Breaking News

ರಾಜ್ಯ

ಪುಟ್ಟ ಬಾಲಕಿ ಮೇಲೆ ಕಾಮುಕನಿಂದ ಅತ್ಯಾಚಾರ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ನಡೆದ ಘಟನೆ

ಪುಟ್ಟ ಬಾಲಕಿ ಮೇಲೆ ಕಾಮುಕನಿಂದ ಅತ್ಯಾಚಾರ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ನಡೆದ ಘಟನೆ ಪೋತ್ನಾಳ್ ಗ್ರಾಮದ ವಿದ್ಯಾಭಾರತಿ ಶಾಲೆಯಲ್ಲಿ 2ನೆ ತರಗತಿಯ ವಿದ್ಯಾರ್ಥಿನಿ ಮುದ್ದಂಗುಡ್ಡಿ‌ ಗ್ರಾಮದ ಶಿವನಗೌಡನಿಂದ ಅತ್ಯಾಚಾರ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲು ಎಸ್ಪಿ ಪುಟ್ಟ ಮಾದಯ್ಯ, ಡಿವೈಎಸ್ಪಿ ತಳವಾರ ಭೇಟಿ   ಕಾಮುಕರ ಮನಸ್ಥಿತಿ ಯಾವ ರೀತಿ ಇರುತ್ತದೆ ಹುಷಾರಾಗಿರಿ ಎಂದು ಸರಕಾರ ಆಗಾಗ್ಗೆ ತಿಳಿ ಹೇಳುತ್ತಿರುತ್ತದೆ.ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಪುಟ್ಟ …

Read More »

ದಡ್ಡಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ – ಅಭಿವೃದ್ಧಿ ಕೆಲಸಗಳೆಲ್ಲಾ ಸ್ಥಗಿತ!

ಹುಕ್ಕೇರಿ, ಫೆಬ್ರವರಿ 4:ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ಅನಕ್ಷರತೆ ಮತ್ತು ನಿರ್ಲಕ್ಷ್ಯ ಆಡಳಿತ ಹಬ್ಬಿಕೊಂಡಿದ್ದು, ಗ್ರಾಮಸ್ಥರ ಸಮಸ್ಯೆಗಳಿಗಾದರೂ ಸ್ಪಂದನೆಯೇ ಇಲ್ಲ. ಗ್ರಾಮದಲ್ಲಿ ಅಭಿವೃದ್ಧಿ ಎಂಬುದು ಕೇವಲ ಹೋಲಿಕೆಯ ಮಾತಾಗಿದ್ದು, ಬಹುತೇಕ ಯೋಜನೆಗಳ ಹಣ ದುರ್ಬಳಕೆಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲ್ ಜೀವನ್ ಮಿಷನ್ ಯೋಜನೆ ಸಂಪೂರ್ಣ ವಿಫಲ! ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ …

Read More »

ದಾವಣಗೆರೆಯಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಅನ್ಯ ಕೋಮಿನ ಆರೋಪಿಗೆ ಕಠಿಣ ಶಿಕ್ಷೆ ನೀಡಿ; ಬೆಳಗಾವಿ ಶ್ರೀರಾಮಸೇನೆ ಆಗ್ರಹ

ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ನಡೆದ ವಿದ್ಯಾರ್ಥಿನಿಯರು ಮತ್ತು ಹಿಂದೂ ಮಹಿಳೆಯರನ್ನು ಪುಸಲಾಯಿಸಿ, ಮತ್ತು ಬರುವ ಮಾತ್ರೆ ನೀಡಿ ಬಲಾತ್ಕಾರಗೈದು ವಿಡಿಯೋ ಹರಿಬಿಟ್ಟ ಅನ್ಯ ಕೋಮಿನ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಶ್ರೀರಾಮಸೇನೆ ಬೆಳಗಾವಿ ಆಗ್ರಹಿಸಿದೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ಮೆಡಿಕಲ್ ಶಾಪಗೆ ಬರುತ್ತಿದ್ದ ವಿದ್ಯಾರ್ಥಿನಿಯರು ಮತ್ತು ಹಿಂದೂ ಮಹಿಳೆಯರನ್ನು ಪುಸಲಾಯಿಸಿ, ಮತ್ತು ಬರುವ ಮಾತ್ರೆ ನೀಡಿ ಬಲಾತ್ಕಾರಗೈದು ವಿಡಿಯೋ ಹರಿಬಿಟ್ಟ ಅನ್ಯ ಕೋಮಿನ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ …

Read More »

