ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಗುಂಡಿನ ಕಾಳಗ ನಡೆದಿದೆ ಎಂದು ಹೇಳಲಾಗಿದೆ. ಪಾಂಗಾಂಗ್ ಸರೋವರದ ಬಳಿ ಚೀನಿ ಸೈನಿಕರು ಹಾಗೂ ಭಾರತೀಯ ಯೋಧರು ಬೀಡುಬಿಟ್ಟಿದ್ದಾರೆ. ಚೀನಿ ಯೋಧರು ಗಡಿ ನುಸುಳಲು ಯತ್ನಿಸಿದ ವೇಳೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಚೀನಾ ಸರ್ಕಾರದ ಒಡೆತನದ ಗ್ಲೋಬಲ್ ಟೈಮ್ಸ್ ಸೋಮವಾರ ಭಾರತೀಯ …
Read More »ಖಾಸಗಿ ಶಾಲೆಗಳಿಗೆ ಶಿಕ್ಷಣ ಸಚಿವರ ಖಡಕ್ ವಾರ್ನಿಂಗ್ :`ಒನ್ ಟರ್ಮ್ ಪ್ರವೇಶ ಶುಲ್ಕ ಮಾತ್ರ ಪಡೆಯಲು ಸೂಚನೆ
ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಖಾಸಗಿ ಶಾಲೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಒಂದು ಅವಧಿಯ (ಟರ್ಮ್) ಪ್ರವೇಶ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಬೇಕು ಎಂದು ಸೂಚಿಸಿದ್ದಾರೆ. ‘ಜೂನ್‌ನಿಂದ ಶಾಲೆಗಳು ಆರಂಭವಾಗಿಲ್ಲ. ಅನೇಕ ಖಾಸಗಿ ಶಾಲೆಗಳ ಶಿಕ್ಷಕರು ಕಷ್ಟದಲ್ಲಿದ್ದಾರೆ. ಹೀಗಾಗಿ, ಮಕ್ಕಳ ದಾಖಲಾತಿಗೆ ಅನುಮತಿ ನೀಡಿ, ಒಂದು ಅವಧಿಯ ಅಧಿಕೃತ ಶುಲ್ಕವನ್ನು ಮಾತ್ರ ಪಡೆಯುವಂತೆ ಸೂಚಿಸಿದ್ದೇವೆ ಮತ್ತು ಸಂಗ್ರಹಿಸಿದ ಶುಲ್ಕವನ್ನು ಶಿಕ್ಷಕರ ವೇತನಕ್ಕೆ ಪಾವತಿಸಲು ಬಳಸುವಂತೆ ತಿಳಿಸಲಾಗಿದೆ …
Read More »ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಓ ಚಂದಾ ಕೋಚ ಜಾರಿ ನಿರ್ದೇಶನಾಲಯ ಬಂಧಿಸಿದೆ .
ನವದೆಹಲಿ: ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಓ ಚಂದಾ ಕೋಚರ್ ಪತಿ, ಉದ್ಯಮಿ ದೀಪಕ್ ಕೊಚರ್ ಅವರ ಜಾರಿ ನಿರ್ದೇಶನಾಲಯ ಬಂಧಿಸಿದೆ . ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಅವರ ಬಂಧನವಾಗಿದೆ.ಬ್ಯಾಂಕ್ ಮತ್ತು ವಿಡಿಯೋಕಾನ್ ಗ್ರೂಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೋಚರ್ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಹೆಚ್ಚಿನ ವಿಚಾರಣೆ ಹಿನ್ನೆಲೆ ದೀಪಕ್ ಕೋಚರ್ ಅವರನ್ನ ಇಡಿ ಬಂಧಿಸಿದೆ. ಕಳೆದ …
Read More »ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸರ ಭರ್ಜರಿ ದಾಳಿ ; 144 ಕೆ.ಜಿ ಗಾಂಜಾ ವಶ
