Breaking News

Uncategorized

ಟಿಪ್ಪರ್ ನ ಡಂಪರ್ ಗೆ ಸಿಲುಕಿದ ಸ್ಯಾಂಟ್ರೋ ಕಾರ್

ಟಿಪ್ಪರ್ ನ ಡಂಪರ್ ಗೆ ಸಿಲುಕಿದ ಸ್ಯಾಂಟ್ರೋ ಕಾರ್ , ಕಿಲೋಮೀಟರ್ ದೂರ ಸ್ಯಾಂಟ್ರೋ ಕಾರನ್ನು ಎಳೆದೊಯ್ದ ಟಿಪ್ಪರ್ ಕಾರನ್ನು ಎಳೆದೊಯ್ಯವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ಯಾಂಟ್ರೋ ಕಾರ್   ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್, ಟಿಪ್ಪರನ್ನು ಹಿಂಬಾಲಿಸಿಕೊಂಡು ಬಂದು ಬೈದು ನಿಲ್ಲಿಸಿದ ಸಾರ್ವಜನಿಕರು ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ಗಾಯ, ಟಿಪ್ಪರನ್ನು ವಶಕ್ಕೆ ಪಡೆದ ಪಡುಬಿದ್ರಿ …

Read More »

ಕೆಸರು ಗದ್ದೆಯಲ್ಲಿ ಆಟವಾಡಿ ಸಂತಸಪಟ್ಟ ಭಾವಿ ವೈದ್ಯರು

ದಾವಣಗೆರೆ: ಆಧುನಿಕ ಹಾಗೂ ಪಾಶ್ಚಿಮಾತ್ಯ ಆಟಗಳ ಮಧ್ಯದಲ್ಲೂ ಭಾರತದ ದೇಸಿಯ ಕ್ರೀಡೆಗಳು ತಮ್ಮ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ. ಹೀಗಾಗಿ ಸದಾ ಕಾಲೇಜು, ಪರೀಕ್ಷೆ, ಪ್ರಾಜೆಕ್ಟ್​ ವರ್ಕ್​ ಎಂದು ಬ್ಯೂಸಿಯಾಗಿರುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ಮಳೆಗಾಲದ ಮೋಡ ಮುಸುಕಿದ ವಾತಾವರಣದಲ್ಲಿ ಕೆಸರು ಗದ್ದೆ ಓಟ, ಹಗ್ಗ- ಜಗ್ಗಾಟ ಸೇರಿದಂತೆ ಹಲವು ದೇಸಿ ಕ್ರೀಡೆಗಳನ್ನು ಆಡುವ ಮೂಲಕ ಸಖತ್​ ಎಂಜಾಯ್​ ಮಾಡಿದರು.​​ ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ ಜೆಜೆಎಂ ಕಾಲೇಜು ವಿದ್ಯಾರ್ಥಿಗಳು …

Read More »

ಮುಂಗಾರು ಮಳೆ ವಿಳಂಬವಾಗಿದ್ದರಿಂದ ಎಲೆಕೋಸು ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ರೈತರ ನಷ್ಟ

ಹಾವೇರಿ: ಜಿಲ್ಲೆಯ ರೈತರು ಅತ್ಯುತ್ತಮವಾದ ಎಲೆಕೋಸು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಎಲೆಕೋಸಿಗೆ ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದ್ದು, ಜಿಲ್ಲೆಯಿಂದ ದೊಡ್ಡ ಪ್ರಮಾಣದಲ್ಲಿ ಎಲೆಕೋಸು ರಫ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ರೈತರು ಕೆಲ ವರ್ಷಗಳಿಂದ ಎಲೆಕೋಸು ಬೆಳೆಯುತ್ತಿದ್ದಾರೆ. ಆದರೆ, ಪ್ರತಿವರ್ಷ ಉತ್ತಮ ಆದಾಯಗಳಿಸುತ್ತಿದ್ದ ಎಲೆಕೋಸು ಬೆಳೆಗಾರರು ಈ ವರ್ಷ ನಷ್ಟದ ಹಾದಿಯಲ್ಲಿದ್ದಾರೆ. ಈ ಬಾರಿ ಮುಂಗಾರು ಮಳೆ ವಿಳಂಬದಿಂದ ಎಲೆಕೋಸು ಫಸಲು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲಾ. …

Read More »

ಲೋಕಸಭೆ ಚುನಾವಣೆಗೆ ಪುತ್ರಿ ಪ್ರಿಯಾಂಕಾ ಕಣಕ್ಕಿಳಿಸುವ ಬಗ್ಗೆ ತೀರ್ಮಾನಿಸಿಲ್ಲ,ಪಕ್ಷ ಸೂಚಿಸಿದರೆ ನಾನೇ ಸ್ಪರ್ಧಿಸುತ್ತೇನೆ.