ಮಹಾನಗರ ಪಾಲಿಕೆ ಆಯುಕ್ತರು ವರ್ಗಾವಣೆ ಮೂಲಕ ನಮಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ನಡುವಿನ ಶೀತಲ ಸಮರದಿಂದ 4 ದಿನಗಳಲ್ಲಿ 40 ಅಧಿಕಾರಿಗಳ ವರ್ಗಾವಣೆ ಆಗಿದೆ. ವರ್ಗಾವಣೆಯಿಂದ ನೊಂದ ಸಿಬ್ಬಂದಿ ಸಚಿವ ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿ ಪಾಲಿಕೆ ಆಯುಕ್ತರಾದ ಶುಭಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದೇ ವಿಚಾರ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗ್ತಿದ್ದು ಸಿಬ್ಬಂದಿ ವರ್ಗಾವಣೆ ಬಿಸಿಬಿಸಿ ಸುದ್ದಿಯಾಗಿದೆ. ಆಯುಕ್ತರು ವರ್ಗಾವಣೆ ಮೂಲಕ ನಮಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮುಂದೆ ಅಳಲು ತೋಡಿಕೊಂಡಿದ್ದಾರೆ. …

Read More »

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ರೇಡಿಯೋ ಕಾಲರ್ ಲೋಕಾರ್ಪಣೆ ಆನೆ ಹಾವಳಿ ತಡೆಯುವಲ್ಲಿ ಕೆ.ಪಿ. ಟ್ರ್ಯಾಕರ್ ಸಹಕಾರಿ: ಈಶ್ವರ ಖಂಡ್ರೆ

ಬೆಂಗಳೂರು : ಕೊಡಗು, ಚಿಕ್ಕಮಗಳೂರು, ಹಾಸನ ಸುತ್ತಮುತ್ತ ಆನೆಗಳು ನಾಡಿನಲ್ಲೇ ಸಂಚರಿಸುತ್ತಿದ್ದು, ಸಾಮಾನ್ಯವಾಗಿ ಗುಂಪಿನ ನಾಯಕತ್ವ ವಹಿಸುವ ಹೆಣ್ಣಾನೆಗಳಿಗೆ ದೇಶೀ ನಿರ್ಮಿತ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಆನೆ ಚಲನ ವಲನದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಅರಣ್ಯ ಭವನದಲ್ಲಿಂದು ಕರ್ನಾಟಕ ಅರಣ್ಯ ಇಲಾಖೆ ಬೆಂಗಳೂರಿನ ಇನ್‌ಫಿಕ್ಷನ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಜೊತೆಗೂಡಿ ಅಭಿವೃದ್ಧಿಪಡಿಸಿರುವ ವೆಚ್ಚದಕ್ಷ …

Read More »

ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ರಸ್ತೆ ಸಾರಿಗೆ ನೌಕರರಿಗೆ ಉಚಿತ ಓರಲ್‌ ಹಾಗೂ ಸ್ತನಕ್ಯಾನ್ಸರ್‌ ತಪಾಸಣೆ

ಬೆಂಗಳೂರು: ವಿಶ್ವ ಕ್ಯಾನ್ಸರ್‌ ದಿನಾಚರಣೆ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹಾಗೂ ಎಚ್‌ಸಿಜಿ ಕಾನ್ಸರ್‌ ಕೇಂದ್ರದ ಸಹಯೋಗದೊಂದಿಗೆ ಒಂದು ಸಾವಿರಕ್ಕೂ ಅಧಿಕ ರಸ್ತೆ ಸಾರಿಗೆ ನೌಕರರಿಗೆ ಉಚಿತ ಓರಲ್‌ ಹಾಗೂ ಸ್ತನಕ್ತಾನ್ಸರ್‌ ತಪಾಸಣಾ ನಡೆಸಲಾಯಿತು. ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಹಾಗೂ ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್ ಆರೋಗ್ಯ ತಪಾಸಣಾ ಮೇಳಕ್ಕೆ ಚಾಲನೆ ನೀಡಿದರು. ಈ ಕುರಿತು ಮಾತನಾಡಿದ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್, “ಎಚ್‌ಸಿಜಿ …

Read More »

ಶನಿವಾರದೊಳಗೆ ಸೌರ ವಿದ್ಯುತ್ ಸರಿಯಾಗಿ ಪೂರೈಕೆಯಾಗಿದ್ದರೇ ಹೆಸ್ಕಾಂ ಕಚೇರಿಗೆ ಮುತ್ತಿಗೆ; ಮೆಂಡಿಲ್ ಗ್ರಾಮಸ್ಥರ ಎಚ್ಚರಿಕೆ…

