Breaking News

Uncategorized

ಗೋಕಾಕದಲ್ಲಿ ಆರು ಜನರಿಗೆ ನಾಯಿ ಕಡಿತ ಘಟನೆ; ಸರ್ಕಾರಿ ಆಸ್ಪತ್ರೆಗೆ ಶಾಸಕ ಸತೀಶ್ ಜಾರಕಿಹೊಳಿ ಭೇಟಿ: ಗಾಯಗೊಂಡವರ ಆರೋಗ್ಯ ವಿಚಾರಣೆ

ಗೋಕಾಕ್ ನಗರದಲ್ಲಿ ಆರು ಜನರಿಗೆ ನಾಯಿ ಕಡಿತ ಘಟನೆ ನಡೆದಿದ್ದು. ಸರ್ಕಾರಿ ಆಸ್ಪತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ರವಿವಾರ ಗೋಕಾಕ್ ನಗರದ ನಾಯಕ್ ಗಲ್ಲಿಯಲ್ಲಿ ಬೆಳ್ಳಂ ಬೆಳಿಗ್ಗೆ ಆರು ಜನರಿಗೆ ನಾಯಿ ಕಡಿದು ಗಂಭೀರ ಗಾಯಗೊಂಡವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿ ಧೈರ್ಯ ತುಂಬಿದರು. ನಂತರ …

Read More »

ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ರಿಂಗ್ ರೋಡ್ ವಿರುದ್ಧ ಬೃಹತ್ ಬಾರುಕೋಲು ಚಳುವಳಿ

ಬೆಳಗಾವಿಯಲ್ಲಿ ರಿಂಗ್‍ರೋಡ್ ನಿರ್ಮಾಣದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಫಲವತ್ತಾದ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದು ಇಂದು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಬೆಳಗಾವಿ ಸುತ್ತಮುತ್ತಲೂ ಫಲವತ್ತಾದ ಭೂಮಿ ಇದೆ. ತುಂಡು ಭೂಮಿಗಳು ಇರುವ ಹಿನ್ನೆಲೆ ಒಂದು ಎಕರೆ, ಎರಡು ಎಕರೆ, ಅರ್ಧ ಎಕರೆಯಲ್ಲಿಯೇ ವರ್ಷಕ್ಕೆ ಮೂರು ಬೆಳೆ ಬೆಳೆದು ತಮ್ಮ ಕುಟುಂಬವನ್ನು ಇಲ್ಲಿನ ರೈತರು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸುವರ್ಣಸೌಧ ಸೇರಿ ಇನ್ನಿತರ ಸಂಬಂಧ …

Read More »

ರಮೇಶ ಜಾರಕಿಹೊಳಿ ಫಿಲ್ಡಿಗಿಳಿಯುವ ಮೂಲಕ ಎದುರಾಳಿಗಳಿಗೆ ನಡುಕ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜಕೀಯ ಜೋರಾಗಿದ್ದು. ಮಾಜಿ ಸಚಿವ ರಮೇಶ ಜಾರಕಿಹೊಳಿ ಫಿಲ್ಡಿಗಿಳಿಯುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಹೌದು ಮೊನ್ನೆಯಷ್ಟೇ ಹಿಂಡಲಗಾ ಗ್ರಾ.ಪಂ. ಅಧ್ಯಕ್ಷ ನಾಗೇಶ ಮನ್ನೋಳ್ಕರ್‍ನ್ನು ಕರೆದುಕೊಂಡು ಸಿಎಮ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದ ರಮೇಶ ಜಾರಕಿಹೊಳಿ ಇದೀದ ಮಾಜಿ ಸಿಎಂ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕೂಡ ನಾಗೇಶ ಮನ್ನೋಳ್ಕರ್ ಜೊತೆಗೆ ಹೋಗಿ ಭೇಟಿ ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ …

Read More »

ಅಥಣಿಯಲ್ಲಿ ಕನ್ನಡಿಗರ ಪ್ರತಿಭಟನೆ

ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಕಪ್ಪು ಮಸಿ ಬಳಿದು ಕಲ್ಲು ಹೊಡೆದ ಮರಾಠಿ ಪುಂಡರ ಕೃತ್ಯ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.ಕರವೇ ಪ್ರವೀಣಶೆಟ್ಟಿ ಬಣದಿಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರಿಗೆ ಹಾರ ಹಾಕಿ ಕನ್ನಡ ಶಲ್ಯೆ ಕೊಟ್ಟು ಧ್ವಜವನ್ನು ಹಿಡಿಸಿ ಗುಲಾಬಿ ನೀಡುವ ಮೂಲಕ ಮಹಾರಾಷ್ಟ್ರ ಸಾರಿಗೆ ಸಿಬ್ಬಂದಿಗಳನ್ನು ಸನ್ಮಾನಿಸಿದರು ಅಥಣಿ ಪಟ್ಟಣದ ಹಲ್ಯಾಳ ಸರ್ಕಲ್ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಮಹಾರಾಷ್ಟ್ರ …

Read More »

ನೆರವಿಗೆ ಬಾರದ ಸಿಬ್ಬಂದಿ: ಆಸ್ಪತ್ರೆ ಕಾರಿಡಾರ್‌ನಲ್ಲೇ ಹೆರಿಗೆ!

