ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ವನ್ಯಜೀವಿಗಳ ದರ್ಶನ ಪ್ರವಾಸಿಗರ ಪಾಲಿಗೆ ಹಬ್ಬವಾಗಿ ಪರಿಣಮಿಸಿದೆ. ಕಾಡಿನ ದಟ್ಟ ಹಸಿರಿನ ನಡುವೆ ಬ್ಲಾಕ್ ಪ್ಯಾಂಥರ್ ಹಾಗೂ ಚಿರತೆಯೊಂದು ಒಟ್ಟಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ. ಕಳೆದ ಹತ್ತು ದಿನಗಳಿಂದ ಪದೇಪದೇ ಪ್ರವಾಸಿಗರ ಕಣ್ಣಿಗೆ ದರ್ಶನವನ್ನು ಈ ಎರಡು ಚಿರತೆಗಳು ನೀಡುತ್ತಿವೆ. ಇದರಿಂದ ಕಾಡಿನೊಳಗೆ ಪ್ರವಾಸ ಮಾಡುತ್ತಿರುವ ಪ್ರವಾಸಿಗರು ಸಂತಸಗೊಂಡಿದ್ದಾರೆ. ಸಾಮಾನ್ಯವಾಗಿ ಒಂಟಿಯಾಗಿ ಸಂಚರಿಸುವ ಈ ಪ್ರಾಣಿಗಳು ಇಲ್ಲಿ ಜೊತೆಯಾಗಿ ಸಾಗುತ್ತಿರುವ ದೃಶ್ಯ …
Read More »ಜ.12ರೊಳಗೆ ಸವದಿ ಅವರು ಕ್ಷಮೆ ಕೇಳಿ, ರಾಜೀನಾಮೆ ನೀಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ
ಬೆಳಗಾವಿ: ಡಿಸಿಸಿ ಬ್ಯಾಂಕ್ ಯೂನಿಯನ್ ಅಧ್ಯಕ್ಷ ನಿಂಗಪ್ಪ ಕರೆನ್ನವರ ಮೇಲೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಚಿದಾನಂದ ಸವದಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಡಿಸಿಸಿ ಬ್ಯಾಂಕ್ ನೌಕರರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದರು. ಲಕ್ಷ್ಮಣ ಸವದಿ ಅವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬ್ಯಾಂಕ್ ಕೆಲಸಕ್ಕೆ ತೊಂದರೆಯಾಗದಂತೆ ಅರ್ಧದಷ್ಟು ಸಿಬ್ಬಂದಿ ಕೆಲಸದಿಂದ ದೂರ ಉಳಿದು ಪ್ರತಿಭಟಿಸಿದರು. ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ, ಜಿಲ್ಲಾಧಿಕಾರಿ ಕಚೇರಿ …
Read More »ನೋಯ್ಡಾದ ಎನ್ಐಎಎಲ್ ಕಂಪನಿಗೆ ರನ್ ವೇ ಕ್ಲೀನಿಂಗ್ ವೆಹಿಕಲ್ ಹಸ್ತಾಂತರಿಸಿದ ಸಚಿವ M B ಪಾಟೀಲ್
ದೊಡ್ಡಬಳ್ಳಾಪುರ (ಬೆಂಗಳೂರು): ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣ ರನ್ ವೇ ಸ್ವಚ್ಛತಾ ವಾಹನವನ್ನು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಸೋಮವಾರ ನೋಯ್ಡಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ಗೆ (ಎನ್ಐಎಎಲ್) ಹಸ್ತಾಂತರಿಸಿದರು. ಭಾರತದ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಸ್ವಿಟ್ಜರ್ಲೆಂಡ್ನ ಮೆಸರ್ಸ್ ಬುಕರ್ ಮುನಿಸಿಪಲ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಜೋಡಣೆಗೊಂಡು ತಯಾರಾಗಿರುವ …
Read More »ದಾಖಲೆ ಬರೆಯುತ್ತಿರುವ ಸಿಎಂಗೆ ತುಂಬು ಹೃದಯದ ಶುಭ ಹಾರೈಕೆ;ಡಿಸಿಎಂ
ಬೆಂಗಳೂರು: ”ದಾಖಲೆ ಬರೆಯುತ್ತಿರುವ ಸಿಎಂಗೆ ತುಂಬು ಹೃದಯದ ಶುಭ ಹಾರೈಕೆ. ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ”ಇದು ಬಹಳ ಸಂತೋಷದ ವಿಷಯ. ನಮಗೆ, ನಿಮಗೆ ಎಲ್ಲರಿಗೂ ಸಂತೋಷದ ವಿಚಾರ. ನೀವು ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ. ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. …
Read More »ಮುಖ್ಯಮಂತ್ರಿ Siddaramaiah ಅವರು ಇಂದು ಮೈಸೂರು ಜಿಲ್ಲಾ ಕುಂಬಾರ ಸಂಘ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಉದ್ಘಾಟಿಸಿ, ಸಮುದಾಯದ ಸಾಮಾಜಿಕ ಸೇವೆಯನ್ನು ಸ್ಮರಿಸಿದರು.
