Breaking News

ವಿಜಯಪುರ

ಭೀಮಾತೀರದಲ್ಲಿ ರೌಡಿಶೀಟರ್ ಬರ್ಬರ​ ಹತ್ಯೆ

ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ರೌಡಿಶೀಟರ್​ವೋರ್ವನ ಬರ್ಬರ ಹತ್ಯೆ ನಡೆದಿದೆ. ಮಂಗಳವಾರ ಹಾಡಹಗಲೇ ನಡುರಸ್ತೆಯಲ್ಲಿ ಈ ಘಟನೆ‌ ನಡೆದಿರುವುದು ಜನರಲ್ಲಿ ಭೀತಿ ಮೂಡಿಸಿದೆ. ಜಿಲ್ಲೆಯ ಆಲಮೇಲ ಸಮೀಪದ ದೇವರನಾವದಗಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಕೊಲೆಯಾದ ರೌಡಿಶೀಟರ್​ನನ್ನು ಮಾಳಪ್ಪ ಯಮನಪ್ಪ ಮೇತ್ರಿ (40) ಎಂದು ಗುರುತಿಸಲಾಗಿದೆ. ಈತನನ್ನು ದುರ್ಷ್ಕಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೊಲೆಯಾದ ಮಾಳಪ್ಪ ಮೇತ್ರಿ ಮೇಲೆ ಶಸ್ತ್ರಾಸ್ತ್ರ ಕಾಯ್ದೆ, ಕಂಟ್ರಿ …

Read More »

ವಿಧಾನಸೌಧದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಪತ್ತೆ

ಬೆಂಗಳೂರು: ಇತ್ತೀಚೆಗೆ ವ್ಯಕ್ತಿಯೊಬ್ಬರು ಅಕ್ರಮವಾಗಿ ಸದನ ಪ್ರವೇಶಿಸಿದ ಘಟನೆ ನಡೆದಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ಘಟನೆ ವಿಧಾನಸೌಧದ ಆವರಣದಲ್ಲಿ ನಡೆದಿದೆ. ವಿಧಾನಸೌಧದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಪತ್ತೆಯಾಗಿದೆ. ತಿಪ್ಪೇರುದ್ರಪ್ಪ ಎಂಬುವರು ಸದನದೊಳಗೆ ಅಕ್ರಮವಾಗಿ ಪ್ರವೇಶಿಸಿ ಭದ್ರತಾ ಲೋಪವಾದ ಹಿನ್ನೆಲೆಯಲ್ಲಿ ಇದೀಗ ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ವಿಧಾನಸೌಧಕ್ಕೆ ಬರುವ ಎಲ್ಲರನ್ನೂ ತೀವ್ರವಾಗಿ ತಪಾಸಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್​ನಲ್ಲಿ ಚಾಕು ಪತ್ತೆಯಾಗಿದೆ. …

Read More »

ಮಳೆಗಾಗಿ ವಿಚಿತ್ರ ಆಚರಣೆ: ಸ್ಮಶಾನದಲ್ಲಿ ಹೂತಿದ್ದ ಸಮಾಧಿ ಅಗೆದು, ಶವಗಳಿಗೆ ನೀರುಣಿಸಿದ ಗ್ರಾಮಸ್ಥರು!

ವಿಜಯಪುರ: ರಾಜ್ಯದಲ್ಲಿ ವಾಡಿಕೆಯಂತೆ ಆಗಬೇಕಾಗಿದ್ದ ಮುಂಗಾರು ಮಳೆ ವಿಳಂಬವಾಗಿದೆ. ಹೀಗಾಗಿ ರಾಜ್ಯದ ಹಲವೆಡೆಮಳೆಗಾಗಿ ಪ್ರಾರ್ಥಿಸಿ ಕತ್ತೆ ಮದುವೆ, ಕಪ್ಪೆ ಮದುವೆ, ದೇವರಿಗೆ ನೀರುಣಿಸುವುದು ಸೇರಿದಂತೆ ವಿವಿಧ ರೀತಿಯ ಆಚರಣೆ ಮತ್ತು ಸಂಪ್ರದಾಯವನ್ನು ಈಗಲೂ ಗ್ರಾಮೀಣ ಪ್ರದೇಶದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸ್ಮಶಾನದಲ್ಲಿ ಹೂತಿದ್ದ ಶವಗಳಿಗೆ ನೀರುಣಿಸಿ ಮಳೆಗಾಗಿ ಪ್ರಾರ್ಥಿಸಿರುವ ವಿಚಿತ್ರ ಆಚರಣೆ ಬೆಳಕಿಗೆ ಬಂದಿದೆ. ಇದು ವಿಚಿತ್ರ ಸಂಪ್ರದಾಯವಾದರೂ ಸಹ ಗ್ರಾಮಸ್ಥರು ಈ ಆಚರಣೆಯನ್ನು …

