Breaking News

ರಾಷ್ಟ್ರೀಯ

ಭಾರತದಲ್ಲಿ ಸಮುದಾಯ ಹಂತಕ್ಕೆ ಸೋಂಕು ಹೋಗಿಲ್ಲ: ತಪ್ಪು ಒಪ್ಪಿಕೊಂಡ ಡಬ್ಲ್ಯೂಎಚ್‍ಒ

ನವದೆಹಲಿ: ಕೊರೊನಾ ವೈರಸ್ ಸಮುದಾಯ ಪ್ರಸರಣ ಹಂತ ತಲುಪಿದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ತೋರಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ತನ್ನ ಯಥಾಸ್ಥಿತಿ ವರದಿಯ ದೋಷವನ್ನು ಒಪ್ಪಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಯಥಾಸ್ಥಿತಿ ವರದಿಯಲ್ಲಿ, ‘ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಪ್ರಸರಣ ಹಂತಕ್ಕೆ ಹೋಗಿ’ ಎಂದು ಹೇಳಿತ್ತು. ಆದರೆ ಈಗ ತಮ್ಮ ತಪ್ಪನ್ನು ಒಪ್ಪಿಕೊಂಡು, ಭಾರತದಲ್ಲಿ ಸೋಂಕು ಹರಡುವ ಕ್ಲಸ್ಟರ್ ಕಾಣಿಸಿಕೊಂಡಿವೆ. ಆದರೆ ಸಮುದಾಯ ಪ್ರಸರಣದ ಸ್ಥಿತಿ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ. …

Read More »

ಒಟ್ಟು 18 ಜಿಲ್ಲೆಗಳಲ್ಲಿ ಸೀಲ್‍ಡೌನ್ ಮಾಡಲು ಸಿದ್ಧತೆ ನಡೆಯುತ್ತಿದೆ..

ಬೆಂಗಳೂರು: ಒಂದು ಕಡೆ ಸೀಲ್‍ಡೌನ್ ಮಾದರಿ ನಿರ್ಬಂಧ ಹಾಕುತ್ತಿರುವ ಬೆಂಗಳೂರು ಪೊಲೀಸರು, ಅಡ್ಡಾದಿಡ್ಡಿ ಓಡಾಡುತ್ತಿರುವವರಿಗೆ ಮತ್ತಷ್ಟು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಬೆಂಗಳೂರು ರಸ್ತೆಗಳನ್ನು ಸೀಲ್ ಮಾಡುವುದರ ಜೊತೆಗೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದ್ದಾರೆ. ಈಗಾಗಲೇ ನೀಡಿರುವ ತುರ್ತು ಕೋವಿಡ್-19 ಪಾಸ್‍ಗಳನ್ನು ಶನಿವಾರದಿಂದ ರದ್ದು ಮಾಡಲು ಬಯಸಿದ್ದಾರೆ. ಬೆಂಗ್ಳೂರು ಪೊಲೀಸರ ಪ್ಲಾನ್: ನಗರದಲ್ಲಿ 70,000 ತುರ್ತು ಕೋವಿಡ್-19 ಪಾಸ್, ಆನ್‍ಲೈನ್ 1.30 ಲಕ್ಷ ಪಾಸ್ ವಿತರಣೆ ಮಾಡಲಾಗಿದೆ. ಆದರೆ ದಿನಕ್ಕೆ …

Read More »

ಕೊರೊನಾ ಲಾಕ್‍ಡೌನ್ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ ಸಿನಿಮಾ ಜೋಡಿಯೊಂದು ಸಪ್ತಪದಿ

ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ ಸಿನಿಮಾ ಜೋಡಿಯೊಂದು ಸಪ್ತಪದಿ ತುಳಿದಿದೆ. ಚಲನಚಿತ್ರ ನಟ ನಟಿಯರಾಗಿರುವ ಅರ್ನವ್ ವಿನ್ಯಾಸ್ ಮತ್ತು ವಿಹಾನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಲೆನಾಡಿನ ತವರೂರು ಎಂದೇ ಕರೆಸಿಕೊಳ್ಳುವ ಶಿವಮೊಗ್ಗದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾರೆ. ಅಂದಹಾಗೆ ಅರ್ನವ್ ವಿನ್ಯಾಸ್ ಹೊಂಬಣ್ಣ ಎಂಬ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಮಿಂಚಿದ್ದು, ಅದೇ ರೀತಿ ಹೀರೋಯಿನ್ ವಿಹಾನಾ ನೆನಪುಗಳು ಎಂಬ ಚಲನಚಿತ್ರದಲ್ಲಿ ನಟಿಸಿ, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮಂಡ್ಯ ಮೂಲದ ನಟ …

Read More »

ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

ನವದೆಹಲಿ: ನಮಗೆ 1 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅವಶ್ಯಕತೆಯಿದೆ. ಆದರೆ ನಮ್ಮಲ್ಲಿ ಈಗ 3.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ. ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ನಾವು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದೇವೆ. ಕೇವಲ ಶೇ.0.2 ಪ್ರಕರಣಗಳು ಮಾತ್ರ ಪಾಸಿಟಿವ್ ಬಂದಿವೆ. ಸಂಗ್ರಹಿಸಿದ ಮಾದರಿಗಳ ಆಧಾರದ ಮೇಲೆ ಹೇಳುವುದಾದರೆ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ …

Read More »

ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಬೇಕಿದೆ:ಡಿ.ಕೆ.ಶಿವಕುಮಾರ್

ಬೆಂಗಳೂರು: ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಿಸಿ 129 ವರ್ಷವಾಗಿದೆ. ಜನ್ಮದಿನ ಆಚರಿಸಲು ಇಡೀ ದೇಶ ಬಹಳ ಉತ್ಸುಕವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದ ಪ್ರಸ್ತಾವನೆಯನ್ನು ನೀವುಗಳು ಇರುವ ಸ್ಥಳದಿಂದಲೇ ಅಂದು ಬೆಳಿಗ್ಗೆ 10 ಗಂಟೆಗೆ ಸಂವಿಧಾನ ಪಿಠೀಕೆ ಓದುವ ಮೂಲಕ ನಮ್ಮ ಐಕ್ಯತೆ, ಸಮಗ್ರತೆ, ಬ್ರಾತೃತ್ವವನ್ನು ಎತ್ತಿ ಹಿಡಿದು ಈ ದಿನವನ್ನು ವಿಶೇಷವಾಗಿ ಆಚರಿಸಬೇಕು ಎಂದು ರಾಜ್ಯ ಹಾಗೂ …

Read More »

ಯುವಕನಿಗೆ ಬಂದಿದ್ದು ಜಾಂಡೀಸ್‌ ರೋಗ, ಕೊಂದಿದ್ದು ಮಾತ್ರ ಕೊರೋನಾ..!

ಹುಬ್ಬಳ್ಳಿ,ಏ10- ಆ ಯುವಕನಿಗೆ ಯಾವುದೇ ಹೇಳಿಕೊ ಳ್ಳುವಂತಹ ಮಾರಣಾಂತಿಕ ಕಾಯಿಲೆ ಇರಲಿಲ್ಲ.‌ಆದರೆ ಅವನಿಗೆ ಕರೋನಾ ವೈರಸ್ ಸೋಂಕು ತಗುಲಿರಬಹುದೆಂದು ಶಂಕೆ ವ್ಯಕ್ತಪಡಿಸಿ ಯುವಕನನ್ನು ಬಲಿ ಪಡೆಯಲಾಯಿತು ಎನ್ನಲಾಗಿದೆ. ಹೌದು ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಏ. 3ರಂದು ಮೃತಪಟ್ಟ ಧಾರವಾಡದ 31 ವರ್ಷದ ಎಂಜಿನಿಯರ್‌ ರಾಜು ನಾಯ್ಕ್‌ ಸಾವು ಇದಕ್ಕೆ ಜ್ವಲಂತ ಸಾಕ್ಷಿ. ನ್ಯುಮೋನಿಯಾ, ಜಾಂಡೀಸ್‌ನಿಂದ ಬಳಲುತ್ತಿದ್ದ ರಾಜುಗೆ ಕೋವಿಡ್‌-19 ಇರಬಹುದೆಂದು ಶಂಕಿಸಿ ಬೇರಾವುದೇ ಚಿಕಿತ್ಸೆ ನೀಡಲೇ ಇಲ್ಲ ಕೋವಿಡ್‌-19 ವರದಿ …

Read More »

ಆದಾಯ ತೆರಿಗೆ ಪಾವತಿದಾರರೇ ಹುಷಾರ್..!

ನವದೆಹಲಿ : ತೆರಿಗೆದಾರರು ತಮ್ಮ ಆದಾಯ ತೆರಿಗೆಯ ಇ-ಫೈಲಿಂಗ್ ಖಾತೆಯ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಅನಧಿಕೃತ ವ್ಯಕ್ತಿಯಿಂದ ಖಾತೆಯ ದುರುಪಯೋಗ ಗಮನಕ್ಕೆ ಬಂದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು ಎಂದು ಆದಾಯ ತೆರಿಗೆ ಇಲಾಖೆ, ಸೂಚಿಸಿದೆ. ನಿಮ್ಮ ಇ-ಫೈಲಿಂಗ್ ಖಾತೆಯು ಅನಧಿಕೃತ ಹೊಂದಾಣಿಕೆ ಅಥವಾ ಪ್ರವೇಶ ಆಗಬಹುದು. ಇದು ನಿಮ್ಮನ್ನು ಅಪರಾಧಕ್ಕೆ ಎಡೆ ಮಾಡಿಕೊಡಲಿದೆ. ಇಂತಹ ಶಂಕೆಗಳು ನಿಮ್ಮ ಗಮನಕ್ಕೆ ಬಂದರೇ ದಯವಿಟ್ಟು ಘಟನೆಯ ಕುರಿತು ಹತ್ತಿರದ ಪೊಲೀಸ್ ಅಥವಾ ಸೈಬರ್ …

