ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮುಖಂಡರು ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ದಿ.ಸುರೇಶ ಅಂಗಡಿ ಅವರ ಕುಟುಂಬದವರಿಗೆ ಶುಕ್ರವಾರ ರಾತ್ರಿ ಸಾಂತ್ವನ ಹೇಳಿದರು. ಶಾಸಕರಾದ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್ ಮತ್ತು ಮಹಾಂತೇಶ ಕೌಜಗಲಿ ಧೈರ್ಯ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವಕುಮಾರ್, ‘ಸುರೇಶ ಅಂಗಡಿ ಬಹಳ ಸೌಮ್ಯ ಸ್ವಭಾವದವರಾಗಿದ್ದರು. ನನ್ನೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಭೇಟಿಯೂ ಆಗಿದ್ದೆ. ಸಚಿವರಾದ ನಂತರವೂ …
Read More »ಮೂವರು ಆರೋಪಿಗಳನ್ನು ಬಂಧಿಸಿ, ₹ 4 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ: ಜಿಲ್ಲಾ ಸಿಇಎನ್ (ಅಪರಾಧ) ಠಾಣೆಯ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರದ ಮೂವರು ಆರೋಪಿಗಳನ್ನು ಬಂಧಿಸಿ, ₹ 4 ಲಕ್ಷ ಮೌಲ್ಯದ 20 ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಜತ್ತ ತಾಲ್ಲೂಕು ಬಿಳ್ಳೂರದ ರಾವಸಾಹೇಬ ಅಣ್ಣಪ್ಪ ನಂದಿವಾಲೆ, ಮೊಹೊಳ ತಾಲ್ಲೂಕು ಶೇಟಪಾಳದ ಸಂಗೀತಾ ದತ್ತಾತ್ರೇಯ ವಾಗಜ ಮತ್ತು ಫಂಡರಪುರ ತಾಲ್ಲೂಕು ಅಡಿವದ ವಿಲಾಸ ಪಾಂಡುರಂಗ ಘಾಡಗೆ ಬಂಧಿತರು. ‘ರಾವಸಾಹೇಬ, ಫಂಡರಪುರದ ಕಡೆಯಿಂದ ಅಥಣಿ ಕಡೆ ಗಾಂಜಾ ಮಾರಲು …
Read More »ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಿಕ್ತು 5 ಸಿಹಿ ಸುದ್ದಿ!
ಆರ್ಸಿಬಿಗೆ ಗುಡ್ ನ್ಯೂಸ್ ನಂ.1 ಅಬುಧಾಬಿ ಕಂಡೀಷನ್‌ಗೆ ಹೊಂದಿಕೊಂಡ ಕೊಹ್ಲಿ ಬಾಯ್ಸ್ ಮೊದಲ ಗುಡ್‌ನ್ಯೂಸ್ ಅಂದ್ರೆ, ಕೊಹ್ಲಿ ಪಡೆ ಅಬುಧಾಬಿ ಕಂಡೀಷನ್‌ಗೆ ಹೊಂದಿಕೊಂಡಿದೆ. ಕಳೆದ 3 ದಿನಗಳಿಂದ ಅಬುದಾಬಿಯಲ್ಲಿ, ಕೊಹ್ಲಿ ಗ್ಯಾಂಗ್ ಮಠಮಠ ಮಧ್ಯಾಹ್ನ ಪ್ರಾಕ್ಟೀಸ್ ಮ್ಯಾಚ್ ಆಡಿದ್ದಾರೆ. ಇಂದಿನ ಪಂದ್ಯವೂ ಮಧ್ಯಾಹ್ನವೇ ನಡೆತೀರೋದು ಆರ್ಸಿಬಿಗೆ ಅಡ್ವಾಂಟೇಜ್ ಆಗಿದೆ. ಆರ್ಸಿಬಿಗೆ ಗುಡ್ ನ್ಯೂಸ್ ನಂ.2 ಸ್ಟ್ರಾಂಗ್ ಆಯ್ತು ಆರ್ಸಿಬಿ ಆಲ್ರೌಂಡರ್ ಕೋಟಾ ಆರ್ಸಿಬಿಗೆ 2ನೇ ಗುಡ್‌ನ್ಯೂಸ್ ಅಂದ್ರೆ, ಕ್ರಿಸ್ ಮಾರಿಸ್ …
Read More »ರಾತ್ರಿ ಜೊತೆಯಲ್ಲೇ ಪಾರ್ಟಿ ಮಾಡಿ ಕೊನೆಗೆ ಆತನನ್ನೆ ಕೊಲೆ ಮಾಡಿದ್ರು..