Read More »

ಬೈಕ್ ಹಾಗೂ ಟಂಟಂ ಮಧ್ಯೆ ಡಿಕ್ಕಿ

ವಿಜಯಪುರ…  ಬೈಕ್ ಹಾಗೂ ಟಂಟಂ ಮಧ್ಯೆ ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಗೊಳಸಂಗಿ ಬಳಿ ಘಟನೆ ನಡೆದಿದೆ‌. ಅಪಘಾತದಲ್ಲಿ ಮೃತಪಟ್ಟಿರುವ ಮಹಿಳೆಯ ಹೆಸರು ಲಭ್ಯವಾಗಿಲ್ಲ. ಅಲ್ಲದೇ, ಅಪಘಾತದಲ್ಲಿ ನಾಲ್ವರು ಮಹಿಳೆಯರು, ಓರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ‌‌. ಗಾಯಾಳುಗಳನ್ನುಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

13ನೇ ಫೋನ್‌ ಇನ್‌ ಕಾರ್ಯಕ್ರಮ: ಜನರ ಸಮಸ್ಯೆ ಆಲಿಸಿದ ಬೆಳಗಾವಿ ಡಿಸಿ, ಎಸ್​​ಪಿ

ಬೆಳಗಾವಿ: ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪೊಲೀಸ್​ ವರಿಷ್ಠಾಧಿಕಾರಿ ಸಂಜೀವ ಪಾಟೀಲ್ ನೇತೃತ್ವದಲ್ಲಿ 2022ರ ನವೆಂಬರ್‌ನಿಂದ ಈವರೆಗೆ 12 ಬಾರಿ ಫೋನ್‌ ಇನ್‌ ಕಾರ್ಯಕ್ರಮ ನಡೆದಿದ್ದು, ಇಂದು 13ನೇ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಡಿಸಿಪಿ ಶೇಖರ್ ಎಚ್.ಟಿ. ಕೂಡ ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆಯಿಂದ 62 ಜನರು ಕರೆ ಮಾಡಿ, ತಮ್ಮ ಸಮಸ್ಯೆ ಹೇಳಿಕೊಂಡರು. ಕೆಲ ಜನರಿಗೆ ಸ್ಥಳದಲ್ಲೇ ಪರಿಹಾರವನ್ನು ಕೂಡ ಅಧಿಕಾರಿಗಳು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ‌ ಕಚೇರಿಯಲ್ಲಿ …

Read More »

ನಿಮ್ಮ ತಕ್ಕಡಿ ಸಮವಾಗಿರಲಿ’: ನೂತನ ಸ್ಪೀಕರ್​ಗೆ ಮಾಜಿ ಸಿಎಂ ಬೊಮ್ಮಾಯಿ‌ ಸಲಹೆ

ಬೆಂಗಳೂರು: ವಿಧಾನಸಭೆಯ ಸಭಾಧ್ಯಕ್ಷರಾಗಿ ಶಾಸಕ ಯು.ಟಿ. ಖಾದರ್ ಅವಿರೋಧವಾಗಿ ಆಯ್ಕೆ ಆಗಿರುವುದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿ, ‘ನಿಮ್ಮ ತಕ್ಕಡಿ ಸಮವಾಗಿ ಇರಲಿ’ ಎಂದು ಸಲಹೆ ನೀಡಿದರು. ವಿಧಾನಸಭೆಯಲ್ಲಿ ಇಂದು ನೂತನ ಸ್ಪೀಕರ್ ಆಯ್ಕೆಯ ಬಳಿಕ ಮಾತನಾಡಿದ ಅವರು, ‘ಕರ್ನಾಟಕದ ವಿಧಾನಮಂಡಲ ತನ್ನದೇ ಆದ ಘನತೆ ಹೊಂದಿದೆ. ಇಂತಹ ಮಹತ್ವದ ಸದನದ ಸಭಾಧ್ಯಕ್ಷರಾಗಿ ನೀವು ಆಯ್ಕೆಯಾಗಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ 20 ವರ್ಷದ ರಾಜಕೀಯ …

Read More »

ಗರಿಗೆದರಿದ ರಾಜಕೀಯ: ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಸರಣಿ ಸಭೆ

ಬೆಂಗಳೂರು: ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಕಾಂಗ್ರೆಸ್ ನಾಯಕರು ಸರಣಿ ಸಭೆ ನಡೆಸಿದ್ದಾರೆ. ಪಕ್ಷಕ್ಕೆ ಬಹುಮತ ಬಂದರೆ ಸರ್ಕಾರ ರಚನೆ ವಿಚಾರ ನಿಟ್ಟಿನಲ್ಲಿ ಹಾಗೂ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆ ನಿಟ್ಟಿನಲ್ಲಿ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ರಾಜ್ಯ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದ …

