ವಿಜಯಪುರ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ಜೊತೆ ಶಾಮೀಲಾಗಿದ್ದ ಆರ್ ಎಸ್‍ಎಸ್ ನಾಯಕರು ಇದೀಗ ದೇಶ ಭಕ್ತರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು. ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಕಾಂಗ್ರೆಸ್ ಹೋರಾಟಕ್ಕಿಳಿದಿದ್ದರೆ, ಆರ್ ಎಸ್‍ಎಸ್ ಬ್ರಿಟಿಷರ ಜೊತೆ ಶಾಮೀಲಾಗಿತ್ತು. ಸ್ವಾತಂತ್ರ್ಯ ಹೋರಾಟ ದಲ್ಲಿ ಆರ್ ಎಸ್‍ಎಸ್, ಬಿಜೆಪಿ ಭಾಗಿ ಆಗರಿಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗವಹಿಸಿದವರು ಕಾಂಗ್ರೆಸ್‍ಗೆ ಸೇರಿದವರು ಎಂದರು. ಸ್ವಾತಂತ್ರ್ಯ …
Read More »ವಿಜಯಪುರ; ಜನರ ಎದೆಯಲ್ಲಿ ಭೂಕಂಪದ ಕಂಪನ
ವಿಜಯಪುರ: ಕಳೆದ ಎರಡು ವರ್ಷದಿಂದ ನಿರಂತರವಾಗಿ ಬಸವನಾಡನ್ನು ಕಾಡುತ್ತಿರುವ ಭೂಕಂಪ, ಕಳೆದ ಒಂದು ವಾರದಿಂದ ಅದರಲ್ಲೂ ಎರಡು ದಿನಗಳಿಂದ ಪದೇ ಪದೇ ಕಂಪಿಸುತ್ತಿದ್ದು ವಿಜಯಪುರ ಜಿಲ್ಲೆಯ ಜನರಲ್ಲಿ ವಸುಂಧರೆ ನಡುಕ ಸೃಷ್ಟಿಸಿದ್ದಾಳೆ. ವಿಜಯಪುರ ನಗರದಲ್ಲಿ ಬುಧವಾರ ಮಧ್ಯರಾತ್ರಿ, ಗುರುವಾರ ಬೆಳಗ್ಗೆ ಹಾಗೂ ಶುಕ್ರವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಮಹಾನಗರ ಪಾಲಿಕೆ ಚುನಾವಣೆ ತುರಿಸಿನಲ್ಲಿರುವ ನಗರದ ಜನತೆಗಂತೂ ಪದೇ ಪದೇ ಸಂಭವಿಸುತ್ತಿರುವ ಭೂಕಂಪನ ಆತಂಕದಲ್ಲಿ ಮುಳುಗುವಂತೆ ಮಾಡಿದೆ. ಭೂಮಿಯ ಆಳದಲ್ಲಿ ಪದೇ ಪದೇ …
Read More »ಬೈಕ್ ಗೆ ಸರಕಾರಿ ಬಸ್ ಡಿಕ್ಕಿ ಮಹಿಳೆ ಸಾವು
ವಿಜಯಪುರ… ಬೈಕ್‌ಗೆ ಸರ್ಕಾರಿ ಬಸ್ ಹಿಂಬದಿಯಿಂದ ಡಿಕ್ಕಿ, ಹಿಂಬದಿಯ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಯಕ್ಕುಂಡಿ ರಸ್ತೆಯಲ್ಲಿ ನಡೆದಿದೆ. ಮುತ್ತವ್ವ ಗಸ್ತಿ ಮೃತಪಟ್ಟಿರುವ ಮಹಿಳೆಯಾಗಿದ್ದು ಅಪಘಾತದ ಬಳಿಕ ಬಸ್ ಸ್ಥಳದಲ್ಲಿಯೇ ಬಿಟ್ಟು ಕಂಡಕ್ಟರ್, ಚಾಲಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ಲೈಂಗಿಕ ದೌರ್ಜನ್ಯ ಸಾಬೀತಾದರೆ 20 ವರ್ಷ ಜೈಲು
ವಿಜಯಪುರ: ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೊ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ …
Read More »ವಿಜಯಪುರದಲ್ಲಿ ಭಾರಿ ಮಳೆ ವಸತಿ ಪ್ರದೇಶ ಜಲಾವೃತ
ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಆಲಮೇಲ ತಾಲೂಕಿನ ಬಗಲೂರು ಬಳಿ ಭೀಮಾ ನದಿಯ ಸೇತುವೆ ಮುಳುಗಡೆಯಾಗಿದ್ದು, ಗ್ರಾಮದ ಸಂಪರ್ಕ ಕಡಿತವಾಗಿದೆ. ನಗರದಲ್ಲಿ ಹಲವು ಕಡೆಗಳಲ್ಲಿ ಜನವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಭೀಮಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ವಿವಿಧ ಜಲಾಶಯ, ಬಾಂದಾರುಗಳಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹೊರ ಬಿಡಲಾಗಿದೆ. ಪರಿಣಾಮ ಆಲಮೇಲ ತಾಲೂಕಿನ …
Read More »ತುಂಬಿ ಹರಿಯತ್ತಿರುವ ಕಳ್ಳಕವಟಗಿ ಗ್ರಾಮದ ಹಳ್ಳ: ಕಷ್ಟವಾದ ಸೋಮನಾಥನ ದರ್ಶನ
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಹಳ್ಳ ಸತತ ಮಳೆಯಿಂದ ತುಂಬಿ ಹರಿಯುತ್ತಿದೆ.ಸಂಗಮನಾಥನ ಹಳ್ಳ ಮಳೆ ನೀರಿಗೆ ಮೈದುಂಬಿ ಹರಿಯುತ್ತಿದೆ. ಭಕ್ತರಿಗೆ ಸಂಗಮನಾಥನ ದರ್ಶನ ಕಷ್ಟವಾಗ್ತಿದೆ. ತಾಳಿಕೋಟೆ ಪಟ್ಟಣಕ್ಕಿದ್ದ ಪರ್ಯಾಯ ಮಾರ್ಗವೂ ಬಂದ್ ಆಗಿದೆ. ಕಾಮಗಾರಿ ನಡೆದು ತಿಂಗಳಲ್ಲೇ ತಾಳಿಕೋಟಿ-ಮೂಕಿಹಾಳ ಸಂಪರ್ಕಿಸುವ ಸೋಗಲಿ ಹಳ್ಳದ ಸೇತುವೆ ಕಳಚಿ ಬೀಳ್ತಿದೆ. ಮೂಕಿಹಾಳ, ಹಡಗಿನಾಳ,ಕಲ್ಲದೇವನಹಳ್ಳಿ, ಶಿವಪುರ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಡೋಣಿ ನದಿಗೆ ಅಡ್ಡವಾಗಿ ಕಟ್ಟಲಾಗಿದ್ದ ಪ್ರಮುಖ ಸೇತುವೆ …
Read More »ಸಾವರ್ಕರ್ ಮೆರವಣಿಗೆ ಮಾಡಿದರೆ ನಾವು ಕಿತ್ತೂರು ಚೆನ್ನಮ್ಮ ಯಾತ್ರೆ ಮಾಡ್ತೇವೆ :ಎಂ.ಬಿ.ಪಾಟೀಲ
ವಿಜಯಪುರ : ಬಿಜೆಪಿ ನಾಯಕರು ವಿವಾದಿತ ಸಾವರ್ಕರ್ ಮೆರವಣಿಗೆ, ಗಣೇಶ ಉತ್ಸವದಲ್ಲಿ ಭಾವಚಿತ್ರ ವಿತರಿಸಿದರೆ, ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡ ನಾಡಿನ ಪ್ರಾಮಾಣಿಕ ಹೋರಾಟಗಾರರಾದ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರದ ವೆಂಕಟಪ್ಪ ನಾಯಕರಂತ ದೇಶಪ್ರೇಮಿ ವೀರ ಹೋರಾಟಗಾರರ ರಥಯಾತ್ರೆ ನಡೆಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ತಿರುಗೇಟು ನೀಡಲು ಮುಂದಾಗಿದ್ದಾರೆ. ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಅವರು ವಿವಾದಿತ ಸಾವರ್ಕರ್ ಯಾತ್ರೆಗೆ …