ಶನಿವಾರದೊಳಗೆ ಸೌರ ವಿದ್ಯುತ್ ಸರಿಯಾಗಿ ಪೂರೈಕೆಯಾಗಿದ್ದರೇ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಖಾನಾಪೂರ ತಾಲೂಕಿನ ಮೆಂಡಿಲ್ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಮೆಂಡಿಲ್ ಗ್ರಾಮದಲ್ಲಿ ಸೌರ ವಿದ್ಯುತ್ ಸರಬರಾಜು ವ್ಯತ್ಯಯ ಗೊಂಡಿದ್ದು,ಖಾನಾಪೂರ ತಾಲೂಕಿನ ಮೆಂಡಿಲ್ ಗ್ರಾಮಸ್ಥರು ಕಳೆದ ಎಂಟು ತಿಂಗಳಿನಿಂದ ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಹೆಸ್ಕಾಂ ಸಮಸ್ಯೆ ನಿವಾರಣೆ ಮಾಡುವುದರಲ್ಲಿ ವಿಫಲವಾಗಿದೆ. ಇದರಿಂದ ಬೇಸತ್ತು ಮೆಂಡಿಲ್ ಗ್ರಾಮಸ್ಥರು ಖಾನಾಪೂರ ಹೆಸ್ಕಾಂ ಇಲಾಖೆಯ ಕಚೇರಿಗೆ ಭೇಟಿ ನೀಡಿ, ತಮ್ಮ ಸಮಸ್ಯೆಯನ್ನು …

Read More »

ಎಕ್ಸಲ್ ಕಟ್ ಆಗಿ ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿ 60ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

ರಾಯಚೂರು: ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ನ ಎಕ್ಸಲ್ ಕಟ್ ಆಗಿ ಪಲ್ಟಿಯಾದ ಪರಿಣಾಮ 60ಕ್ಕೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮುದಗಲ್ ಬಳಿ ಜರುಗಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಹೊರವಲಯದಲ್ಲಿ ಬಸ್ ಪಲ್ಟಿಯಾಗಿದ್ದು, ಬಸ್​ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. 60ಕ್ಕೂ ಹೆಚ್ಚು ಪ್ರಯಾಣಿಕರನ್ನ ಹೊತ್ತುಕೊಂಡು ಲೆಕ್ಕಿಹಾಳ ಗ್ರಾಮದಿಂದ ಲಿಂಗಸೂಗೂರು ಬಸ್ ಕಡೆ ತೆರಳುತ್ತಿತ್ತು. ಬಸ್​ನಲ್ಲಿ ಸುಮಾರ 33 ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸಂಚರಿಸಿದ್ದರು. ಅಪಘಾತದಲ್ಲಿ ಬಸ್ ಚಾಲಕನಿಗೆ ಗಂಭೀರ …

Read More »

ಮುರುಘಾಮಠ ಜಾತ್ರೆ ಅಂಗವಾಗಿ ರಾಜ್ಯಮಟ್ಟದ ಖಾಲಿ ಗಾಡಾ ಸ್ಪರ್ಧೆ

ಧಾರವಾಡ: ಉತ್ತರ ಕರ್ನಾಟಕ ಭಾಗದ ಸುಪ್ರಸಿದ್ಧ ಮುರುಘಾಮಠದ ಜಾತ್ರಾ ಮಹೋತ್ಸವದ ನಿಮಿತ್ತ ಧಾರವಾಡದಲ್ಲಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಭಾಗದಿಂದ ಎತ್ತುಗಳನ್ನು ತಂದಿದ್ದ ರೈತರು ಸ್ಪರ್ಧೆಯಲ್ಲಿ ಅವುಗಳ ಶಕ್ತಿ ಪ್ರದರ್ಶನ ಮಾಡಿದರು. ಧಾರವಾಡ ಹೊರವಲಯದ ಸವದತ್ತಿ ರಸ್ತೆಯ ಕಾಶಿ ನಗರದ ಜಮೀನಿನಲ್ಲಿ ಮುರುಘಾಮಠದ ಶ್ರೀ ಮದಥಣಿ ಮುರುಘರಾಜೇಂದ್ರ ಮಹಾಸ್ವಾಮಿಗಳ 95ನೇ ಜಾತ್ರಾ ಮಹೋತ್ಸವದ ನಿಮಿತ್ತ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ನೇತೃತ್ವದಲ್ಲಿ ಈ …

Read More »

ಯಲ್ಲಮ್ಮ ದೇವಿ ಜಾತ್ರೆಗೆ ವಿಶೇಷ ಬಸ್

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ರೇಣುಕಾದೇವಿ ಜಾತ್ರೆಗೆ ಹೋಗುವ ಭಕ್ತರು ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಫೆಬ್ರವರಿ 9 ರಿಂದ 28 ರವರೆಗೆ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ನೇರವಾಗಿ ವಿಶೇಷ ಬಸ್​​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ. ಭಾರತ ಹುಣ್ಣಿಮೆ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿರುವ ರೇಣುಕಾ ದೇವಿ ಜಾತ್ರೆಯು …

Read More »