Breaking News

ರಾಷ್ಟ್ರೀಯ

ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರ ಬಂಧನ; ಬಂಧಿತರ ಸಂಖ್ಯೆ 7ಕ್ಕೆ ಏರಿಕೆ

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರಿ ಮಾಲಾ ಮತ್ತು ಪುತ್ರ ಅರುಳ್ ಅವರುಗಳನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ 3 ದಿನಗಳಿಂದ ತೀವ್ರ ವಿಚಾರಣೆ ನಡೆಸಿದ್ದ ಪೊಲೀಸರು ರೇಖಾ ಕದಿರೇಶ್ ಹತ್ಯೆಯಲ್ಲಿ ಮಾಲಾ, ಅರುಳ್ ಪಾತ್ರದ ಬಗ್ಗೆ ಸಾಕ್ಷ್ಯ ದೊರಕಿದ ಕಾರಣ ಬಂಧಿಸಿದ್ದಾರೆ. ಈಮೂಲಕ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಈವರೆಗೆ ಕೇಸ್‌ನಲ್ಲಿ ಈವರೆಗೆ ಬಂಧಿತರ ಸಂಖ್ಯೆ 7ಕ್ಕೆ …

Read More »

ಕದ್ದ ನಾಯಿ ಮಾರಲು ವಾಟ್ಸ್‌ ಅಪ್‌ ಗೆ ಫೋಟೋ ಹಾಕಿ ಸಿಕ್ಕಿ ಬಿದ್ದ ಕಳ್ಳ

ಹಾಸನ: ಹಾಸನ ಹೊರವಲಯದ ಹೊನ್ನೇನಹಳ್ಳಿ ರಸ್ತೆಯಲ್ಲಿರುವ GRR ಕೆನಲ್ಸ್ ನಾಯಿ ಫಾರಂನಿಂದ ದುಬಾರಿ ಬೆಲೆಯ ನಾಯಿಗಳನ್ನು ಕಳ್ಳತನ ಮಾಡಿದ್ದ ಕಳ್ಳರು ಅಂದರ್ ಆಗಿದ್ದಾರೆ. ಕಳ್ಳನ ಪತ್ತೆಗೆ ಸಹಕಾರಿಯಾಗಿದ್ದು ವಾಟ್ಸಾಪ್ ಗ್ರೂಪ್. ಹಾಸನ ನಗರದ ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ದಿವಾಕರ್ ಎಂಬವರಿಗೆ ಸೇರಿದ GRR ಕೆನಲ್ಸ್ ನಾಯಿ ಫಾರಂನಲ್ಲಿ ಜೂ.18ರ ರಾತ್ರಿ ಒಂದೂವರೆ ಲಕ್ಷ ರೂ. ಮೌಲ್ಯದ ನಾಲ್ಕು ನಾಯಿಗಳನ್ನು ನಾಲ್ವರು ಸೇರಿ ಕದ್ದೊಯ್ದಿದ್ದರು. ರಾಟ್ ವೀಲರ್, ಲ್ಯಾಬ್ರಡಾರ್, ಡ್ಯಾಶೌಂಡ್ …

Read More »