ಮಂಡ್ಯ: ರಾತ್ರಿ ಫುಲ್ ಪಾರ್ಟಿ ಮಾಡುತ್ತಿದ್ದಾಗ ಜತೆಯಲ್ಲಿದ್ದವರಿಂದಲೇ ಯುವಕನ ಹತ್ಯೆಯಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ನಡೆದಿದೆ. ಪೂರ್ಣಚಂದ್ರು(28) ಕೊಲೆಯಾದ ಯುವಕ. ಕ್ರಷರ್ನಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಚಂದ್ರುನ ಸ್ನೇಹಿತರು ರಾತ್ರಿ ಫುಲ್ ಪಾರ್ಟಿ ಮಾಡಿ ಲಾಂಗು ಮಚ್ಚುಗಳಿಂದ ಹಲ್ಲೆಗೈದು ಕೊಲೆ ಮಾಡಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಸ್ನೇಹಿತರಾದ ಜಕ್ಕನಹಳ್ಳಿಯ ಪ್ರದೀಪ್, ಚಾಮರಾಜು ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ …
Read More »ಶಾಲೆ ಬೇಡವೇ ಬೇಡ… 2020-21 ಅನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಿಬಿಡಿ…
ಬೆಂಗಳೂರು: ಈ ವರ್ಷ ಪ್ರಾಥಮಿಕ ಶಾಲೆ ಬೇಡವೇ ಬೇಡ… 2020-21 ಅನ್ನು ಶೂನ್ಯ ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಿಬಿಡಿ… ಇದು ರಾಜ್ಯದ ಬಹುತೇಕ ಮಕ್ಕಳ ಹೆತ್ತವರು, ಶಿಕ್ಷಕರು, ವಿದ್ಯಾರ್ಥಿಗಳು, ಜನತೆಯ ಅಭಿಪ್ರಾಯ. “ಉದಯವಾಣಿ’ ನಡೆಸಿದ ಮೆಗಾ ಸರ್ವೇಯಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಅಭಿಪ್ರಾಯ ತಿಳಿಸಿದ್ದು, ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇಂಥ ಸಂದರ್ಭದಲ್ಲಿ ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಆದರೆ ಎಸೆಸೆಲ್ಸಿ ಮತ್ತು ಪಿಯುಸಿ …
Read More »ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು: ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ ಅನುಮಾನ ಬರೋದು ಸಹಜ ಅಂತಾ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನ್ಯೂಸ್ಫಸ್ಟ್ ಜೊತೆ ಜಿಲ್ಲಾಧಿಕಾರಿ ಶರತ್ ವರ್ಗಾವಣೆ ಮಾಡಿ ರೋಹಿಣಿ ಸಿಂಧೂರಿ ಅವರನ್ನ ನೇಮಿಸಿರುವ ವಿಚಾರವಾಗಿ ಮಾತನಾಡಿದ ಡಾ.ಯತೀಂದ್ರ.. ಯಾವ ಅಧಿಕಾರಿಯನ್ನೂ ದಿಢೀರ್ ಎಂದು ವರ್ಗಾವಣೆ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದ್ರೆ ಅನುಮಾನಗಳು ವ್ಯಕ್ತವಾಗುತ್ತವೆ. ಹಣ ಪಡೆದು ವರ್ಗಾವಣೆ ಮಾಡಿದ್ರಾ? ಅಥವಾ ಯಾರದೋ ಪ್ರಭಾವದಿಂದ ವರ್ಗಾವಣೆ ಮಾಡಿದ್ರಾ? ಅನ್ನೋ ಪ್ರಶ್ನೆ ಹುಟ್ಟುತ್ತದೆ ಎಂದರು. …
Read More »ಪಂಚಾಂಗ : ಶನಿವಾರ, 03.10.2020
