ಹುಬ್ಬಳ್ಳಿ : ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಸೇರಿದಂತೆ ಇತರ ಸೌಲಭ್ಯಗಳ ಬೃಹತ್ ಸುಧಾರಣೆ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವರು, ಹುಬ್ಬಳ್ಳಿಯ ವಿಮಾನ ನಿಲ್ದಾಣವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜೋಶಿ …
Read More »ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ ಪರಾರಿ
ಪತಿಯೇ ಪತ್ನಿಯನ್ನು ಕತ್ತು ಹಿಚುಕಿ ಕೊಲೆ ಮಾಡಿ ಪರಾರಿಯಾದ ಘಟನೆ ನಗರದ ನೇಕಾರನಗರದ ಬಸವೇಶ್ವರ ಸರ್ಕಲ್ ಬಳಿ ಇಂದು ಮುಂಜಾನೆ ನಡೆದಿದೆ. ಕೊಲೆಯಾದ ಮಹಿಳೆ ಸುಧಾ (೨೪) ಎಂದು ತಿಳಿದು ಬಂದಿದ್ದು, ಪತಿ ಶಿವಯ್ಯಾ ಹಿರೇಮಠ (೨೮) ಎಂಬಾತನೇ ಕುಡಿದ ಮತ್ತಿನಲ್ಲಿಯೇ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬೆಳಗಿನ ಜಾವ ೧೨.೩೦ ರಿಂದ ಬೆಳಿಗ್ಗೆ ೯.೩೦ ರ ಮಧ್ಯದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಪತಿ ಶಿವಯ್ಯಾ …
Read More »ಪ್ರತಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಸಬೇಕೇ?: ಬಿಜೆಪಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಒಂದೂವರೆ ತಿಂಗಳು ಕಳೆದಿದ್ದರೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡದ ಬಿಜೆಪಿ ಕ್ರಮವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರವಾಗಿ ಟೀಕಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರದ ಪ್ರಥಮ ಬಜೆಟ್ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ. ಅಧಿವೇಶನ ಶುರುವಾಗುತ್ತಿದ್ದರೂ ರಾಜ್ಯದ ಅಧಿಕೃತ ಪ್ರತಿ ಪಕ್ಷವಾದ ಬಿಜೆಪಿ ಪ್ರತಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಒಂದು ಸೋಲು ಪ್ರತಿಪಕ್ಷ ನಾಯಕನನ್ನೂ ಆಯ್ಕೆ ಮಾಡದಷ್ಟು ಬಿಜೆಪಿ ನಾಯಕರಿಗೆ ರೇಜಿಗೆ …
Read More »ಅವಧಿ ಮುಗಿದ ಆಹಾರ ಉತ್ಪನ್ನಗಳ ಮರು ಪ್ಯಾಕಿಂಗ್.. ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ
ಬೆಂಗಳೂರು: ಬಳಕೆಯ ಅವಧಿ ಮುಗಿದ ಆಹಾರ ಉತ್ಪನ್ನಗಳನ್ನು ಮರು ಪ್ಯಾಕಿಂಗ್ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು ಜಂಟಿ ಆಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಟನ್ ಪೇಟೆಯ ಖಾಸಗಿ ಟ್ರೇಡಿಂಗ್ ಕಂಪನಿಯ ಗೋದಾಮಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಅವಧಿ ಮುಗಿದ ಆಹಾರಗಳುಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಸೇರಿದ, ಬಳಕೆಯ ಅವಧಿ ಮೀರಿದ ಬಿಸ್ಕೆಟ್ಸ್, ಚಾಕೊಲೇಟ್, ಚಾಕೊಲೇಟ್ ಪೌಡರ್, ಅಡುಗೆ ಎಣ್ಣೆ, …
