Breaking News

Uncategorized

ಲೋಕಸಮರ: BJP ಘಟಕದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ. ಲಿಸ್ಟ್‌ನಲ್ಲಿ ಯಾರೆಲ್ಲಾ ಇದ್ದಾರೆ?

2024ರ Loka Saba ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ BJP ಘಟಕದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ.ರಾಜ್ಯ ಬಿಜೆಪಿ ಘಟಕದ ವತಿಯಿಂದ ಯಾವ್ಯಾವ ಕ್ಷೇತ್ರಕ್ಕೆ ಯಾರ್ಯಾರು ಅಭ್ಯರ್ಥಿಗಳಾಗಬೇಕು? ಅವರ Strength and Weakness ಕುರಿತ ವರದಿಯೊಂದಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ಅಳೆದುತೂಗಿ ಪಟ್ಟಿ‌ ಸಿದ್ಧಪಡಿಸಿದ್ದು,‌ ಎಲ್ಲವೂ ಅಂದುಕೊಂಡಂತೆ ಆದ್ರೆ, ಫೆಬ್ರವರಿ ಮೊದಲ ವಾರದಲ್ಲಿ ಪಟ್ಟಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷರ ಕೈ ಸೇರಲಿದೆ. ಈಗಾಗಲೇ ಎರಡು …

Read More »

ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಸಿಎಂ ವಿರುದ್ಧ ಜೋಶಿ ಕೆಂಡ

ಬೆಂಗಳೂರು: ಸಿದ್ದರಾಮಯ್ಯನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.   ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) …

Read More »

ಹನುಮ ಧ್ವಜಕ್ಕೆ ಅಪಮಾನ: ಬಿಜೆಪಿಯಿಂದ ನಾಳೆ ಪ್ರತಿಭಟನೆ

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧ ನೀತಿ ಅನುಸರಿಸುತ್ತಿದ್ದು, ಕೆರಗೋಡಿನಲ್ಲಿ ಹನುಮಧ್ವಜ ಮತ್ತು ರಾಷ್ಟ್ರಧ್ವಜಕ್ಕೂ ಅಪಮಾನ ಮಾಡಿದ ಘಟನೆಯನ್ನು ಖಂಡಿಸಿ ಸೋಮವಾರ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.   ನಾಳೆ ಬೆಳಿಗ್ಗೆ 10 ಗಂಟೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಹನುಮಧ್ವಜವನ್ನು ಕೆಳಕ್ಕಿಳಿಸಿ ಹರಿದಿರುವುದು ಖಂಡನೀಯ ಎಂದು …

Read More »

ಅವಕಾಶವಾದಿ ರಾಜಕೀಯ ಮಾಡುವವರ ಬಗ್ಗೆ ನಾವೇನೂ ಮಾಡಲಾಗದು: ಎಂ.ಬಿ.ಪಾಟೀಲ

ವಿಜಯಪುರ: ಅವಕಾಶವಾದಿ ರಾಜಕೀಯ ಮಾಡುವವರ ಬಗ್ಗೆ ನಾವೇನೂ ಮಾಡಲಾಗದು, ಇದೆಲ್ಲ ಜಗತ್ತಿನ ನಿಯಮ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋಗುವವರು ಹೋಗುತ್ತಾರೆ, ನಾವು ನಮ್ಮ ಸಿದ್ಧಾಂತದೊಂದಿಗೆ ಮುಂದುವರೆಯುತ್ತೇವೆ. ಇದರಿಂದ ನಾವು ಮತ್ತಷ್ಡು ಹೆಚ್ಚಿನ ರೀತಿಯಲ್ಲಿ ನಮ್ಮ ಬದ್ಧತೆಯಿಂದ ಸಿದ್ದಾಪುಗಳೊಂಡಿದೆ ಕೆಲಸ ಮಾಡಲು ಸಹಕಾರಿ ಆಗಲಿದೆ ಎಂದರು. ಆಗಾಗ ಕಾಲಕಾಲಕ್ಕೆ ಇಂಥದ್ದನ್ನೆಲ್ಲ ನೋಡುತ್ತಿದ್ದೇವೆ. ಇಂಥದ್ದೆಲ್ಲ ಶುದ್ಧವಾಗಬೇಕಿದೆ …

Read More »

ಭಾರತ ಧ್ವಜ ಹಾರಿಸುವ ಬದಲು ಭಗವಾಧ್ವಜ ಹಾರಿಸಿದ್ದು ತಪ್ಪು:C.M.