Read More »

ಮಗನನ್ನು ಕರೆತರಲು 1,400 ಕಿಮೀ ದೂರ ಒಬ್ಬರೇ ಸ್ಕೂಟಿಯಲ್ಲಿ ಹೋದ ತಾಯಿ

ಹೈದರಾಬಾದ್: ಲಾಕ್‍ಡೌನ್ ಮಧ್ಯೆ ಮನೆಗೆ ಬರಲಾಗದೇ ಪರದಾಡುತ್ತಿದ್ದ ಮಗನಿಗಾಗಿ ತೆಲಂಗಾಣದಲ್ಲಿ ತಾಯಿ ಒಬ್ಬರೇ ಸ್ಕೂಟಿಯಲ್ಲಿ ಬರೋಬ್ಬರಿ 1,400 ಕಿಮೀ ಪ್ರಯಾಣಿಸಿ ಆತನನ್ನು ಕರೆತಂದಿದ್ದಾರೆ. ಈ ಮೂಲಕ ತಾಯಿ ಮಕ್ಕಳಿಗಾಗಿ ಯಾವುದೇ ಸಂಕಷ್ಟವನ್ನು ಎದುರಿಸಲು ಅಂಜಲ್ಲ ಎನ್ನೋದಕ್ಕೆ ಉದಾಹರಣೆ ಆಗಿದ್ದಾರೆ. ತೆಲಂಗಾಣದ ನಿಜಾಮಾಬಾದ್‍ನಲ್ಲಿರುವ ಬೋಧಾನ್ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿ ಆಗಿ ಕಾರ್ಯನಿರ್ವಹಿಸುತ್ತಿರುವ ರಜಿಯಾ ಬೇಗಮ್ ಮಗನಿಗಾಗಿ ಸಾವಿರಾರು ಕಿ.ಮೀ ಪ್ರಯಾಣಿಸಿದ್ದಾರೆ. ಮಗ ಮೊಹ್ಮದ್ ನಿಜಾಮುದ್ದೀನ್(19) ಹೈದರಾಬಾದಿನ ನಾರಾಯಣ ವೈದ್ಯಕೀಯ ಅಕಾಡೆಮಿ ಅಲ್ಲಿ ವ್ಯಾಸಂಗ …

Read More »

ದೆಹಲಿಯಲ್ಲಿ ಕೊರೊನಾ ವಿರುದ್ಧ OPERATION SHIELD

ನವದೆಹಲಿ: ಕೊರೊನಾ ರುದ್ರ ಕುಣಿತಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಬೆದರಿ ಹೋಗಿದೆ. ನಿಜಾಮುದ್ದಿನ್ ಮರ್ಕಜ್ ಪ್ರಕರಣ ಬಳಿಕ ನೋಡ ನೋಡುತ್ತಿದ್ದಂತೆ ಅಂಕಿ ಆಕಾಶಕ್ಕೆ ಏರುತ್ತಿದೆ. ಈ ಮಿಂಚಿನ ಓಟಕ್ಕೊಂದು ಬ್ರೇಕ್ ಹಾಕಲು ಮುಂದಾಗಿರುವ ಕೇಜ್ರಿವಾಲ್ ಸರ್ಕಾರ ಆಪರೇಷನ್ ಶೀಲ್ಡ್ ಔಟ್ ಆರಂಭಿಸಿದ್ದು, ಆರು ಸೂತ್ರಗಳನ್ನು ಜಾರಿ ತರಲು ಮುಂದಾಗಿದೆ. ಅಲ್ಲೊಂದು, ಇಲ್ಲೊಂದು ಪ್ರಕರಣ ಎಂದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಡಿತದಲ್ಲಿದ್ದ ಕೊರೊನಾ ಸೋಂಕು ನಿಜಾಮುದ್ದೀನ್ ಮರ್ಕಜ್ ಪ್ರಕರಣ ಬಳಿಕ ನೋಡ …

Read More »

ರಾಜ್ಯದಲ್ಲಿ ಕೊರೊನಾ ವಿರುದ್ಧ ‘3ಟಿ’ ಅಸ್ತ್ರ!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 200ರ ಗಡಿ ಸಮೀಪಿಸಿರುವ ಹಿನ್ನೆಲೆಯಲ್ಲಿ ಮುಂದಿನ 5 ದಿನ ಫೈನಲ್ ವಾರ್ ಎಂದು ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ‘3ಟಿ’ ಅಸ್ತ್ರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಒಟ್ಟು ಜನರಿಗೆ 197 ಕೊರೊನಾ ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಗುರುವಾರ ಒಂದೇ ದಿನ 16 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಬಾಗಲಕೋಟೆಯಲ್ಲಿ 3 ಮಕ್ಕಳಲ್ಲೇ ಕೊರೊನಾ ಪತ್ತೆಯಾದರೆ, ಹೊಸ 3 ಪ್ರಕರಣಗಳಲ್ಲಿ ಮಕ್ಕಳಿಂದಲೇ …

Read More »