Breaking News

ರಾಷ್ಟ್ರೀಯ

ವರ್ತೂರು ಕಿಡ್ನಾಪ್ ಕೇಸ್: ಇಬ್ಬರು ವಿದ್ಯಾರ್ಥಿಗಳು ಸೇರಿ 6 ಜನರ ಬಂಧನ

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಾರಿನಲ್ಲಿ ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಬೆಂಗಳೂರಿನ ಆರು ಮಂದಿಯನ್ನು ಬಂಧಿಸುವಲ್ಲಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದರು.   ಮೂಲತಃ ತಮಿಳುನಾಡಿನ ಬೆಂಗಳೂರಿನ ವಿನಾಯಕನಗರದಲ್ಲಿ ವಾಸಿಸುತ್ತಿರುವ ಕವಿರಾಜ್ (43), ಬೆಳ್ಳಂದೂರು-ಸರ್ಜಾಪುರ ರಸ್ತೆಯ ಅರಳೂರು ನಿವಾಸಿ, ಬಿಕಾಂ ವಿದ್ಯಾರ್ಥಿಗಳಾದ ಲಿಖಿತ್ (20), ಉಲ್ಲಾಸ್ (21), …

Read More »

ಕೊರೋನದ ಹೊಸ ಪ್ರಭೇದ ಪತ್ತೆ; ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು: ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ: ಬ್ರಿಟನ್ ದೇಶದಲ್ಲಿ ಕರೋನಾದ ರೂಪಾಂತರ ಹೊಂದಿದ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ. ವ್ಯಕ್ತಿಗತ ಸಾಮಾಜಿಕ ಅಂತರವನ್ನು ಸದಾ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಕೋವಿಡ್ 19 ಸೋಂಕು‌ ನಿವಾರಕ ಲಸಿಕೆಯು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಲಸಿಕೆಯನ್ನು ಸಹ ವ್ಯವಸ್ಥಿತವಾಗಿ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಅಲ್ಲಿಯವರೆಗೂ ಜನರು ಮೈಮರೆಯದೇ ಸರ್ಕಾರದ ಮಾರ್ಗಸೂಚಿಗಳನ್ನು …

Read More »

ಶಾಲೆ ಆರಂಭದ ಕುರಿತು ಸ್ಪಷ್ಟನೆ ನೀಡಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು : ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಎಲ್ಲ ಪೂರ್ವ ಸಿದ್ದತೆಗಳನ್ನು ಕೈಗೊಳ್ಳುತ್ತಿದೆ. ಜನವರಿಯಿಂದಲೇ ಶಾಲೆ ಆರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಮಕ್ಕಳಿಗೆ ಹೊರೆಯಾಗದ ರೀತಿ ಪಠ್ಯಕ್ರಮ ಅಂತಿಮಗೊಳಿಸಲಾಗುತ್ತದೆ. ಕನಿಷ್ಠ ಕಲಿಕೆಗೆ ಒತ್ತು ನೀಡಲಾಗುತ್ತದೆಯಲ್ಲದೇ, ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಹಿರಿಯ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಅವಶ್ಯಕತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ …

Read More »

ಬ್ರೇಕಿಂಗ್: ರಾಜ್ಯಾದ್ಯಂತ ಇಂದಿನಿಂದ 9 ದಿನ ನೈಟ್ ಕರ್ಪ್ಯೂ ಜಾರಿ

ಬ್ರೇಕಿಂಗ್: ರಾಜ್ಯಾದ್ಯಂತ ಇಂದಿನಿಂದ 9 ದಿನ ನೈಟ್ ಕರ್ಪ್ಯೂ ಜಾರಿ ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಣೆ ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಇಂದಿನಿಂದ 9 ದಿನಗಳವರೆಗೆ ಅಂದರೆ ಜನೆವರಿ 2 ವರೆಗೆ ಈ ಆದೇಶ ಅನ್ವಯವಾಗಲಿದೆ. ಇನ್ನು ಹೊರ ದೇಶದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಪಡಬೇಕು. ರಾತ್ರಿ ಹೊತ್ತು …

