Breaking News

Uncategorized

22 ಸಾವಿರ ಲಂಚ ಪಡೆಯುವಾಗ, ಜಿಲ್ಲಾ ನೋಂದಣಿ ಕಚೇರಿಯ ಡೇಟಾ ಆಪರೇಟರ್‌ ಸೋಮಶೇಖರ ಮಾಸ್ತಮರಡಿಲೋಕಾಯುಕ್ತ ಪೊಲೀಸರ ಬಲೆಗೆ

ಬೆಳಗಾವಿ: ಜಿಲ್ಲಾ ನೋಂದಣಿ ಕಚೇರಿಯ ಡೇಟಾ ಆಪರೇಟರ್‌ ಸೋಮಶೇಖರ ಮಾಸ್ತಮರಡಿ ₹22 ಸಾವಿರ ಲಂಚ ಪಡೆಯುವಾಗ, ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ‘ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ ನಾನು ಖರೀದಿಸಿದ ಜಾಗಕ್ಕೆ ಸಂಬಂಧಿಸಿ ಕೊರತೆ ಮುದ್ರಾಂಕ ದೃಢೀಕರಣ ಮಾಡಿಕೊಡಲು ಸೋಮಶೇಖರ ₹22 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ’ ಎಂದು ಬೆಳಗಾವಿಯ ಅವಿನಾಶ ಧಾಮಣಕರ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.   ‘ಅವನಾಶ ಅವರಿಂದ ಗುರುವಾರ ಹಣ ಪಡೆಯುವಾಗ ಸಿಕ್ಕಿಬಿದ್ದ ಸೋಮಶೇಖರ …

Read More »

ಮಾಜಿ ದೇವದಾಸಿಯರ ಮಕ್ಕಳ ಮದುವೆಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ

ಬೆಂಗಳೂರು : ರಾಜ್ಯ ಸರ್ಕಾರವು ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿ\ಯುವಕನನ್ನು ಮದುವೆಯಾದ್ರೆ ಸರ್ಕಾರದಿಂದ ಸಹಾಯಧ ಸಿಗಲಿದೆ. ಮಾಜಿ ದೇವದಾಸಿಯರ ವಯಸ್ಕ ಗಂಡು ಹಾಗೂ ಹೆಣ್ಣು ಮಕ್ಕಳು, ಮಾಜಿ ದೇವದಾಸಿಗಳಲ್ಲದ ಯಾವುದೇ ಜಾತಿಯ ಕುಟುಂಬದ ಯುವತಿ/ಯುವಕನನ್ನು ವಿವಾಹವಾದಲ್ಲಿ; ಆ ದಂಪತಿಗೆ ಕ್ರಮವಾಗಿ 3.00 ಹಾಗೂ 5.00 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಗಾಗಿ ಸಹಾಯವಾಣಿ 9482300400 ಗೆ ಕರೆ …

Read More »

ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಗಳು

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ ರೈಲ್ವೇಯಲ್ಲಿ ನೇಮಕಾತಿಗಾಗಿ ಆಯಾ ವರ್ಷದಲ್ಲಿ ಮತ್ತೆ ಮತ್ತೆ ಅಧಿಸೂಚನೆ ಹೊರಡಿಸುವುದಿಲ್ಲ. ಹಾಗಾಗಿ ಅಭ್ಯರ್ಥಿಗಳು ಅನಿರ್ದಿಷ್ಟವಾಗಿ ಅಧಿಸೂಚನೆಗಾಗಿ ಕಾಯಬೇಕಾಗಿಲ್ಲ. ಮುಂಬರುವ ಪರೀಕ್ಷೆಗಳಿಗೆ ತಯಾರಿಯಾಲು ಈಗಿನಿಂದಲೇ ಸಮಯ ಮಾಡಿಕೊಳ್ಳಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ರೈಲ್ವೇ (Indian Railways) ಮಹತ್ವದ ಘೋಷಣೆ ಮಾಡಿದೆ. ಫೆಬ್ರವರಿ 2 ರಂದು, ರೈಲ್ವೆ ಮಂಡಳಿಯು ಎಲ್ಲಾ ರೈಲ್ವೆ ನೇಮಕಾತಿ ಮಂಡಳಿಗಳಿಗೆ (Railway Recruitment Board -RRB) ಕೇಂದ್ರೀಕೃತ ಉದ್ಯೋಗ ಅಧಿಸೂಚನೆ ಹೊರಡಿಸಲು …

Read More »

ಕಾಂಗ್ರೆಸ್ ಕಚೇರಿಯೊಳಗೆ ನುಗ್ಗಿದ ; 27 ಜನರ ವಿರುದ್ಧ ಎಫ್‌ಐಆರ್.

