Breaking News

ಸಿನೆಮಾ

ಮೀಟೂ ಕೇಸ್; ನಟ ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪಕ್ಕೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.   ನಟ ಅರ್ಜುನ್ ಸರ್ಜಾ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ನಟಿ ಶೃತಿ ಹರಿಹರನ್ ಆರೋಪಿಸಿದ್ದರು. ಅರ್ಜುನ್ ಸರ್ಜಾ ವಿರುದ್ಧ 2018ರಲ್ಲಿ ಕಬ್ಬನ್ ಪಾರ್ಕ್ …

Read More »

ಆಸ್ಪತ್ರೆಯಿಂದಲೇ ‘ಬಿಗ್ ​ಬಾಸ್’​ ಕಾರ್ಯಕ್ರಮ ನಡೆಸಿಕೊಟ್ಟ ಕಮಲ್​ಹಾಸನ್.​..! ರಮ್ಯಾ ಕೃಷ್ಣನ್​ ಸಾಥ್​​

ಕೋವಿಡ್​ 19 ಸೋಂಕಿನಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಮಲ್​ ಹಾಸನ್​ ಅನುಪಸ್ಥಿತಿಯಿಂದಾಗಿ ತಮಿಳಿನ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​​​ ಸೀಸನ್​​ 5ರ ನಿರೂಪಣೆಯನ್ನು ರಮ್ಯಾ ಕೃಷ್ಣ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಆಯೋಜಕರು ಮುಂಬರುವ ಎಪಿಸೋಡ್​ನ ಪ್ರೋಮೋವನ್ನು ರಿಲೀಸ್​ ಮಾಡಿದ್ದು ಇದರಲ್ಲಿ ಕಮಲ್​ ಹಾಸನ್​​​ ಆಸ್ಪತ್ರೆಯಿಂದಲೇ ಮಾತನಾಡಿದ್ದಾರೆ. ನಟಿ ರಮ್ಯಾ ಕೃಷ್ಣನ್​​ರನ್ನು ಗೆಳತಿ ಎಂದು ಪರಿಚಯಿಸಿದ ಕಮಲ್​ ಹಾಸನ್​ ಕಾರ್ಯಕ್ರಮ ನಡೆಸಲು ತಮಗೆ ನೆರವಾಗುವಂತೆ ಕೇಳಿಕೊಂಡಿದ್ದಾರೆ. ರಮ್ಯಾ ಕೃಷ್ಣನ್​​ರನ್ನು …

Read More »

ಕಾಲೇಜು ಯುವಕ ಯುವತಿಯರನ್ನು ಸೆಳೆಯುತ್ತಿರುವ ಲಕ್ಷ್ಯ ಚಲನಚಿತ್ರ ಸಾಮಜಿಕ ವಿಷಯವನ್ನು ಎತ್ತಿ ತೋರಿಸುವ ಉತ್ತಮ ಸಂದೇಶ ಸಾರುವ ಲಕ್ಷ್ಯ ದಿನೆ ದಿನೆ ಯಶಸ್ವಿ ಪ್ರದರ್ಶನ

ಕಾಲೇಜು ಯುವಕ ಯುವತಿಯರನ್ನು ಸೆಳೆಯುತ್ತಿರುವ ಲಕ್ಷ್ಯ ಚಲನಚಿತ್ರ ಸಾಮಜಿಕ ವಿಷಯವನ್ನು ಎತ್ತಿ ತೋರಿಸುವ ಉತ್ತಮ ಸಂದೇಶ ಸಾರುವ ಲಕ್ಷ್ಯ ದಿನೆ ದಿನೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಿರಿಯ ನಾಗರಿಗರಿಂದ ಮಹಿಳೆಯರಿಂದ ಪ್ರಶಂಸೆಗೆ ಪಾತ್ರವಾದ ಲಕ್ಷ್ಯ ಈಗ ಯುವಕ ಯುವತಿಯರಿಗೂ ಇಷ್ಡವಾಗುತ್ತಿದೆ. ಸಾಮಜಿಕ ಜೀವನದಲ್ಲಿ ದುಡ್ಡಿನ ದರ್ಪದಿಂದ ಮೇರೆಯುವ ದುರಹಂಕಾರಿಗಳು, ಮಕ್ಕಳ ನಿರ್ಲಕ್ಷ್ಯ ,ಬಡವರಿಗೆ ನ್ಯಾಯ ಅನ್ಯಾಯದ ಸೂಕ್ಷ್ಮ  ವಿಚಾರಗಳನ್ನು ತೋರಿಸುವ ನಿಟ್ಟಿನಲ್ಲಿ ವಿಕ್ಷಕರ ಮನಸ್ಸು ಗೆಲ್ಲುತ್ತಿರು ಲಕ್ಷ್ಯ ಚಲನಚಿತ್ರ …

