Breaking News

new delhi

ಸಾಲ ಮಂಜೂರು ಮಾಡಿಸಲಿಲ್ಲ ಎಂದು ಮ್ಯಾನೇಜರ್‌ ಮನೆಯಲ್ಲಿ ದರೋಡೆ!

ಬೆಂಗಳೂರು : ಸಾಲ ಮಂಜೂರಾತಿ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಎಲ್‌ಐಸಿ ಹೌಸಿಂಗ್‌ ಕಂಪೆನಿಯ ಮ್ಯಾನೇಜರ್‌ವೊಬ್ಬರ ಪತ್ನಿಯ ಕೈ-ಕಾಲು ಕಟ್ಟಿ ಹಾಕಿ, ದರೋಡೆ ಮಾಡಿದ್ದ ತಮಿಳುನಾಡು ಮೂಲದ ಮೂವರು ಆರೋಪಿಗಳು ಇದೀಗ ಕೆ.ಆರ್‌.ಪುರಂ ಪೊಲೀಸರ ಅತಿಥಿಯಾಗಿದ್ದಾರೆ. ವಿ.ಬಿ.ಲೇಔಟ್‌ ನಿವಾಸಿ ಶಿವಕುಮಾರ್‌ (37), ಅತಿಥಿ ಬಡಾವಣೆ ನಿವಾಸಿಗಳಾದ ಸಿದ್ಧಾರ್ಥ (25) ಮತ್ತು ಡೇವಿಡ್‌ ಅಲಿಯಾಸ್‌ ಬುದ್ಧ ನೇಷನ್‌ (32) ಬಂಧಿತರು. ಆರೋಪಿಗಳಿಂದ ದ್ವಿಚಕ್ರ ವಾಹನ ಹಾಗೂ 6.50 ಲಕ್ಷ ಮೌಲ್ಯದ 170 ಗ್ರಾಂ …

Read More »

ಮಹಾನಾಯಕ’ ಧಾರಾವಾಹಿ ಪ್ರಸಾರ ನಿಲ್ಲಿಸಲು ಖಾಸಗಿ ವಾಹಿನಿ ಮೇಲೆ ಒತ್ತಡ

ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನದ ಗಾಥೆಯ ಕುರಿತಾದ ಮಹಾನಾಯಕ ಧಾರವಾಹಿ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಇದೀಗ ಈ ಧಾರವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಖಾಸಗಿ ವಾಹಿನಿ ಮೇಲೆ ಕೆಲವರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಮಹಾನಾಯಕ ಧಾರವಾಹಿ ನಿಲ್ಲಿಸುವಂತೆ ಹಲವಾರು ದೂರವಾಣಿ ಕರೆಗಳು ಬರುತ್ತಿವೆ. ಮಧ್ಯರಾತ್ರಿ ಕರೆ ಮಾಡಿ ಧಾರವಾಹಿ ನಿಲ್ಲಿಸುವಂತೆ ಕೆಲವರು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಘವೇಂದ್ರ …

Read More »

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸಾಲ ಸೌಲಭ್ಯಕ್ಕಾಗಿ ‘ಅರಿವು’ ಯೋಜನೆಯಡಿ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಬೌದ್ಧ, ಸಿಖ್, ಪಾರ್ಸಿ ಹಾಗೂ ಆಂಗ್ಲೋ-ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಲಿದೆ. ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳಿಂದ ಸಾಲ ಸೌಲಭ್ಯಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ನಿಗಮದ ವೆಬ್‍ಸೈಟ್ www.kmdc.kar.nic.in/arivu2 ನಲ್ಲಿ ಅರ್ಜಿ ಸಲ್ಲಿಸಿ, ಭರ್ತಿ ಮಾಡಿದ ಅರ್ಜಿಯ ಪ್ರಿಂಟೌಟ್‍ನೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸೆಪ್ಟಂಬರ್ …

Read More »

ಕೊಲೆ, ಸುಲಿಗೆ, ಅಕ್ರಮ ಚಟುವಟಿಕೆಗಳೇ ತುಂಬಿದ್ದ ಗ್ರಾಮದಲ್ಲಿ ಈಗ ಶಿಕ್ಷಣ ಕ್ರಾಂತಿ, ಯಾವೂರದು?