ಜೀವಂತ ಪುಟ ಎನಿಸಿದ ಹಂಪಿ

ಚರಿತ್ರೆಯ ಜೀವಂತ ಪುಟ ಎನಿಸಿದ ಹಂಪಿಯನ್ನು ನೀವು ಹೀಗೆ ನೋಡಿರುವುದು ಸಾಧ್ಯವೇ ಇಲ್ಲಬಿಡಿ. ಮುಂಗಾರಿನ ಮೊದಲ ಮಳೆ ಸುರಿದ ಕೆಲವು ದಿನಗಳ ಬಳಿಕ ಸೆರೆಸಿಕ್ಕ ಚಿತ್ರಗಳಿವು. ಆಗತಾನೆ ತಲೆಸ್ನಾನ ಮಾಡಿ, ಎಳೆ ಬಿಸಿಲಿಗೆ ಮೈಯೊಡ್ಡಿದ ಯುವತಿಯಂತೆ ಸ್ಮಾರಕಗಳೆಲ್ಲ ಫಳ ಫಳ ಹೊಳೆಯುತ್ತಿದ್ದವು. ಅವುಗಳ ಆವರಣದಲ್ಲಿ ಬೆಳೆಸಲಾದ ಗಿಡ-ಬಳ್ಳಿಗಳು ಗಾಢ ಹಸಿರುಬಣ್ಣದ ಎಲೆಗಳನ್ನು ತೊಟ್ಟು, ಮೊಗ್ಗುಗಳನ್ನು ಮೈತುಂಬಾ ಧರಿಸಿಕೊಂಡು ನಿಂತಿದ್ದವು. ಸ್ಮಾರಕಗಳ ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು, ಆ ಸ್ಮಾರಕಗಳ ಜತೆಯಲ್ಲೇ ಬಾಳಿ ಬದುಕುವ …

Read More »

ಸ್ನೇಹಿತರೊಂದಿಗೆ ಕೂಡಿ ಪ್ರೇಯಸಿ ಮೇಲೆ ಅತ್ಯಾಚಾರ: ಊರ ಹೊರಗೆ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾದ ಸಂತ್ರಸ್ತೆ

ಉತ್ತರ ಪ್ರದೇಶ: ಗರ್ಲ್ ಪ್ರೇಂಡ್ ಮೇಲೆ ಸ್ನೇಹಿತರೊಂದಿಗೆ ಸೇರಿ ಬಾಯ್ಫ್ರೆಂಡ್ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ ನಲ್ಲಿ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಗ್ರಾಮದ ಹೊರಗೆ ಬಂದು ತನ್ನನ್ನು ಭೇಟಿ ಮಾಡುವಂತೆ ಸ್ನೇಹಿತ ಫೋನ್ ಮಾಡಿದ್ದಾನೆ. ಆಕೆ ಬರುತ್ತಿದ್ದಂತೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾನೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಸಂತ್ರಸ್ತೆ ನೀಡಿರುವ ದೂರಿನ ಆಧಾರದ …

Read More »

ಹಳ್ಳಿಯ ಹುಡುಗನಿಗೆ ದೇಶದ ಅತ್ಯುನ್ನತ ಹುದ್ದೆ- ಪ್ರಜಾಪ್ರಭುತ್ವದ ಸೊಬಗು: ಕೋವಿಂದ್‌ ಬಣ್ಣನೆ

ಲಖನೌ: ಹಳ್ಳಿಯೊಂದರ ಹುಡುಗ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಗೌರವ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು ಎಂದು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಹೇಳಿದ್ದಾರೆ. ರಾಮ್‌ನಾಥ್ ಕೋವಿಂದ್ ಅವರ ಹುಟ್ಟೂರಾದ ಕಾನ್ಪುರದ ದೇಹತ್ ಜಿಲ್ಲೆಯ ಪರೌಂಖ್ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಇಂದು ನಾನು ಯಾವುದೇ ಸ್ಥಾನಕ್ಕೇರಿದ್ದರೂ ಕೂಡ ಅದರ ಶ್ರೇಯಸ್ಸು ಈ ಹಳ್ಳಿಯ ಮಣ್ಣು, ಈ ಪ್ರದೇಶ ಮತ್ತು ನಿಮ್ಮ ಪ್ರೀತಿ ಮತ್ತು …

Read More »

ಸಾವು ಸಂಭವಿಸಿದ 20 ನಿಮಿಷಗಳ ಬಳಿಕ ಮತ್ತೆ ಜೀವ ಪಡೆದ ವ್ಯಕ್ತಿ,ಪುನಃ ಜೀವ ಬಂದಿದ್ದಾದರೂ ಹೇಗೆ?

