Breaking News

Uncategorized

ಮೆಹ್ರಮ್ ಇಲ್ಲದೆ 4 ಸಾವಿರ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆ: ಮೋದಿ ಮೆಚ್ಚುಗೆ

ನವದೆಹಲಿ: ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಮೆಹ್ರಮ್ (ಪುರುಷರ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಅತಿ ದೊಡ್ಡ ಪರಿವರ್ತನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ತಮ್ಮ ಸರ್ಕಾರವು ಹಜ್ ನೀತಿಯಲ್ಲಿ ಮಾಡಿದ ಬದಲಾವಣೆಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಯಾತ್ರೆಗೆ ಹೋಗಲು ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ರೆಡಿಯೋದಲ್ಲಿ ಪ್ರಸಾರವಾದ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ, ಪುರುಷರ ನೆರವಿಲ್ಲದೆ …

Read More »

ಹಾಸ್ಟೆಲ್ ಅಥವಾ ಪಿಜಿ ಕೊಠಡಿಗಳಲ್ಲಿ ವಾಸಿಸುವ ಜನರ ಜೇಬಿಗೆ ಕತ್ತರಿ

ಹಾಸ್ಟೆಲ್ ಅಥವಾ ಪಿಜಿ ಕೊಠಡಿಗಳಲ್ಲಿ ವಾಸಿಸುವ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಏಕೆಂದರೆ, ಇನ್ನು ಮುಂದೆ ಹಾಸ್ಟೆಲ್-ಪಿಜಿ ಬಾಡಿಗೆಗೆ ಶೇ 12ರಷ್ಟು ಜಿಎಸ್‌ಟಿ ಅನ್ವಯಿಸಲಿದೆ. ಹೌದು. “ಪಾವತಿಸಿದ ಬಾಡಿಗೆಗೆ ಶೇ 12ರಷ್ಟು ಜಿಎಸ್‌ಟಿ ಅನ್ವಯವಾಗುವುದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಕರ್ಯಕ್ಕಾಗಿ ಹೆಚ್ಚಿನ ಹಣ ಪಾವತಿಸಲೇಬೇಕಾಗುತ್ತದೆ. ಹಾಸ್ಟೆಲ್‌ಗಳು ವಸತಿ ಘಟಕಗಳಲ್ಲ, ಆದ್ದರಿಂದ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ನೀಡುವುದಿಲ್ಲ” ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಎರಡು ಪ್ರತ್ಯೇಕ ಪ್ರಕರಣಗಳಿಗೆ …

Read More »

ಮಳೆ ಹೆಚ್ಚಿರುವ ಕಾರಣ ಇಂದಿನಿಂದ ಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ

ಶಿವಮೊಗ್ಗ: ಮುಂಗಾರು ಮಳೆ ಹೆಚ್ಚಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಪ್ರಮುಖ ಜಲಪಾತ, ಸಫಾರಿ ಮತ್ತು ಚಾರಣ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುದುರೆಮುಖದ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಹಾಗೂ ಚಾರಣ ತಾಣವಾದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗವಾದ ಕೊಡಚಾದ್ರಿ ಬೆಟ್ಟಕ್ಕೂ ಪ್ರವೇಶ ನಿಷೇಧಿಸಲಾಗಿದೆ. ಮುಂಗಾರು ಮಳೆ ತೀವ್ರಗೊಂಡಿದ್ದು, ‌ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಪ್ರವಾಸಿಗರು …

Read More »

ಅಕ್ರಮವಾಗಿ ಪಿಸ್ತೂಲ್ ಅನ್ನು ವಶದಲ್ಲಿರಿಸಿಕೊಂಡು ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು (ದಕ್ಷಿಣ ಕನ್ನಡ): ಅಕ್ರಮವಾಗಿ ಪಿಸ್ತೂಲ್​ ಅನ್ನು ವಶದಲ್ಲಿರಿಸಿಕೊಂಡು ತಿರುಗಾಡುತ್ತಿದ್ದ ಹಳೆಯ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮಿಯಾಪದವು, ಚಿಗುರುಪಾದೆಯ ಅಬ್ಬಾಸ್ ಯಾನೆ ಬೆಡಿ ಅಬ್ಬಾಸ್ (61) ಮತ್ತು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆಯ ಯಶವಂತ್ ಕುಮಾರ್ (45) ಬಂಧಿತರು. ಪಿಸ್ತೂಲ್​ ಹಿಡಿದುಕೊಂಡು ತಿರುಗಾಡುತ್ತಿದ್ದ ಆರೋಪಿಗಳು: ಈ ಇಬ್ಬರು ಆರೋಪಿಗಳು ಮಂಗಳೂರು ತಾಲೂಕು ಬಜಪೆ ಗ್ರಾಮದ ಒಡ್ಡಿದಕಲ ಎಂಬಲ್ಲಿ ಬೈಕ್​ನಲ್ಲಿ ಯಾವುದೇ …

Read More »

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ

ಬೆಂಗಳೂರು : ಸಿರಾ ಕ್ಷೇತ್ರದಶಾಸಕ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಟಿಬಿ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎಂದು ಸಂಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲಿ ಟಿಬಿ ಜಯಚಂದ್ರ ನೈಸ್‌ ಸಂಸ್ಥೆಯ ಹಗರಣಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅಲ್ಲದೇ ಆ ವರದಿಯನ್ವಯ ನೈಸ್‌ ಸಂಸ್ಥೆಯ ಮೇಲೆ ಕ್ರಮ ಜಾರಿಗೊಳಿಸುವಂತೆ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಆಗ್ರಹಿಸಿದ್ದರು. ಅಂದಿನಿಂದಲೂ ಜಯಚಂದ್ರರಿಗೆ ಸತತವಾಗಿ ಬೇರೆ …

