ಬೆಂಗಳೂರು: ರಾಜ್ಯದ ಅತಿದೊಡ್ಡ ಜೈಲಾಗಿರುವ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅವ್ಯಾಹತವಾಗಿ ಬಳಕೆಯಾಗುತ್ತಿದ್ದ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದ ಜೈಲಧಿಕಾರಿಗಳು, ಇದೀಗ ಅಕ್ರಮವಾಗಿ ಬೀಡಿ ಹಾಗೂ ಸಿಗರೇಟ್ ಮಾರಾಟವನ್ನು ಬಂದ್ ಮಾಡಿರುವುದನ್ನು ವಿರೋಧಿಸಿ ಕಳೆದ ಮೂರು ದಿನಗಳಿಂದ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಜೈಲಿನ ಕೈಪಿಡಿ ಅನುಸಾರ ಬೀಡಿ ಹಾಗೂ ಸಿಗರೇಟ್ ವ್ಯಾಪಾರ ಮಾಡುವುದು ಕಾನೂನುಬಾಹಿರ. ಜೈಲು ಸಿಬ್ಬಂದಿ ಅದಕ್ಷತೆ ಹಾಗೂ ಕುಮ್ಮಕ್ಕಿನಿಂದ ಬಂಧಿಗಳು ಅಕ್ರಮವಾಗಿ ನಿಷೇಧಿತ ವಸ್ತುಗಳನ್ನ ಮಾರಾಟ ಮಾಡುತ್ತಿದ್ದರು. …
Read More »ಸರಕು ಸಾಗಣೆ, ಜನರ ಪ್ರಯಾಣ: ನವೆಂಬರ್ ತಿಂಗಳ ಆದಾಯದಲ್ಲಿ ನೈಋತ್ಯ ರೈಲ್ವೆ ಹೊಸ ದಾಖಲೆ
ಹುಬ್ಬಳ್ಳಿ: ನೈಋತ್ಯ ರೈಲ್ವೆಯು ನವೆಂಬರ್ 2025ರಲ್ಲಿ ಸರಕು ಸಾಗಣೆ ಮತ್ತು ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿ, ಪ್ರಮುಖ ಕಾರ್ಯಾಚರಣ ಕ್ಷೇತ್ರಗಳಲ್ಲಿ ತನ್ನ ಸಕಾರಾತ್ಮಕ ಸಾಧನೆಯ ವೇಗವನ್ನು ಮುಂದುವರೆಸಿದೆ. ಈ ತಿಂಗಳು ನೈಋತ್ಯ ವಲಯವು 4.469 ಮಿಲಿಯನ್ ಟನ್ ಮೂಲ ಸರಕು ಸಾಗಣೆಯನ್ನು ನಿರ್ವಹಿಸಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಸಾಧಿಸಿದ 3.941 ಮಿಲಿಯನ್ ಟನ್‌ಗಿಂತ ಶೇ.13.4ರಷ್ಟು ಹೆಚ್ಚಾಗಿದೆ. ಸ್ಟೀಲ್ ಕಾರ್ಖಾನೆಗೆ ಕಚ್ಚಾ ಸಾಮಗ್ರಿ (RMSP), ಪಿಗ್ ಐರನ್ ಮತ್ತು ಉಕ್ಕು, ಕಬ್ಬಿಣದ …
Read More »ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್
ಮೈಸೂರು: ಹೆಣ್ಣು ಭ್ರೂಣ ಹತ್ಯೆಯಿಂದ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಅವರು ಇಂದು ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಲಿಂಗಾನುಪಾತದ ಆಧಾರದ ಮೇಲೆ ಲೆಕ್ಕ ಹಾಕುವುದರ ಬದಲು, ಏಪ್ರಿಲ್ನಿಂದ ಅಕ್ಟೋಬರ್ ಮಾಹೆಯವರೆಗೆ ಜನನವಾದ ಮಕ್ಕಳಲ್ಲಿ ಗಂಡು …
Read More »ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ : ಆರ್ ವಿ ದೇಶಪಾಂಡೆ
ಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಸ್ಪಷ್ಟಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹೊಟ್ಟೆ ತುಂಬಾ ಉಪಹಾರ ಸೇವನೆ …
Read More »ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ ನಿಧನ
ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ (67) ಅವರು ಸೋಮವಾರ ರಾತ್ರಿ ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೋಮವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಸಂದರ್ಭದಲ್ಲಿ ದೇವರಾಜ್ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣವೇ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Read More »ಕಾಂಗ್ರೆಸ್ ಪವರ್ ಫೈಟ್ಗೆ ತಾತ್ಕಾಲಿಕ ಬ್ರೇಕ್
ಬೆಂಗಳೂರು: ಒಂದೆಡೆ ಕಾಂಗ್ರೆಸ್ ಪವರ್ ಫೈಟ್ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇನ್ನೊಂದೆಡೆ ಸಿಎಂ-ಡಿಸಿಎಂ ನಡುವೆ ಮತ್ತೊಂದು ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯಲಿದೆ. ಇತ್ತೀಚೆಗೆ ಸಿಎಂ ಆಯೋಜಿಸಿದ ಬ್ರೇಕ್‌ಫಾಸ್ಟ್ ಬಳಿಕ ಇಂದು ಡಿಸಿಎಂ ಡಿಕೆಶಿ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯನವರನ್ನು ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ್ದಾರೆ. ಬೆಳಗ್ಗೆ 9.30ಕ್ಕೆ ಡಿಕೆಶಿ ಅವರ ಸದಾಶಿವನಗರದ ನಿವಾಸದಲ್ಲಿ ಉಭಯ ನಾಯಕರು ಬ್ರೇಕ್‌ಫಾಸ್ಟ್ ಮಾಡಲಿದ್ದಾರೆ. ಕಳೆದ ಶನಿವಾರ ಸಿಎಂ ನಿವಾಸದಲ್ಲಿ ಡಿಸಿಎಂಗೆ ಬ್ರೇಕ್‌ಫಾಸ್ಟ್ ಆಯೋಜಿಸಲಾಗಿತ್ತು. ಅಂದೇ ಸಿಎಂಗೂ ತಮ್ಮ ಮನೆಗೆ ಬ್ರೇಕ್‌ಫಾಸ್ಟ್‌ಗೆ …
