Breaking News

Uncategorized

ಡೆಪ್ಯುಟಿ ಸ್ಪೀಕರ್ ಮಾಮನಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

    ಗೋಕಾಕ್- ವಿಧಾನಸಭೆಯ ಉಪ ಸಭಾಪತಿ ಹಾಗೂ ಸವದತ್ತಿ ಶಾಸಕ ಆನಂದ ಮಾಮನಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಕಳೆದ ಮೂರು ಅವಧಿಯಿಂದ ಸವದತ್ತಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಮನಿ ಅವರು ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರಗತಿಗಾಗಿಯೂ ಸಾಕಷ್ಟು ಕೊಡುಗೆ ನೀಡಿದ್ದರು. ಇವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ. ಮೃತರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮಾಮನಿ …

Read More »

ನಮ್ಮನ್ನು ತುಳಿಯುತ್ತಿದಾರೆ, ಎಲ್ಲಾ ಗೊತ್ತಾಗ್ತಿದೆ ಎಂದು ಆಕ್ರೋಶಗೊಂಡ ಡಾಲಿ, ಯೋಗಿ!

ನಟನಾಗಿ ಚಿತ್ರರಂಗ ಪ್ರವೇಶಿಸಿ ಟಗರು ಚಿತ್ರದ ವಿಲನ್ ರೋಲ್ ಮೂಲಕ ದೊಡ್ಡ ತಿರುವು ಪಡೆದುಕೊಂಡ ಧನಂಜಯ್ ನಂತರ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡರು. ಕನ್ನಡದ ನಂತರ ಟಾಲಿವುಡ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ ಧನಂಜಯ ಅಲ್ಲು ಅರ್ಜುನ್ ಅಭಿನಯದ ಪುಷ್ಪದಂತಹ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಹೀಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಧನಂಜಯ್ ನಿರ್ಮಾಪಕನಾಗಿಯೂ ಬಡ್ತಿ ಪಡೆದಿದ್ದಾರೆ. ಶಂಕರ್ ಗುರು ನಿರ್ದೇಶನದ …

Read More »

ಪುನೀತ್ ನೆನಪಲ್ಲಿ ವೇದಿಕೆ ಮೇಲೆ ಒಂದಾದ ದೊಡ್ಮನೆ ಕುಟುಂಬ

ಮೈಸೂರು ಅರಸರ ಕುಟುಂಬದ ಬಳಿಕ ಕರ್ನಾಟಕದ ಜನ ಅತಿ ಹೆಚ್ಚು ಪ್ರೀತಿಸಿದ, ಗೌರವಿಸಿದ ಕುಟುಂಬವೆಂದರೆ ಅದು ದೊಡ್ಮನೆ ಕುಟುಂಬ. ದೊಡ್ಮನೆ ಕುಟುಂಬದ ಬಹುತೇಕ ಸದಸ್ಯರು ಇಂದು ಪುನೀತ ಪರ್ವ ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಏರಿ ಅಪ್ಪುವನ್ನು ಭಾವುಕವಾಗಿ ನೆನಪು ಮಾಡಿಕೊಂಡರು.   ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ವಿಜಯಪ್ರಕಾಶ್ ಅವರು ಅಪ್ಪು ‘ಗೊಂಬೆ ಹೇಳುತೈತೆ’ ಹಾಡು ಹಾಡಿದರು. ಹಾಡು ಮುಗಿವ ವೇಳೆಗೆ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, …

Read More »

