ಬೆಂಗಳೂರು: ಕೊರೊನಾ ವೈರಸ್ ಮತ್ತು ಲಾಕ್‍ಡೌನ್‍ನಿಂದ ಉಂಟಾಗಿರುವ ಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ಧೈರ್ಯ ತುಂಬಲು ಇನ್‍ಸ್ಟಾಗ್ರಾಮ್‍ನಲ್ಲಿ ಹೊಸ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ಕೆಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ. ಕೊರೊನಾ ವೈರಸ್ ಹಾವಳಿಯಿಂದ ಅನೇಕರ ಬದುಕು ತತ್ತರಿಸಿ ಹೋಗಿದೆ. ಈ ಕಠಿಣ ಸಂದರ್ಭದಲ್ಲಿ ಅನೇಕ ನಟ, ನಟಿಯರು ಸಹಾಯ ಮಾಡಿದ್ದಾರೆ. ನಟ ಯಶ್ ಇತ್ತೀಚೆಗಷ್ಟೇ ಅವರು 1.5 ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಸಿನಿಮಾರಂಗದ …
Read More »ಮೇ 31, ಜೂನ್ 1 ರಂದು ಸಿನಿಮಾ ಕಲಾವಿದರಿಗೆ ಉಚಿತ ಕೋವಿಡ್ ಲಸಿಕೆ
ಚಿತ್ರರಂಗದ ಸದಸ್ಯರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಮೇ 31 ಹಾಗೂ ಜೂನ್ 1 ರಂದು ಎರಡು ದಿನಗಳ ಕಾಲ ಸ್ಯಾಂಡಲ್‌ವುಡ್ ಇಂಡಸ್ಟ್ರಿಯ ನೋಂದಾಯಿತ ಕಲಾವಿದರಿಗೆ ಲಸಿಕೆ ನೀಡಲು ಕಾರ್ಯಕ್ರಮ ಆಯೋಜನೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಭವನ ಕಟ್ಟಡದಲ್ಲಿ ಉಚಿತ ಕೋವಿಡ್ ಲಸಿಕೆ ಅಭಿಯಾನಕ್ಕೆ ಡಿಸಿಎಂ ಅಶ್ವಥ್ ನಾರಾಯಣ, ಸಂಸದೆ ಸುಮಲತಾ ಚಾಲನೆ ನೀಡಲಿದ್ದಾರೆ. ಈ ವೇಳೆ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಕಲಾವಿದರ ಸಂಘದ ಕಾರ್ಯದರ್ಶಿ …
Read More »ಗೆಳತಿ ಮಲೈಕಾ ಮನೆ ಸಮೀಪದಲ್ಲೇ ವಿಲ್ಲಾ ಖರೀದಿಸಿದ ಅರ್ಜುನ್ ಕಪೂರ್; ಬೆಲೆ ಎಷ್ಟು?
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇತ್ತೀಚಿಗಷ್ಟೆ ಐಷಾರಾಮಿ ಮನೆ ಖರೀಸಿದ ಬೆನ್ನಲ್ಲೇ ಮತ್ತೋರ್ವ ನಟ ಅರ್ಜುನ್ ಕಪೂರ್ ಮನೆ ಖರೀದಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ಅರ್ಜುನ್ ಮುಂಬೈನಲ್ಲಿ ವಿಲ್ಲಾ ಕೊಂಡುಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂಬೈನ ಹೃದಯ ಭಾಗದಲ್ಲಿ ಅರ್ಜುನ್ ಕಪೂರ್ ಸ್ಕೈ ವಿಲ್ಲಾ ಖರೀದಿ ಮಾಡಿದ್ದಾರಂತೆ. ಈ ವಿಲ್ಲಾ ಮುಂಬೈನ ಬಾಂದ್ರಾದಲ್ಲಿರುವ ಗೆಳತಿ ಮಲೈಕಾ ಅರೋರ ಅವರ ಮನೆಯ ಸಮೀಪವೇ ಇದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅರ್ಜುನ್ …
Read More »ಚುಟುಚುಟು’ ಬೆಡಗಿ ಆಶಿಕಾಗೆ ಈಗ ತೋಟದಲ್ಲಿ ಕೆಲಸ; ಲಾಕ್ಡೌನ್ನಲ್ಲಿ ಹೊಸ ಕಸುಬು
ಕೊರೊನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಜೋರಾಗಿರುವ ಕಾರಣ ಬಹುತೇಕ ಕಡೆ ಲಾಕ್ಡೌನ್ ಜಾರಿ ಮಾಡಲಾಗಿದೆ. ಸಿನಿಮಾ, ಧಾರಾವಾಹಿ ಶೂಟಿಂಗ್ಗಳು ಸ್ಥಗಿತಗೊಂಡಿರುವುದರಿಂದ ಸೆಲೆಬ್ರಿಟಿಗಳು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಸದಾ ಕಾಲ ಶೂಟಿಂಗ್ನಲ್ಲಿ ಬ್ಯುಸಿ ಆಗಿರುತ್ತಿದ್ದ ನಟ-ನಟಿಯರು ಇಷ್ಟು ದಿನ ಫ್ಯಾಮಿಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಕುಟುಂಬದವರ ಜೊತೆ ಕಾಲ ಕಳೆಯಲು ಸಮಯ ಸಿಕ್ಕಿದೆ. ಕೆಲವರು ತಮ್ಮ ತೋಟದ ಮನೆಗೆ ತೆರಳಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ನಟಿ ಆಶಿಕಾ ರಂಗನಾಥ್ …
Read More »ಶಾರುಖ್ ಖಾನ್ ಮಗಳ ಪೂಲ್ ಪಾರ್ಟಿ ಚಿತ್ರಗಳು ವೈರಲ್
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾಗಳಲ್ಲಿ ನಟಿಸದಿದ್ದರೂ ಬಾಲಿವುಡ್‌ನ ಯುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಸುಹಾನಾಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಜನಪ್ರಿಯರಾಗಿದ್ದಾರೆ ಸುಹಾನಾ. ಇವರ ಒಂದೊಂದು ಪೋಸ್ಟ್‌ಗಳು ಲಕ್ಷಾಂತರ ವೀವ್ಸ್ ಪಡೆಯುತ್ತವೆ. ಗ್ಲಾಮರಸ್ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ಸುಹಾನಾ ಚಿತ್ರಗಳು ವೈರಲ್ ಆಗುವುದು ಸಾಮಾನ್ಯ. ಅಮೆರಿಕದಲ್ಲಿ ನೆಲೆಸಿರುವ ಸುಹಾನಾ ಇತ್ತೀಚೆಗಷ್ಟೆ ತಮ್ಮ ಗೆಳತಿಯರೊಂದಿಗೆ ಪಾರ್ಟಿ ಮಾಡಿದ್ದು ಆ ಚಿತ್ರಗಳು ಸಖತ್ ವೈರಲ್ ಆಗಿವೆ. ಪೂಲ್ ಪಾರ್ಟಿ ಮಾಡಿರುವ …
Read More »ಕಂಗನಾ ರಣಾವತ್ ಬಾಡಿಗಾರ್ಡ್ ಎನ್ನಲಾದ ಕರ್ನಾಟಕ ಮೂಲದವನ ಮೇಲೆ ರೇಪ್ ಆರೋಪ; 50 ಸಾವಿರ ಹಣದೊಂದಿಗೆ ಪರಾರಿ
ಕಂಗನಾ ರಣಾವತ್ ಇದ್ದಲ್ಲಿ ಕಿರಿಕ್ ಇದ್ದೇ ಇರುತ್ತದೆ ಎಂಬಷ್ಟರಮಟ್ಟಿಗೆ ಅವರು ಈಗಾಗಲೇ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಈಗ ರೇಪ್ ಪ್ರಕರಣವೊಂದರ ಕಾರಣಕ್ಕಾಗಿ ಕಂಗನಾ ರಣಾವತ್ ಅವರ ಬಾಡಿ ಗಾರ್ಡ್ ಎಂದು ಹೇಳಲಾದ ವ್ಯಕ್ತಿ ಸುದ್ದಿಯಾಗುತ್ತಿದ್ದಾನೆ. ಆತ ಕಂಗನಾಗೆ ಬಾಡಿ ಗಾರ್ಡ್ ಆಗಿದ್ದ ಎಂಬ ಕಾರಣಕ್ಕೆ ಈ ಪ್ರಕರಣ ಹೆಚ್ಚು ಹೈಲೈಟ್ ಆಗುತ್ತಿದೆ. ಮುಂಬೈನ ಡಿಎನ್ ನಗರ್ ಪೊಲೀಸ್ ಠಾಣೆಯಲ್ಲಿ ಕುಮಾರ್ ಹೆಗಡೆ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ …
Read More »ನಿರ್ದೇಶಕ ಆರ್.ಚಂದ್ರು ಮತ್ತು ‘ಕಬ್ಜ’ ಚಿತ್ರತಂಡದಿಂದ 1ಲಕ್ಷ ರೂ. ನೆರವು
ಕೊರೊನಾ ಸಂಕಷ್ಟಕ್ಕೆ ಅನೇಕರು ನೆರವು ನೀಡುತ್ತಿದ್ದಾರೆ. ಸಿನಿ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಮಂದಿ ಹಣ, ಆಕ್ಸಿಜನ್, ವೆಂಟಿಲೇಟರ್, ಫುಡ್ ಕಿಟ್ ಸೇರಿದಂತೆ ಅಗತ್ಯ ವಸ್ತುಗಳ ನೆರವು ನೀಡುತ್ತಿದ್ದಾರೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ ಕಲಾವಿದರು ಮಾನವೀಯ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಸಿನಿ ಕಾರ್ಮಿಕರ ಕಷ್ಟಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಿದ್ದಾರೆ. …