ಸಾವಿನ ನಂತರ ಜನರು ಎಲ್ಲಿಗೆ ಹೋಗುತ್ತಾರೆ ಮತ್ತು ಅಲ್ಲಿ ಏನಾಗುತ್ತದೆ? ಎರಡನೇ ಜನ್ಮ (Second Life) ಸಿಗುತ್ತದೆಯೇ? ಮರಣದ ನಂತರದ ಪ್ರಯಾಣವನ್ನು ಜನ್ಮ ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ? ಇಂತಹ ಎಲ್ಲಾ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಸುತ್ತುತ್ತಿರುತ್ತವೆ.. ಆದರೆ ಸಾವಿನ ನಂತರ ಏನಾಗುತ್ತದೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಯಾರೂ ಉತ್ತರಿಸಲು ಸಾಧ್ಯವಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರವನ್ನು ಸಾವಿನ ನಂತರ ನಮ್ಮ ನಡುವೆ ಜೀವಂತವಾಗಿ ಬರುವವನು ವ್ಯಕ್ತಿ ಮಾತ್ರ ನೀಡಬಹುದು (Life …

Read More »

ಒಬ್ಬನಿಗೆ ಅಪ್ಪ-ಅಮ್ಮನ ಬಗ್ಗೆ ಪ್ರೀತಿ, ಇನ್ನೊಬ್ಬನಿಗೆ ದ್ವೇಷ; ಇಬ್ಬರೂ ಸೇರಿ ಮಾಡಿದ್ರು ಬ್ಯಾಂಕ್ ಲೂಟಿ!

ನವದೆಹಲಿ: ಅಪ್ಪ-ಅಮ್ಮನನ್ನು ಮೆಚ್ಚಿಸುವ ಸಲುವಾಗಿ ಯುವಕನೊಬ್ಬ ಬ್ಯಾಂಕ್ ಲೂಟಿ ಮಾಡಿದ್ದು, ಆತನಿಗೆ ಅಪ್ಪ-ಅಮ್ಮನ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂಬ ಉದ್ದೇಶವಿದ್ದ ಇನ್ನೊಬ್ಬ ಕೈಜೋಡಿಸಿದ್ದಾನೆ. ಕೊನೆಗೆ ಇವರಿಬ್ಬರೂ ತಾವಂದುಕೊಂಡಿದ್ದನ್ನು ಮಾಡುವುದರಲ್ಲಿ ಯಶಸ್ವಿಯಾಗಿದ್ದರೂ, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹದಿನೆಂಟು ವರ್ಷದ ಅಜಯ್ ಬಜಾರೆ ಹಾಗೂ ಪ್ರದೀಪ್ ಠಾಕೂರ್ ಎಂಬಿಬ್ಬರು ಜೊತೆಯಾಗಿ ಈ ಲೂಟಿಯಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರದ ಇಂದಿರಾಗಾಂಧಿ ನಗರದ ಬರಾನಲ್ ಸ್ಕ್ವೇರ್​ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕೊಂದರಲ್ಲಿ ಇವರಿಬ್ಬರೂ ಸೇರಿ 4.78 ಲಕ್ಷ ರೂಪಾಯಿ …

Read More »

ಹದಿನೇಳು ದಿನಗಳ ಅಂತರದಲ್ಲಿ ಮದುವೆಯಾದ ಇಬ್ಬರು ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಸಾವು!