ಯಾದಗಿರಿ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಸ್ಪತ್ರೆಯ ಕಾರಿಡಾರ್‌ನಲ್ಲೇ ಶನಿವಾರ ಮಧ್ಯರಾತ್ರಿ ಹೆರಿಗೆಯಾಗಿದೆ. ಆಸ್ಪತ್ರೆ ಆವಣದಲ್ಲಿ ನರಳಾಡಿದ ಚಾಂದ್‌ಬಿ ಎಂಬುವವರು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.   ‘ಹೊಟ್ಟೆಯಿಂದ ಕೂಸು ಹೊರಬಂದಿದೆ’ ಎಂದು ಗೋಳಾಡಿ ಕರೆದರೂ ಸಿಬ್ಬಂದಿ ಬಾರದ ಕಾರಣ ಹೆರಿಗೆ ವೇಳೆ ಬಟ್ಟೆಯಿಂದ ಪತಿ ನವಾಜ್ ಮರೆಮಾಚಿದ್ದಾರೆ. ‘ನಮಗೆ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಲಿಲ್ಲ. ಮಗು ಹೊರಬಂದಿದೆ ಬನ್ನಿ ಅಂದರೂ ಬರಲಿಲ್ಲ’ ಎಂದು ಚಾಂದ್‌ಬಿ ಪತಿ ನವಾಜ್ …

Read More »

ಪ್ರೌಢಶಿಕ್ಷಣಕ್ಕಾಗಿ ರಾಜ್ಯದತ್ತ ಮುಖ ಮಾಡುವ ಹೊರನಾಡ ಕನ್ನಡಿಗ ವಿದ್ಯಾರ್ಥಿಗಳು

ಬೆಳಗಾವಿ: ಕರ್ನಾಟಕದಲ್ಲಿ ಕನ್ನಡದೊಂದಿಗೆ ಮರಾಠಿ ಮಾಧ್ಯಮ ಶಾಲೆಗಳಿಗೂ ಸರ್ಕಾರ ಸಮಾನ ಸೌಲಭ್ಯ ಕಲ್ಪಿಸುತ್ತಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಈ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ. ರಾಜ್ಯದ ಗಡಿಯಿಂದ ಐದೇ ಕಿ.ಮೀ. ಅಂತರದಲ್ಲಿ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣವಿದೆ. ಉದ್ಯೋಗ ಅರಸಿ ಹೋಗಿ, ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ನೆಲೆಸಿದ್ದಾರೆ. ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ತೆರೆಯಲಾಗಿದೆ. ಆದರೆ, ಪ್ರೌಢಶಿಕ್ಷಣಕ್ಕಾಗಿ ಹೊರನಾಡ ಕನ್ನಡಿಗರ ಮಕ್ಕಳು ಕರ್ನಾಟಕದತ್ತಲೇ …

Read More »

ವಿಶ್ವದ ಅಗ್ರ ಉಲ್ಲೇಖಿತ ಸಂಶೋಧಕರಲ್ಲಿ ಕೆಎಲ್‌ಇಯ ಇಬ್ಬರಿಗೆ ಸ್ಥಾನ

ಹುಬ್ಬಳ್ಳಿ: ಕ್ಲಾರಿವೇಟ್‌ (ವೆಬ್‌ ಆಫ್ ಸೈನ್ಸ್‌ ಕೋರ್ ಕಲೆಕ್ಷನ್) ಗುರುತಿಸಿರುವ 2022ನೇ ಸಾಲಿನ ವಿಶ್ವದ ಅತಿ ಹೆಚ್ಚು ಉಲ್ಲೇಖಿತ ಅಗ್ರ ಸಂಶೋಧಕರ (ಹೈಲಿ ಸೈಟೆಡ್‌ ರಿಸರ್ಚರ್‌) ವಾರ್ಷಿಕ ಪಟ್ಟಿಯಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್‌ ಸೈನ್ಸಸ್‌ನ ಸಂಶೋಧನಾ ನಿರ್ದೇಶಕ ಪ್ರೊ. ತೇಜರಾಜ್ ಎಂ. ಅಮ್ಮಿನಬಾವಿ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ್ ಪಿ. ಶೆಟ್ಟಿ ಅವರು ಸ್ಥಾನ ಪಡೆದಿದ್ದಾರೆ. ಕಳೆದ ಒಂದು ದಶಕದಲ್ಲಿ ಬಹು ಉಲ್ಲೇಖಿತ ಪತ್ರಿಕೆಗಳ ಪ್ರಕಟಣೆಯ …