ಚಿತ್ರದುರ್ಗ: ಭಾರತ ದೇಶದ ಧ್ವಜ ಹಾರಿಸುವುದು ಬಿಟ್ಟು ಭಗವಾಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಧ್ವಜ ಕಿತ್ತುಹಾಕಿರುವುದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ ನಮ್ಮ ದೇಶದ ಬಾವುಟ ಹಾರಿಸಬೇಕು ಎಂದರು.   ಶ್ಯಾಮನೂರು ಶಿವಶಂಕರಪ್ಪನವರು ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರೇ ಗೆಲ್ಲಲಿ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ನನಗೆ …

Read More »

ಅಸ್ಸಾಂನ ಆಂತರಿಕ ಸಂಘರ್ಷ ಗೊತ್ತಿದ್ದರೂ ರಾಹುಲ್ ಗಾಂಧಿ ಅಲ್ಲಿಗೆ ಹೋಗಿದ್ದೇಕೆ:H.D.D.

ಹಾಸನ, ಜನವರಿ 25: ಅಸ್ಸಾಂನಲ್ಲಿ ಕೆಲವು ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಇದೆ, ಸಂಘರ್ಷದ ಪರಿಸ್ಥಿತಿ ಇದೆ. ಇದು ಗೊತ್ತಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಲ್ಲಿಗೆ ಹೋಗಿದ್ದೇಕೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್​ಡಿ ದೇವೇಗೌಡರು (HD Deve Gowda) ಪ್ರಶ್ನಿಸಿದರು. ಹಾಸನದಲ್ಲಿ ತಾಲೂಕುವಾರು ಸಭೆ ನಡೆಸಿ ಪಕ್ಷದ ಎಲ್ಲಾ ಹಂತದ ಚುನಾಯಿತ ಹಾಲಿ ಹಾಗೂ ಮಾಜಿ ಸದಸ್ಯರ ಭೇಟಿಯಾಗುತ್ತಿರುವ ಸಂದರ್ಭ ದೇವೇಗೌಡರು ಮಾತನಾಡಿದರು. ರಾಹುಲ್ ಗಾಂಧಿಯ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ …

Read More »

ಕೊನೆಗೂ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿದ ಸಿದ್ದರಾಮಯ್ಯ, ಎಷ್ಟು ಗೊತ್ತಾ?

ತುಮಕೂರು,: ಬೆಲೆ ಇಳಿಕೆಯಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ಡಿಸೆಂಬರ್ ತಿಂಗಳಾಂತ್ಯದಲ್ಲಿಕೊಬ್ಬರಿಗೆ (Copra/Coconut)ಬೆಂಬಲ ಬೆಲೆಹೆಚ್ಚಿಸಿ ಆದೇಶಿಸಿತ್ತು. ಆದರೆ, ಇದುವರೆಗೆ ಯಾವುದೇ ಘೋಷಣೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೊನೆಗೂ ಕೊಬ್ಬರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ತುಮಕೂರಿ​ನ ಸಿದ್ದಗಂಗಾ ಮಠದ ಬಳಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಹೆಚ್ಚುವರಿಯಾಗಿ 1,500 ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಕುಣಿಗಲ್‌ನಲ್ಲಿ ಸ್ಟಡ್ ಫಾರಂನ ಟೌನ್‌ಶಿಪ್‌ ಮಾಡುವ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ರೇಸ್‌ಕೋರ್ಸ್‌ …

Read More »

