ಯಮಕನಮರಡಿ ಮತಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೇದನೂರ, ಮನ್ನಿಕೇರಿ ಹಾಗೂ ಹಂದಿಗನೂರ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಯಿತು. ಮಣ್ಣಿಕೇರಿ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಮತ್ತು 25 ಲಕ್ಷ ರೂ. ಸಿಸಿ ರಸ್ತೆ, ಕೇದನೂರ ಗ್ರಾಮದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಕೇದನೂರ ದಿಂದ ಹೈವೆ ರಸ್ತೆವರೆಗೆ ಡಾಂಬರೀಕರಣ, ಬ್ರಹ್ಮಲಿಂಗ ಗಲ್ಲಿ 20 ಲಕ್ಷ ರೂ. ಸಿ.ಸಿ. ರಸ್ತೆ, …
Read More »ಕ್ಷುಲ್ಲಕ ಕಾರಣಕ್ಕಾಗಿ ಓರ್ವನ ಮೇಲೆ ಸುಮಾರು ನಾಲ್ವರು ಜನರ ಗುಂಪು ಮಾರಣಾಂತಿಕವಾಗಿ ಹಲ್ಲೆ
ಕ್ಷುಲ್ಲಕ ಕಾರಣಕ್ಕಾಗಿ ಓರ್ವನ ಮೇಲೆ ಸುಮಾರು ನಾಲ್ವರು ಜನರ ಗುಂಪು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಭಾಗ್ಯನಗರ ಮೊದಲನೇ ಕ್ರಾಸ್‍ನಲ್ಲಿರುವ ದತ್ತ ಮಂದಿರ ಹತ್ತಿರ ಈ ಘಟನೆ ನಡೆದಿದ್ದು. ಅಶೀಶ್ ಶೆಣವೆ ಎಂಬ ವ್ಯಕ್ತಿ ಹಲ್ಲೆಗೆ ಒಳಗಾದವರು. ಹಲ್ಲೆಗೆ ಒಳಗಾದ ಅಶೀಶ್ ಕಸ ಚೆಲ್ಲಲು ಹೋಗಿದ್ದರು ಈ ಸಂದರ್ಭದಲ್ಲಿ ಆಯ ತಪ್ಪಿ ಅಲ್ಲಿ ಹೋಗುವ ದ್ವಿಚಕ್ರ ವಾಹನಕ್ಕೆ ಅವನ …
Read More »ನಮ್ಮ ಮಾಸಾಶನ 5 ಸಾವಿರ ರೂಪಾಯಿಗೆ ಹೆಚ್ಚಿಸಿ ದಿವ್ಯಾಂಗರ ಪ್ರತಿಭಟನೆ
ಮಾಸಾಶನ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ದಿವ್ಯಾಂಗರು ಪ್ರತಿಭಟನೆ ನಡೆಸಿದರು. ಹೌದು ಬುಧವಾರ ಬೆಳಗಾವಿಯ ಡಿಸಿ ಕಚೇರಿಗೆ ಆಗಮಿಸಿದ ಅಂಗವಿಕಲರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ದಿವ್ಯಾಂಗ ಉಮೇಶ ರೊಟ್ಟಿ ಅವರು ದೈಹಿಕವಾಗಿ ಶೇ.75ರಿಂದ ಶೇ.100ರಷ್ಟು ಅಂಗವಿಕಲತೆ ಇರುವ ಜನರಿಗೆ ಪ್ರಸ್ತುತ ಈಗಿರುವ ಮಾಸಾಶನ 1400 ರೂಪಾಯಿ ಯಾವುದಕ್ಕೂ …
Read More »ಕಾರ್ತಿಕ ಅಮವಾಸ್ಯೆ ನಿಮಿತ್ಯ ಬೆಳಗಾವಿಯ ಪಂಚವಟಿ ಸೋನ್ಯಾ ಮಾರುತಿ ಮಂದಿರದಲ್ಲಿ ಮಹಾಪ್ರಸಾದ
ಬೆಳಗಾವಿಯ ಪಂಚವಟಿ ಸೋನ್ಯಾ ಮಾರುತಿ ಮಂದಿರದಲ್ಲಿ ಕಾರ್ತಿಕ ಅಮವಾಸ್ಯೆ ನಿಮಿತ್ಯ ಮಹಾಪ್ರಸಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೌದು ಬುಧವಾರ ಕಾರ್ತಿಕ ಅಮವಾಸ್ಯೆ ನಿಮಿತ್ಯ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಪಂಚವಟಿ ಸೋನ್ಯಾ ಮಾರುತಿ ಮಂದಿರದಲ್ಲಿ ಆಂಜನೇಯನಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಪುನಸ್ಕಾರ ಮಾಡಲಾಯಿತು. ಈ ವೇಳೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಬಳಿಕ ಉತ್ತರ ಶಾಸಕ ಅನಿಲ್ ಬೆನಕೆ ಆಗಮಿಸಿ ಹಣಮಂತ ದೇವರ ದರ್ಶನ …
Read More »400 ಕೋಟಿ ಕ್ಲಬ್ ಸೇರಿದ ರಿಷಬ್ ಶೆಟ್ಟಿ ʼಕಾಂತಾರʼ : ಹಲವು ದಾಖಲೆಗಳ ಹೆಗ್ಗಳಿಕೆ.