ಬೆಳಗಾವಿ : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸವಾಣಿ ಇದೆ.. ಈ ಮಾತು ನಿಜಕ್ಕೂ ಸತ್ಯ. ಜೀವನ ಅರ್ಥ ತಿಳಿಯಲು, ಗುರಿ ಸಾಧಿಸಲು ಗುರು ಬೇಕೆ ಬೇಕು. ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಅಂತಹ ಶಿಕ್ಷಕರ ತವರು ಎಂದು ಈ ಗ್ರಾಮ ಖ್ಯಾತಿ ಪಡೆದಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿರುವ ಈ ಇಂಚಲ ಗ್ರಾಮ ಶಿಕ್ಷಕರಿಂದಲೇ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಈ ಗ್ರಾಮದಲ್ಲಿ ಮನೆಗೆ ಒಬ್ಬರಂತೆ ಶಿಕ್ಷಕರಿದ್ದಾರೆ. …

Read More »

ಐಪಿಎಲ್ ವೇಳಾಪಟ್ಟಿ ಶನಿವಾರ ಪ್ರಕಟ: ಮೊದಲ ಪಂದ್ಯ ಯಾರ ನಡುವೆ ಗೊತ್ತಾ?

ದುಬೈ: ಐಪಿಎಲ್ 13 ರ ವೇಳಾಪಟ್ಟಿ ಶನಿವಾರ ಪ್ರಕಟಗೊಳ್ಳುವ ಸಾಧ‍್ಯತೆಯಿದ್ದು, ಈ ಹಿಂದೆ ನಿಗದಿಯಾದಂತೆ ಮೊದಲ ಪಂದ್ಯ ಚೆನ್ನೈ ಮತ್ತು ಮುಂಬೈ ನಡುವೆಯೇ ನಡೆಯುವ ಸಾಧ‍್ಯತೆಯಿದೆ. ಚೆನ್ನೈ ತಂಡದಲ್ಲಿ ಕೊರೋನಾ ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜತೆ ಸಿಎಸ್ ಕೆ ಆಡುವುದು ಅನುಮಾನ ಎಂಬ ಸುದ್ದಿ ಹಬ್ಬಿತ್ತು. ಆದರೆ ಮೂಲಗಳ ಪ್ರಕಾರ ಈ ಹಿಂದೆ ನಿಗದಿಯಾದಂತೇ ಪಂದ್ಯಗಳು ನಡೆಯಲಿವೆ. ಹೊಸದಾಗಿ ಕೊರೋನಾ ಪ್ರಕರಣ ಕಂಡುಬರದ ಹಿನ್ನಲೆಯಲ್ಲಿ …

Read More »

ರಾಜ್ಯದಲ್ಲಿ 6 ಸಾವಿರ ದಾಟಿದ ಸಾವಿನ ಸಂಖ್ಯೆ : ಉಚಿತ ಔಷಧ ನೀಡಲು ನಿರ್ಧಾರ

ಬೆಂಗಳೂರು  : ರಾಜ್ಯದಲ್ಲಿ ಕೋವಿಡ್‌-19 ರ ಕಾರಣದಿಂದ ಗುರುವಾರ 104 ಮಂದಿ ಸತ್ತಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ ನಿಂದ ಮೃತರಾದವರ ಒಟ್ಟು ಸಂಖ್ಯೆ 6 ಸಾವಿರದ ಗಡಿ ದಾಟಿದೆ. ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬಿರುವ ಕೊರೋನಾ ವೈರಸ್‌ ಗೆ 6054 ಮಂದಿ ಪ್ರಾಣ ಕಳೆದುಕೊಂಡಂತೆ ಆಗಿದೆ. ರಾಜ್ಯದಲ್ಲಿ ಗುರುವಾರ 8,865 ಮಂದಿ ಹೊಸದಾಗಿ ಕೊರೋನಾ ಸೋಂಕು ಉಂಟಾಗಿದೆ. ಇದರೊಂದಿಗೆ ರಾಜ್ಯದಲ್ಲಿನ ಸಕ್ರೀಯ ಕೊರೋನಾ ಪ್ರಕರಣಗಳ ಸಂಖ್ಯೆ 96,099ಕ್ಕೆ ಏರಿಕೆಯಾಗಿದೆ. …

Read More »

ಡ್ರಗ್ಸ್‌ ದಂಧೆಗೆ ಕಡಿವಾಣ: ಆಗ್ರಹ

ಬೆಳಗಾವಿ: ‘ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಹಾಗೂ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ‘ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲ ದೊಡ್ಡಮಟ್ಟದಲ್ಲಿ ವ್ಯಾಪಿಸಿದ್ದು, ಚಲನಚಿತ್ರ ರಂಗದ ನಟ-ನಟಿಯರು, ಪ್ರಭಾವಿಗಳು ಹಾಗೂ ರಾಜಕಾರಣಿಗಳ ಮಕ್ಕಳು ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಶಾಲಾ-ಕಾಲೇಜುಗಳಲ್ಲೂ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. …

