ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಕಷ್ಟ ಪಡುತ್ತಿದೆ. ಪ್ರವಾಹಕ್ಕೆ ಸಿಲುಕಿ ನರಳುತ್ತಿದೆ. ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಶಾಲೆ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಜನ ಸಿಬ್ಬಂದಿ ಸಿಲುಕಿದ್ದರು. ಅವರನ್ನು NDRF ತಂಡ ರಕ್ಷಿಸಿದೆ. ನಿನ್ನೆ ಬೆಳಗ್ಗೆ ಶಾಲೆಗೆ ಕಾಗಿಣಾ ನದಿಯ ನೀರು ನುಗ್ಗಿ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದರು. ವಸತಿ ಶಾಲೆಯಿಂದ …
Read More »ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಾರಾ ಕೆ.ಎಚ್ ಮುನಿಯಪ್ಪ?
ಕೋಲಾರ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ರಾಜಕಾರಣದತ್ತ ಗಮನ ಹರಿಸುವಂತೆ ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಅಭಿಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ರು. ಕೋಲಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ರು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ …
Read More »ಕೊರೊನಾ ನಡುವೆ ದೀಪಾವಳಿ ಹಬ್ಬ ಆಚರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಬೆಂಗಳೂರು: ಕೊರೊನಾ ನಡುವೆ ದೀಪಾವಳಿ ಹಬ್ಬ ಆಚರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ಕೊರೊನಾ ಕಾರ್ಮೋಡ ಕವಿದಿದೆ. ರಾಜ್ಯದಲ್ಲಿ ಕೊರೊನಾ ಅಬ್ಬರದ ನಡುವೆ ಸರಳವಾಗಿ ಹಬ್ಬ ಮಾಡಲು ರಾಜ್ಯ ಸರ್ಕಾರ 10 ನಿಯಮಗಳಿರುವ ಒಂದು ಮಾರ್ಗಸೂಚಿಯನ್ನು ಹೊರಡಿಸಿದೆ. 10 ನಿಯಮಗಳು 1. ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡತಕ್ಕದ್ದು. 2. ಪಟಾಕಿ ಮಾರಾಟದ ಮಳಿಗೆಗಳನ್ನು …
Read More »ತಮಿಳು ಚಿತ್ರನಟರಿಗೆ ಬಾಂಬ್ ಬೆದರಿಕೆ..!
ಚೆನ್ನೈ, ಅ. 14- ತಮಿಳುನಾಡಿನ ಸೂಪರ್‍ಸ್ಟಾರ್ ರಜನಿಕಾಂತ್, ತಲ್ಲಾ ಅಜಿತ್, ಸೂರ್ಯ, ಇಳಯದಳಪತಿ ವಿಜಯ್ ಮನೆಗಳಲ್ಲಿ ಬಾಂಬ್ ಇರಿಸುವುದಾಗಿ ಬೆದರಿಕೆ ಒಡ್ಡಿರುವ ಘಟನೆ ಮಾಸುವ ಮುನ್ನವೇ ಈಗ ಧನುಷ್ ಹಾಗೂ ಕ್ಯಾಪ್ಟನ್ ಪ್ರಭಾಕರ್ ಖ್ಯಾತಿಯ ವಿಜಯಕಾಂತ್‍ಗೂ ಬೆದರಿಕೆ ಕರೆಗಳು ಬಂದಿವೆ. ತಮಿಳಿನ ಸೂಪರ್‍ಸ್ಟಾರ್ ರಜನಿಕಾಂತ್‍ರ ಅಳಿಯ, ನಟ ಧನುಷ್ ಹಾಗೂ ನಟ ಹಾಗೂ ಡಿಎಂಡಿಕೆ ಪಕ್ಷದ ಮುಖಂಡ ವಿಜಯಕಾಂತ್‍ರ ಮನೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ …
Read More »ರಜನೀಕಾಂತ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ
ಚೆನ್ನೈ: ತಮಗೆ ಚೆನ್ನೈ ಪಾಲಿಕೆ ನೀಡಿದ್ದ ತೆರಿಗೆ ನೋಟಿಸ್ ಅನ್ನು ಪ್ರಶ್ನಿಸಿ ಚಿತ್ರನಟ ರಜನೀಕಾಂತ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದ್ದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ರಜನೀಕಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ತಮಿಳುನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪವಿದ್ದು, ಅದರ ತೆರಿಗೆ ಹಣವನ್ನು ಕಟ್ಟುವಂತೆ ಜಾರಿ ಮಾಡಲಾಗಿದ್ದ ನೋಟಿಸನ್ನು ಅವರು ಪ್ರಶ್ನಿಸಿದ್ದರು. ಕಳೆದ ಏಪ್ರಿಲ್ನಿಂದ ಸೆಪ್ಟಂಬರ್ವರೆಗೆ ಅರ್ಧ ವರ್ಷದ ತೆರಿಗೆ ನೀಡುವಂತೆ …
Read More »ಮತಾಂತರಗೊಂಡು ಮದುವೆಯಾದಳು : ಹಿಂಸೆಯನ್ನು ಸಹಿಸಲಾರದೇ ವಿಧಾನಸಭೆಯ ಕಟ್ಟಡದೆದುರೇ ಬೆಂಕಿ ಹಚ್ಚಿಕೊಂಡಳು
ಲಖನೌ: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು, ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಿಲಾರದೇ ಇಲ್ಲಿಯ ವಿಧಾನಸಭೆಯ ಕಟ್ಟಡದೆದುರೇ ಎದುರೇ ಬೆಂಕಿಹಚ್ಚಿಕೊಂಡಿರುವ ಘಟನೆ ನಡೆದಿದೆ. ಅಂಜನಾ ತಿವಾರಿ ಅಲಿಯಾಸ್ ಆಯೇಷಾ ಇಂಥದ್ದೊಂದು ಕೃತ್ಯ ಎಸಗಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಈಕೆಯನ್ನು ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂಜನಾ ಈ ಮೊದಲು ಅಖಿಲೇಶ್ ಎಂಬುವವರನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅಂಜನಾ, ಆಸಿಫ್ ಎಂಬುವವನ ಬಲೆಗೆ ಬಿದ್ದರು. ಈಕೆಯನ್ನು ಪ್ರೀತಿಸುವ …
Read More »ನಂದಿ ಗಿರಿಧಾಮ ತೋಟಗಾರಿಕಾ ಇಲಾಖೆಯ ಕೈಜಾರುತ್ತದಾ? ಮುಂದೇನು?
ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತ್ಯವ್ಯ ಹೂಡಿದ್ದ ತೋಟಗಾರಿಕೆ ಸಚಿವ ನಾರಾಯಣ ಗೌಡ, ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮರುಳಾದ್ರು. ನಂದಿ ಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮರುಳಾದ ಸಚಿವ ನಾರಾಯಣ ಗೌಡ ರಾತ್ರಿಯೇ ನಂದಿ ಗಿರಿಧಾಮದಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದ ಸಚಿವರು, ಬೆಳ್ಳಂಬೆಳಿಗ್ಗೆ ಎದ್ದು ನಂದಿ ಗಿರಿಧಾಮದ ರಸ್ತೆಗಳಲ್ಲಿ ರೌಂಡ್ಸ್ ಹಾಕಿದರು. ಇದೇ ಮೊದಲ ಬಾರಿಗೆ ನಾನು ಸಚಿವನಾದ ನಂತರ ನಂದಿ ಗಿರಿಧಾಮಕ್ಕೆ ಆಗಮಿಸಿದ್ದೇನೆ. …
Read More »ರಾಜ್ಯ-ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಲು ಈ ಚುನಾವಣೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಈ ಬಾರಿಯ ಉಪಚುನಾವಣೆಯನ್ನು ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಸರ್ಕಾರವನ್ನು ಅಥವಾ ಮೋದಿ ಅವರ ಕೇಂದ್ರ ಸರ್ಕಾರ ಬೀಳಿಸಲು ಎದುರಿಸುತ್ತಿಲ್ಲ. ಬದಲಿಗೆ ಎರಡೂ ಸರ್ಕಾರಗಳಿಗೆ ಸಂದೇಶ ರವಾನಿಸಲು ಈ ಚುನಾವಣೆ ಎದುರಿಸುತ್ತೇದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್ ಅವರು ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು: ‘ರಾಜರಾಜೇಶ್ವರಿ …
Read More »ರಸ್ತೆಬದಿಯಲ್ಲೇ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ದಾವಣಗೆರೆ: ರಸ್ತೆಬದಿಯಲ್ಲೇ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಜಗಳೂರು ತಾಲೂಕಿನ ಅಶ್ವತ್ಥರೆಡ್ಡಿ ನಗರ ಸಮೀಪದ ಬಿದರಕೆರೆ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಎಗ್ರೈಸ್ ವ್ಯಾಪಾರಿ ಬಸವರಾಜ(45) ಭೀಕರವಾಗಿ ಕೊಲೆಯಾದವ. ಗೋಪಗೊಂಡನಹಳ್ಳಿ ಸಮೀಪದಲ್ಲಿರುವ ಹೊಲಕ್ಕೆಂದು ಬುಧವಾರ ಬೆಳಗಿನ ಜಾವ ಬಸವರಾಜ ಹೋಗುತ್ತಿದ್ದ ಎನ್ನಲಾಗಿದೆ. ಈ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಶವ ಎಸೆದು ಪರಾರಿಯಾಗಿದ್ದಾರೆ …
Read More »DC ಕಚೇರಿಯಲ್ಲಿ ಹಾವು ಪ್ರತ್ಯಕ್ಷ! ಕೆಲಸ ಬಿಟ್ಟು ಓಡಿ ಹೋದ ಸಿಬ್ಬಂದಿ..
ಚಿಕ್ಕಮಗಳೂರು: ಕೆರೆ ಹಾವೊಂದು ಅತ್ತಿಂದಿತ್ತ ಓಡಾಡಿ ಸಿಬ್ಬಂದಿಗಳಲ್ಲಿ ಆತಂಕ ಹುಟ್ಟಿಸಿದ್ದ ಪ್ರಸಂಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದ ಮಧ್ಯದಲ್ಲಿ ಗಾಂಧಿ ಪ್ರತಿಮೆ ಸುತ್ತಲೂ ಇರೋ ಹುಲ್ಲು ಹಾಸಿನ ಮೇಲೆ ಕೆರೆ ಹಾವನ್ನ ಕಂಡು ಸಿಬ್ಬಂದಿಗಳು ಹಾಗೂ ಕೆಲಸಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಜನಸಾಮಾನ್ಯರು ಗಾಬರಿಯಾಗಿದ್ದರು. ಒಂದು ಆಫೀಸಿನಿಂದ ಮತ್ತೊಂದು ಆಫೀಸ್ ಗೆ ಹೋಗುವಾಗ ಹಾವನ್ನ ಕಂಡ ಸಿಬ್ಬಂದಿಗಳು ಗಾಬರಿಗೊಂಡಿದ್ದರು. ಅತ್ಯಂತ ವೇಗವಾಗಿ ಓಡುವ ಕೆರೆ ಹಾವು ಸಿಬ್ಬಂದಿಗಳ …
Read More »
Laxmi News 24×7