ಮುಂಬಯಿ: ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ʼಕಾಂತಾರʼ ಸಿನಿಮಾ ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ದಕ್ಷಿಣದ ಪ್ರಮುಖ ಭಾಷೆಗಳಲ್ಲಿ ಹಾಗೂ ಹಿಂದಿಯಲ್ಲೂ ಡಬ್ ಆಗಿ ಬಂದ ಸಿನಿಮಾ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಸೆ.30 ರಂದು ರಾಜ್ಯಾದಂತ್ಯ ತೆರೆ ಕಂಡ ʼಕಾಂತಾರʼ ಸಿನಿಮಾಕ್ಕೆ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ಕಿತ್ತು. ರಜಿನಿಕಾಂತ್, ಕಮಲ್ ಹಾಸನ್ , ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಬಿಟೌನ್ ಹಾಗೂ ಸೌತ್ ಸಿನಿರಂಗದ ಖ್ಯಾತನಾಮರು …
Read More »ಗಡಿ ವಿವಾದದ ವೇಳೆ ಮೃತಪಟ್ಟವರ ಕುಟುಂಬದ ಪಿಂಚಣಿ ಹೆಚ್ಚಳ
ಮುಂಬೈ: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆ, ಪುಂಡಾಟದ ವೇಳೆ ಮೃತಪಟ್ಟವರ ಕುಟುಂಬಗಳಿಗೆ ನೀಡಲಾಗುತ್ತಿರುವ ಪಿಂಚಣಿಯನ್ನು ಮಹಾರಾಷ್ಟ್ರದ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಗಡಿ ವಿವಾದದ ಹೋರಾಟದಲ್ಲಿ ಸಾವಿಗೀಡಾದವರನ್ನು “ಹುತಾತ್ಮರು’ ಎಂದು ಕರೆದಿರುವ ಸರ್ಕಾರ, ಅವರ ಕುಟುಂಬಗಳ ಪಿಂಚಣಿ ಮೊತ್ತವನ್ನು 2 ಸಾವಿರ ರೂ. ಏರಿಕೆ ಮಾಡಿದೆ. ಅದರಂತೆ, ಇನ್ನು ಮುಂದೆ ಈ ಕುಟುಂಬಗಳು ತಿಂಗಳಿಗೆ ತಲಾ 10 ಸಾವಿರ ರೂ. ಪಿಂಚಣಿ ಪಡೆಯಲಿವೆ. …
Read More »ಈಗ ಗೂಗಲ್ ಸರದಿ; 10 ಸಾವಿರ ಮಂದಿಯನ್ನು ತೆಗೆದು ಹಾಕಲು ಸಿದ್ದತೆ
ಟರ್, ಮೆಟಾ, ಅಮೆಜಾನ್ ಬಳಿಕ ಆಲ#ಬೆಟ್‌ನಿಂದಲೂ ಹತ್ತು ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ಗೆ ಹೂಡಿಕೆ ಮಾಡಿರುವ ಕ್ರಿಸ್ಟೋಫರ್ ಹಾನ್ ಅವರು ಕಂಪನಿಯಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ತೋರಿಸದೇ ಇರುವವರನ್ನು ತೆಗೆದು ಹಾಕಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ಇದರ ಜತೆಗೆ ಕಂಪನಿ ಉದ್ಯೋಗಿಗಳಿಗೆ ಮಿತಿ ಮೀರಿ ಸಂಬಳ ನೀಡುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮ್ಯಾನೇಜರ್‌ಗಳಿಗೆ ತೃಪ್ತಿದಾಯಕವಾಗಿ ಸಾಧನೆ ಮಾಡದಿರುವ ಉದ್ಯೋಗಿಗಳನ್ನು ವರ್ಗೀಕರಿಸಲು ಸೂಚನೆ …
Read More »ಇ-ವಾಣಿಜ್ಯ ಉತ್ಪನ್ನಗಳ ನಕಲಿ ರಿವ್ಯೂಗೆ ಕಡಿವಾಣ; ನ.25ರಿಂದ ಹೊಸ ನಿಯಮ ಜಾರಿ