Read More »

ಸಾಲ ಮರುಪಾವತಿಗೆ ಪೀಡಿಸಿದರೆ ಕೇಸ್: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ

ಬೆಳಗಾವಿ: ‘ಸಾಲಗಾರರಿಗೆ ಕಿರುಕುಳ ನೀಡುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು. ಇಲ್ಲಿ ಗುರುವಾರ ನಡೆದ ಹಣಕಾಸು ಸಂಸ್ಥೆಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕೆಲ ಖಾಸಗಿ ಹಣಕಾಸು ಸಂಸ್ಥೆಗಳು ಮರ್ಧ್ಯವತಿಗಳನ್ನು ಬಳಸಿಕೊಂಡು ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡುತ್ತಿರುವ ಮಾಹಿತಿ ಇದೆ. ಇದು ಮುಂದುವರಿಯಬಾರದು. ಒತ್ತಾಯದಿಂದ ಸಾಲ ಮರುಪಾವತಿ ಸೇರಿದಂತೆ ಇತರ ತೊಂದರೆ …

Read More »

ವ್ಯಕ್ತಿ ಬಂಧನ: 15 ದ್ವಿಚಕ್ರವಾಹನ ವಶಕ್ಕೆ

ಅಥಣಿ: ದ್ವಿಚಕ್ರ ವಾಹನಗಳ ಕಳವು ಆರೋಪದ ಮೇಲೆ ಇಲ್ಲಿನ ಪೊಲೀಸರು ವ್ಯಕ್ತಿಯೊಬ್ಬರನ್ನು ಗುರುವಾರ ಬಂಧಿಸಿದ್ದಾರೆ. ತಾಲ್ಲೂಕಿನ ಶಿರಹಟ್ಟಿಯ ರಮಜಾನ ಹುಸೇನಸಾಬ ಐನಾಪುರ (27) ಬಂಧಿತ. ‘ಜಿಲ್ಲೆ, ಬಾಗಲಕೋಟೆ ಹಾಗೂ ನೆರೆಯ ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾದ ₹ 5 ಲಕ್ಷ ಮೌಲ್ಯದ 15 ದ್ವಿಚಕ್ರವಾಹನಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ದ್ವಿಚಕ್ರವಾಹನಗಳ ಕಳವು ಪ್ರಕರಣ ಹೆಚ್ಚುತ್ತಿದ್ದುದ್ದರಿಂದ ಡಿಎಸ್‌ಪಿ ಎಸ್.ವಿ. …

Read More »

ದಿನ ಭವಿಷ್ಯ: ಈ ರಾಶಿಯವರಿಗೆ ಕೆಲಸದಲ್ಲಿ ಕೊಂಚ ಹಿನ್ನಡೆ, ಈಶ್ವರ ಪ್ರಾರ್ಥನೆ ಮಾಡಿ

ಮೇಷ: ಶುಭಾಶುಭ ಮಿಶ್ರಫಲವಿದೆ, ಮಾತಿನ ವಿಚಾರದಲ್ಲಿ ಎಚ್ಚರವಾಗಿರಿ, ಪತ್ರಿಕೆಗಳಲ್ಲಿರುವವರಿಗೆ ಕೊಂಚ ಅಸಮಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ಧನ ಸಮೃದ್ಧಿ, ಬೇಡದ ಆಲೋಚನೆಗಳು, ಕೃಷಿಕರಿಗೆ ಉತ್ತಮ ದಿನ, ಕೃಷ್ಣ ಪ್ರಾರ್ಥನೆ ಮಾಡಿ ಮಿಥುನ: ಶುಭಯೋಗವಿದೆ, ಸ್ತ್ರೀಯರಿಗೆ ಪ್ರಮುಖದಿನ, ದುರ್ಜನರ ಸಹವಾಸ ಬೇಡ, ಅಮ್ಮನವರ ಪ್ರಾರ್ಥನೆ ಮಾಡಿ ಕಟಕ: ಕುಟುಂಬ ಪೋಷಣೆ, ದ್ರವ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಶುಭದಿನ, ಮನೆ ದೇವರ ಪ್ರಾರ್ಥನೆ ಮಾಡಿ ಸಿಂಹ: ಹಣನಷ್ಟ, ಆರೋಗ್ಯದಲ್ಲಿ ಏರುಪೇರು, ಮೃತ್ಯುಂಜಯ ಮಂತ್ರ ಪಠಿಸಿ, ಆದಿತ್ಯ …

Read More »