ಬೆಳಗಾವಿ, : ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿಗೆ (Belagavi Congress Office) ಬಿಜೆಪಿ ಕಾರ್ಯಕರ್ತರು ನುಗ್ಗಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಚೇರಿಗೆ ನುಗ್ಗಿದ 27ಬಿಜೆಪಿ ಕಾರ್ಯಕರ್ತರವಿರುದ್ಧ ಇದೀಗ ಎಫ್‌ಐಆರ್(FIR) ದಾಖಲಿಸಲಾಗಿದೆ. ಕಾಂಗ್ರೆಸ್ ಭವನಕ್ಕೆ ಅತಿಕ್ರಮಣ ಪ್ರವೇಶ ಹಾಗೂ ಸಂಚಾರಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಬಿಜೆಪಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ್, ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮುರಗೇಂದ್ರಗೌಡ ಪಾಟೀಲ್ ಸೇರಿದಂತೆ 27 ಜನರ ವಿರುದ್ಧ ಐಪಿಸಿ ಸೆಕ್ಷನ್ 143, …

Read More »

ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಓಕೆ: ಆಗದಿರಲಿ ಭಾರತದ ಸಮಗ್ರತೆಗೆ ಧಕ್ಕೆ

ಸ್ವಲ್ಪ ನೆನಪು ಮಾಡಿಕೊಳ್ಳಿ. 2018 ವಿಧಾನಸಭೆ ಚುನಾವಣೆಗೆ 10 ತಿಂಗಳು ಸಮಯ ಇದೆ ಎನ್ನುವಾಗ ನಡೆದ ಆ ಚರ್ಚೆ. ಆಗ ಚರ್ಚೆಗೆ ರಾಜ್ಯದಲ್ಲಿ ದೊಡ್ಡ ರಾಜಕೀಯ ವಿಷಯ ಇರಲಿಲ್ಲ. ಆಡಳಿತರೂಢ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟುವ ಲಕ್ಷಣ ಇತ್ತು. ಆಗ ಮುಖ್ಯಮಂತ್ರಿ ಆಗಿದ್ದ, ಕರ್ನಾಟಕದ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಮ್ಮಿಂದೊಮ್ಮೆಲೆ ಹಿಂದಿ-ವಿರೋಧಿ ಚಳವಳಿಯ ತಿದಿ ಒತ್ತಿದರು. ಒಮ್ಮೆಲೆ ಎಲ್ಲೆಲ್ಲೂ ಚರ್ಚೆ ಮೊಳಗಿತು. ಕನ್ನಡದ ಅಸ್ಮಿತೆ ಉಳಿಸಿ ಎಂಬ ಉದ್ಘೋಷ ಎಲ್ಲೆಲ್ಲೂ …

Read More »

ರಸ್ತೆಯಲ್ಲಿ ಹರಿದ ಡೀಸೆಲ್, ಆಯಿಲ್

ಚಾಲುಕ್ಯ ಸರ್ಕಲ್ ನಲ್ಲಿ ಸುಮಾರು 100 ಮೀಟರ್ ವರೆಗೆ ಡೀಸೆಲ್ ಹಾಗೂ ಆಯಿಲ್ ಹರಿದಿತ್ತು. ಈ ವೇಳೆ ಪೊಲೀಸರು ರಸ್ತೆಯಲ್ಲಿ ಹರಿದಿದ್ದ ಆಯಿಲ್ ಹಾಗೂ ಡೀಸೆಲ್ ಸ್ವಚ್ಛಗೊಳಿಸುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದಿದ್ದ ಹಿನ್ನಲೆ ರಸ್ತೆಯಲ್ಲಿ ಹರಿದಿದ್ದ ಆಯಿಲ್ ಹಾಗೂ ಡೀಸೆಲ್ ಮೇಲೆ ಮಣ್ಣು ಹಾಕಿ ಸಂಚಾರಿ ಪೊಲೀಸರೇ ರಸ್ತೆ ಸ್ವಚ್ಛಗೊಳಿಸಿದ್ದಾರೆ. ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಟಿಪ್ಪರ್ ಹತ್ತಿದೆ. ಈ ಪರಿಣಾಮ ಚಾಲುಕ್ಯ …

Read More »

ಪೊಲೀಸ್ ಇಲಾಖೆಯಲ್ಲಿ ಕಳ್ಳಾಟ ಆಡುತ್ತಿದ್ದ ಅಧಿಕಾರಿಗಳಿಗೆ ಶಾಕ್; ವರ್ಗಾವಣೆ ನಂತರ NOC, LPC ಕಡ್ಡಾಯ

