Breaking News

ರಾಷ್ಟ್ರೀಯ

ಬಾಡಿಗೆಗೂ ಕೊಠಡಿ ಸಿಗದೆ ಗ್ರಾಮಸ್ಥರೇ ನಿರ್ಮಿಸಿದ್ರು ಅಂಗನವಾಡಿ ಕೇಂದ್ರ

ಕಾರವಾರ : ಬಾಲ್ಯ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ಅಂಗನವಾಡಿಗಳನ್ನು ತೆರೆದಿದೆ. ಆದರೆ, ಉತ್ತರಕನ್ನಡ ಜಿಲ್ಲೆಯ ಅದೆಷ್ಟೋ ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಇದ್ದ ಕೆಲ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದರೂ ಕೆಲ ತಿಂಗಳಿಂದ ಬಾಡಿಗೆ ಕೂಡ ಕಟ್ಟಿಲ್ಲ. ಹೀಗಾಗಿ, ಕಟ್ಟಡ ಮಂಜೂರಾಗುವುದೆಂದು ಕಾದು ಕುಳಿತಿದ್ದ ಗ್ರಾಮದ ಜನರು ಸರ್ಕಾರದ ವಿಳಂಬ ನೀತಿಗೆ ರೋಸಿ ಹೋಗಿ ಕೊನೆಗೆ ತಾತ್ಕಾಲಿಕ ಅಂಗನವಾಡಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಹೌದು, ಒಂದೆಡೆ ಶಿಥಿಲಾವಸ್ಥೆ ತಲುಪಿ …

Read More »

ಹೆಚ್ಚುವರಿ ಭೂಮಾಪಕರನ್ನು ನಿಯೋಜಿಸಲು ಭೂದಾಖಲೆಗಳ ಇಲಾಖೆಗೆ ಪತ್ರ

ಬೆಂಗಳೂರು : ಬೃಹತ್ ನೀರುಗಾಲುವೆ ಹಾಗೂ ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ಸರ್ವೆ ಕಾರ್ಯಕ್ಕಾಗಿ ಹೆಚ್ಚು ಭೂಮಾಪಕರನ್ನು ನಿಯೋಜಿಸಲು ಭೂದಾಖಲೆಗಳ ಇಲಾಖೆಗೆ ಪತ್ರ ಬರೆಯಲು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲಿಕೆ ಅಧಿಕಾರಿಗೆ ಸೂಚನೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ಶುಕ್ರವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಬೃಹತ್ ನೀರುಗಾಲುವೆ ಹಾಗೂ ಕೆರೆಗಳಲ್ಲಿ ಸರ್ವೆ ಮಾಡಲು ಹೆಚ್ಚು ಭೂಮಾಪಕರ ಅವಶ್ಯಕತೆಯಿದ್ದು, …

Read More »

ಕರ್ನಾಟಕದ ಅಯ್ಯಪ್ಪ ಭಕ್ತರಿದ್ದ ಬಸ್​-ಆಟೋ ಮಧ್ಯೆ ಅಪಘಾತ; ಐವರು ಸಾವು

ಮಲಪ್ಪುರಂ(ಕೇರಳ): ಕರ್ನಾಟಕದಿಂದ ಬರುತ್ತಿದ್ದ ಶಬರಿಮಲೆ ಯಾತ್ರಾರ್ಥಿಗಳ ಬಸ್‌ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ನಾಲ್ವರು ಪ್ರಯಾಣಿಕರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ಘಟನೆ ಜಿಲ್ಲೆಯ ಮಂಚೇರಿಯಲ್ಲಿ ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಸಂಭವಿಸಿದೆ. ನಿನ್ನೆ ಸಂಜೆ ಆರು ಗಂಟೆಗೆ ಮಂಚೇರಿ-ಅರೀಕೋಡು ರಸ್ತೆಯ ಚೆಟ್ಟಿಅಂಗಡಿ ಎಂಬಲ್ಲಿ ಅಪಘಾತ ನಡೆದಿದೆ. ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಕರ್ನಾಟಕ ಬಸ್ ಮತ್ತು ಆಟೋ ಮಧ್ಯೆ ಅಪಘಾತವಾಗಿದೆ. ಆಟೋ ಚಾಲಕ ಮಜೀದ್, …

Read More »

ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ: ಸಿಎಂ

ಬೆಳಗಾವಿ/ಬೆಂಗಳೂರು: ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಸಾಲಮನ್ನಾ ಮಾಡುವ ಕುರಿತು ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿಲ್ಲ. ಬಿಜೆಪಿಯವರು 2018ರ ತಮ್ಮ ಪ್ರಣಾಳಿಕೆಯಲ್ಲಿ “ನಮ್ಮ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು” …

Read More »

ಕೋಟಿ ಕೋಟಿ ವಿದ್ಯುತ್​ ಬಿಲ್​ ಬಾಕಿ ಇಟ್ಕೊಂಡ ಧಾರವಾಡ ಜಿಲ್ಲೆಯ ಸರ್ಕಾರಿ ಕಚೇರಿಗಳು

ಧಾರವಾಡ, ಡಿ.08: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(Hescom)ವು ಒಟ್ಟು ಏಳು ಜಿಲ್ಲೆಗಳಲ್ಲಿ ಬರುತ್ತದೆ. ರಾಜ್ಯದ ಪ್ರತಿಷ್ಠಿತ ವಿದ್ಯುತ್ ಸರಬರಾಜು ಕಂಪನಿಗಳ ಪೈಕಿ ಇದು ಕೂಡ ಒಂದು. ಈ ಕಂಪನಿ ಅಡಿಯಲ್ಲಿ ರಾಜ್ಯದ ಎರಡನೇ ದೊಡ್ಡ ನಗರ ಖ್ಯಾತಿಯಹುಬ್ಬಳ್ಳಿ-ಧಾರವಾಡ(Hubballi-Dharwad) ಅವಳಿ ನಗರ ಹಾಗೂ ಬೆಳಗಾವಿ ಬರುತ್ತವೆ. ಇದೀಗ ಈ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಸರಕಾರಿ ಕಚೇರಿಗಳಿಂದಲೇ ಹೆಸ್ಕಾಂ ಗೆ ನೂರಾರು ಕೋಟಿ ರೂಪಾಯಿ ವಿದ್ಯುತ್ ಬಿಲ್ ಬರಬೇಕಿದೆ. ಇಂತಹ ವೇಳೆ …

Read More »

ಗುಡ್​ನ್ಯೂಸ್: ಸಹಕಾರಿ ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ಮನ್ನಾ, ಸಿದ್ದರಾಮಯ್ಯ ಘೋಷಣೆ

ಬೆಳಗಾವಿ (ಡಿಸೆಂಬರ್ 15): ಸಹಕಾರಿ ಬ್ಯಾಂಕ್‌ಗಳ (cooperative bank) ಸಾಲ ಮೇಲಿನ ಬಡ್ಡಿ ಮನ್ನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಘೋಷಿಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಕೊನೆ ದಿನವಾದ ಇಂದು (ಡಿಸೆಂಬರ್ 15) ಈ ಘೋಷಣೆ ಮಾಡಿದ್ದು. ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಕ್ಕೆ ಸಂಬಂಧಿಸಿದಂತೆ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದವರ ಬಡ್ಡಿ ಮನ್ನಾ ಆಗಲಿದೆ ಎಂದು ಮಾಹಿತಿ ನೀಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ …

Read More »

ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: ಸರ್ಕಾರದ ವಿರುದ್ಧ ಬಿಜೆಪಿ ಧರಣಿ

ಬೆಳಗಾವಿ: ಬೆಳಗಾವಿ (Belagavi) ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಸದನಲ್ಲಿ ಚರ್ಚಿಸುವಂತೆ ಬಿಜೆಪಿ (BJP) ಹೈಕಮಾಂಡ್​ ನಾಯಕರು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಬಗ್ಗೆ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ. ಈ ಬಗ್ಗೆ ಬೆಳಗಾವಿಯಲ್ಲಿ (Belagavi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕಳೆದ ವಾರ ಬೆಳಗಾವಿ ಗ್ರಾಮಾಂತರದ ವಂಟಮೂರಿಯಲ್ಲಿ ದಲಿತ …

Read More »

ಗಾಂಧಿ ಭೇಟಿ ನೀಡಿದ ಸ್ಥಳಗಳ ಅಭಿವೃದ್ಧಿಗಾಗಿ ಶಾಸಕ ಅಭಯ ಪಾಟೀಲ್​ ಮಂಡಿಸಿದ ಖಾಸಗಿ ಬಿಲ್ ಅಂಗೀಕಾರ