ಬೆಳಗಾವಿ : ಇತ್ತಿಚೀನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಡ್ರಗ್ ಮಾಫಿಯಾ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳು ಚಿತ್ರರಂಗದ ದೊಡ್ಡ ದೊಡ್ಡ ನಟ, ನಟಿಯರು ಡ್ರಗ್ ಮಾಫಿಯಾ ದಲ್ಲಿ ಸಿಲುಕಿಕೊಂಡಿದ್ದಾರೆ. ಒಂದೆಡೆ ಡ್ರಗ್ ಮಾಫಿಯಾ ಸದ್ದು ಮಾಡುತ್ತಿದ್ದರೆ ಇತ್ತ ಬೆಳಗಾವಿಯಲ್ಲಿ ಗಾಂಜಾ ನಶೆ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅವ್ಯಾಹತವಾಗಿ ಗಾಂಜಾ ಬೆಳೆದು ರಾಜ್ಯದ ಜೊತೆಗೆ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಮಾರಾಟ …
Read More »ಮದುವೆಗಳಲ್ಲಿ ಬ್ಯಾಂಡ್‌ಗೆ ಅನುಮತಿ: ಅಗ್ರಹ
ಬೆಳಗಾವಿ: ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಮಂಗಳವಾದ್ಯ ಮತ್ತು ಬ್ರಾಸ್ ಬ್ಯಾಂಡ್‌ಗಳನ್ನು ನುಡಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಮಂಗಳವಾದ್ಯ ಹಾಗೂ ಬ್ಯಾಂಡ್ ಕಲಾವಿದರ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ‘ಈ ವೃತ್ತಿಯನ್ನು ಸಾವಿರಾರು ಮಂದಿ ಅವಲಂಬಿಸಿದ್ದೇವೆ. ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಸಭೆ, ಸಮಾರಂಭ, ಮದುವೆ, ಜಯಂತಿ, ಜಾತ್ರೆ ಮೊದಲಾದ ಕಾರ್ಯಕ್ರಮಗಳಿಗೆ ಹಲವು ತಿಂಗಳವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ದುಡಿಮೆ ಇಲ್ಲದೆ, ಗಳಿಕೆಯೂ ಇಲ್ಲದೆ ನಾವು …
Read More »ಬಸ್ ಕಡೆ ಜನರ ಒಲವು: ಸಾರಿಗೆ ಆದಾಯ ಚೇತರಿಕೆ
ಚಿಕ್ಕೋಡಿ: ಕಳೆದ ಆರು ತಿಂಗಳಿಂದ ಕೋವಿಡ್ ಹೊಡೆತಕ್ಕೆ ನಷ್ಟ ಅನುಭವಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗವು ಈಗ ಹಂತ ಹಂತವಾಗಿ ಆದಾಯದಲ್ಲಿ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್ ತೆರವುಗೊಂಡಿರುವ ಪರಿಣಾಮ ದಿನದಿಂದ ದಿನಕ್ಕೆ ಪ್ರಯಾಣಿಕರು ಬಸ್ ಕಡೆ ವಾಲುತ್ತಿದ್ದಾರೆ. ಕಳೆದ ಮಾರ್ಚ್ ಮೂರನೇ ವಾರದಿಂದ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರಕಾರ ಲಾಕ್‌ಡೌನ್ ಜಾರಿ ಮಾಡಿ ಬಸ್ ಸಂಚಾರ ನಿಷೇಧಿಸಿತ್ತು. ಹೀಗಾಗಿ ನಾಲ್ಕು ತಿಂಗಳು ಬಸ್ …
Read More »ಬೆಳಗಾವಿ: ಸಕ್ಕರೆ ಕಾರ್ಖಾನೆ ಎದುರು ರೈತರ ಧರಣಿ
ಎಂ.ಕೆ. ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ಕಬ್ಬಿನ ಬಾಕಿ ಬಿಲ್ ಹಾಗೂ ಕಾರ್ಮಿಕರ ವೇತನ ಪಾವತಿಗೆ ಆಗ್ರಹಿಸಿ ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ರೈತರು ಸೋಮವಾರ ಧರಣಿ ಆರಂಭಿಸಿದ್ದಾರೆ. ‘2017-18ನೇ ಸಾಲಿನ ಕಬ್ಬಿನ ಬಾಕಿ ಬಿಲ್ ₹ 7.8 ಕೋಟಿ, 2018-19 ಮತ್ತು 2019-20ನೇ ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆಯ ಬಾಕಿ ₹ 1.2 ಕೋಟಿ ಹಾಗೂ 2019-20ನೇ ಸಾಲಿನಲ್ಲಿ ಜನವರಿ ನಂತರ ಕಬ್ಬು ಪೂರೈಸಿದ ರೈತರ ₹ …