Read More »ಕೊಡವರ ಪರ ಜಗ್ಗೇಶ ಹೇಳಿಕೆಗೆ ಯತ್ನಾಳ್ ಸಮರ್ಥನೆ
ವಿಜಯಪುರ: ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಉರುಳುತ್ತವೆ ಎಂದಿರುವ ಸಂಸದ ಜಗ್ಗೇಶ ಹೇಳಿಕೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೆ ಸಮರ್ಥಿಸಿದ್ದಾರೆ. ಮಾಧ್ಯಮಗಳ ಮಟ್ಟಿಗೆ ಅದು ವಿವಾದಾತ್ಮಕ ಇರಬಹುದು, ಆದರೆ ವಾಸ್ತವ ಹಾಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಬುಧವಾರ ನಗರದಲ್ಲಿ ವಿಜಯಪುರ ನಗರದ ಗಾಂಧಿಚೌಕ್ ಬಳಿ ಪಾಲಿಕೆಯ ವಲಯ ಕಚೇರಿಗೆ ಚಾಲನೆ ನೀಡಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು …
Read More »ಕಾಂಗ್ರೆಸ್ ಕಛೇರಿಗೆ ಸಾವರ್ಕರ್ ಫೋಟೋ : ಬಸವನಾಡಲ್ಲೂ ಹಬ್ಬಿದ ಸಾವರ್ಕರ್ ಕಿಡಿ
ವಿಜಯಪುರ: ಜಿಲ್ಲೆಗೂ ಸಾವರ್ಕರ್ ವಿವಾದದ ಕಿಡಿ ಹರಡಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ನಗರದ ಗಜಾನನ ಮಹಾಮಂಡಳದ ಸಭೆಯ ವೇದಿಕೆಗೆ ಸಾವರ್ಕರ್ ಎಂದು ಹೆಸರು ಇರಿಸಿದ್ದರೆ, ಇದರ ಬೆನ್ನಲ್ಲೇ ಕಾಂಗ್ರೆಸ್ ಕಛೇರಿಗೆ ಅಪರಿಚಿತ ವ್ಯಕ್ತಿ ಸಾವರ್ಕರ್ ಫೋಟೋ ಅಂಟಿಸುವ ಮೂಲಕ ಜಿಲ್ಲೆಯಲ್ಲೂ ವಿವಾದ ತಾರಕಕ್ಕೆ ಏರುವಂತೆ ಮಾಡಿದ್ದಾರೆ. ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿನ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆದ ಶ್ರೀ ಗಜಾನನ …
Read More »ಮನಃ ಪರಿವರ್ತನೆಗೆ ವಚನಗಳು ಸಹಕಾರಿ; ಡಾ| ಚನ್ನವೀರ ದೇವರು
ವಿಜಯಪುರ: ತಾಳ್ಮೆಯಿಂದ ಇರುವ ಮನುಷ್ಯ ಸಹನೆ-ವಿವೇಕದಿಂದ ಎಲ್ಲವನ್ನೂ ಗೆಲ್ಲುವ ಶಕ್ತಿ ಹೊಂದಿರುತ್ತಾನೆ. ಸಿಟ್ಟು-ಕೋಪ, ಆವೇಶದಂಥ ಗುಣಗಳು ಜೀವನದಲ್ಲಿ ಸೋಲನ್ನೇ ತರುತ್ತದೆ. ಲೋಕದ ದೃಷ್ಟಿಯಲ್ಲಿ ಜೈಲಿನಲ್ಲಿರುವ ಕೈದಿಗಳು ಹೃದಯ ಪರಿವರ್ತಿಸಿಕೊಂಡ ಪ್ರವಾದಿಗಳಾಗಿ, ಬಸವಾದಿ ಪ್ರಥಮರಾಗಿ, ಗೌತಮ ಬುದ್ಧರಾಗಿ ಜೀವಿಸಲು ಇರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಟೋಜಿ ಹಿರೇಮಠದ ಡಾ| ಚನ್ನವೀರ ದೇವರು ಕಿವಿಮಾತು ಹೇಳಿದರು. ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, …
Read More »