ಮುಖ್ಯಮಂತ್ರಿ Siddaramaiah ಅವರು ಇಂದು ಮೈಸೂರು ಜಿಲ್ಲಾ ಕುಂಬಾರ ಸಂಘ ಆಯೋಜಿಸಿದ್ದ ರಾಜ್ಯ ಕುಂಬಾರರ ಮಹಾ ಸಮ್ಮೇಳನವನ್ನು ಉದ್ಘಾಟಿಸಿ, ಸಮುದಾಯದ ಸಾಮಾಜಿಕ ಸೇವೆಯನ್ನು ಸ್ಮರಿಸಿದರು. ಶ್ರೀ ಕ್ಷೇತ್ರ ಮಾಣೀಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬಿಜಾಪುರ ತೆಲಸಂಗದ ಶ್ರೀ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ ಹಾಗೂ ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿಗಳ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರುಗಳಾದ ಹೆಚ್.ಸಿ.ಮಹದೇವಪ್ಪ, …
Read More »ಕಲುಷಿತ ನೀರು ನುಗ್ಗಿ ಕಬ್ಬು ನಾಶ ; ಬಿಟಿಡಿಎ ಕಚೇರಿಗೆ ರೈತರ ಮುತ್ತಿಗೆ:
ಕಲುಷಿತ ನೀರು ನುಗ್ಗಿ ಕಬ್ಬು ನಾಶ ; ಬಿಟಿಡಿಎ ಕಚೇರಿಗೆ ರೈತರ ಮುತ್ತಿಗೆ: ಕಲುಷಿತ ನೀರು ಹೊಲಗಳಿಗೆ ನುಗ್ಗದಂತೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ರೈತರು ಎತ್ತಿನ ಬಂಡಿಗಳ ಸಮೇತ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು. ಬಿಟಿಡಿಎ ಕಚೇರಿಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ ರೈತರು, ಕೆಲಸಕ್ಕೆ ಬಂದ ಅಧಿಕಾರಿಗಳನ್ನು ಒಳಗೆ ಹೋಗದಂತೆ ತಡೆದರು. ಇದರಿಂದಾಗಿ ಅಧಿಕಾರಿಗಳು …
Read More »ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಆತ್ಮಹತ್ಯೆ
ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಆತ್ಮಹತ್ಯೆ ಮೈಸೂರು: ರೈಲಿಗೆ ಸಿಲುಕಿ ನಿವೃತ್ತ ಎಎಸ್‌ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿರುವ ಕುಕ್ಕರಹಳ್ಳಿ ಬಳಿಯ ರೈಲ್ವೆ ಗೇಟ್ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಬೋಗಾದಿಯ ನಿವಾಸಿ ಲವಕುಶ (60) ಮೃತ ನಿವೃತ್ತ ಎಎಸ್‌ಐ. ಕೆ.ಆರ್. ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲವಕುಶ ಅವರು ಮೂರು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಭಾನುವಾರ ಬೆಳಗ್ಗೆ ಮನೆಯಿಂದ ಹೊರ ಬಂದವರು ಕುಕ್ಕರಹಳ್ಳಿ …
Read More »ಮದ್ಯದ ನಶೆಯಲ್ಲಿ ಮಚ್ಚಿನಿಂದ ಮಗನ ಕೊಂದ ತಂದೆ
ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ತಂದೆಯೇ ಮಗನ ಕೊಲೆ ಮಾಡಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಆಚಾರ್ ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಮೃತನ ತಂದೆ ರಮೇಶ್ ಆಚಾರ್. ನಶೆಯಲ್ಲಿ ಮಚ್ಚಿನಿಂದ ಕೊಲೆ ಮಾಡಿದ ತಂದೆ: ಮದ್ಯದ ಅಮಲಿನಲ್ಲಿ ರಮೇಶ್ ಆಚಾರ್ ತನ್ನ ಮಗ ಪ್ರದೀಪ್‌ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಗಂಭೀರ ಗಾಯಗೊಂಡ ಪ್ರದೀಪ್ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಬಳಿಕ …
Read More »ನಾನೂ ಕ್ರಿಕೆಟ್ ಪ್ಲೇಯರ್. ರಾಜಕೀಯದಲ್ಲೂ ಒಳ್ಳೆಯ ಬ್ಯಾಟಿಂಗ್ ಗೂಗ್ಲಿ, ಸ್ವಿಂಗ್ ಹಾಕದೇ ಸಕ್ಸಸ್ ಇಲ್ಲ: ಸತೀಶ್ ಜಾರಕಿಹೊಳಿ
ಶಿವಮೊಗ್ಗ: “ನಾನೂ ಕ್ರಿಕೆಟ್ ಪ್ಲೇಯರ್. ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಮಾಡಬೇಕು. ಗೂಗ್ಲಿ ಹಾಕದೇ ಸಕ್ಸಸ್ ಇಲ್ಲ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಜಾರಕಿಹೊಳಿ, “ಕ್ರಿಕೆಟ್ ಪಂದ್ಯಾವಳಿಗಾಗಿ ಶಿವಮೊಗ್ಗಕ್ಕೆ ಬಂದಿದ್ದೇನೆ. ಇದು ಖಾಸಗಿ ಕಾರ್ಯಕ್ರಮ” ಎಂದರು. ಮುಂದುವರೆದು ಮಾತನಾಡಿ, “ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಮಾಡಬೇಕು. ಸ್ವಿಂಗ್, ಗೂಗ್ಲಿ ಹಾಕಬೇಕು. ಒಳ್ಳೆಯ ಬ್ಯಾಂಟಿಂಗ್ ಮಾಡದೆ ಹೋದರೆ ಉಳಿಗಾಲವಿಲ್ಲ” ಎಂದರು. ಇದೇ ವೇಳೆ, “ಈಗ ನಾನು ರಾಜಕೀಯದಲ್ಲಿ ಆಟ ಆಡುವವರಿಗೆ ಸಪೋರ್ಟ್ …
Read More »ಓಂ ಶಕ್ತಿ ಮಾಲಾಧಾರಿಗಳ ಮೇಲೆ ಅನ್ಯ ಕೋಮಿನ ಯುವಕರಿಂದ ಕಲ್ಲು ತೂರಾಟ
ಬೆಂಗಳೂರು: ಓಂ ಶಕ್ತಿ ಮಾಲಾಧಾರಿಗಳ ಮೇಲೆ ಅನ್ಯ ಕೋಮಿನ ಕೆಲವು ಯುವಕರು ಕಲ್ಲೆಸೆದಿರುವ ಘಟನೆ ತಡರಾತ್ರಿ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಎಸ್.ಗಾರ್ಡನ್ನಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯದಿಂದ ಓಂ ಶಕ್ತಿ ಮಾಲಾಧಾರಿ ಓರ್ವ ಹುಡುಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವರ ಉತ್ಸವದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಸಂಘಟನೆಗಳು, ಜೆ.ಜೆ.ನಗರ ಠಾಣೆ ಮಂದೆ ಸೇರಿ ಕಲ್ಲು ತೂರಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ …
Read More »
Laxmi News 24×7