10,000 ಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ ಪರವಾನಗಿ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯಾದ್ಯಂತ 10,889 ಮಸೀದಿಗಳಲ್ಲಿ ಇಸ್ಲಾಮಿಕ್ ಕರೆಯಾದ ಅಜಾನ್ ಕೂಗಲು ಧ್ವನಿ ವರ್ಧಕ ಬಳಕೆಗೆ ಪರವಾನಗಿ ನೀಡಿದೆ. ರಾಜ್ಯ ಸರ್ಕಾರವು ಧ್ವನಿವರ್ಧಕ ಬಳಕೆ ಕುರಿತಂತೆ ಅರ್ಜಿಗಳನ್ನು ಪರಿಶೀಲನೆ ಪೂರ್ಣಗೊಳಿಸಿದ್ದು, ಎರಡು ವರ್ಷಗಳ ಅವಧಿಗೆ ಧ್ವನಿವರ್ಧಳ ಬಳಕೆಗೆ 450 ರೂ. ಶುಲ್ಕ ವಿಧಿಸಲಾಗಿದೆ. ರಾಜ್ಯದಲ್ಲಿ 10,889 ಕ್ಕೂ ಹೆಚ್ಚು ಮಸೀದಿಗಳು ಸೇರಿದಂತೆ ಮಂದೀರ, ಚರ್ಚ್ ಗಳ 17,850 ಧ್ವನಿವರ್ಧಕಗಳ ಬಳಕೆಗೆ ಪರವಾನಗಿ ನೀಡಿದೆ. ಬೆಂಗಳೂರು : ರಾಜ್ಯ …

Read More »

H.I.V.ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 2019ರಲ್ಲಿ ಜಾರಿಗೆ ಬಂದರು ಅದರ ಉಪಯೋಗ ಆಗುತ್ತಿಲ್ಲ: ನಿಶಾ ಗುರೂರ

2017ರ ಎಚ್‍ಐವಿ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ 2019ರಲ್ಲಿ ಜಾರಿಗೆ ಬಂದರು ಅದರ ಉಪಯೋಗ ಆಗುತ್ತಿಲ್ಲ. ಆ ಕಾಯ್ದೆ ಇದೆ ಎಂಬುದೆಯೇ ಜನರಿಗೆ ಗೊತ್ತಿಲ್ಲ. ಹಾಗಾಗಿ ಅದರ ಪ್ರಚಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಗಮ ಸಂಸ್ಥೆಯ ವ್ಯವಸ್ಥಾಪಕಿ ನಿಶಾ ಗುರೂರ ಒತ್ತಾಯಿಸಿದ್ದಾರೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿಶಾ ಗುರೂರ ಎಚ್‍ಐವಿ ಪೀಡಿತರನ್ನು ಸರ್ಕಾರಗಳು ಕಡೆಗಣಿಸುತ್ತಿದೆ. ಎಚ್‍ಐವಿ ರೋಗಿಗೆ ತೆಗೆದುಕೊಳ್ಳುವ ಮಾತ್ರೆ ಉತ್ತಮ ಗುಣಮಟ್ಟದ …

Read More »

ಲೋಕಾಯುಕ್ತ ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಡಿಓಗಳು.

ಬಾಗಲಕೋಟೆ: ಪಿಡಿಒಗಳು ಲಂಚಸ್ವೀಕರಿಸುತ್ತಿದ್ದಾಗ ತಾಲೂಕಿನ ರಾಂಪುರ ಹಾಗೂ ಬೇವಿನಮಟ್ಟಿ ಗ್ರಾಮ ಪಂಚಾಯ್ತಿಗಳಲ್ಲಿ ಲೋಕಾಯುಕ್ತರ ಬಲೆ ಬಿದ್ದಿದ್ದಾರೆ. ಬೇವಿನಮಟ್ಟಿ ಪಿಡಿಒ ಚಂದ್ರಕಾಂತ್ ತಿಮ್ಮಾಪುರ ಮತ್ತು ರಾಂಪುರ ಪಿಡಿಒ ಮುದಕಪ್ಪ ತೇಜಿ ಎಂಬುವವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.   ಪಿಡಿಓಗಳು ಎನ್.ಎ ಪ್ಲಾಟ್ ಎಂಟ್ರಿ ಮಾಡಿಕೊಡಲು ಎರಡೂವರೆ ಲಕ್ಷ ಲಂಚ ಕೇಳಿದ್ದರು. ಈ ಇಬ್ಬರು ಪಿಡಿಓಗಳು ಸ್ನೇಹಿತರಾಗಿದ್ದು, ಹೊನ್ನಾಕಟ್ಟಿ ಗ್ರಾಮದ ವಾಸು ಜಾಧವ್ ಎಂಬುವರಿಗೆ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. …