Read More »

ಗಡಿ ವಿಚಾರದಲ್ಲಿ ಕರ್ನಾಟಕದ ನಿಲುವು ಸ್ಪಷ್ಟ: ಎಚ್‌.ಕೆ.ಪಾಟೀಲ

ಹುಬ್ಬಳ್ಳಿ: ‘ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಅನಗತ್ಯ, ಸಮಂಜಸವಲ್ಲದ ಹಾಗೂ ಬೇಜವಾಬ್ದಾರಿಯ ಹೇಳಿಕೆಗಳನ್ನು ಕೊಡುವುದು, ನಿಲುವುಗಳನ್ನು ತಾಳುವುದು ಮಾಡುತ್ತಿದೆ. ಆದರೆ, ಈ ವಿಚಾರದಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದೆ. ಯಥಾಸ್ಥಿತಿ ಇಲ್ಲವೇ ಮಹಾಜನ್‌ ವರದಿ ಎಂಬುದಕ್ಕೆ ಕರ್ನಾಟಕ ಬದ್ಧವಾಗಿದೆ. ಅದರಲ್ಲಿ ರಾಜಿಯಿಲ್ಲ’ ಎಂದು ಶಾಸಕ ಹಾಗೂ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಎಚ್‌.ಕೆ.ಪಾಟೀಲ ಸ್ಪಷ್ಟಪಡಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ರಾಜ್ಯ ಸರ್ಕಾರದ ನಿರ್ಣಯ ಮಾತ್ರವಲ್ಲ, ಕರ್ನಾಟಕದ ಮಹಾಜನತೆಯ …

Read More »

ಅವಧಿ ಮುಗಿದ 16 ಟೋಲ್‌ ರದ್ದತಿಗೆ ಆಗ್ರಹ

ದಾವಣಗೆರೆ: ರಾಜ್ಯದಾದ್ಯಂತ ವಿವಿಧ ಹೆದ್ದಾರಿಗಳಲ್ಲಿ ಇರುವ 42 ಟೋಲ್‌ಗೇಟ್‌ಗಳ ಪೈಕಿ 16 ಟೋಲ್‌ಗೇಟ್‌ಗಳ ಅವಧಿ ಪೂರ್ಣಗೊಂಡಿದ್ದು, ಅವುಗಳನ್ನು ರದ್ದು ಮಾಡಬೇಕು ಎಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್‌. ಷಣ್ಮುಖಪ್ಪ ಆಗ್ರಹಿಸಿದರು. ಭಾನುವಾರ ಇಲ್ಲಿ ನಡೆದ ಲಾರಿ ಮಾಲೀಕರ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ ಬಳಿಯ ಟೋಲ್‌ಗೇಟ್‌ ಸಹಿತ 16 ಟೋಲ್‌ಗೇಟ್‌ಅವಧಿ ಮುಗಿದಿದೆ. ಹೆದ್ದಾರಿ ನಿರ್ಮಾಣಕ್ಕೆ ಖರ್ಚು ಮಾಡಿದ ಹತ್ತುಪಟ್ಟು ಹಣ …

Read More »

ಬಾಗಲಕೋಟೆ ಪ್ರಕ್ಷುಬ್ಧ; ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶಕ್ಕೆ ಟಿಪ್ಪು ಕರಿನೆರಳು!

ಬಾಗಲಕೋಟೆ: ಇಳಕಲ್ ನಗರದಲ್ಲಿ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಸರ್ವಧರ್ಮ ಸೌಹಾರ್ದ ಭಾವೈಕ್ಯತೆ ಸಮಾವೇಶವನ್ನು ತಹಸೀಲ್ದಾರ್ ಬಸವರಾಜ ಮೇಳವಂಕಿ ರದ್ದು ಪಡಿಸಿ ಆದೇಶ ಹೊರಡಿಸಿದ್ದಾರೆ. ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದಾರ್ಶನಿಕರ ಭಾವಚಿತ್ರವಿರುವ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ದಾರ್ಶನಿಕರ ಭಾವಚಿತ್ರದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇದರಿಂದ ಕಾನೂನು ಸುವ್ಯಸ್ಥೆಗೆ ದಕ್ಕೆ ಆಗಬಾರದೆಂದು ಮುಂಜಾಗರೂಕತೆಯಿಂದ …

Read More »