Read More »ಚುನಾವಣೆಯ ಫಲಿತಾಂಶ ಬಂದು 47 ದಿನಗಳಾದರೂ ವಿರೋಧ ಪಕ್ಷದ ನಾಯಕ ನೇಮಕ ಮಾಡಲು ಬಿಜೆಪಿಯವರಿಗೆ ಆಗಿಲ್ಲ: ಕೃಷ್ಣ ಭೈರೇಗೌಡ
ಬೆಳಗಾವಿ: ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು 47 ದಿನಗಳಾದರೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಬಿಜೆಪಿಯವರಿಗೆ ಆಗಿಲ್ಲ ಎಂದರೆ, ಇದಕ್ಕಿಂತ ರಾಜಕೀಯ ನಾಯಕತ್ವದ ವೈಫಲ್ಯ ಇನ್ಯಾವುದಾದರೂ ಕರ್ನಾಟಕದಲ್ಲಿ ಇದೆಯೇ? ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಟೀಕಿಸಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಕಂದಾಯ ಇಲಾಖೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಬೀದಿಗಿಳಿದು, ಒಬ್ಬರಿಗೊಬ್ಬರು ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಆಡುತ್ತಿರುವ ಮಾತುಗಳನ್ನು …
Read More »ಕಾನೂನು ಸುವ್ಯವಸ್ಥೆ ಪೊಲೀಸ್ ಇನ್ಸ್ಪೆಕ್ಟರ್ಗಳಿಗೂ ಬಾಡಿವೋರ್ನ್ ಕ್ಯಾಮರಾ
ಬೆಂಗಳೂರು: ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ನಗರದಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣ ಬಲಪಡಿಸಲು ಟ್ರಾಫಿಕ್ ಹಾಗೂ ಹೊಯ್ಸಳ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ಬಾಡಿವೋರ್ನ್ ಕ್ಯಾಮರಾವನ್ನು ಇನ್ನು ಮುಂದೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ಗಳಿಗೂ ನೀಡಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದೆ. ನಗರದಲ್ಲಿರುವ 111 ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ತಲಾ ಒಂದು ಬಾಡಿವೋರ್ನ್ ಕ್ಯಾಮರಾವನ್ನು ಸೂಕ್ತ ತರಬೇತಿ ನೀಡಿ ಇನ್ನೊಂದು ವಾರದಲ್ಲಿ ವಿತರಿಸಲು ನಗರ ಪೊಲೀಸ್ ಆಯುಕ್ತ …
Read More »ಪೆಟ್ರೋಲ್ ಪಂಪಿಗೆ ಆಗಮಿಸಿ, ಸಾವಿರ ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು, ಪರಾರಿ
ದ್ವಿಚಕ್ರ ವಾಹನ ಸವಾರನು ಪೆಟ್ರೋಲ್ ಪಂಪಿಗೆ ಆಗಮಿಸಿ, ಸಾವಿರ ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು, ಪರಾರಿ ಆಗುತ್ತಿರುವ ಘಟನೆಯೊಂದು ಶಿರುಗುಪ್ಪಿ ಗ್ರಾಮದ ಪಂಪುಗಳಲ್ಲಿ ಸಂಭವಿಸುತ್ತಿದ್ದು, ಪಂಪ್ ಕಾರ್ಮಿಕರು ಹೈರಾಣಾಗಿದ್ದಾರೆ. ಶಿರುಗುಪ್ಪಿ ಗ್ರಾಮದಲ್ಲಿ ಸುಮಾರು ಮೂರು ಪೆಟ್ರೋಲ್ ಪಂಪ್‌ಗಳಿದ್ದು, ಉಗಾರ್ ರಸ್ತೆಯಲ್ಲಿರುವ ಪೆಟ್ರೋಲ್ ಪಂಪಿನಲ್ಲಿ ಸತತ ಮೂರನೇ ಬಾರಿಗೆ ಇಂಥದೊಂದು ಘಟನೆ ಸಂಭವಿಸಿದೆ. ಇದಲ್ಲದೆ ಜುಗೂಳ ರಸ್ತೆಯಲ್ಲಿರುವ ಪಂಪ್‌ನಲ್ಲಿಯೂ ಸಹ ಇಂಥದೇ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ . ಈ ಕುರಿತು …
Read More »ರೈತ ಸಾವನ್ನಪ್ಪಿದ ಕೆಲವೇ ಗಂಟೆಯಲ್ಲಿ ಪ್ರಾಣಬಿಟ್ಟ ಎತ್ತು.