Read More »ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದ ಉಪೇಂದ್ರ
ಬೆಂಗಳೂರು: ಕೊರೊನಾದಿಂದಾಗಿ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿರುವ ಉಪೇಂದ್ರ ಅವರು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆಯ ಕುರಿತಾಗಿ ಟ್ವೀಟ್ ಮಾಡುವ ಮೂಲಕವಾಗಿ ಕ್ಷಮೆಯಾಚಿಸಿದ್ದಾರೆ. ಉಪೇಂದ್ರ ಅವರು ನಿಧಿ ಸಂಗ್ರಹಿಸುವ ಮೂಲಕ ಅಗತ್ಯವಸ್ತುಗಳು ಹಾಗೂ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗುತ್ತಿದ್ದಾರೆ. ಇದರ ನಡುವೆ ವಿವಾದವೊಂದಕ್ಕೀಡಾಗಿದ್ದರು. ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಯದೆ ತಪ್ಪಾಗಿ ಹೇಳಿಕೆ ಕೊಟ್ಟಿದ್ದು, ಅದಕ್ಕೆ ಈಗ ಕ್ಷಮೆ ಯಾಚಿಸಿದ್ದಾರೆ. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಹೇಳಿರುವ ಹೇಳಿಕೆ …
Read More »ಬೆಟ್ಟದ ಹೂವು’ ಖ್ಯಾತಿಯ ಪೋಷಕ ನಟ, ಹಿರಿಯ ಕಲಾವಿದ ‘ಶಂಖನಾದ’ ಅರವಿಂದ್ ಕೊರೋನಾಗೆ ಬಲಿ
ಬೆಟ್ಟದ ಹೂವು” ಖ್ಯಾತಿಯ ಹಿರಿಯ ಕಲಾವಿದ ಶಂಖನಾದ ಅರವಿಂದ್ (70 ) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 13 ದಿನಗಳ ಹಿಂದೆ ಕೊರೊನಾ ಸೊಂಕಿಗೆ ತುತ್ತಾಗಿ ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಅರವಿಂದ್ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 1 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಕಲಾವಿದ ಅರವಿಂದ್ ಮೃತಪಟ್ಟಿರುವ ಬಗ್ಗೆ ಅವರ ಪುತ್ರಿ ಮಾನಸ ಹೊಳ್ಳ ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. “ಸತತ 13 ದಿನಗಳು …
Read More »ನಟಿ ಮಾಲಾಶ್ರೀ ಪತಿ ರಾಮು ಕೊರೊನಾಗೆ ಬಲಿ
ಸ್ಯಾಂಡಲ್‍ವುಡ್ ನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು (52) ಅವರು ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೊರೊನಾ ದೃಢಪಟ್ಟಿದ್ದು, ಉಸಿರಾಟದ ತೊಂದರೆಯಿಂದಾಗಿ 3 ದಿನಗಳ ಹಿಂದೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾ, ಅರ್ಜುನಗೌಡ ಸೇರಿ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಇವರು ಸ್ಯಾಂಡಲ್‍ವುಡ್‍ನಲ್ಲಿ ಕೋಟಿ ರಾಮು ಎಂದೇ ಹೆಸರು …
Read More »
Laxmi News 24×7