Read More »

ಇನ್​ಸ್ಟಾಗ್ರಾಂ ರೀಲ್ಸ್​ ಚಟಕ್ಕೆ ಬಿದ್ದು ಪ್ರಾಣವನ್ನೇ ಕಳೆದುಕೊಂಡ ಯುವಕ..! ಸ್ನೇಹಿತನ ಮೊಬೈಲ್​ನಲ್ಲಿ ರೆಕಾರ್ಡ್​ ಆಯ್ತು ಭಯಾನಕ ದೃಶ್ಯ

ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವ ಹುಚ್ಚು ಹೊಂದಿದ್ದ ಯುವಕ ಇದಕ್ಕಾಗಿ ಜೀವವನ್ನೇ ತೆತ್ತ ದಾರುಣ ಘಟನೆಯು ಮಧ್ಯ ಪ್ರದೇಶ ಹೋಶಂಗಾಬಾದ್​ನಲ್ಲಿ ನಡೆದಿದೆ.ಸಂಜು ಚೌರಿ ಎಂಬಾತ ತನ್ನ ಗೆಳೆಯನ ಜೊತೆಯಲ್ಲಿ ವಿಡಿಯೋ ರೆಕಾರ್ಡ್​ ಮಾಡಲೆಂದು ರೈಲ್ವೆ ಹಳಿ ಬಳಿ ತೆರಳಿದ್ದ. ರೈಲ್ವೆ ಬರುತ್ತಿದ್ದ ವೇಳೆ ತಾನು ನಡೆದುಕೊಂಡು ಬರುತ್ತಿರುವ ಹಾಗೆ ವಿಡಿಯೋ ಚಿತ್ರೀಕರಿಸಿ ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡುವುದು ಆತನ ಉದ್ದೇಶವಾಗಿತ್ತು. ಆದರೆ ವಿಧಿಯ ಆಟ ಬೇರೆಯದ್ದೇ ಇತ್ತು. ರೈಲು ಹಳಿಯ …

Read More »

ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್​

ಮುಗಿಲ್​ಪೇಟೆ’ ಸಿನಿಮಾದಲ್ಲಿ ಮನುರಂಜನ್​ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್​ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.ಮನುರಂಜನ್​ ರವಿಚಂದ್ರನ್​ ನಟನೆಯ ‘ಮುಗಿಲ್​ಪೇಟೆ’ ಚಿತ್ರ ಬಿಡುಗಡೆ ಆಗಿದೆ. ಪ್ರೇಕ್ಷಕರು ಈ ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಅದೇ ರೀತಿ, ‘ಕ್ರೇಜಿ ಸ್ಟಾರ್​’ ರವಿಚಂದ್ರನ್ ಅವರು ಕೂಡ ‘ಮುಗಿಲ್​ಪೇಟೆ’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮನುರಂಜನ್​ ಮತ್ತು ಸಾಧುಕೋಕಿಲ ನಡುವಿನ ದೃಶ್ಯಗಳು ರವಿಚಂದ್ರನ್​ ಅವರ ಗಮನ ಸೆಳೆದಿವೆ. ಆ ಬಗ್ಗೆ ಅವರು …

Read More »

ಲಕ್ಷಲಕ್ಷ ಹಣ ನೀಡಿ ಮೋಸ ಹೋದ ಖ್ಯಾತ ನಟಿ; ಕೂಡಿಟ್ಟ ಹಣವೆಲ್ಲವೂ ವಂಚಕರ ಪಾಲು

ನಟ-ನಟಿಯರು ಪ್ರತಿ ಸಿನಿಮಾಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ. ಇದರ ಜತೆಗೆ ಕೆಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿ ಹಣ ಗಳಿಕೆ ಮಾಡಿಕೊಳ್ಳುತ್ತಾರೆ. ಹೀಗೆ ಗಳಿಸಿದ ಹಣವನ್ನು ಹೂಡಿಕೆ ಮಾಡೋಕೆ ಇಷ್ಟಪಡುತ್ತಾರೆ. ಇದೇ ರೀತಿ ಹೂಡಿಕೆ ಮಾಡೋಕೆ ಹೋಗಿ ನಟಿಯೊಬ್ಬರು ಮೋಸ ಹೋಗಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಅವರು ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ. ಹಾಗಾದರೆ ಯಾರು ಆ ನಟಿ? ಬಹುಭಾಷೆ …