ಗದಗ: ಎತ್ತು ಮತ್ತು ಅದರ ಮಾಲೀಕ ಒಂದೇ ದಿನ ಮೃತಪಟ್ಟ ಘಟನೆ ಗದಗ ತಾಲೂಕಿನ ಬೆನಕನಕೊಪ್ಪದಲ್ಲಿ ಗುರುವಾರ ನಡೆದಿದೆ. ಅಕಾಲಿಕವಾಗಿ ಮಾಲೀಕ ಭೀಮಪ್ಪ ಕಣಗಿನಹಾಳ (90) ಮರಣ ಹೊಂದಿದ್ದರು. ಬಳಿಕ ಕೆಲವೇ ಗಂಟೆಗಳಲ್ಲಿ ಕೃಷಿ ಕಾರ್ಯದಲ್ಲಿ ರೈತನ ಜೊತೆಗಿದ್ದ ಪ್ರೀತಿಯ ಎತ್ತು ಕೂಡ ಕೊನೆಯುಸಿರೆಳೆದಿದೆ. ಮಾಲೀಕನ ಸಾವಿನ ಬೆನ್ನಲ್ಲೇ ಎತ್ತು ಸಾವನ್ನಪ್ಪಿರುವ ಘಟನೆ ಕಂಡು ಗ್ರಾಮಸ್ಥರು ಮಮ್ಮಲ ಮರುಗಿದರು. ಮನಕಲಕುವ ಘಟನೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಕಣ್ನೀರಿಟ್ಟರು. ಭೀಮಪ್ಪನ ಜಮೀನಿನಲ್ಲಿ …
Read More »ಆಧಾರ್ ಪ್ಯಾನ್ ಲಿಂಕ್ಗೆ ನಾಳೆಯೇ ಕೊನೆಯ ದಿನ..
ನವದೆಹಲಿ: ಜೂನ್ ತಿಂಗಳು ಮುಗಿಯುತ್ತಿದೆ. ನೀವು ಇನ್ನೂ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ಆದಷ್ಟು ಬೇಗ ಈ ಕಾರ್ಯ ಮಾಡಿ ಮುಗಿಸಿ. ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವು ಹತ್ತಿರ ಬಂದಿದೆ. ಈ ಮೊದಲು ಪ್ಯಾನ್ ಮತ್ತು ಆಧಾರ ಜೋಡಣೆ ಮಾಡುವುದಕ್ಕೆ ಮಾರ್ಚ್ 31 ರವರೆಗೆ ಸಮಯವನ್ನು ನಿಗದಿಪಡಿಸಲಾಗಿತ್ತು. ಆಗ ಅದನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿತ್ತು. ಈಗ ಈ ಗಡುವಿನೊಳಗೆ ನೀವು ಪ್ಯಾನ್-ಆಧಾರ್ ಲಿಂಕ್ ಮಾಡದಿದ್ರೆ ನಿಮ್ಮ …
Read More »ಇ-ಸಮೀಕ್ಷೆ ಕೆಲಸದಿಂದ ವಿನಾಯಿತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಧರಣಿ
ಬೆಳಗಾವಿ: ಆರೋಗ್ಯ ಇಲಾಖೆಯ ಇ-ಸಮೀಕ್ಷೆ ಕೆಲಸದಿಂದ ವಿನಾಯಿತಿ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಯಿತು. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಾಲ್ಕು ವರ್ಷದ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ್ದ ಮೊಬೈಲ್‌ಗಳು ಕಳಪೆಯದ್ದಾಗಿದ್ದು, ಅದರಲ್ಲಿ ಮಾಹಿತಿ ಸಂಗ್ರಹ ಸೇರಿ ಇತರೆ ಕೆಲಸ ಮಾಡುವುದು ಕಷ್ಟಸಾಧ್ಯ. ಕೂಡಲೇೆ ಇದರ …
Read More »