ಬೆಳಗಾವಿ: ಲೋಕಸಭೆ ಚುನಾವಣೆಗೆ ಪುತ್ರಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಮೊದಲು ಕಾರ್ಯಕರ್ತರಿಗೆ ಆದ್ಯತೆ ಕೊಡುತ್ತೇವೆ. ಅವಶ್ಯಕತೆ ಬಿದ್ದರಷ್ಟೇ ಪುತ್ರಿ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಪಕ್ಷ ಸೂಚಿಸಿದರೆ ನಾನೇ ಸ್ಪರ್ಧಿಸುತ್ತೇನೆ. ಕೊನೇ ಘಳಿಗೆಯಲ್ಲಿ ರಾಜಕಾರಣದಲ್ಲಿ ಏನೂ ಬೇಕಾದರೂ ಆಗಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜಿಲ್ಲೆಯ ಶಾಸಕರು, ಬ್ಲಾಕ್‌ ಅಧ್ಯಕ್ಷರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ …

Read More »

ಅಭಯ ಪಾಟೀಲ ಅವರ ಪ್ರಯತ್ನದಿಂದ ಸ್ಥಳೀಯ ಜನಪ್ರತಿನಿಧಿಗಳ ಅಭಿವೃದ್ಧಿ ನಿಧಿಯಿಂದ 90 ಲಕ್ಷ ರೂ.ವೆಚ್ಚದಲ್ಲಿ ಖರೀದಿಸಿದ ವಿವಿಧ ವಾಹನಗಳ ಉದ್ಘಾಟನಾ ಸಮಾರಂಭ

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರ ಪ್ರಯತ್ನದಿಂದ ಸ್ಥಳೀಯ ಜನಪ್ರತಿನಿಧಿಗಳ ಅಭಿವೃದ್ಧಿ ನಿಧಿಯಿಂದ 90 ಲಕ್ಷ ರೂ.ವೆಚ್ಚದಲ್ಲಿ ಖರೀದಿಸಿದ ವಿವಿಧ ವಾಹನಗಳ ಉದ್ಘಾಟನಾ ಸಮಾರಂಭ ನಡೆಯಿತು. ಈ ವಾಹನಗಳನ್ನು ಮಚ್ಚೆ ನಗರ ಪಂಚಾಯಿತಿಗೆ ನೀಡಲಾಯಿತು  15ನೇ ಹಣಕಾಸು ಆಯೋಗ, ಸ್ವಚ್ಛ ಭಾರತ್ ಮಿಷನ್ ಮತ್ತು ರಾಜ್ಯ ಹಣಕಾಸು ಆಯೋಗದ ನಿಧಿಯಲ್ಲಿ ಶಾಸಕ ಅಭಯ ಪಾಟೀಲ ಅವರ ವಿಶೇಷ ಪ್ರಯತ್ನದಿಂದ ಮಚ್ಚೆ ನಗರ ಪಂಚಾಯಿತಿಗೆ ವಿವಿಧ ವಾಹನಗಳನ್ನು ಖರೀದಿಸಲಾಗಿದೆ. ಈ …

Read More »

ಬಿಸಿಯೂಟ ಅಡುಗೆ ಸಿಬ್ಬಂದಿ’ಗೆ ‘ಶಿಕ್ಷಣ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ತಯಾರಿಕೆಯ ಅಡುಗೆ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ ಏಪ್ರಾನ್, ತಲೆಗವಸು, ಕೈಗವರು ಧರಿಸಲು ಸೂಚಿಸಿದೆ. ಅಲ್ಲದೇ ವಿವಾದಕ್ಕೀಡು ಮಾಡುವಂತೆ ಅಡುಗೆ ಸಿಬ್ಬಂದಿಗಳು ಬಳೆ ತೊಡದಂತೆ ಸೂಚಿಸಲಾಗಿದೆ.   ಶಿಕ್ಷಣ ಇಲಾಖೆಯಿಂದ ಮಧ್ಯಾಹ್ನದ ಬಿಸಿಯೂಟದಲ್ಲಿ ನೈರ್ಮಲ್ಯ, ಸ್ವಚ್ಛತೆ, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಬಿಸಿಯೂಟ ಸಿಬ್ಬಂದಿಯು ಪಾಲಿಸಬೇಕಾದ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಬಿಸಿಯೂಟ ಅಡುಗೆ ಸಿಬ್ಬಂದಿಗಳಿಗೆ ಪ್ರಕಟಿಸಿರುವಂತ ಮಾರ್ಗಸೂಚಿಯಲ್ಲಿ …

Read More »