ಬೆಂಗಳೂರು, : ಪೊಲೀಸ್ ಇಲಾಖೆಯಲ್ಲಿ (Police Department) ಕಳ್ಳಾಟ ಆಡುತ್ತಿದ್ದ ಅಧಿಕಾರಿಗಳಿಗೆ ಶಾಕ್. ವರ್ಗಾವಣೆ ನಂತರ ಇಷ್ಟ ಬಂದಂತೆ ವರ್ತಿಸುತ್ತಿದ್ದವರಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಚಾಟಿ ಬೀಸಿದ್ದಾರೆ. ನಗರ ಪೊಲೀಸ್ ಆಯುಕ್ತರು ಪ್ರತಿ ಠಾಣೆಗೆ ಭೇಟಿ ಮಾಡಿದಾಗ ಪೊಲೀಸರ ಕಳ್ಳಾಟ ಬಯಲಾಗಿದೆ. ಹೀಗಾಗಿ ಮುಂದೆ ಹೀಗೆ ಆಗದಂತೆ ಖಡಕ್ ಆಗಿ ಸೂಚನೆ ಕೊಟ್ಟಿದ್ದಾರೆ. ಹಾಗೂ ಕೆಲವು ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. ವರ್ಗಾವಣೆ ನಂತರ ಕೆಲಸಕ್ಕೆ …

Read More »

ಕುಡಿಯುವ ನೀರಿನ ಆಹಾಕಾರ ತಪ್ಪಿಸಲು ಸ್ಥಳೀಯ ಪಿಡಿಓ, ವಿಎ ಮತ್ತು ಆರ್‍ಡಿಪಿಆರ್ ಇಂಜನೀಯರ್‍ಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಿ:ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕುಡಿಯುವ ನೀರಿನ ಆಹಾಕಾರ ತಪ್ಪಿಸಲು ಸ್ಥಳೀಯ ಪಿಡಿಓ, ವಿಎ ಮತ್ತು ಆರ್‍ಡಿಪಿಆರ್ ಇಂಜನೀಯರ್‍ಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರದಂದು ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲೂಕು ಮಟ್ಟದ ಟಾಸ್ಕ್‍ಫೋರ್ಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ತಿಂಗಳಿನಿಂದ ಮೇ-ತಿಂಗಳಿನವರೆಗೆ ಕುಡಿಯುವ …

Read More »

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘ಉಚಿತ ಸೈಕಲ್ ವಿತರಣೆ’ ಯೋಜನೆ ಮರು ಜಾರಿ ಸಾಧ್ಯತೆ..!

ಬೆಂಗಳೂರು : ರಾಜ್ಯದ 8 ನೇ ತರಗತಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಉಚಿತ ಸೈಕಲ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದೀಗ ಈ ಸೈಕಲ್ ಯೋಜನೆಯನ್ನು ಮತ್ತೆ ಸರ್ಕಾರ ಮರುಪರಿಚಯಿಸುವ ಸಾಧ್ಯತೆಯಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಿಎಂ ಸಿದ್ದರಾಮಯ್ಯರಿಗೆ ಪ್ರಸ್ತಾವನೆ ಸಲ್ಲಿಸಿದ್ದು, 2020-21ನೇ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಂಡಿರುವ ಉಚಿತ ಬೈಸಿಕಲ್ ಯೋಜನೆಯನ್ನು ಮರು ಪರಿಚಯಿಸಲು ಅನುಮೋದನೆ ನೀಡುವಂತೆ ಮನವಿ ಮಾಡಿದೆ. ಹೊಸ ಪ್ರಸ್ತಾವನೆಗಳನ್ನು ಸಲ್ಲಿಸದಂತೆ ಪೂರ್ವ ಸೂಚನೆ ಇದ್ದ ಕಾರಣ, …

Read More »

ಫೆ.5ರಂದು ಗ್ಯಾರಂಟಿ ಫಲಾನುಭವಿಗಳ ಬೃಹತ್ ಸಮಾವೇಶ

ಬೆಳಗಾವಿ: ಸರ್ಕಾರದ ಐದು ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಫಲಾನುಭವಿಗಳ ಸಮಾವೇಶವನ್ನು ಫೆ.5 ರಂದು ನಗರದ ಸರ್ದಾರ್‌ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.   ನಗರದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಯೋಜನೆಗಳ ಫಲಾನುಭವಿಗಳನ್ನು ಕರೆದು ಸಮಾವೇಶ ನಡೆಸಲಾಗುವುದು. ಫಲಾನುಭವಿಗಳನ್ನು ಗುರುತಿಸಿ ಆಹ್ವಾನಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು …

Read More »