Read More »

ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು

ಧಾರವಾಡ: ಅಂತರ್ಜಲ ಮರುಪೂರಣ ಆಗಬೇಕಾದ್ರೆ ಅದಕ್ಕೆ ಕೆರೆಗಳು ಬೇಕೇ ಬೇಕು. ಪ್ರತಿ ಮಳೆಗಾಲ ಬಂದಾಗ ಕೆರೆಗಳು ತನ್ನೆಲ್ಲ ಜಾಗ ಆಕ್ರಮಿಸಿ ಮೈತುಂಬ ತುಂಬಿಕೊಳ್ಳಬೇಕು. ಅಷ್ಟೇ ತುಂಬಿ ತುಳುಕಿ ಕೋಡಿ ಹರಿಯಬೇಕು. ಹೀಗೆ ಮೈದುಂಬಿ ಕೋಡಿ ಹರಿಯುತ್ತಿರೋ ಈ ಕೆರೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಅಂಚಿನಲ್ಲಿದೆ. ಸುತ್ತಲೂ ಹಸಿರ ಸಿರಿಯ ಗುಡ್ಡದ ನಡುವೆ ವಿಶಾಲವಾದ ಕೆರೆ. ಈ ಕೆರೆಯ ಎರಡು ಕಡೆಯಲ್ಲಿ ಕೋಡಿ ಹರಿಯುತ್ತೆ. ಪ್ರತಿ ಸಲ ಮಳೆಗಾಲ ಬಂದಾಗ …

Read More »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ.

ಬೆಂಗಳೂರು: ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಪೂರಕ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಇಂದು ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆಗಸ್ಟ್ 21ರಿಂದ ಸೆಪ್ಟೆಂಬರ್ 2ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ನಡೆಯಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. 2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಈ ಪರೀಕ್ಷೆಗೆ ನೋಂದಾಯಿಸಲು …

Read More »

ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವ ಸಂಭವಿಸಿದೆ

ಚಿಕ್ಕೋಡಿ: ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕೋಡಿಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ ಆಕಾಶ ಸಂಕಪಾಳ (27) ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ.   ಮುಂಜಾನೆ ಎಂಟು ಗಂಟೆ ಸುಮಾರಿಗೆ ಮನೆಯಲ್ಲಿ ಮೊಬೈಲ್ ಚಾರ್ಚ್ ಹಾಕುವುದಕ್ಕೆ ಯುವಕ ಮುಂದಾಗಿದ್ದಾನೆ. ಆಕಸ್ಮಿಕವಾಗಿ ವಿದ್ಯುತ್ ಕೈಗೆ ತಗುಲಿ ಸಾವು ಸಂಭವಿಸಿದೆ ಎಂದು ಮೃತ ಯುವಕನ ತಂದೆ ನಿಪ್ಪಾಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. …

Read More »

ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಬರೆದ ಪತ್ರ ಸಹಜವಾಗಿದೆ

ವಿಜಯಪುರ : ಕಾಂಗ್ರೆಸ್ ಶಾಸಕ ತನ್ವೀರ್​ ಸೇಠ್​ ಡಿಜೆ – ಕೆಜಿಹಳ್ಳಿ ಸೇರಿದಂತೆ ವಿವಿಧೆಡೆ ನಡೆದ ಗಲಭೆ ಪ್ರಕರಣವನ್ನು ಮರುಪರಿಶೀಲನೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್​ ಅವರಿಗೆ ಬರೆದ ಪತ್ರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ ಪಾಟೀಲ್​ ಪ್ರತಿಕ್ರಿಯಿಸಿದ್ದಾರೆ. ಇದು ಸಹಜ ಪ್ರಕ್ರಿಯೆಯಾಗಿದೆ. ಈಗಾಗಲೇ ಗೃಹ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು. ವಿಜಯಪುರದಲ್ಲಿ ಕುಡಿಯುವ ನೀರಿನ ಕುರಿತು ಅಧಿಕಾರಿಗಳ ಸಭೆ ನಡೆಸಿ …

Read More »

ಸಿಂಗಾಪುರ ಆಪರೇಷನ್ ವಿಚಾರ: ಏಕಾಏಕಿ ಮೌನಕ್ಕೆ ಜಾರಿದ ಡಿಕೆಶಿ

ಬೆಂಗಳೂರು: ನಿನ್ನೆಯಷ್ಟೇ ಸಿಂಗಾಪುರದಲ್ಲಿ ಕುಳಿತು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವ ಆಪರೇಷನ್ ಪ್ರಯತ್ನ ನಡೆದಿದೆ ಎಂದು ಆರೋಪ ಮಾಡಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಆ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯ ರೀತಿ ಇದು ಗೋಚರಿಸಿದೆ. ನಿನ್ನೆ ಮಾಧ್ಯಮಗಳ ಪ್ರಶ್ನೆಗೆ ರಾಜ್ಯ ಸರ್ಕಾರ ಪತನಗೊಳಿಸಲು ಸಿಂಗಪೂರದಲ್ಲಿ ಕುಳಿತು ಪ್ರಯತ್ನ ನಡೆಸುತ್ತಿದ್ದಾರೆ. ಇದರ ಮಾಹಿತಿ ನಮಗೆ ಇದೆ. ನಾವು ಇಂತಹ ಪ್ರಯತ್ನಕ್ಕೆ ಬೆಲೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದರು. ಆದರೆ, ಇಂದು …

Read More »