Read More »

ಕೇಂದ್ರ ಗೃಹ ಮಂತ್ರಿ ಅವರಿಗೆ ಸುಳ್ಳು ಹೇಳುವುದು ಶೋಭೆ ತರಲ್ಲ: ಮಮತಾ ಬ್ಯಾನರ್ಜಿ ಬಿಜೆಪಿಗೆ ಗುದ್ದು ನೀಡಿದ್ದಾರೆ.

ಕೋಲ್ಕತ್ತಾ: ಕೇಂದ್ರ ಗೃಹ ಮಂತ್ರಿ ಅವರಿಗೆ ಸುಳ್ಳು ಹೇಳುವುದು ಶೋಭೆ ತರಲ್ಲ ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿಗೆ ಗುದ್ದು ನೀಡಿದ್ದಾರೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡಸಿದರು. ಗೃಹ ಮಂತ್ರಿಗಳಾದವರು ಸರಿಯಾದ ಅಂಕಿ ಅಂಶಗಳನ್ನಿಟ್ಟುಕೊಂಡು ಮಾತನಾಡಬೇಕು. ಶಾ ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಅಂಕಿ ಅಂಶಗಳನ್ನ ನೋಡಿಲ್ಲ. ರಾಜ್ಯದಲ್ಲಿ ನಡೆಯುವ ಆತ್ಮಹತ್ಯೆಗಳನ್ನ ಕೊಲೆ ಎಂದು ಬಿಂಬಿಸಿ ಸುಳ್ಳು …

Read More »

ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರದ್ದು ದಪ್ಪ ಚರ್ಮ.:ಶ್ರೀನಿವಾಸ್ ಪ್ರಸಾದ್

ಮೈಸೂರು (ಡಿ. 22): ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರದ್ದು ದಪ್ಪ ಚರ್ಮ. ನನ್ನನ್ನು ಮಂತ್ರಿಸ್ಥಾನದಿಂದ ಕೆಳಗಿಳಿಸಿ, ಬರೆ ಹಾಕಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಆ ಮಹದೇವಪ್ಪ ಸಿದ್ದರಾಮಯ್ಯನ ಚೇಲ. ಸಿದ್ದರಾಮಯ್ಯನ ದುರಹಂಕಾರದಿಂದಲೇ ಜನರು ಅವರನ್ನು ಸೋಲಿಸಿದರು. ಅವರು ಸರಿಯಾಗಿದ್ದರೆ ಅವರ ಪಕ್ಷದವರೇ ಅವರ ವಿರುದ್ಧ ಯಾಕೆ ಹೈಕಮಾಂಡ್​ಗೆ ದೂರು ಕೊಡುತ್ತಿದ್ದರು? ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ದಪ್ಪ ಚರ್ಮದ ಮನುಷ್ಯ. ಆತನಿಗೆ ನಾಗರಿಕತೆ, ಸಂಸ್ಕೃತಿಯೇ ಇಲ್ಲ. …

Read More »

ಡೀಸೆಲ್ ಟ್ಯಾಂಕರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ

: ಡೀಸೆಲ್ ಟ್ಯಾಂಕರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದ ಐವರು ಸಜೀವ ದಹನಗೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ಲಖನೌದಿಂದ ಆಗ್ರಾಗೆ ತೆರಳುತ್ತಿದ್ದ ಕಾರು, ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಏಕಾಏಕಿ ರಾಂಗ್ ಟರ್ನ್ ತೆಗೆದುಕೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಡೋರ್ ಲಾಕ್ ಆಗಿದ್ದ ಕಾರಣ ಹೊರಬರಲಾಗದೇ ಕಾರಿನಲ್ಲಿದ್ದ …

Read More »

ದುಬೈನಲ್ಲಿ ಭಾರತೀಯನಿಗೆ ಹೊಡೀತು 7 ಕೋಟಿ ರೂ. ಜಾಕ್‍ಪಾಟ್..!