Read More »

ಮುಧೋಳದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಜಪ್ತಿ

ಬಾಗಲಕೋಟೆ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಗೆ ಚುನಾವಣೆ ಆಯೋಗದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದರೂ ಹಲವೆಡೆ ಇದುವರೆಗೂ ನೂರಾರು ಕೋಟಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಅಂತೆಯೇ ಜಿಲ್ಲೆಯ ಮುಧೋಳ ಮತಕ್ಷೇತ್ರದ ಲಕ್ಷಾನಟ್ಟಿ ಚೆಕ್​ಪೋಸ್ಟ್​ ಬಳಿ ಅಧಿಕಾರಿಗಳು ಶನಿವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 5 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಯಿಂದ ಮುಧೋಳಕ್ಕೆ ತೆರಳುತ್ತಿದ್ದ ವಾಹನವನ್ನು ಎಸ್​ಎಸ್​ಟಿ ತಂಡ ಪರಿಶೀಲನೆ ನಡೆಸಿದಾಗ ವಾಹನದಲ್ಲಿದ್ದ ವ್ಯಕ್ತಿಯು ಹಣವು ಯುನಿಯನ್ …

Read More »

ಸಾಧಕರ ಸೀಟ್​ನಲ್ಲಿ ಸಿಹಿಕಹಿ ಚಂದ್ರು, ಶಿಕ್ಷಣ ತಜ್ಞ ಗುರುರಾಜ ಕರಜಗಿ

ವೀಕೆಂಡ್​​ ವಿತ್​ ರಮೇಶ್’ ಪ್ರೋಮೋ ರಿಲೀಸ್​ ಆಗಿದೆ. ಈ ವಾರ ಸಿನಿಮಾ ಮತ್ತು ಶಿಕ್ಷಣ ಕ್ಷೇತ್ರದ ಸಾಧಕರು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕನ್ನಡ ಕಿರುತೆರೆ ಜನಪ್ರಿಯ ಶೋ ‘ವೀಕೆಂಡ್​​ ವಿತ್​ ರಮೇಶ್’ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿದೆ. ಸೀಸನ್​ 5ರಲ್ಲಿ ಈಗಾಗಲೇ 7 ಸಾಧಕರು ಬಂದು ಹೋಗಿದ್ದು, ಈ ವಾರ ಕೂಡ ಇಬ್ಬರು ಸಾಧಕರು ಬರಲಿದ್ದಾರೆ.

Read More »

ಸರಳ ರೀತಿಯಲ್ಲಿ ರಾಹುಕಾಲದಲ್ಲಿ ಮೌಢ್ಯಕ್ಕೆ ಮತ್ತೊಮ್ಮೆ ಸೆಡ್ಡು ಹೊಡೆದು ನಾಮ ಪತ್ರ ಸಲ್ಲಿಸಿದ ಸಾಹುಕಾರ ಸತೀಶ್ ಜಾರಕಿಹೊಳಿ

ಹುಕ್ಕೇರಿ:ಸತೀಶ್ ಜಾರಕಿಹೊಳಿ ಮೌಢ್ಯಕ್ಕೆ ಸೆಡ್ಡು ಹೊಡೆದು ಮತ್ತೆ ರಾಹುಕಾಲದಲ್ಲಿ ನಾಮ ಪತ್ರ ಸಲ್ಲಿಕೆ ಮಾಡಿದ್ದಾರೆ.   ಪ್ರತಿ ಬಾರಿ ಯಂತೆ ಈ ಬಾರಿಯೂ ಕೂಡ ಅತ್ಯಂತ ಸರಳ ರೀತಿಯಲ್ಲಿ ಕೆಲವ ಐದೇ ಜನ ಚುನಾವಣಾ ಕಚೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದ್ದಾರೆ   https://fb.watch/j-WnDh1nbM/?mibextid=2Rb1fB ಯಾರ ಬಗ್ಗೆಯೂ ಟೀಕೆ ಮಾಡದೆ ಜನರನ್ನ ಸೇರಿಸದೆ ಸರಳ ರೀತಿಯಲ್ಲಿ ನಾಮ ನಿರ್ದೇಶನ ಮಾಡುವುದು ಬಹುತೇಕ ರಾಜಕಾರಣಿಗಳಲ್ಲಿ ಸತೀಶ್ ಜಾರಕಿಹೊಳಿ ಮುಂಚಿನವರು ಎನ್ನ ಬಹುದು …

Read More »