ನಾಣ್ಯಗಳಲ್ಲಿ ಸಿದ್ಧವಾದ ಅಯೋಧ್ಯೆ ರಾಮ ಮಂದಿರ; ಪ್ರಧಾನಿ ಮೋದಿಗೆ ಇದುವೇ ವಿಶೇಷ ಉಡುಗೊರೆ

ದಾವಣಗೆರೆ, :ಅಯೋಧ್ಯೆ ಶ್ರೀರಾಮ ಮಂದಿರ(Ayodhya Ram Mandir) ನಾಳೆ ಲೋಕಾರ್ಪಣೆಗೊಳ್ಳಲಿದೆ. ಈ ನಡುವೆ ಕರ್ನಾಟಕದಲ್ಲಿ ರಾಮ ಭಕ್ತರು ಅದರಲ್ಲೂ ಕಲಾವಿದರು ರಾಮ ಮಂದಿರದ ಸ್ಥಬ್ದಚಿತ್ರಗಳನ್ನು ರಚಿಸುತ್ತಿದ್ದಾರೆ. ಇತ್ತೀಚೆಗೆ ಪೆನ್ಸಿಲ್ ಲೆಡ್​ನಲ್ಲಿ ರಾಮನ ಕೆತ್ತನೆ, ಕೇಕ್​ನಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಜೈ ಶ್ರೀರಾಮ್ ಹೆಸರುಗಳಲ್ಲೇ ರಾಮನ ಚಿತ್ರ ಬಿಡಿಸಿರುವುದು ಸೇರಿದಂತೆ ಅನೇಕ ರೀತಿಯ ಚಿತ್ರಗಳನ್ನು ಬಿಡಿಸಲಾಗಿತ್ತು. ಇದೀಗ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಉಡುಗೊರೆ ನೀಡಲು ದಾವಣಗೆರೆಯಲ್ಲಿ (Davanagere) ನಾಣ್ಯಗಳಲ್ಲಿ ಅಯೋಧ್ಯೆ ರಾಮ ಮಂದಿರ …

Read More »

ವಿವಾದ ಸೃಷ್ಟಿಸಿದ್ದ ಹುಬ್ಬಳ್ಳಿ MTS ಕಾಲೋನಿಯ 13 ಎಕರೆ ಜಮೀನು ಲೀಸ್ ಟೆಂಡರ್ ರದ್ದು: RLDA ಬೋರ್ಡ್​ ಆದೇಶ

ಹುಬ್ಬಳ್ಳಿ, ಜ.21: ಸಾಕಷ್ಟು ವಿವಾದ ಸೃಷ್ಟಿಸಿದ್ದಹುಬ್ಬಳ್ಳಿಯ (Hubballi)ಎಂಟಿಎಸ್ ಕಾಲೋನಿಯ 13 ಎಕರೆ ಜಮೀನಿನ ಟೆಂಡರ್ ಪ್ರಕ್ರಿಯೆಯನ್ನು ರೈಲ್ವೆ ಲ್ಯಾಂಡ್ ಡೆವಲಪ್ಮೆಂಟ್ ಅಥಾರಿಟಿ (RLDA) ಬೋರ್ಡ್ ರದ್ದುಗೊಳಿಸಿ ಆದೇಶಿಸಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ MTS ಕಾಲೀನಿಯ 13 ಎಕರೇ ಜಮೀನನ್ನು 99 ವರ್ಷಗಳಿಗೆ ಲೀಸ್​ಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ರೈಲ್ವೇ ಭೂಮಿ ಅಭಿವೃದ್ಧಿ ಪ್ರಾಧಿಕಾರವು 13 ಎಕರೇ ಜಮೀನು ಲೀಸ್​ಗೆ ಇದೆ ಎಂದು ಬೋರ್ಡ್ ಹಾಕಿತ್ತು. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ …

Read More »

ಬಳ್ಳಾರಿ: ಗುತ್ತಿಗನೂರು ಗ್ರಾಮದಲ್ಲಿ ಹೊಟೇಲ್​ನಲ್ಲಿ ದಲಿತರಿಗೆ ಊಟ ನೀಡಲು ನಿರಾಕರಣೆ, ಅಸ್ಪೃಶ್ಯತೆ ವಿಡಿಯೋ ವೈರಲ್

ಬಳ್ಳಾರಿ, : ಧಾರವಾಡದಲ್ಲಿ ಹೋಟೆಲ್, ಕಟಿಂಗ್ ಶಾಪ್ ಹಾಗೂ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಸುದ್ದಿಯಾದ ಬೆನ್ನಲ್ಲೇ ಬಳ್ಳಾರಿ (Ballari)ಅಸ್ಪೃಶ್ಯತೆ (Untouchability)ಆಚರಣೆ ಪ್ರಕರಣ ಬೆಳಕಿಗೆ ಬಂದಿದೆ. ಊಟಕ್ಕೆಂದು ಹೊಟೇಲ್​ಗೆ ಬಂದ ದಲಿತ (Dalit) ಯುವಕರಿಗೆ “ಹೊಟೇಲ್ ಮುಚ್ಚುತ್ತೇನೆ, ಆದರೆ, ನಿಮಗೆ ಊಟ ಕೊಡಲ್ಲ” ಎಂದು ಮಹಿಳೆಯೊಬ್ಬಳು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಹೊಟೇಲ್‌ನಲ್ಲಿ ಆಹಾರ ನೀಡಲು ಮಹಿಳೆ ನಿರಾಕರಣೆ ಮಾಡಿದ್ದಾರೆ. ಅಸ್ಪೃಶ್ಯತೆ ವಿರುದ್ಧ ಗರಂ ಆದ …

Read More »