ಮಹಾರಾಷ್ಟ್ರ, ಆಂಧ್ರದಂತೆ ಸಿನಿಮಾ​ ಟಿಕೆಟ್ ಬೆಲೆ ಕಡಿಮೆ ಮಾಡಿ: ಹಿರಿಯ ನಟ ಅಶೋಕ್

ಸಿನಿಮಾ ಟಿಕೆಟ್​ ಬಗ್ಗೆ ಹಿರಿಯ ನಟ ಅಶೋಕ್ ಮಾತನಾಡಿರುವುದು..ಕನ್ನಡ ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡುತ್ತಿವೆ. ಅದ್ಧೂರಿ ಮೇಕಿಂಗ್ ಜೊತೆಗೆ ಬೆಸ್ಟ್‌ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಪ್ರಿಯರನ್ನು ಆಕರ್ಷಿಸುತ್ತಿವೆ. ಸ್ಯಾಂಡಲ್​ವುಡ್​ನಲ್ಲಿ ಹೊಸ ಸಿನಿಮಾಗಳ ಭರಾಟೆ ಜೋರಾಗಿದೆ. ಆದರೆ ಚಿತ್ರಮಂದಿರಗಳು ಮಾತ್ರ ಮಂಕಾಗಿವೆ. ಪ್ರೇಕ್ಷಕರು ಅಷ್ಟಾಗಿ ಚಿತ್ರಮಂದಿರಗಳತ್ತ ಬರುತ್ತಿಲ್ಲ ಅನ್ನೋದು ಮಾಲೀಕರ ಅಳಲು. ಇದರ ಎಫೆಕ್ಟ್ ನಿರ್ಮಾಪಕರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ತಟ್ಟುತ್ತಿದೆ. ಓಟಿಟಿಯಲ್ಲಿ ಶೀಘ್ರ ಬಿಡುಗಡೆ: ಅಷ್ಟಕ್ಕೂ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಏಕೆ ಬರುತ್ತಿಲ್ಲ …

Read More »

ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳು ಸರಿಯಿಲ್ಲ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ರೈತ ವಿರೋಧಿ ಧೋರಣೆ ಹೊಂದಿದೆ. ಅಲ್ಲದೇ, ಕೈಗಾರಿಕೆಗಳಿಗೆ ಹಾಗು ಜನಸಾಮಾನ್ಯರಿಗೆ ಹೊಡೆತ ನೀಡುವ ನಿರ್ಧಾರಗಳನ್ನು ಕೈಗೊಂಡಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ. ಎಪಿಎಂಸಿ ಕಾನೂನು ರದ್ದು ಮಾಡುವ ಮೂಲಕ ರೈತರು ತಾವು ಬೆಳೆದಂತಹ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯದಿಂದ ವಂಚಿತರಾಗಿದ್ದಾರೆ. ಹಿಂದೆ ಸಾಗಾಣಿಕೆ ವೆಚ್ಚ, ದಲ್ಲಾಳಿಗಳ ಕಮಿಷನ್ ಇತರ ಖರ್ಚುಗಳ …

Read More »

ಮೈಸೂರು ಯುವ ಬ್ರಿಗೇಡ್ ಸದಸ್ಯನ ಕೊಲೆ ಪ್ರಕರಣ-ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್

ಮೈಸೂರು: ಟಿ ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರತಿಕ್ರಿಯಿಸಿದ್ದಾರೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಶ್ರೀರಾಂಪುರ ಕಾಲೋನಿಯ ವೇಣುಗೋಪಾಲ್ (32) ಎಂಬಾತ ನಿನ್ನೆ(ಭಾನುವಾರ) ಹತ್ಯೆಯಾಗಿದ್ದರು. ಇವರು ಯುವ ಬ್ರಿಗೇಡ್​​ನ ಸದಸ್ಯ. ಘಟನೆಗೆ ಕೋಮು ಸಂಬಂಧ ಇಲ್ಲ: ಪುನೀತ್ ರಾಜ್‍ ಕುಮಾರ್ ಫೋಟೋ ಅಳವಡಿಕೆ ವಿಚಾರಕ್ಕೆ ಹಾಗೂ ಬೈಕ್ ನಿಲ್ಲಿಸುವ ವಿಚಾರದಲ್ಲಿ …

Read More »

ಹಂತಕರಿಗೆ ಕಠಿಣ ಶಿಕ್ಷೆ ಬೇಡ, ಅವರ ಮನ ಪರಿವರ್ತನೆಯಾಗಲಿ

ಹುಬ್ಬಳ್ಳಿ: “ಜೈನ ಮುನಿ ಹತ್ಯೆಯನ್ನು ಎಲ್ಲ ರಾಜಕೀಯ ಪಕ್ಷದವರು ಖಂಡಿಸಿದ್ದಾರೆ. ಇದಕ್ಕೆ ಧನ್ಯವಾದ. ಇಂತಹ ಕೃತ್ಯ ಆಗಲೇಬಾರದು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ​ ಭೇಟಿ ಬಳಿಕ ನಾನು ಉಪವಾಸ ಸತ್ಯಾಗ್ರಹ ಹಿಂಪಡೆಯುತ್ತೇನೆ” ಎಂದು ಗುಣಧರನಂದಿ ಮುನಿ ಮಹಾರಾಜರು ಹೇಳಿದರು. ಇದೇ ವೇಳೆ ಹಂತಕರಿಗೆ ಕಠಿಣ ಶಿಕ್ಷೆ ಬೇಡ, ಅವರ ಮನ ಪರಿವರ್ತನೆಯಾಗಲಿ ಎಂದರು. ವರೂರಿಗೆ ಇಂದು ಗೃಹ ಸಚಿವ ಜಿ.ಪರಮೇಶ್ವರ್‌ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈನ …

Read More »