಲಹೊಂಗಲ: ನೇಸರಗಿಯಲ್ಲಿ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಅಂದಾಜು 76076 ರೂ. ಮೌಲ್ಯದ ಪಡಿತರ ಅಕ್ಕಿಯ 71 ಬ್ಯಾಗ್ ಗಳನ್ನು ಬೊಲೆರೊ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬೊಲೆರೊ ಪಿಕ್ ಅಪ್ ವಾಹನವನ್ನು ಜಪ್ತಿ ಮಾಡಿ ಕಾನೂನು ಕ್ರಮ ಮುಂದುವರಿಸಲಾಗಿದೆ
Read More »