Read More »ರಸ್ತೆ ಪಕ್ಕ ನಿಂತಿದ್ದಾಗ ಲಾರಿ ಡಿಕ್ಕಿಯಾಗಿ ತಂದೆ – ಮಗ ಸಾವು
ರಾಯಚೂರು: ರಸ್ತೆ ಪಕ್ಕದಲ್ಲಿ ನಿಂತಿರುವಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮಗ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ರಾಯಚೂರಿನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಜರುಗಿದೆ. ನಗರದ ಹೊರವಲಯದ ಯರಮರಸ್ ಬಳಿಯ ಹೈದರಾಬಾದ್ – ರಾಯಚೂರು ಬೈಪಾಸ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಯರಮರಸ್ ನಿವಾಸಿಗಳಾದ ಮಿಚ್ಚರ್ ನಾಗಪ್ಪ ಉಪ್ಪಾರ (65) ಹಾಗೂ ಅವರ ಮಗ ರಮೇಶ ಉಪ್ಪಾರ (36) ಎಂದು ಗುರುತಿಸಲಾಗಿದೆ ಎಂದು …
Read More »ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ– -ಎಸಿಪಿ ನಾರಾಯಣ ಬರಮನಿ
ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ– -ಎಸಿಪಿ ನಾರಾಯಣ ಬರಮನಿ ಅಭಿಮತ ಜೀವನದ ಆದರ್ಶಗಳ ಜೊತೆಗೆ ಜ್ಞಾನ ಹೆಚ್ಚಿಸುವ ಮಾಹಿತಿಗಳನ್ನು ಮತ್ತು ಎಲ್ಲರೂ ರೂಡಿಸಿಕೊಳ್ಳಲೇ ಬೇಕಾದ ಕೆಲವು ಸರಳವಾದರೂ ಸತ್ಯ ಸಂಗತಿಗಳನ್ನು ಬಿಂಬಿಸಿ ರಚಿಸಿರುವ ಮಲಾಬಾದಿಯವರ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿಯಾಗಿವೆ ಎಂದು ಬೆಳಗಾವಿ ನಗರದ ಪೊಲೀಸ್ ಉಪ ಆಯುಕ್ತ ನಾರಾಯಣ ಬರಮನಿ ಯವರು …
Read More »ತೀರ್ಥಕುಂಡೆಯಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳಿ…
ತೀರ್ಥಕುಂಡೆಯಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳಿ… ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಿ; ಗ್ರಾಮಸ್ಥರಿಂದ ಜಿ.ಪಂ.ಸಿಇಓ ಗೆ ಮನವಿ ತೀರ್ಥಕುಂಡೆಯಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳಿ… ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಗ್ರಾಮದಲ್ಲಿ ಜೆಜೆಎಂ ಯೋಜನೆ ಅನುಷ್ಠಾನಗೊಳಿಸಿ ಗ್ರಾಮಸ್ಥರಿಂದ ಜಿ.ಪಂ.ಸಿಇಓ ಗೆ ಮನವಿ ಖಾನಾಪೂರ ತಾಲೂಕಿನ ತೀರ್ಥಕುಂಡೆ ಗ್ರಾಮದಲ್ಲಿ ಅಕ್ರಮವಾಗಿ ಆರಂಭಗೊಂಡ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳಬೇಕು. ಗ್ರಾಮದಲ್ಲಿ ಜೆಜೆಎಂ ಯೋಜನೆಯ ಅನುಷ್ಠಾನ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು …
Read More »ನಾನು ಮತ್ತು ಸಿಎಂ ಅಣ್ಣ-ತಮ್ಮಂದಿರಂತೆ ಕೆಲಸ ಮಾಡ್ತೀದ್ದೇವೆ…
ನಾನು ಮತ್ತು ಸಿಎಂ ಅಣ್ಣ-ತಮ್ಮಂದಿರಂತೆ ಕೆಲಸ ಮಾಡ್ತೀದ್ದೇವೆ… ಗುಂಪುಗಾರಿಕೆ ನಮ್ಮಲ್ಲಿಲ್ಲ. ಇದು ಕೇವಲ ಮಾಧ್ಯಮಸೃಷ್ಠಿ; ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಅಣ್ಣತಮ್ಮಂದಿರಂತ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಗುಂಪುಗಾರಿಕೆ ಇದು ನಮ್ಮಲ್ಲಿಲ್ಲ. ಇದು ಕೇವಲ ಮಾಧ್ಯಮಸೃಷ್ಠಿ. ನಮ್ಮೊಂದಿಗೆ 140 ಜನರಿದ್ದಾರೆ. ಹುಟ್ಟುವಾಗ ಸಾಯುವಾಗ ಎಲ್ಲರೂ ಒಬ್ಬರೇ ಆಗಿರುತ್ತಾರೆ ಎಂದರು. ಇನ್ನು ಸರ್ವ ಪಕ್ಷ ಸಭೆ ಕುರಿತು ಸಿಎಂ ಅವರೊಂದಿಗೆ ಮಾತನಾಡುತ್ತೇನೆ. ಸಂಸತ್ ಸಭೆ ಮತ್ತು ವಿಧಾನ ಸಭೆ …
Read More »
Laxmi News 24×7