ದುಬೈ, ಡಿ. 22- ಕೊರೊನಾ ಲಾಕ್‍ಡೌನ್‍ನಿಂದಾಗಿ ಹಲವರ ಬದುಕು ದುಸ್ತರವಾಗಿದ್ದು ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಇದೇ ರೀತಿ ಕೇರಳದ ವ್ಯಕ್ತಿಯೊಬ್ಬರು ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಕೆಲಸಕ್ಕಾಗಿ ಕಂಪೆನಿಗಳಿಗೆ ಅಲೆಯುತ್ತಿರುವಾಗಲೇ 7 ಕೋಟಿ ಜಾಕ್‍ಪಾಟ್ ಹೊಡೆಯುವ ಮೂಲಕ ಅವನ ಅದೃಷ್ಟವನ್ನೇ ಬದಲಿಸಿದೆ. ಕೇರಳ ಮೂಲದ ನವನೀತ್ ಸಂಜೀವನ್ ಎಂಬುವವರು ದುಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉತ್ತಮ ಕೆಲಸದಲ್ಲಿದ್ದು ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದರೂ ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಅವರು ಕೆಲಸ ಕಳೆದುಕೊಂಡಿದ್ದರು. ಆಗ …

Read More »

ಕ್ರಿಕೆಟಿಗ ಸುರೇಶ್ ರೈನಾ, ಬಾಲಿವುಡ್ ಸೆಲೆಬ್ರಿಟಿ ಸುಸ್ಸಾನ್ ಖಾನ್ ಸೇರಿದಂತೆ ಹಲವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕ್ರಿಕೆಟಿಗ ಸುರೇಶ್ ರೈನಾ, ಬಾಲಿವುಡ್ ಸೆಲೆಬ್ರಿಟಿ ಸುಸ್ಸಾನ್ ಖಾನ್ ಸೇರಿದಂತೆ ಹಲವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಬಳಿಯಿರುವ ಡ್ರಾಗನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಕೋವಿಡ್ ಮಾರ್ಗ ಸೂಚಿ ಪಾಲಿಸದ ಕಾರಣಕ್ಕೆ ಸುರೇಶ್ ರೈನಾ, ಸುಸ್ಸಾನ್ ಖಾನ್, ಸಿಂಗರ್ ಗುರು ರಾಂಧವ ಹಾಗೂ ಕ್ಲಬ್ ನ ಇಬ್ಬರು ಸ್ಟಾಫ್ ಸೇರಿದಂತೆ ಒಟ್ಟು 34 ಜನರನ್ನು ಬಂಧಿಸಿದ್ದಾರೆ. …

Read More »

ಮಹಾರಾಷ್ಟ್ರದಲ್ಲಿಮತ್ತೆ ನೈಟ್ ಕರ್ಫ್ಯೂ

ಮುಂಬೈ: ಕೊರೊನಾ ಸೋಂಕು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿನಾಳೆಯಿಂದ ಮತ್ತೆ ನೈಟ್ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 11 ರಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್​ ಕರ್ಫ್ಯೂ ಜಾರಿ ಇರಲಿದೆ ಅಂತಾ ಉದ್ಧವ್ ನೇತೃತ್ವದ ಸರ್ಕಾರ ತಿಳಿಸಿದೆ. ನಾಳೆ ರಾತ್ರಿ 11 ಗಂಟೆಯಿಂದ ಜನವರಿ 5 ರವರೆಗೆ ನೈಟ್​ ಕರ್ಫ್ಯೂ ಜಾರಿ ಇರಲಿದೆ. ಒಂದು ಸಮಯದಲ್ಲಿ ಕೊರೊನಾ ಹಾಟ್​ಸ್ಪಾಟ್​ ಆಗಿ ಮಹಾರಾಷ್ಟ್ರ …

Read More »