ಬೆಳಗಾವಿ/ ಬೆಂಗಳೂರು: ಮಹಾತ್ಮಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳನ್ನು ಸ್ಮಾರಕವಾಗಿ ರೂಪಿಸಲು ಕ್ರಮವಹಿಸಬೇಕು ಎಂಬ ಕೈ ಶಾಸಕ ಅಭಯ ಪಾಟೀಲ್ ಮಂಡಿಸಿದ ಖಾಸಗಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದೆ.   ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬೆಳಗಾವಿಗೆ ಭೇಟಿ ನೀಡಿದ ಸವಿ ನೆನಪಿಗಾಗಿ ರಾಜ್ಯ ಸರ್ಕಾರ ಶತಮಾನೋತ್ಸವ ಸಂಭ್ರಮ ಆಚರಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುದಾನ ಬಿಡುಗಡೆ ಮಾಡಬೇಕು ಮತ್ತು ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಮತ್ತು ಭಾಗವಹಿಸಿದ ಸ್ಥಳವನ್ನು ಸ್ಮಾರಕವಾಗಿ ರೂಪಿಸಲು …

Read More »

ರಾಜ್ಯಸಭೆಯಿಂದ ಟಿಎಂಸಿ ಸಂಸದ ಅಮಾನತು

ನವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ನಡುವಳಿಕೆ ತೋರಿದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರನ್ನು ಗುರುವಾರ ಅಧಿವೇಶನದ ಇನ್ನುಳಿದ ಅವಧಿ ವರೆಗೆ ಅಮಾನತು ಮಾಡಲಾಯಿತು. ಗುರುವಾರ ಕಲಾಪ ಶುರುವಾಗುತ್ತಿದ್ದಂತೆ ನಿನ್ನೆ ನಡೆದ ಸಂಸತ್‌ ಭದ್ರತಾ ಲೋಪದ ಕುರಿತು ಚರ್ಚಿಸುವಂತೆ ಪಟ್ಟು ಹಿಡಿದ ಡೆರೆಕ್‌ ಒಬ್ರಿಯಾನ್‌ ದುರ್ವರ್ತನೆ ತೋರುವ ಮೂಲಕ ಸದನಕ್ಕೆ ಅಗೌರವ ತೋರಿದರು. ಈ ಹಿನ್ನೆಲೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್‌, ಒಬ್ರಿಯಾನ್‌ಗೆ ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಡೆರೆಕ್ ಒ’ಬ್ರೇನ್ …

Read More »

ನಮ್ಮ ಜೋಡೆತ್ತಿನ ಬಗ್ಗೆಯೂ ಸ್ವಲ್ಪ ಮಾತಾಡ್ರೀ.’ ಎಂದ ಯತ್ನಾಳ್‌

ಬೆಳಗಾವಿ : ಅಧಿವೇಶನ(Session) ಆರಂಭವಾದಾಗಿನಿಂದಲೂ ಸ್ವಪಕ್ಷದ ನಾಯಕರನ್ನು ಎಷ್ಟು ಕೆಣಕಲು ಸಾಧ್ಯವೋ ಎಲ್ಲಾ ಅವಕಾಶವನ್ನೂ ಯತ್ನಾಳ್‌(yatnal) ಬಳಸಿಕೊಳ್ಳುತ್ತಿರುವಂತಿದೆ. ಇಂದು ಕೂಡ ಪೂರಕ ಬಜೆಟ್‌ ವಿಚಾರದ ಚರ್ಚೆಯಲ್ಲಿ ಆರ್‌ ಅಶೋಕ್‌, ಬಿ ವೈ ವಿಜಯೇಂದ್ರ ಅವರನ್ನು ಯತ್ನಾಳ್‌ ಎಳೆದು ತಂದಿದ್ದಾರೆ.   ನಿನ್ನೆ ಕಾಂಗ್ರೆಸ್‌ ನಾಯಕರು ಮಂಡಿಸಿದ ಪೂರಕ ಬಜೆಟ್‌ ಬಗ್ಗೆ ವಿಚಾರ ಎತ್ತಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಪ್ರತಿ ಸಲ ಪ್ರಧಾನಿ ಮೋದಿ ಅವರ ಹೆಸರನ್ನು ಎಳೆದು ತರಲಾಗುತ್ತಿದೆ, …

Read More »