ನಿತ್ಯನೀತಿ : ದೈವವೆಂಬುದು ದೂರದಾಕಾಶದಲ್ಲಿ ಎಲ್ಲೋ ಇರುವ ವ್ಯಕ್ತಿ ಅಥವಾ ವಸ್ತುವಲ್ಲ. ಆ ಶಕ್ತಿ ನನ್ನೊಳಗೇ ಅವಿರ್ಭೂತವಾಗಿದೆ. ಅಜ್ಞಾನದಲ್ಲಿ ಹುಡುಕಿದರೆ ಆ ದಿವ್ಯತೆ ವ್ಯಕ್ತವಾಗುವುದಿಲ್ಲ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ : ಶನಿವಾರ, 03.10.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.08 ಚಂದ್ರ ಉದಯ ರಾ.07.17 / ಚಂದ್ರ ಅಸ್ತ ಬೆ.07.08 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ …
Read More »ಸಚಿವ ಡಿ.ವಿ. ಸದಾನಂದಗೌಡರ ಉಸ್ತುವಾರಿಯ ರಸಗೊಬ್ಬರ ಇಲಾಖೆಯು
ನವದೆಹಲಿ : ಸಚಿವ ಡಿ.ವಿ. ಸದಾನಂದಗೌಡರ ಉಸ್ತುವಾರಿಯ ರಸಗೊಬ್ಬರ ಇಲಾಖೆಯು ಕೇಂದ್ರ ಸರ್ಕಾರದ ಒಟ್ಟಾರೆ 65 ಇಲಾಖೆಗಳ ರಾರಯಂಕಿಂಗ್ನಲ್ಲಿ 3ನೇ ಸ್ಥಾನ ಪಡೆದಿದೆ. ಇದೇ ವೇಳೆ, ವಿವಿಧ 16 ಆರ್ಥಿಕ ಸಚಿವಾಲಯಗಳಲ್ಲಿ 2ನೇ ಸ್ಥಾನ ಗಳಿಸಿದೆ. ನೀತಿ ಆಯೋಗದ ಅಭಿವೃದ್ಧಿ ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಕಚೇರಿ (ಡಿಇಎಂಒ), ಕೇಂದ್ರ ಸರ್ಕಾರದ ಯೋಜನೆಗಳನ್ನು ಇಲಾಖೆಗಳು ಹೇಗೆ ಅನುಷ್ಠಾನ ಮಾಡುತ್ತಿವೆ ಎಂಬ ಪ್ರಶ್ನಾವಳಿ ಆಧರಿತ ಆನ್ಲೈನ್ ಸಮೀಕ್ಷೆ ನಡೆಸಿತ್ತು. ಇದರ ಫಲಿತಾಂಶ ಆಧರಿಸಿ …
Read More »ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗಕ್ಕೆ ಪ್ರಧಾನಿ ಚಾಲನೆ
ಶಿಮ್ಲಾ: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಟಲ್ ಸುರಂಗ ಮನಾಲಿ-ಲೇಹ್ ಸಂಪರ್ಕಕ್ಕಾಗಿ 9 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು ಹೊಂದಿದೆ. ಇದು ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಮಾರ್ಗ. ಈ ಸುರಂಗದಿಂದ 4-5 ಗಂಟೆ ಪ್ರಯಾಣದ ಅವಧಿ ಕಡಿತವಾಗುತ್ತೆ. ಮನಾಲಿಯಲ್ಲಿ ಭಾರಿ ಹಿಮಪಾತ ಸಂಭವಿಸುತ್ತೆ. ಹೀಗಾಗಿ ಹಿಮಪಾತ ಸಂಭವಿಸಿದ ಸಂದರ್ಭದಲ್ಲಿ ರಸ್ತೆ ಮುಚ್ಚಲಾಗುತ್ತಿತ್ತು. ಆರು ತಿಂಗಳು ಮಾತ್ರ ಸಂಚಾರವಿರುತ್ತಿತ್ತು. ಆದರೆ ಈಗ …
Read More »ಬೈಕ್ ಮುಖಾಮುಖಿ: ಮೂವರ ಸಾವು, ಎಲ್ಲಿ?
ವಿಜಯಪುರ: ಎರಡು ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ರೆ. ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಬೈಕ್ ಸವಾರರು ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಎರಡೂ ಬೈಕ್ಗಳು ಹೊತ್ತಿ ಉರಿದಿವೆ. ಮೃತರಿಗೆ ತಲೆಗೆ ಮಾತ್ರ ಗಾಯವಾಗಿದ್ದು, ಬೈಕ್ ಗಳು ಭಸ್ಮವಾಗಿವೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …
Read More »