ಹಾಸನ: ಅದೊಂದು ಬಡಕುಟುಂಬ. ಆದರೆ ಅವರ ಸಂಸಾರದಲ್ಲಿ ಸುಖ, ಸಂತೋಷಕ್ಕೇನು ಕಡಿಮೆಯಿರಲಿಲ್ಲ. ತಂದೆ – ತಾಯಿ ಕೂಲಿ ಮಾಡಿ ತಮ್ಮ ನಾಲ್ಕು ಹೆಣ್ಣು ಮಕ್ಕಳಿಗೆ ಯಾವುದಕ್ಕೂ ಕೊರತೆಯಾಗದಂತೆ ಸಾಕುತ್ತಿದ್ದರು. ಆದರೆ ಆ ಸುಂದರ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಒಂದೇ ತಿಂಗಳಲ್ಲಿ ಮದುವೆಯಾಗಿದ್ದ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು, ಇಡೀ ಕುಟುಂಬದ ಕಣ್ಣೀರಿನಲ್ಲಿ ಮುಳುಗಿದೆ. ಹಾಗಾದ್ರೆ ಆ ಕುಟುಂಬದಲ್ಲಿ ಅಂತಹದ್ದು ಏನಾಯಿತು. ‌ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದು ಹೇಗೆ ಈ …

Read More »

ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ ಸಸಿ ನೆಡುವ ಕಾರ್ಯಕ್ರಮಕ್ಕೆ ರಮೇಶ್ ಜಾರಕಿಹೊಳಿ ಚಾಲನೆ

ಗೋಕಾಕ: ಸದ್ಯಕ್ಕೆ ಗೋಕಾಕ ನಗರದ ಎಲ್ಲಾ ರೀತಿಯ ಅಭಿವೃದ್ಧಿ ಹಾಗೂ, ಇನ್ನಿತರ ಕೆಲಸ ಕಾರ್ಯ ಗಳಲ್ಲಿ ರಮೇಶ್ ಜಾರಕಿಹೊಳಿ ಹೆಚ್ಚಿನ ಒತ್ತನ ಕೊಡುತ್ತಿದ್ದಾರೆ. ಇಂದು ಗೋಕಾಕ ನಗರದ ಗ್ರಾಮೀಣ ಮಂಡಲದ ರೈತ ಮೋರ್ಚಾ ವತಿಯಿಂದ ಗೋಕಾಕ ನಗರದ ಹೊರವಲಯದ ಯೋಗಿ ಕೊಳ್ಳ ರಸ್ತೆ ಮಾರ್ಗದಲ್ಲಿ 200 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಒಂದು ಕಾರ್ಯ ಕ್ರಮದಲ್ಲಿ ಭಾಗಿಯಾದ ಸಾಹುಕಾರ ರಮೇಶ್ ಜಾರಕಿಹೊಳಿ ಈ ಒಂದು ಕಾರ್ಯ ಕ್ರಮಕ್ಕೆ ಸಸಿ …

Read More »

ಜುಲೈ ಅಂತ್ಯದೊಳಗೆ 51.6 ಕೋಟಿ ಡೋಸ್ ಲಸಿಕೆ ನೀಡಿಕೆ; ಕೇಂದ್ರದಿಂದ ಸುಪ್ರೀಂಕೋರ್ಟ್​ಗೆ ಹೊಸ ಅಫಿಡವಿಟ್ ಸಲ್ಲಿಕೆ

ದೆಹಲಿ: ಜುಲೈ ತಿಂಗಳ ಅಂತ್ಯದೊಳಗೆ ಅಂದರೆ, ಜುಲೈ 31ರ ಒಳಗೆ 51.6 ಕೋಟಿ ಡೋಸ್ ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಹೊಸ ಅಫಿಡವಿಟ್ ಸಲ್ಲಿಕೆ ಮಾಡಿದೆ. ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 94 ಕೋಟಿ ಜನರಿದ್ದಾರೆ. 94 ಕೋಟಿ ಜನರಿಗೆ 188 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ. ಹೀಗಾಗಿ ಆಗಸ್ಟ್‌ನಿಂದ ಡಿಸೆಂಬರ್‌ಗೆ 135 ಕೋಟಿ ಡೋಸ್ ನೀಡಲಾಗುತ್ತದೆ. ಅಗತ್ಯವಿರುವಷ್ಟು ಲಸಿಕೆ ಆಗಸ್ಟ್-ಡಿಸೆಂಬರ್ ಅವಧಿಯಲ್ಲಿ ಲಭ್ಯವಾಗಲಿದೆ ಎಂದು …

Read More »