ಶಾರ್ಟ್ ಸರ್ಕ್ಯೂಟ್’ ನಿಂದ ಹೊತ್ತಿ ಉರಿದ ಮನೆಗಳು : ಮದುವೆಗೆಂದು ತಂದಿಟ್ಟಿದ್ದ 6 ಲಕ್ಷ ನಗದು ಭಸ್ಮ! ಬೆಳಗಾವಿ : ಶಾರ್ಟ್ ಸರ್ಕ್ಯೂಟ್ ನಿಂದ ಅಕ್ಕ ಪಕ್ಕದಲ್ಲಿ ಇದ್ದಂತಹ ಎರಡು ಮನೆಗಳು ಸುಟ್ಟು ಭಸ್ಮವಾಗಿದ್ದು ಮದುವೆಗೆ ಎಂದು ತಂದಿಟ್ಟದ 6 ಲಕ್ಷ ರೂಪಾಯಿ ನಗದು ಹಣ ಕೂಡ ಈ ವೇಳೆ ಸುಟ್ಟು ಬೂದಿಯಾಗಿರುವ ಘಟನೆ ಇಂದು ಬೆಳಗಾವಿಯ ಹೊಸೂರ ಹರಿಜನ ಗಲ್ಲಿಯಲ್ಲಿ ನಡೆದಿದೆ. ಹೌದು ಬೆಳಗಾವಿಯ ಶಿವರಾಜ್ …
Read More »ಪಿಎಸ್ಐ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು
ಕಾರವಾರ, ಜೂನ್ 15: ಪಿಎಸ್ಐ (PSI) ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಭಾಸ್ಕರ್ ಬೋಂಡೆಲ್ಕರ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಉತ್ತರ ಕನ್ನಡ (Uttar Kannada) ಜಿಲ್ಲೆಯ ಜೋಯಿಡಾ (Joida) ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಮನಗರ ಪಿಎಸ್ಐ ಬಸವರಾಜ ವಿರುದ್ಧ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದಕ್ಕೆ ಭಾಸ್ಕರ್ ಅವರಿಗೆ ಪಿಎಸ್ಐ ಬಸವರಾಜ ನಿರಂತರ ಕಿರುಕಳ ಕೊಡುತ್ತಿದ್ದರು …
Read More »ಬಿಬಿಎಂಪಿ ಶಾಲೆಗಳಲ್ಲಿ ದಾಖಲಾತಿ ಇಳಿಕೆ
ಬೆಂಗಳೂರು, ಜೂನ್ 15: ಬೆಂಗಳೂರಿನ (Bengaluru) ಸಾಕ್ಷರತೆ ಹೆಚ್ಚಿಸುವಲ್ಲಿ ಬೃಹತ ಬೆಂಗಳೂರು ಮಹಾನಗರ ಪಾಲಿಕೆ (BBMP) ಶಾಲೆಗಳ ಪಾತ್ರ ದೊಡ್ಡದಿದೆ. ಆದರೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ. ಇದೀಗ ಈ 2024-25ನೇ ಶೈಕ್ಷಣಿಕ ಸಾಲಿನ ಶಾಲೆ ದಾಖಲಾತಿಯಲ್ಲಿ ಭಾರಿ ಇಳಿಕೆ ಕಂಡಿದೆ. ಬಿಬಿಎಂಪಿ ಶಾಲೆಯಿಂದಲೂ ಬಡವರ ಮಕ್ಕಳು ದೂರ ಉಳಿಯುತ್ತಿದ್ದಾರೆ. ಬಿಬಿಎಂಪಿ ಶಾಲೆಗಳ ದಾಖಲಾತಿಯಲ್ಲಿ ಈ ಬಾರಿ ಭಾರಿ ಇಳಿಕೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿಯ ದಾಖಲಾತಿಯಲ್ಲಿ …
Read More »ಬಿಸಿಯೂಟ ಸೇವಿಸಿ 48 ಮಕ್ಕಳು ಅಸ್ವಸ್ಥ,
ಯಾದಗಿರಿ, ಜೂನ್.15: ಬಿಸಿಯೂಟ ಸೇವಿಸಿ ಒಟ್ಟು 48 ವಿದ್ಯಾರ್ಥಿಗಳು (Students) ಅಸ್ವಸ್ಥಗೊಂಡ ಘಟನೆ ನಿನ್ನೆ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ. ಯಾದಗಿರಿ (Yadgir) ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಶಾಲೆಯ ಮಕ್ಕಳಲ್ಲಿ ವಾಂತಿ ಭೇದಿ ಕಂಡು ಬಂದಿದ್ದು ಒಟ್ಟು 48 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಈ ನಾಲ್ಕು ಶಾಲೆಗಳಿಗೂ ಖಾಸಗಿ …
Read More »ನಿತ್ಯಭವಿಷ್ಯ: ಈ ರಾಶಿಯವರಿಂದು ವೈದ್ಯಕೀಯ ಮತ್ತು ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭದಿನ.