Read More »ತನ್ನ ತಂದೆಯ ಅಂಗಡಿಯಿಂದಲೇ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದಮಗ
ಚೆನ್ನೈ: ಮಗನೊಬ್ಬ ತನ್ನ ತಂದೆಯ ಅಂಗಡಿಯಿಂದಲೇ ಬರೋಬ್ಬರಿ 14 ಕೆ.ಜಿ ಚಿನ್ನ ಕದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.ಆರೋಪಿ ಮಗನನ್ನು ಎಸ್ ಹರ್ಷ ಬೋತ್ರಾ(24) ಎಂದು ಗುರುತಿಸಲಾಗಿದೆ. ಸದ್ಯ ಈತನನ್ನ ಪೊಲೀಸರು ಬಂಧಿಸಿದ್ದಾರೆ. ಸುಭಾಶ್ ಚಂದ್ರ ಬೋತ್ರಾ ಮಗನಾಗಿರುವ ಹರ್ಷ ಆನ್‍ಲೈನ್ ವಹಿವಾಟಿನಲ್ಲಿ ಆಗಿರುವ 1.5 ಕೋಟಿ ನಷ್ಟವನ್ನು ಸರಿದೂಗಿಸಲು ಚಿನ್ನ ಕದ್ದಿದ್ದಾನೆ ಎಂದು ಹೇಳಿದ್ದಾನೆ. ಆರಂಭದಲ್ಲಿ ಪೊಲೀಸರು ಹೊರಗಿನವರ ಕೈವಾಡ ಇರಬಹುದೆಂದು ಶಂಕಿಸಿದ್ದಾರೆ. ಆದರೆ ಈ ಸಂಬಂಧ ಸ್ಥಳೀಯ ಸಿಸಿಟಿವಿ …
Read More »ಪಬ್ ಜಿ ಮೊಬೈಲ್ ಗೇಮ್ ಬ್ಯಾನ್ 21 ವರ್ಷದ ಯುವಕ ಆತ್ಮಹತ್ಯೆ
ಕೋಲ್ಕತ್ತಾ: ಪಬ್ ಜಿ ಮೊಬೈಲ್ ಗೇಮ್ ಬ್ಯಾನ್ ಆದ ಬಳಿಕ ಬೇಸರಗೊಂಡ 21 ವರ್ಷದ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ನಡೆದಿದೆ. ಐಟಿಐ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರೀತಮ್ ಹಲ್ದರ್ ಆತ್ಮಹತ್ಯೆಗೆ ಶರಣಾದ ವಿದ್ಯರ್ಥಿ ಎಂದು ಗುರುತಿಸಲಾಗಿದೆ. ಚಕ್‌ದಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರ್ಬಾ ಲಾಲ್‌ಪುರ್ ಪ್ರದೇಶದಲ್ಲಿರುವ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗಿನ ಉಪಹಾರ ಸ್ವೀಕರಿಸಿದ ಬಳಿಕ ಆತ ಕೊಠಡಿಗೆ ತೆರಳಿದ್ದ …
Read More »ಗೋಣಿಚೀಲಗಳಲ್ಲಿ ಮಂಗಗಳ ಮೃತದೇಹ……………..
ಉಡುಪಿ: ಎರಡು ಗೋಣಿಚೀಲಗಳಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಕಾಡಿನಲ್ಲಿ ತುಂಬಿರುವ ಎರಡು ಸೆಣಬಿನ ಗೋಣಿ ಎಸೆದು ಹೋಗಿದ್ದರು. ಇದನ್ನು ಕಂಡ ಸ್ಥಳೀಯರು ತೆರೆದು ನೋಡಿದಾಗ ಹಲವಾರು ಮಂಗಗಳ ಮೃತದೇಹಗಳು ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತೋಟಕ್ಕೆ ಬಂದು ಉಪಟಳ ನೀಡುತ್ತಿದ್ದ ಮಂಗಗಳಿಗೆ ವಿಷವಿಟ್ಟು ಕೊಂದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆಗುಂಬೆ ಘಾಟಿ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂಗಗಳು ಕಾಣಿಸಿಕೊಳ್ಳುತ್ತವೆ. …
Read More »
Laxmi News 24×7