Breaking News

Uncategorized

ರೆಡ್ಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡದಂತೆ ಆಯೋಗಕ್ಕೆ ದೂರು: ಟಪಾಲ್‌ ಗಣೇಶ್‌

(ಕೊಪ್ಪಳ ಜಿಲ್ಲೆ): ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಮೇಲೆ ಬಹುಕೋಟಿ ಗಣಿ ಹಗರಣದ ಪ್ರಕರಣಗಳು ತನಿಖಾ ಹಂತದಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದು ಉದ್ಯಮಿ ಟಪಾಲ್‌ ಗಣೇಶ್‌ ಹೇಳಿದರು.   ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಆಕ್ರಮ ಗಣಿಗಾರಿಕೆ ಹಗರಣದಲ್ಲಿ ಬಂಧಿತರಾಗಿ ಷರತ್ತುಗಳ ಮೇಲೆ ಜಾಮೀನು ಮೇಲೆ ಹೊರಬಂದಿರುವ ರೆಡ್ಡಿ ಜನರಿಗೆ ಸುಳ್ಳಿನ ಭರವಸೆಗಳು ನೀಡಿ …

Read More »

ಸಿಎಂ ಬೊಮ್ಮಾಯಿ ಸೂಚನೆ: ಮುಖ್ಯ ಕಾರ್ಯದರ್ಶಿಗಳ ಭೇಟಿಯಾದ ರೋಹಿಣಿ ಸಿಂಧೂರಿ

ಐಎಎಸ್ ಹಾಗೂ ಐಪಿಎಸ್ನ ಇಬ್ಬರು ಮಹಿಳಾ ಅಧಿಕಾರಿಗಳ ಜಾಟಪಟಿ ನಾಡಿನಾದ್ಯಂತ ಜಗಜ್ಜಾಹಿರಾಗಿದ್ದು, ಈ ನಡುವಲ್ಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಸೋಮವಾರ ಭೇಟಿ ಮಾಡಿದ್ದಾರೆ. ಬೆಂಗಳೂರು: ಐಎಎಸ್ ಹಾಗೂ ಐಪಿಎಸ್ನ ಇಬ್ಬರು ಮಹಿಳಾ ಅಧಿಕಾರಿಗಳ ಜಾಟಪಟಿ ನಾಡಿನಾದ್ಯಂತ ಜಗಜ್ಜಾಹಿರಾಗಿದ್ದು, ಈ ನಡುವಲ್ಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಸೋಮವಾರ ಭೇಟಿ ಮಾಡಿದ್ದಾರೆ. ವಿಧಾನಸೌಧಕ್ಕೆ …

Read More »

ಹಣ ಕೊಟ್ಟರೆ ಮಾತ್ರ ಬ್ಲೂಟಿಕ್‌ ಸೇವೆ: ಹೊಸ ನಿಯಮ ಜಾರಿಗೆ ತರಲಿದೆ ಫೇಸ್‌ ಬುಕ್‌ ಮೆಟಾ

ವಾಷಿಂಗ್ಟನ್:‌ ಟ್ವಿಟರ್‌ ನಂತೆ ಫೇಸ್‌ ಬುಕ್‌ ಮೆಟಾ ಕೂಡ ವೆರಿಫೈಡ್‌ ಖಾತೆಗಳಿಗೆ ಮಾಸಿಕ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಶೀಘ್ರ ಆರಂಭಿಸುವುದಾಗಿ ಮೆಟಾ ಸಿಇಒ‌ ಮಾರ್ಕ್ ಜುಕರ್‌ಬರ್ಗ್ ಭಾನುವಾರ ಘೋಷಿಸಿದ್ದಾರೆ. ಈ ಬಗ್ಗೆ ಜುಕರ್‌ಬರ್ಗ್ ಈ ವಾರ ನಾವು ಮೆಟಾ ವೆರಿಫೈಡ್‌ ಖಾತೆಗಳಿಗೆ ಶುಲ್ಕವನ್ನು ವಿಧಿಸುವ ಯೋಜನೆಯನ್ನು ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.   ಏನೇನು ಇರಲಿದೆ?: ಈಗಾಗಲೇ ವೆರಿಫೈಡ್‌ ಆಗಿರುವ ಖಾತೆಗಳಿಗೆ ತಿಂಗಳಿಗೆ ಇಂತಿಷ್ಟು ಶುಲ್ಕವನ್ನು ವಿಧಿಸಬೇಕಾಗುತ್ತದೆ. ಅಥವಾ ಹೊಸದಾಗಿ ವೆರಿಪೈಡ್‌ ಆಗುವ ಖಾತೆಗಳು …

Read More »