ಮೇಷ: ಆಸ್ತಿ ವಿಚಾರದ ಮಾತುಕತೆ. ಉದ್ಯೋಗದಲ್ಲಿ ಉನ್ನತಿ. ಮಕ್ಕಳಿಂದ ಶುಭವಾರ್ತೆ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗುವುದು. ಶುಭಸಂಖ್ಯೆ: 5 ವೃಷಭ: ಆರೋಗ್ಯದ ಕಡೆ ಗಮನವಿರಲಿ. ದಾಂಪತ್ಯದಲ್ಲಿ ಸಾಮರಸ್ಯ ಮೂಡಿಸಲು ಬಂಧುಗಳ ಸಹಾಯ. ವಿದ್ಯಾರ್ಥಿಗಳಿಗೆ ಪ್ರಗತಿ.ಶುಭಸಂಖ್ಯೆ:1 ಮಿಥುನ: ಹಿರಿಯರ ಆರೋಗ್ಯದಲ್ಲಿ ತೊಂದರೆ. ಮನೆಗೆ ಆತ್ಮೀಯರ ಆಗಮನ. ಹೂವು ಹಣ್ಣು ವ್ಯಾಪಾರಿಗಳಿಗೆ ನಷ್ಟವಾಗುವುದು. ಶುಭಸಂಖ್ಯೆ: 5 ಕಟಕ: ಪದವಿ ಪ್ರಾಪ್ತಿಯಲ್ಲಿ ಶತ್ರುಗಳ ಕಾಟ. ವ್ಯರ್ಥ ಕಾಲಹರಣ. ನ್ಯಾಯಾಲಯದಲ್ಲಿ ಜಯ. ಮಕ್ಕಳ ವಿಚಾರದಲ್ಲಿ ಗಮನವಿರಲಿ. ಶುಭಸಂಖ್ಯೆ: 8 ಸಿಂಹ: ಕರ್ಮಸ್ಥಾನದ ಗುರುವಿನಿಂದ ಧನ ಲಾಭವಾಗಲಿದೆ. ಹೊಸ ಉದ್ಯೋಗದ …
Read More »LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಎಲ್‌ಐಸಿ ಆರೋಗ್ಯ ವಿಮಾ ಕ್ಷೇತ್ರ ಪ್ರವೇಶಿ ಸುವ ಅಂಶ ಬಹುತೇಕ ಖಚಿತವಾಗಿದೆ. ಅದಕ್ಕಾಗಿ ದೇಶದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಆರೋಗ್ಯ ವಿಮಾ ಕ್ಷೇತ್ರದ ಲ್ಲಿನ 5 ಅಗ್ರ ಕಂಪೆನಿಗಳ ಪೈಕಿ ಒಂದನ್ನು ಖರೀದಿಸಿ ಹೊಸ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಆಂಗ್ಲ ವಾಣಿಜ್ಯ ಪತ್ರಿಕೆಯೊಂದು ವರದಿ ಮಾಡಿದೆ. ಈ ಉದ್ದೇಶಕ್ಕಾಗಿ ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ಕ್ಕೆ ತಾನು ಜಾರಿಗೊಳಿಸ ಲಿರುವ ಉದ್ದೇಶಿತ ಆರೋಗ್ಯ …
Read More »ಯಡಿಯೂರಪ್ಪ ವಿರುದ್ಧದ ಬಂಧನ ವಾರಂಟ್ ನಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ: ಎಂ.ಬಿ.ಪಾಟೀಲ್
ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೊರಡಿಸಲಾದ ಬಂಧನ ವಾರಂಟ್ನಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶುಕ್ರವಾರ ಹೇಳಿದ್ದಾರೆ. ಪೋಕ್ಸೊ ಕಾಯ್ದೆ ತುಂಬಾ ಗಂಭೀರವಾಗಿದೆ, ಮತ್ತು ಚಿತ್ರದುರ್ಗ ಶ್ರೀಗಳ ವಿರುದ್ಧದ ಪ್ರಕರಣವನ್ನು ನೀವು ನೋಡಿದ್ದೀರಿ. ಬಂಧನ ವಾರಂಟ್ ಹೊರಡಿಸಿದ್ದು ನ್ಯಾಯಾಲಯವೇ ಹೊರತು ನಾವಲ್ಲ. ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ …
Read More »ಈ ವರ್ಷ 2 ಲಕ್ಷ ಸಸಿಗಳನ್ನು ನೆಡುವ ‘ಬಿಬಿಎಂಪಿ’ ಗುರಿ
ಬೆಂಗಳೂರು: ಈ ವರ್ಷ ನಗರದಲ್ಲಿ 2 ಲಕ್ಷ ಸಸಿಗಳನ್ನು ನೆಡಲು ಬಿಬಿಎಂಪಿ ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕಬ್ಬನ್ ಪಾರ್ಕ್ ನಲ್ಲಿ ಬಿಬಿಎಂಪಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರಿ ಸಾಧನೆಗೆ ಶಾಲಾ ವಿದ್ಯಾರ್ಥಿಗಳ ಸಹಕಾರ ಪಡೆಯಲಾಗುವುದು ಎಂದರು. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್, ಬಿಬಿಎಂಪಿ ಹಲವಾರು ಪರಿಸರ ಸ್ನೇಹಿ ಯೋಜನೆಗಳಿಗಾಗಿ 410 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. …
Read More »ದೇವೇಗೌಡರ ಬಳಿಕ, ಈಗ ಬಿಎಸ್‌ವೈ ಕುಟುಂಬ ನಾಶಕ್ಕೆ ಕೈ ಯತ್ನ: ಎಚ್‌ಡಿಕೆ
ಬೆಂಗಳೂರು: ದೇವೇಗೌಡರ ಕುಟುಂಬವನ್ನು ಮುಗಿಸಿ ಆಯಿತು. ಇನ್ನು 82ರ ಹರೆಯದ, ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸಲು ಕುತಂತ್ರ ಮಾಡಲಾಗುತ್ತಿದೆ. ಆದರೆ ಈ ಯತ್ನ ಫಲಿಸದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂದು ಕೇಂದ್ರದ ಬೃಹತ್ ಉದ್ದಿಮೆ ಮತ್ತು ಉಕ್ಕು ಖಾತೆಯ ಸಚಿವ ಎಚ್.ಡಿ. ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಅವರು ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನ …
Read More »ರಾಯಚೂರು | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ
ರಾಯಚೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ಪೊಸ್ಕೊ ನ್ಯಾಯಾಲಯ ಶುಕ್ರವಾರ 20ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. 2021ರ ಜನವರಿಯಲ್ಲಿ ಲಿಂಗಸುಗೂರು ತಾಲ್ಲೂಕಿನ ನೀರಲಕೇರಿ ಗ್ರಾಮದ ಆರೋಪಿ ಹುಲ್ಲಪ್ಪ ರಾಮಣ್ಣಗೆ (25) ಕಠಿಣ ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಬಿ.ಬಿ. ಜಕಾತಿ ತೀರ್ಪು ನೀಡಿದ್ದಾರೆ. ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ ₹ 9 ಲಕ್ಷ …
Read More »
Laxmi News 24×7