Read More »

ಪುನೀತ್ ರಾಜಕುಮಾರ್ ಗೆ ‘ಭಾರತ ರತ್ನ’ ನೀಡಲು ಶರತ್ ಕುಮಾರ್ ಒತ್ತಾಯ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ನಟ ಶರತ್ ಕುಮಾರ್ ಹೇಳಿದ್ದಾರೆ. ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಪುನೀತ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಬೇಕು ಎಂದು ಹೇಳಿದ್ದಾರೆ. ಅಪ್ಪು ನಿಧನದ ಸುದ್ದಿ ಕೇಳಿ ದೇವರನ್ನು ಕ್ಷಮಿಸಲಾಗಲಿಲ್ಲ. …

Read More »

ಐಎಂಡಿಬಿ ಪಟ್ಟಿಯಲ್ಲಿ ‘ಶಾವ್ಶಾಂಕ್ ರಿಡೆಂಪ್ಶನ್’ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ‘ಜೈಭೀಮ್ ‘

ಚೆನ್ನೈ: ನಟ ಸೂರ್ಯ, ಲಿಜೋ ಮೋಲ್ ಜೋಸ್ ಮತ್ತು ಮಣಿಕಂದನ್ ಅವರನ್ನೊಳಗೊಂಡ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಜೈ ಭೀಮ್’ ಸಿನಿಮಾ ಹಾಲಿವುಡ್ ನ ಕಲ್ಟ್ ಕ್ಲಾಸಿಕ್ ದಿ ರಿಡೆಂಪ್ಶನ್’ ಅನ್ನು ಹಿಂದಿಕ್ಕಿದ್ದು, 250ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.   ಜ್ಞಾನವೇಲ್ ನಿರ್ದೇಶನದ ಸೂರ್ಯ ಅವರ 2 ಡಿ ಎಂಟರ್ ಟೈನ್ ಮೆಂಟ್ ನಿರ್ಮಾಣದ ಜೈ ಭೀಮ್ ಚಿತ್ರ 9.6 ರೇಟಿಂಗ್ ನೆರವಿನೊಂದಿಗೆ ಅಗ್ರಸ್ಥಾನದಲ್ಲಿದೆ. ಶಾವ್ಶಾಂಕ್ ರಿಡೆಂಪ್ಶನ್’ 9.3 ರೇಟಿಂಗ್ ನೊಂದಿಗೆ …

Read More »

ಪುನೀತ್ ಮದುವೆ, ತಿಥಿ ಎರಡಕ್ಕೂ ಅದೇ ಕ್ಯಾಟರಿಂಗ್ ತಂಡ

ಬೆಂಗಳೂರು, ನ 9: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹನ್ನೆರಡನೇ ದಿನದ ಕಾರ್ಯ ಅವರ ನಿವಾಸದಲ್ಲಿ ನಡೆದಿದೆ. ಅವರ ಅಭಿಮಾನಿಗಳಿಗಾಗಿ ಡಾ.ರಾಜ್ ಕುಟುಂಬ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಭಿಮಾನಿಗಳಿಗೆ ಮತ್ತು ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. 35-40 ಕೌಂಟರ್ ಗಳನ್ನು ಹಾಕಲಾಗಿದ್ದು, ವೆಜ್ ಮತ್ತು ನಾನ್ ವೆಜ್ …

Read More »

ರಾಜ್ಯದ ಚಿತ್ರಮಂದಿರಗಳಲ್ಲಿ ನಾಳೆ `ಪುನೀತ್ ರಾಜ್ ಕುಮಾರ್’ಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಬೆಂಗಳೂರು : ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಾಳೆ ರಾಜ್ಯದ ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ರಾಜ್ಯಾದ್ಯಂತ 550 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಳೆ ಸಂಜೆ 6 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.   ಚಿತ್ರ ಪ್ರದರ್ಶಕರರು ನಟ ಪುನೀತ್ ರಾಜ್ ಕುಮಾರ್ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ ನಮನ ಸಲ್ಲಿಸಲಾಗಿದೆ.ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ನಟ …

Read More »