Read More »

ಗೋಕಾಕ: ರಮೇಶ ಜಾರಕಿಹೊಳಿ, ಹೇಳಿಕೆ

ಗೋಕಾಕ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಪಂಚಮಸಾಲಿ ಸಮಾಜದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು, ಕೂಡಲ ಸಂಗಮ ಪೀಠದ ಜಗದ್ಗುರು ಜಯ ಮೃತ್ಯುಂಜಯ ಸ್ವಾಮಿಜಿಯವ ನೇತ್ರತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ನೀಡಬೇಕೆನ್ನುವ ಅವರ ಹೋರಾಟ …

Read More »

ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದ ಖತರ್ನಾಕ್ ಕಿಲಾಡಿಗಳ ಬಂಧನ

ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದ ಖತರ್ನಾಕ್ ಕಿಲಾಡಿಗಳನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು, ಬಿಜಾಪುರದಿಂದ ಖೋಟಾ ನೋಟು ಚಲಾವಣೆ ಮಾಡಲು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿರುವ ಕುರಿತಂತೆ ಖಚಿತ ಮಾಹಿತಿ ಮೇಲೆ ಉಪನಗರ ಪೊಲೀಸರು ಲಾಡ್ಜ್ ಮೇಲೆ ದಾಳಿ ಮಾಡಿದ್ದು, ದಾಳಿಯ ಸಮಯದಲ್ಲಿ ಮೂವರು ಆರೋಪಿಗಳು ಸಿಕ್ಕಿ ಬಿದ್ದು ಒಬ್ಬ ಆರೋಪಿ ಪರಾರಿ ಆಗಿದ್ದಾನೆ. ಇನ್ನು ಬಂದಿತರಿಂದ 200 ರೂ ಮುಖ ಬೆಲೆಯ 129 ಖೋಟಾ …

Read More »

ನನ್ನ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ: A.I.C.C.ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ. ಜೊತೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಧನ್ಯವಾದ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಎಐಸಿಸಿ ಅಧ್ಯಕ್ಷರಾಗಿ ಕನ್ನಡಿಗ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ತಮ್ಮ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶಾದ್ಯಂತ ಪಕ್ಷವನ್ನು ಸಂಘಟಿಸಲು ಮತ್ತಷ್ಟು ಪ್ರಯತ್ನಿಸುವೆ. ಬೂತ್ ಮಟ್ಟದಲ್ಲಿ …

Read More »

ಉತ್ತರ ಕರ್ನಾಟಕಕ್ಕೂ ಬಂದ ಕರಾವಳಿಯ ಕೊರಗಜ್ಜ; ಹಾವೇರಿಯಲ್ಲಿ ಪ್ರತಿಷ್ಠಾಪನೆ

ಹಾವೇರಿ: ದೇಶದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಮೂಲಕ ಕರಾವಳಿಯ ದೈವಗಳ ಶಕ್ತಿ ಹಾಗೂ ಜನರ ನಂಬಿಕೆಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿವಿಧ ಭಾಗಗಳ ಜನರು ಇದೀಗ ಕರಾವಳಿಯ ದೈವಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.   ಕರಾವಳಿ ಭಾಗದ ಜನರಿಗೆ ದೈವಗಳ ಮೇಲೆ ಹೆಚ್ಚಿನ ನಂಬಿಕೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲೂ ದೈವಗಳನ್ನು ನಂಬುತ್ತಿದ್ದಾರೆ. ಹೌದು, ಹಾವೇರಿ ಜಿಲ್ಲೆಯ ಕೇರಿಮತ್ತಿ ಹಳ್ಳಿಯ ಫಕ್ಕಿರೇಶ ಮರಿಯಣ್ಣ ಎಂಬುವವರ ಹೊಲದಲ್ಲಿ ಕೊರಗಜ್ಜನ ಪುಟ್ಟ ದೈವಸ್ಥಾನ …

Read More »