ನವದೆಹಲಿ: ಇನ್ನು ಮುಂದೆ ಎಲ್ಲ ಇ-ಕಾಮರ್ಸ್ ಕಂಪನಿಗಳು, ಪ್ರಯಾಣ- ಟಿಕೆಟಿಂಗ್ ಪೋರ್ಟಲ್‌ಗಳು ಮತ್ತು ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರಂಗಳು ತಮ್ಮ ಉತ್ಪನ್ನಗಳು ಹಾಗೂ ಸೇವೆಗಳ ಕುರಿತಾದ ಎಲ್ಲ ಪಾವತಿಸಿದ ಅಥವಾ ಪ್ರಾಯೋಜಿತ ರಿವ್ಯೂ(ಪ್ರತಿಕ್ರಿಯೆ)ಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಬೇಕು. ಆನ್‌ಲೈನ್ ಪ್ರತಿಕ್ರಿಯೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ. ನ.25ರಿಂದಲೇ ಈ ನಿಯಮ ಜಾರಿಯಾಗಲಿದೆ. ಇಂಥ ಕಂಪನಿಗಳು “ಖರೀದಿಸಿದ’ ಅಥವಾ “ಇದೇ ಉದ್ದೇಶಕ್ಕೆಂದೇ ನಿಯೋಜಿಸಲ್ಪಟ್ಟ ವ್ಯಕ್ತಿಗಳಿಂದ …
Read More »ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.: ಅನಿಲ್ ಬೆನಕೆ
ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ತಜ್ಞರ ಮಾರ್ಗದರ್ಶನದಲ್ಲಿ ಯುದ್ಧೋಪಾದಿಯಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬುಧವಾರ ಶಾಸಕ ಅನಿಲ್ ಬೆನಕೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಬೆಳಗಾವಿಯಲ್ಲಿನ ಎಲ್ಲಾ ವೃತ್ತಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಅದೇ ರೀತಿ ಸಂಭಾಜಿ ವೃತ್ತವನ್ನೂ ಸೌಂದರ್ಯಿಕರಣ ಮಾಡಲಾಗುತ್ತಿದೆ. ಸಂಭಾಜಿ ಮಹಾರಾಜರು ಈ ಪ್ರದೇಶಕ್ಕೆ ಭೇಟಿ ನೀಡಿದ ಐತಿಹಾಸಿಕ ದಾಖಲೆಗಳಿವೆ. …
Read More »ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಪಿನ್ ಬಾಕ್ಸ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಸಂಜಯ್ ಪಾಟೀಲ್ ಹೆಬ್ಬಾಳ್ಕರ್‍ಗೆ ತಿರುಗೇಟು
ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಪಿನ್ ಬಾಕ್ಸ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ ಎನ್ನುವ ಮೂಲಕ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ತಿರುಗೇಟು ನೀಡಿದ್ದಾರೆ. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಅದಕ್ಕೆ ನಾವು ಏನು ಮಾಡೋದಿಕ್ಕೆ ಆಗುತ್ತದೆ. ಹಂಚುವವರು ಹಂಚುತ್ತಾರೆ. ನಾನು ಸಧ್ಯಕ್ಕೆ ಜಿಲ್ಲಾಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಾನು ಗಂಡಸು ನಾನು ಹೇಗೆ ಹಳದಿ, …
Read More »