ಮಂಗಳೂರಿನ ಆಸ್ಪತ್ರೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಮಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಕಾರ್ಯಕ್ರಮ ಪ್ರಯುಕ್ತ ನಗರಕ್ಕೆ ಆಗಮಿಸಿರುವ ಅರುಣ್ ಸಿಂಗ್ ಅವರು ಕೈ ನೋವಿನ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.   ಜೆಪಿ ನಡ್ಡಾ ಅವರು ರವಿವಾರ ರಾತ್ರಿ ಮಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತ ಮಾಡಿದ್ದ ಅರುಣ್ ಸಿಂಗ್ ಅವರೂ ನಗರದಲ್ಲೇ …

Read More »

ಶಿವಸೇನೆ ಹೆಸರು ಮತ್ತು ಚಿಹ್ನೆ ಹಂಚಿಕೆ ಗದ್ದಲದಲ್ಲಿ ಭಾಗಿಯಾಗುವುದಿಲ್ಲ: ಶರದ್ ಪವಾರ್

ಪುಣೆ : ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ‘ಶಿವಸೇನೆ’ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರ ಮತ್ತು ಅದಕ್ಕೆ ‘ಬಿಲ್ಲು-ಬಾಣ’ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ ಮತ್ತು ಅದರ ಬಗ್ಗೆ ವಿವಾದದಲ್ಲಿ ಭಾಗಿಯಾಗುವುದಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಹೇಳಿದ್ದಾರೆ.   ‘ಬಿಲ್ಲು ಮತ್ತು ಬಾಣ’ ನಷ್ಟವು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. …

Read More »

ಅದ್ದೂರಿಯಾಗಿ ಮಹಾಶಿವರಾತ್ರಿ ಉತ್ಸವ ಆಚರಣೆಗೆ ರಾಮದುರ್ಗ ಸಜ್ಜು: ಅಶೋಕ ಪಟ್ಟಣ 

ರಾಮದುರ್ಗ: ಸಮೀಪದ ಮುಳ್ಳೂರು ಬೆಟ್ಟದಲ್ಲಿ ಶಿವನ ಮೂರ್ತಿ ಸ್ಥಾಪನೆಯಾಗಿ 6 ವರ್ಷ ಕಳೆದಿದ್ದು, ಈ ಬಾರಿ ಫೆ.18ರಂದು ಅದ್ದೂರಿಯಾಗಿ ಮಹಾಶಿವರಾತ್ರಿ ಉತ್ಸವ ಆಚರಣೆಗೆ ಶಿವಪ್ರತಿಷ್ಠಾನ ಸೇವಾ ಸಮಿತಿ ಮುಂದಾಗಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸರಳವಾಗಿ ಮಹಾಶಿವರಾತ್ರಿ ಆಚರಿಸಲಾಗಿತ್ತು. ಈ ಬಾರಿ ಕೊರೊನಾ ಕಾರ್ಮೋಡ ಸರಿದಿರುವುದರಿಂದ ಸಂಭ್ರಮ ಇಮ್ಮಡಿಗೊಂಡಿದೆ. 72 ಅಡಿ ಎತ್ತರದಲ್ಲಿರುವ ಶಿವನ ಮೂರ್ತಿ ಮತ್ತು ಅದರ ಮುಂಭಾಗದಲ್ಲಿರುವ ನಂದಿ ವಿಗ್ರಹ ದರ್ಶನಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ 1 …

Read More »

ಗ್ರಾಮೀಣ ಶಾಸಕರನ್ನು ಸೋಲಿಸದಿದ್ದರೆ ಜನ ತಮ್ಮ ಮನೆ& ಜಮೀನು ಕಳೆದುಕೊಳ್ಳುವುದು ಗ್ಯಾರಂಟಿ: ರಮೇಶ ಜಾರಕಿಹೊಳಿ

ಹಿರೇಬಾಗೇವಾಡಿ: ಈ ಬಾರಿಯ ಚುನಾವಣೆ ಅತಿ ಮಹತ್ವದ್ದಾಗಿದ್ದು, ಯಾವ ಆಮಿಷಕ್ಕೂ ಬಲಿಯಾಗದೇ ಬೆಳಗಾವಿ ಗ್ರಾಮೀಣ ಶಾಸಕರನ್ನು ಸೋಲಿಸಲೇ ಬೇಕು. ಜತೆಗೆ ಕಾಂಗ್ರೆಸ್ ಸೋಲಿಸದಿದ್ದರೆ ಜನ ತಮ್ಮ ಮನೆ ಹಾಗೂ ಜಮೀನು ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ವಾಗ್ದಾಳಿ ಮಾಡಿದರು. ಗ್ರಾಮದ ಹೊರವಲಯದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿ ಬಳಗದಿಂದ ಗುರುವಾರ ಆಯೋಜಿಸಿದ್ದ ಅಭಿಮಾನದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ …

Read More »

ಬಿಜೆಪಿ ಎಂದರೆ ಸುಳ್ಳಿನ ಪಕ್ಷ. ಪಕ್ಷದ ನಾಯಕರು ಕೋಮುದ್ವೇಷ ಬಿತ್ತುತ್ತಿದ್ದಾರೆ.: ಸಿದ್ದರಾಮಯ್ಯ

ರಾಮದುರ್ಗ: ‘ಬಿಜೆಪಿ ಎಂದರೆ ಸುಳ್ಳಿನ ಪಕ್ಷ. ಪಕ್ಷದ ನಾಯಕರು ಕೋಮುದ್ವೇಷ ಬಿತ್ತುತ್ತಿದ್ದಾರೆ. ಇಂಥವರು ಅಧಿಕಾರದಲ್ಲಿರಲು ಯೋಗ್ಯರಲ್ಲ. ಇವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.   ರಾಮದುರ್ಗದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷನಾಗಿರುವ ನಳೀನ್‌ಕುಮಾರ ಕಟೀಲ್‌ ಟಿಪ್ಪುವಿನ ಅಂತ್ಯ ಹಾಡಿದಂತೆ ಸಿದ್ದರಾಮಯ್ಯಗೂ ಅಂತ್ಯ ಹಾಡಲಾಗುವುದು ಎಂದು ಹೇಳಿರುವುದನ್ನು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದರು. ‘ಬಿಜೆಪಿ ನಾಯಕರಿಗೆ …

Read More »

ಅಪರಿಚಿತ ಯುವಕನ ಶವವೊಂದು ಮಲಪ್ರಭಾ ಕಾಲುವೆ ದಂಡೆ ಬಂದು ನಿಂತಿದೆ.

ಸವದತ್ತಿ:  ಅಪರಿಚಿತ ಯುವಕನ ಶವವೊಂದು ಮಲಪ್ರಭಾ ಕಾಲುವೆ ದಂಡೆ ಬಂದು ನಿಂತಿದೆ. ಶವವಾದ ಯುವಕ ಯಾರು ಎನ್ನುವ ಕುರಿತು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿಗೆ ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕಟಣೆಯೊಂದನ್ನು ನೀಡಿದ್ದಾರೆ. ಅದು ಹೀಗಿದೆ; “ಹೆಸರು ವಿಳಾಸ ತಿಳಿಯದ ಸುಮಾರು 28-30 ವಯಸ್ಸಿನ ಅನಾಮಧೇಯ ಗಂಡಸಿನ  ಶವ ಮಲಪ್ರಭಾ ಬಲದಂಡೆಯ ಕಾಲುವೆಯಲ್ಲಿ ಹಂಚಿನಾಳ ಗ್ರಾಮ ಹದ್ದಿಯಲ್ಲಿ ಬಂದು ನಿಂತಿದ್ದು ಸಂಬಂಧಿಕರು ಪತ್ತೆ ಆದಲ್ಲಿ ಸೌದತ್ತಿ ಪೊಲೀಸ್ ಠಾಣೆಗೆ ಸಂಪರ್ಕಿಸಲು …

Read More »

ಹೇಗೆ ನಡೆದುಕೊಳ್ಳಬೇಕು ಎಂದು ಕಲಿಯಿರಿ: ಸಚಿವ ಚವ್ಹಾಣಗೆ ಸಭಾಪತಿ ಹೊರಟ್ಟಿ ಪಾಠ

ಬೆಂಗಳೂರು : ‘ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಸದನದಲ್ಲಿ ಕಲಿಯಬೇಕು, ನಿಮ್ಮ ನಡೆ ಸರಿಯಲ್ಲ, ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವಾಗ ಅದನ್ನು ನಿಭಾಯಿಸಬೇಕು. . .’ -ಇದು ವಿಧಾನ ಪರಿಷತ್‌ನಲ್ಲಿ ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ ಪಾಠ. ಕಲಾಪ ಬುಧವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ರಾಜ್ಯದಿಂದ ಗೋವಾಕ್ಕೆ ಎಷ್ಟು ಪ್ರಮಾಣದಲ್ಲಿ ದನದ ಮಾಂಸ ರಫ್ತಾಗುತ್ತಿದೆ ಎನ್ನುವ ಕುರಿತು ಫೆ. 4ರಂದೇ ಪ್ರಶ್ನೆ ಕಳುಹಿಸಲಾಗಿದೆ. ಆದರೆ, …

Read More »